ಕೊರಾನಾ ಲಾಕ್ ಡೌನ್ ಡೈರಿ 44. ಕನಿಷ್ಟ ಸಂಖ್ಯೆಯ ಸೋ೦ಕಿದ್ದಾಗ 10 ವರ್ಷದ ಒಳಗಿನ ಮಕ್ಕಳು ಮತ್ತು 60 ವರ್ಷದ ನಂತರದವರನ್ನ ಮನೆಯಿಂದ ಹೊರಬಿಡಬಾರದಾಗಿ ಅವರಿಗೆ ಬೇಗ ಸೋ೦ಕು ತಗಲುವ ಅಪಾಯ ಎಂದು ಸಾರಿದ ಸಕಾ೯ರಗಳು ಈಗ ಸೋ೦ಕು ಮಿತಿ ಮೀರಿದಾಗ ಶಾಲೆ ತೆರೆಯಲು ಮುಂದಾಗಿರುವುದು ತುಂಬಾ ಅಪಾಯಕಾರಿ ನಿಲುವು
ಕೊರಾನಾ ಲಾಕ್ ಡೌನ್ ಡೈರಿ -2020
ಲೆಟರ್ ನಂಬರ್- 44.
ದಿನಾ೦ಕ: 4-ಜೂನ್ -2020.
#ಶಾಲೆ_ಮೊದಲಾ?
*10 ವಷ೯ದ ಮಕ್ಕಳನ್ನ ಮನೆಯಿಂದ ಹೊರಬಿಡಬೇಡಿ ಅಂತ ನಮ್ಮ ಸಕಾ೯ರಗಳು ಸೋ೦ಕು ಸಾವಿರದ ಒಳಗೆ ಇದ್ದಾಗ ಹೇಳಿದ್ದನ್ನ ಈಗ ಕೊರಾನ ಸೋಂಕು 2 ಲಕ್ಷ ದಾಟಿದ ಮೇಲೆ ಅದರ ಮೇಲೆ ನಿಯಂತ್ರಣವೇ ಅಸಾಧ್ಯ ಅಂದಾದ ಮೇಲೆ ಈ ಮಕ್ಕಳನ್ನ ಶಾಲೆ ತೆರೆದು ಕಳಿಸುವ ಅಪಾಯಕಾರಿ ಕಾಯ೯ಕ್ಕೆ ಮು೦ದಾಗಿದೆ*
*ಪ್ರಾನ್ಸ್ ದೇಶದಲ್ಲಿ ಕೊರಾನ ಜೊತೆಯಲ್ಲಿ ಪ್ರಾಥಮಿಕ ಶಾಲೆ ಪ್ರಾರ೦ಬಿಸಿ 70 ಮಕ್ಕಳು ಸೋ೦ಕಿತರಾಗಿದ್ದಾರೆ*
ಸಜ್ಜನ ಮತ್ತು ವಿವೇಕವುಳ್ಳಾ ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಂದಿಗ್ದದಲ್ಲಿರುವುದು ಸತ್ಯ ಯಾಕೆಂದರೆ ಪ್ರಾಥಮಿಕ ಶಾಲೆ ತಕ್ಷಣ ಶುರುವಾಗಲಿ ಎಂಬ ಖಾಸಾಗಿ ಶಿಕ್ಷಣ ಸಂಸ್ಥೆಯ ಒತ್ತಡ ಒ0ದು ಕಡೆ ಮತ್ತು ಮಾರಣಾಂತಿಕ ಕೊರಾನಾ ಒ0ದು ಕಡೆ ಹಾಗಾಗಿ.
ಪ್ರಾಥಮಿಕ ಶಾಲೆ ಪ್ರಾರಂಬಿಸದಿದ್ದರೆ ಮಕ್ಕಳು ಹಾಳಾಗುತ್ತಾರೆ, ಕೆಟ್ಟ ಚಟ ಕಲಿಯುತ್ತಾರೆ ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆ ಒ0ದೆರೆಡು ದಿನದಲ್ಲೇ ವಾಪಾಸು ಪಡೆದಿದ್ದಾರೆ.
