ಭಾರತೀಯ ಆಯುವೇ೯ದ ಚಿಕಿತ್ಸಾ ಕ್ರಮದಿಂದ ವಿಶ್ವ ವಿಖ್ಯಾತರಾಗಿದ್ದ ವೈದ್ಯ ನಾರಾಯಣ ಮೂತಿ೯ ನರಸೀಪುರ ಇನ್ನಿಲ್ಲ ( 24- ಜೂನ್ -2020)
ಸರಳ ಜೀವನದ, ಅಹಂಕಾರದ ಲವಲೇಶವೇ ಇಲ್ಲದ ಬಂದವರಿಗೆಲ್ಲ ತಮ್ಮ ವಂಶ ಪಾರಂಪರ್ಯವಾಗಿ ಬಂದ ನಾಟಿ ವೈದ್ಯ ಚಿಕಿತ್ಸೆ ನೀಡುತ್ತಿದ್ದ ವೈದ್ಯನಾರಾಯಣ ಮೂತಿ೯ಯವರಿಗೆ ಇತ್ತೀಚಿನ ವರ್ಷದಲ್ಲಿ ವಿಪರೀತ ಸಂಖ್ಯೆಯಲ್ಲಿ ಬರುವ ರೋಗಿಗಳಿಂದ ಅನೇಕ ಕಷ್ಟಗಳೂ ಎದುರಿಸುವಂತಾಯಿತು.
*ಅವರ ಔಷದಕ್ಕೆ ಬೇಕಾಗುತ್ತಿದ್ದದ್ದು ದೊಡ್ಡ ಮರಗಳಲ್ಲ ಸಣ್ಣ ಕುರುಚಲು ಔಷದ ಅಂಶದ ಸಸ್ಯಗಳು ಮಾತ್ರ, ಅವರು ಹೇಳುತ್ತಿದ್ದಂತೆ ಇಡೀ ವಿಶ್ವದ ಜನರಿಗೂ ಕೊಟ್ಟರೂ ಖಾಲಿ ಆಗದಷ್ಟು ನಮ್ಮ ಪಶ್ಚಿಮ ಘಟ್ಟದ ಅಂಚಿನಲ್ಲಿದೆ ಎನ್ನುತ್ತಿದ್ದರು.*
ಆದರೆ ಇವರಿಂದ ಅರಣ್ಯ ನಾಶ, ಪರಿಸರ ನಾಶ ಎಂದೆಲ್ಲ ಹಸಿರು ನ್ಯಾಯಾಲಯದಲ್ಲಿ ಇವರ ವಿರುದ್ದ ಹಾಕಿದ್ದ ಕೇಸ್ ನ್ಯಾಯಾದೀಶರು ಸತ್ಯಾಂಶ ಪರಾಮರಿಸಿ ವಜಾ ಮಾಡಿದ್ದರು.
ಅನೇಕ ಸುಳ್ಳು ಕೇಸುಗಳು ಇವರ ಮೇಲೆ ಇವರನ್ನ ದ್ವೇಷಿಸುವವರು ದಾಖಲಿಸಿದ್ದು ಕೂಡ ಇವರನ್ನ ಅನಾವಶ್ಯಕ ತೊಂದರೆಗೆ ಕಾರಣ ಆಗಿತ್ತು.
