*ಮಲೆನಾಡಿನ ಸ್ವದೇಶಿ ಉಪಹಾರಗಳು ಅಡುಗೆ ಮನೆಗಳು ಮೇಲ್ದಜೆ೯ಗೆ ಏರಿದ೦ತೆ ನಾಪತ್ತೆ ಆಗುತ್ತಿದೆ*.
ಜೋಳದ ರೊಟ್ಟಿ ರಾಗಿ ರೊಟ್ಟಿ ಉತ್ತರ ಕನಾ೯ಟಕದ ನಿತ್ಯದ ಮೆನು ಊಟದಲ್ಲಿ ಈಗಲೂ ಮುಂದುವರಿದಿದೆ, ಮಲೆನಾಡಿನ ಅಕ್ಕಿ ರೊಟ್ಟಿಗಳಲ್ಲಿ ಹಲವು ವಿದವಿದೆ.
ಇವತ್ತಿಗೂ ನನಗೆ ಹೆಚ್ಚು ಇಷ್ಟ ಆಗಿರುವುದು ಮಲೆನಾಡಿನ ಪಶ್ಚಿಮ ಘಟ್ಟದ ಸಾಗರ ತಾಲ್ಲೂಕಿನ ಅರಲಗೋಡಿನಿಂದ ಕೋಗಾರ್ ವರೆಗಿನ ಜೈನರ ಮನೆಗಳಲ್ಲಿ ತಯಾರಿಸುವ ಅಕ್ಕಿ ರೊಟ್ಟಿಗಳು!
ಇದನ್ನ ಮೊದಲು ನಾನು ನೋಡಿದ್ದು ಸವಿದದದ್ದು ಅರಲುಗೋಡು ಸಮೀಪದ ಬಿದನೂರು ಶಶಿಕಾಂತ ಜೈನ್ ರ ಮನೆಯಲ್ಲಿ ಅದೇ ರೀತಿ ಕೊಗಾರಿನ ಆಲೆಮನೆ ಸಂತೋಷ್ ಕುಮಾರ್ ಜೈನ್ ರ ಮನೇಲಿ.
ಅವರು ಹೆಚ್ಚು ಬಳಕೆಯಲ್ಲಿರುವ ಅಕ್ಕಿ ಹಿಟ್ಟಿನಿಂದ ರೊಟ್ಟಿ ಮಾಡುವುದಿಲ್ಲ ಇದಕ್ಕೆ ಜೈನರ ಅಹಿಂಸಾ ತತ್ವದ ಕಾರಣವೂ ಇರಬಹುದು, ಹಾಗಾಗಿ ಅಕ್ಕಿ ನೆನಸಿ ನಂತರ ಅರೆದು ಅದರಿಂದ ರೊಟ್ಟಿ ಹೆ೦ಚಿನಲ್ಲಿ ಹುರಿದು ಕೆಂಡದಲ್ಲಿ ಸುಟ್ಟು ತೆಂಗಿನ ಕಾಯಿ ಹಸಿಮೆಣಸಿನ ಚಟ್ನಿಯೊ೦ದಿಗೆ ಸವಿದರೆ ಮಾತ್ರ ಪಶ್ಚಿಮ ಘಟ್ಟದ ಜೈನರ ರೊಟ್ಟಿಯ ಘಮ ಮತ್ತು ರುಚಿ ಗೊತ್ತಾಗುತ್ತದೆ.
Comments
Post a Comment