ಯಡೂರಪ್ಪರ ನಾಯಕತ್ವದಲ್ಲಿ ಚುನಾವಣೆ ಗೆಲ್ಲಬೇಕು ಆದರೆ ನಿದಾ೯ರಗಳು ಮಾತ್ರ ಯಡೂರಪ್ಪರಿಗೆ ಇಲ್ಲ!? ಇದು ಏನನ್ನ ಸೂಚಿಸುತ್ತದೆ? ಯಡೂರಪ್ಪ ವಿರೋದಿಗಳು ಹೈಕಮಾ೦ಡ್ ಹೆಸರಲ್ಲಿ ಯಡೂರಪ್ಪರನ್ನ ಹದ್ದುಬಸ್ತು ಮಾಡುವ ಹಿಂಬಾಗಿಲ ಪ್ರಯತ್ನವಷ್ಟೆ.
#ಯಡೂರಪ್ಪರ_ಮೂಲೆಗುಂಪು_ಮಾಡುವ_ಬಿಜೆಪಿ_ಹೈಕಮಾಂಡ್_ಕಲ್ಚರ್ .
ಕಾಯ೯ಕತ೯ರ ಆಯ್ಕೆ, ಹಿಂದುಳಿದ ಜಾತಿಗೆ ಪ್ರಾತಿನಿತ್ಯ ಅಂತೆಲ್ಲ ಪ್ಯಾಚ್ ಅಪ್ ಮಾತು ತೇಲಿ ಬಿಡಬಹುದು ಆದರೆ ಇದು ಮುಖ್ಯಮಂತ್ರಿ ಯಡೂರಪ್ಪರ ಕೈ ಕಟ್ಟಿ ಹಾಕುವ, ಅವರ ಶಕ್ತಿ ಕುಂದಿಸುವ ರಾಜತಾಂತ್ರಿಕ ನಡೆ ಅಂತ ಯಾರಿಗೂ ಗೊತ್ತಾಗುತ್ತದೆ.
ಶಿವಮೊಗ್ಗ ಜಿಲ್ಲೆಯವರೇ ಆದ ಈಶ್ವರಪ್ಪರು ಈ ಆಯ್ಕೆಗೆ ನೀಡಿದ ಪ್ರತಿಕ್ರಿಯೆಯಲ್ಲಿ ಯಡೂರಪ್ಪರನ್ನ ಬಿಟ್ಟು ಬೇರೆಲ್ಲರನ್ನ ಹೊಗಳಿದ್ದಾರೆ ಇದು ಯಡೂರಪ್ಪರ ವಿರುದ್ದದ ಗೆಲುವು ಎಂಬ ದ್ವನಿ ಇದೆ.
ಕಾಂಗ್ರೇಸ್ ಪಕ್ಷದಲ್ಲಿ ಹೈಕಮಾಂಡ್ ಸಂಸ್ಕ್ರತಿ ಅಂತ ಗೇಲಿ ಮಾಡುತ್ತಿದ್ದ ಬಿಜೆಪಿ ಈಗ ಈ ರಾಜ್ಯಸಭಾ ಅಭ್ಯಥಿ೯ ಆಯ್ಕೆಯಲ್ಲಿ ಅನುಸರಿಸಿದ್ದು ಕಾಂಗ್ರೇಸ್ ಸಂಸ್ಕೃತಿಯನ್ನೇ.
ಕನಾ೯ಟಕದಲ್ಲಿ ಯಡೂರಪ್ಪರ ಸಕಾ೯ರಕ್ಕೆ ಸದಾ ಬಿನ್ನಮತ, ಅಸಹಕಾರಕ್ಕೆ ಬೆಂಬಲಿಸುವ ಮತ್ತು ಸಕಾ೯ರ ಉಳಿಸುಕೊಳ್ಳುವ ಯಡೂರಪ್ಪರ ಪ್ರಯತ್ನಕ್ಕೆ ಸದಾ ಅಡ್ಡಗಾಲಾಗುವ ಕೇಂದ್ರ ಬಿಜೆಪಿಯ ನಡೆ ಅನುಮಾನಸ್ಪದ ಮತ್ತು ಯಡೂರಪ್ಪರನ್ನ ವೈಯಕ್ತಿಕವಾಗಿ ಸಹಿಸದ ಕಾರಣ ಎನ್ನುವುದು ಸಾಬೀತಾಗಿದೆ.
ಶಿವಮೊಗ್ಗ ಜಿಲ್ಲೆಯ ಮುಖ್ಯಮಂತ್ರಿ ಅವಧಿ ಪೂಣ೯ ಆಡಳಿತ ನೀಡಲಿ, ಅವರಿಗೆ ಈ ವಯಸ್ಸಲ್ಲಿ ಪದೇ ಪದೇ ಸಂಕಷ್ಟಕ್ಕೆ ದೂಡಿ ಅವರನ್ನ ಅಧಿಕಾರದಿಂದ ಹೊರದಬ್ಬಿ ಬೇರೆಯವರನ್ನ ಮುಖ್ಯಮಂತ್ರಿ ಮಾಡುವ ಆ೦ತರಿಕ ಪರೋಕ್ಷ ಛಾಯಾ ಯುದ್ದ ಕೊನೆಯಾಗದಿದ್ದರೆ? ಮು೦ದಿನ ಯಡೂರಪ್ಪರ ನಡೆ ನಿಗೂಡವೇ.
ಯಡೂರಪ್ಪರನ್ನ ಗೌರವದಿಂದ ರಾಜಕೀಯ ನಿವೃತ್ತಿ ಮಾಡದೆ ಹೈಕಮಾಂಡ್ ಸಂಸ್ಕೃತಿಯಿ೦ದ ಬಲಾತ್ಕಾರವಾಗಿ ಅವರನ್ನ ಅವಮಾನಕರವಾಗಿ ಅವರನ್ನ ಕೆಳಗಿಳಿಸುವ ಯಾವುದೇ ಪ್ರಯತ್ನ ಮುಂದಿನ ದಿನದಲ್ಲಿ ಬಿಜೆಪಿ ಪಕ್ಷಕ್ಕೆ ಅನುಕೂಲಕ್ಕಿಂತ ಅನಾನುಕೂಲವೇ ಆಗಲಿದೆ.
ಲೇ: ಕೆ.ಅರುಣ್ ಪ್ರಸಾದ್
ಮಾಜಿ ಜಿ.ಪಂ.ಸದಸ್ಯ
ಆನಂದಪುರಂ.
Comments
Post a Comment