ಇವರ ಚಿಕಿತ್ಸೆಯಿಂದ ಯಾರಿಗೂ ಗುಣ ಆಗಿಲ್ಲ ಅಂತೆಲ್ಲ ಹೇಳುವವರೇ ಇದ್ದಾರೆ ಆದರೆ *ಅಲೋಪತಿಯಲ್ಲಿಯೂ ಗುಣ ಆಗದೆ ಅಂತಿಮ ಹಂತದಲ್ಲಿ ಇವರಲ್ಲಿಗೆ ಬಂದು ಗುಣ ಆದ ಸಾವಿರಾರು ದಾಖಲೆ ನಾನೇ ಸಂಗ್ರಹಿಸಿದ್ದೇನೆ.*
ಇವರು ಮತ್ತು ನನ್ನ ತಂದೆ ಗಳಸ್ಯ ಕಂಠಸ್ಯದ ಗೆಳೆಯರು, ಇವರ ಚಿಕಿತ್ಸಾ ಕೇಂದ್ರಕ್ಕೆ ಒಂದು ಕಾಣಿಕೆ ಹುಂಡಿ ನನ್ನ ತಂದೆ ಕೊಡುಗೆ ಆಗಿ ನೀಡಿದ್ದರು ಸುಮಾರು 30 ವರ್ಷದಿಂದ ಅವರ ನೆನಪಿಗಾಗಿ ಅದು ಈಗಲೂ ಅಲ್ಲೇ ಇದೆ.
ನನ್ನ ತಂದೆ ನಂತರ ನಾನು ಇವರಿಗೆ ಆಪ್ತನಾಗಿದ್ದು ನನ್ನ ಬಾಗ್ಯ, ನಾವೆಲ್ಲ ಇವರನ್ನ ಸಣ್ಣಯ್ಯ ಹೆಗ್ಗಡೆಯವರೆಂದೇ ಕರೆಯುವುದು.
*ಈ ಕಾರಣದಿಂದ ವಿಶ್ವದ ಹೆಸರಾಂತ ವೈದ್ಯರು, ವಿಜ್ಞಾನಿಗಳು, ವಿದೇಶಿ ಪತ್ರಕರ್ತರು, ಉದ್ದಿಮೆದಾರರು ಮತ್ತು ಔಷದ ತಯಾರಕರು ಇವರನ್ನ ಬೇಟಿ ಮಾಡಲು ಮತ್ತು ಅವರಿಗೆ ದ್ವಿಬಾಷಿಯಾಗಿ ಸಂವಾದ ಮಾಡಲು ನನ್ನನ್ನೆ ಅವಲ೦ಬಿಸುತ್ತಿದ್ದರು ಇದರಿಂದ ಪ್ರಸಕ್ತ ಚಿಕಿತ್ಸೆಗಳ ಬಗ್ಗೆ ಬೇರೆ ಬೇರೆ ದೇಶಗಳ ಮಾಹಿತಿ ನನಗೆ ದೊರೆಯುವಂತಾಯಿತು ಮತ್ತು ಅವರೆಲ್ಲರ ಸಂಪಕ೯ ಸಾಧ್ಯವಾಯಿತು.*
ಸಾವಿರಾರು ವರ್ಷದ ಹಿಂದಿನಿಂದ ಈ ಕುಟುಂಬ ವೈದ್ಯ ಕುಟುಂಬ ಆಗಿದೆ, 800 ವರ್ಷದ ಹಿಂದೆ ತಮಿಳುನಾಡಿನ ಕುಂಬಕೋಣದ ರಾಜ ವೈದ್ಯ ಕುಟುಂಬ ಒ0ದು ಕನ್ನಡ ನಾಡಿನ ಕದಂಬ ರಾಜರ ಕುಟುಂಬದ ರಾಜ ವೈದ್ಯರಾಗಿ ಬಂದು ಸೇರಿದ ಕುಟುಂಬಕ್ಕೆ ಸೇರಿದವರು ವೈದ್ಯನಾರಾಯಣ ಮೂತಿ೯ಗಳು ಹಾಗಾಗಿ ಇವರ ರಕ್ತದಲ್ಲಿ ವೈದ್ಯರ ಅಂಶವಿದೆ, ಪರಂಪರೆ ಇದೆ.