ಶಿಕ್ಷಣ ಸಚಿವರು ಇವತ್ತು ಒ0ದು ಪೋಸ್ಟ್ ಹಾಕಿದ್ದಾರೆ ಅದರಲ್ಲಿ ಒಂದನೆ ತರಗತಿ ಮಗು ಕೊರಾನ ಹೋದ ನಂತರವೇ ಶಾಲೆ ಪ್ರಾರಂಬಿಸಿ ಎಂದ ಅಥ೯ವತ್ತಾದ ಸಲಹೆ.
10 ವಷ೯ದ ಮಕ್ಕಳನ್ನ ಮನೆಯಿಂದ ಹೊರಬಿಡಬೇಡಿ ಅಂತ ನಮ್ಮ ಸಕಾ೯ರಗಳು ಸೋ೦ಕು ಸಾವಿರದ ಒಳಗೆ ಇದ್ದಾಗ ಹೇಳಿದ್ದನ್ನ ಈಗ ಕೊರಾನ ಸೋಂಕು 2 ಲಕ್ಷ ದಾಟಿದ ಮೇಲೆ ಅದರ ಮೇಲೆ ನಿಯಂತ್ರಣವೇ ಅಸಾಧ್ಯ ಅಂದಾದ ಮೇಲೆ ಈ ಮಕ್ಕಳನ್ನ ಶಾಲೆ ತೆರೆದು ಕಳಿಸುವ ಅಪಾಯಕಾರಿ ಕಾಯ೯ಕ್ಕೆ ಮು೦ದಾಗಿದೆ.
1 ರಿಂದ 7 ನೇ ತರಗತಿ ಮಕ್ಕಳಿಗೆ ಸದ್ಯ ಶಾಲೆ ಪ್ರಾರಂಭ ಮುಂದೂಡಿ, ಮನೆಯಲ್ಲೇ ಸರಳ ಕಲಿಕೆಗೆ ಮಾದರಿ ಶಿಕ್ಷಣದ ಯೋಜನೆ ರೂಪಿಸ ಬಹುದಾಗಿದೆ, ಮು೦ದಿನ ಜನವರಿ ನಂತರ ಎಲ್ಲಾ ರೀತಿಯಲ್ಲಿ ಕೊರಾನ ನಿಯ೦ತ್ರಣ ಆದಲ್ಲಿ ಶಾಲೆ ಏಕೆ ಪ್ರಾರಂಬಿಸಬಾರದು?
ಇವತ್ತಿಗೆ ಈ ಕ್ಷಣಕ್ಕೆ ನಮ್ಮ ದೇಶದಲ್ಲಿ ಸೋ೦ಕು ಪೀಡಿತರ ಸಂಖ್ಯೆ 2 ಲಕ್ಷದ 17 ಸಾವಿರ ದಾಟಿದೆ, ಸಾವಿನ ಸಂಖ್ಯೆ 6 ಸಾವಿರದ 75 ಮುಂದಿನ 15 ದಿನದಲ್ಲಿ ಇದು ಡಬಲ್ ಆಗುತ್ತೆ ಅನುಮಾನವಿಲ್ಲ.
ಆತ್ಮ ಹತ್ಯಾ ರೀತಿಯಲ್ಲಿ ಸಕಾ೯ರಗಳು ಎಲ್ಲಾ ನಿಯ೦ತ್ರಣಗಳನ್ನ ತೆಗೆಯುತ್ತಿರುವುದು ಮುಂದೆ ದೊಡ್ಡ ದುರ೦ತ ಆಹ್ವಾನಿಸಿದಂತೆ.
ಮಕ್ಕಳ ಪೋಷಕರು ಒ೦ದು ವಷ೯ ಮಕ್ಕಳ ಶಿಕ್ಷಣಕ್ಕಿ೦ತ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲೇ ಬೇಕಾಗಿದೆ.
Comments
Post a Comment