ಅಮೇರಿಕಾದ ವಣ೯ ದ್ವೇಷ, ಮುಗಿಯದ ಕಂದಕ.ಭಾರತದಲ್ಲಿನ ಜಾತಿ ವ್ಯವಸ್ಥೆ ಮತ್ತು ದಮ೯ ದಮ೯ಗಳಲ್ಲಿ ನ ದ್ವೇಷ ಕೂಡ ಇ೦ತಹದ್ದೇ ವಿಕೃತ ಮನಸ್ಸುಗಳು.
ಅಮೇರಿಕಾದಲ್ಲಿನ ಬಿಳಿಯ ಪೋಲಿಸ್ ಕಪ್ಪು ವಣ೯ದ ಆರೋಪಿಯನ್ನ ಕೈಗೆ ಬೇಡಿ ತೊಡಿಸಿ ನೆಲಕ್ಕೆ ಹಾಕಿದ್ದರೂ ಆತನ ಕುತ್ತಿಗೆ ಮೊಳಕಾಲಿನಿಂದ ಅದುಮಿ ಅವನ ಉಸಿರಾಟ ನಿಲ್ಲುವ೦ತೆ ಮಾಡಿದ ಈ ವಿಡಿಯೋ ನೋಡಿ, ಆತನ ಯಾವ ವಿನಂತಿಯೂ ಈ ಕಟುಕನ ಹೃದಯದ ಬಾಗಿಲು ತಟ್ಟಲಿಲ್ಲ, ಅಸಹಾಯಕರಾದ ಜನರು ಮೌನ ಪ್ರೇಕ್ಷಕರಾದರು, ಪ್ರಾಣ ಪಕ್ಷಿ ಹಾರಿದ ನಂತರವೇ ಆತ ತನ್ನ ಮೊಳಕಾಲನ್ನ ಹಿಂತೆಗೆದ.
ಅಮೇರಿಕಾದ ಕರಿಯರ ಪರವಾಗಿ ಹೋರಾಡಿದ ಮಾಟಿ೯ನ್ ಲೂಥರ್ ಕೊಲೆಯ ನಂತರ ನಡೆದ ಪ್ರತಿಭಟನೆ ಮೀರಿಸುವಂತಾ ಪ್ರತಿಭಟನೆ ಅಲ್ಲಿ ನಡೆದಿದೆ.
ಪ್ರತಿ ಭಟನೆ ಮುಗಿಯುತ್ತದೆ, ಪೋಲಿಸ್ ಪಡೆ ಕ್ಷಮೆ ಯಾಚಿಸುತ್ತದೆ, ಕೊಂದವನ ವಿಚಾರಣೆ, ಬಂದನ ಆಗ ಬಹುದು ಆದರೆ ಈ ಬಿಳಿ ಕಪ್ಪು ಎಂಬ ಬೇದ ತಿಳಿಯಾದೀತಾ?
ಭಾರತದಲ್ಲಿ ಈಗ ಇರುವ ಜಾತಿ ಜಾತಿಗಳ ಮೇಲು ಕೀಳು ಆಚರಣೆ, ಪರೋಕ್ಷವಾಗಿ ನಡೆಯುತ್ತಿರುವ ಅಸ್ಪೃಶ್ಯ ಆಚರಣೆ, ದಾಮಿ೯ಕ ಆಚರಣೆಯ ದೇವಾಲಯ, ಜಾತ್ರೆಗಳಲ್ಲಿ ಸಹಪoಕ್ತಿ ಬೋಜನ ವಿರೋದಿಸುವ ಮೇಲರಿಮೆಯ ಮನಸ್ಸುಗಳು ಮತ್ತು ಈಗ ದಮ೯ ದಮ೯ಗಳ ಬಡಿದಾಟಗಳು, ಜಾತಿ ಆದಾರಿತ ಸಂಘ, ಬ್ಯಾ೦ಕ್, ಮಠ, ಶೈಕ್ಷಣಿಕ ಸಂಸ್ಥೆ, ಜಾತಿ ಆದಾರಿತ ಚುನಾವಣೆಗಳು ಕೂಡ ಅಮೆರಿಕಾದ ವಣ೯ ದ್ವೇಷವನ್ನೂ ಕೂಡ ಮೀರಿಸುವಂತದ್ದೇ, ಇದನ್ನ ಯಾರು ಎಷ್ಟೆ ಸಮಥಿ೯ಸಿಕೊಂಡರು ಇದು ಮನುಷ್ಯನ ವಿಕೃತ ಮಾನಸಿಕ ರೋಗ ಆಗಿದೆ.
Comments
Post a Comment