ಬಾಲ್ಯದಲ್ಲಿ ಬಲು ಬಡತನ ಇವರಿಗೆ 7 ವಷ೯ ಇದ್ದಾಗ ಇವರ ತಂದೆ ಮರದಿಂದ ಬಿದ್ದು ಮೃತರಾಗುತ್ತಾರೆ ಅದಕ್ಕೂ ಮೊದಲೆ ಇವರ ತಾಯಿ ಕಾಯಿಲೆಯಿ೦ದ ಇವರನ್ನ ತಬ್ಬಲಿ ಮಾಡಿ ಹೋಗಿರುತ್ತಾರೆ ಇವರಿಗಿಂತ ದೊಡ್ಡವರಾದ ಸಹೋದರಿ ಇವರನ್ನೆಲ್ಲ ಸಾಕಿ ಸಲುಹಿದ್ದಾಗಿ ನೆನಪು ಮಾಡುತ್ತಿದ್ದರು.
ತಂದೆ ನಂತರ ದೊಡ್ಡಪ್ಪ ರು ಮನೆ ಜಮೀನು ತೋಟ ಯಜಮಾನಿಕೆ ಮಾಡುತ್ತಿದ್ದರೂ ಇವರ ತಂದೆ ಅಖಾಲಿಕವಾಗಿ ಮೃತರಾದ ನಂತರ ಸಾಗರದ ಅಡಿಕೆ ಮಂಡಿ ಮಾಲಿಕರಿಂದ ಇವರ ಆಸ್ತಿ ಜಪ್ತಿಗೆ ನ್ಯಾಯಾಲಯದ ಆದೇಶವನ್ನ ಇವರ ಜಾತಿ ಬಾಂದವರು ಇವರ ತಂದೆಯ ಸಹಿ ಇರುವ ಪ್ರಾಮಿಸರಿ ನೋಟ್ ಹಾಜರು ಮಾಡಿ ತಂದಿದ್ದರು ಆ ಕಾಲದಲ್ಲಿ ಸುಮಾರು 70 ವಷ೯ದ ಹಿಂದೆ 7 ಸಾವಿರ ಅಂದರೆ ಸಾಮಾನ್ಯ ಮೊತ್ತವಾಗಿರಲಿಲ್ಲ.
ಇಡೀ ಕುಟುಂಬ ಆಸ್ತಿ ಅವರಿಗೆ ಬಿಟ್ಟು ಕೊಟ್ಟು ಶಿವಮೊಗ್ಗ ಸಮೀಪದ ಅಯನೂರಿನ ಬಸ್ ಸ್ಟ್ಯಾಂಡ್ ಹೋಟೆಲ್ ನಡೆಸುವ ತೀಮಾ೯ನ ಮಾಡಿದಾಗ ಇವರನ್ನೆಲ್ಲ ಸಲುಹುತ್ತಿದ್ದ ಇವರ ಅಕ್ಕ ತಾಯಿ ಕಾಲ ನಂತರ ರಕ್ಷಿಸಿಟ್ಟಿದ್ದ ಆಭರಣಗಳನ್ನ ದೊಡ್ಡಪ್ಪನಿಗೆ ನೀಡಿ ಇದನ್ನು ಮಾರಿಯಾದರೂ ಆಸ್ತಿ ಉಳಿಸಬೇಕೆನ್ನುತ್ತಾರೆ.
ಆಭರಣ ಮಾರಿದರೂ 2 ಸಾವಿರ ಕೊರತೆ ಆದಾಗ ಇವರ ತಾಯಿಯ ಬೆಳ್ಳಿ ಬಳುವಳಿ ಸಾಮಾನು ಮಾರಿ ಮತ್ತೂ ಕಡಿಮೆ ಆದಾಗ ಮಾವಂದಿರ ಸಾಲದಿಂದ ಇಡೀ ಆಸ್ತಿ ಉಳಿಸಿಕೊಂಡದ್ದು ನೆನಪಿಸಿಕೊಂಡ ಸಂದಭ೯ ಯಾವುದೆಂದರೆ ಇವರ ತಾಯಿ ಬೆಳ್ಳಿ ಬಳವಳಿ ಸಾಮಾಗ್ರಿ 70 ವರ್ಷದ ಹಿಂದೆ ಖರೀದಿಸಿದ ಕುಟುಂಬದವರು ಅವರ ಆಸ್ತಿ ಹಿಸ್ಸೆ ಸಂದಭ೯ದಲ್ಲಿ ಅದನ್ನು ಇವರಿಗೆ ಮರು ಮಾರಾಟ ಮಾಡಿದಾಗ ಈ ಘಟನೆ ನೆನಪಿಸಿಕೊಂಡರು.
*ಬಾಲ್ಯದಲ್ಲಿ ಮತ್ತು ಯೌವನದಲ್ಲಿ ಕಡು ಬಡತನದಲ್ಲಿ ಜೀವನ ಸಾಗಿಸಿದ ಹೆಗ್ಗಡೆಯವರು ಔಷದಿ ಸಸ್ಯಗಳನ್ನು ಹುಡುಕಿ ಕಾಡು ಮೇಡು ದನ ಕಾಯುವವರೊ೦ದಿಗೆ ತಿರುಗಾಡುತ್ತಿದ್ದನ್ನ ಸಂಬಂದಿಕರು ಹಾಸ್ಯ ಮಾಡಿಕೊಂಡು ಗೇಲಿ ಮಾಡುತ್ತಿದ್ದದ್ದನ್ನ ಇವರ ಪತ್ನಿ ನೆನಪಿಸುತ್ತಾರೆ* ಇವರ ಪತ್ನಿ ಚಿಕ್ಕಮ್ಮನ ಮಗ ಆರ್.ಎಸ್.ಎಸ್. ಮುಖಂಡ ದತ್ತಾತ್ರಿ ಹೊಸ ಬಾಳೆ ಮತ್ತು ಸೊರಬ SS ಮಂಜಪ್ಪನವರು.
ಅಂತ್ಯ ಸಂಸ್ಕಾರದಲ್ಲಿ ಬಾಗವಹಿಸಿದ ಮಂಜಪ್ಪ ಮತ್ತು ಕುಟುಂಬದವರು ಇವತ್ತು ಉತ್ತರ ಪ್ರದೇಶದಲ್ಲಿರುವ ದತ್ತಾತ್ರೆಯ ಹೊಸಬಾಳೆ ಸಂತಾಪ ಸೂಚಿಸಿದ್ದಾಗಿ ತಿಳಿಸಿದರು.
ಇವರ ಬಾಲ್ಯದಲ್ಲಿ ತಪಸ್ವಿ ಶ್ರೀಧರ ಸ್ವಾಮಿಗಳಿಗೆ ಇವರ ಮನೆಯಲ್ಲಿ ಬಿಕ್ಷಾಗೆ ವ್ಯವಸ್ಥೆ ಮಾಡಲಾಗಿತ್ತಂತೆ ಕಾರಣ ಆ ದಿನಗಳಲ್ಲಿ ಇವರ ಊರಾದ ನರಸೀಪುರ ಗೌತಮಪುರ ಸುತ್ತಮುತ್ತಾ ಪ್ರತಿ ವರ್ಷ ಬೆಂಕಿ ಅನಾಹುತದಿಂದ ನೂರಾರು ಮನೆ ದಹನ ಆಗುತ್ತಿತ್ತು ಅದರಿಂದ ಪರಿಹಾರ ಕಾಣದ ಗ್ರಾಮಸ್ಥರೆಲ್ಲ ಶ್ರೀದರ ಸ್ವಾಮಿಗಳಲ್ಲಿ ವಿಚಾರ ತಿಳಿಸಿ ಪರಿಹಾರ ಕೇಳಿದಾಗ ಅವರು ಇವರ ಊರಾದ ನರಸೀಪುರಕ್ಕೆ ಬಂದು ಅಲ್ಲಿ ಪಾಳು ಬಿದ್ದ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿ ವಿಗ್ರಹ ಸ್ಪಷಿ೯ಸಿ ಇನ್ನು ಮುಂದೆ ಈ ರೀತಿ ಅಗ್ನಿ ಬಾದೆ ಆಗುವುದಿಲ್ಲ ಎನ್ನುತ್ತಾರೆ ನಂತರ ಇವರ ಮನೇಲಿ ಸ್ನಾನ ಪೂಜೆ ಆಹಾರ ಮುಗಿಸಿ ಹೊರಡುವಾಗ ಬಾಲಕ ನಾರಾಯಣ ಮೂತಿ೯ಯವರ ಶಿರದ ಮೇಲೆ ಕೈ ಇಟ್ಟು ಆಶ್ರೀವಾದ ಮಾಡಿ *ಈ ಬಾಲಕ ವಿಶ್ವವಿಖ್ಯಾತ ಆಯುವೇ೯ದ ಪಂಡಿತನಾಗುತ್ತಾನೆ ಎಂದು ಹಾರೈಸಿದ್ದು ವೈದ್ಯ ನಾರಾಯಣ ಮೂತಿ೯ ಜೀವನದಲ್ಲಿ ನಿಜವಾಯಿತು.*
ಇವರು ಪ್ರಸಿದ್ದರಾದ ನಂತರ ಇವರನ್ನ ಸಹಿಸದವರು ಇವರಿಗೆ ಕೊಟ್ಟಂತಹ ತೊಂದರೆ ಬಹುಶಃ ನಾನೇ ಇವರ ಜಾಗದಲ್ಲಿದ್ದರೂ ಊರು ಬಿಡುತ್ತಿದ್ದೆ ಅಂದದ್ದು ಅನೇಕ ಬಾರಿ ಹೆಗ್ಗಡೆಯವರು ಮಾತಿನಲ್ಲಿ ನನ್ನ ಉಲ್ಲೇಖ ಮಾಡುತ್ತಿದ್ದರು.
*ಅಮೇರಿಕಾದ ಪ್ರಸಿದ್ದ ಹೋಸ್ಟನ್ ಕಾಡೀ೯ಯಾಲಜಿಕ್ ಆಸ್ಪತ್ರೆ ಹೆಡ್ ಆಫ್ ದಿ ಡಿಪಾಟ೯ಮೆಂಟ್ ವೈದ್ಯರು ಅವರ ಪತ್ನಿಗಾಗಿ ಇಲ್ಲಿಗೆ ಬರುತ್ತಿದ್ದದ್ದು, ಕೆನಡಾದ 13 ವರ್ಷದ ಬಾಲಕ ಆಸ್ಟಿನ್ ಮೆದಳು ಕ್ಯಾನ್ಸರ್ ನಿಂದ ಗುಣ ಆಗಿದ್ದು ಇವೆಲ್ಲ ನೆನಪು ಸದಾ ಆಗುತ್ತಿರುತ್ತದೆ.*
ಬೆಂಗಳೂರಿನ ಯುವಕನೋವ೯ನಿಗೆ ಮೆದುಳಿನಲ್ಲಿ ಬೆಳೆದ ಗೆಡ್ಡೆ ಆಪರೇಷನ್ ಮಾಡಲಾಗದ ಜಾಗದಲ್ಲಿದ್ದದ್ದನ್ನ ಮುಂಬೈ ಟಾಟಾ ಮೆಮೋರಿಯಲ್ ಆಸ್ಪತ್ರೆ ತಿಳಿಸಿದಾಗ ಪುನ: ಬೆಂಗಳೂರಿನ ಪ್ರಖ್ಯಾತ HCG ಲ್ಯಾಬ್ ನಲ್ಲಿ ಪರೀಕ್ಷೆ ಮಾಡಿದಾಗಲೂ ಇದೇ ವರದಿ ಬಂದಾಗ ಇಡೀ ಕುಟುಂಬ ಆತ್ಮಹತ್ಯ ಯೋಚನೆ ಮಾಡಿದಾಗ ಆ ಕುಟುಂಬದ ಆತ್ಮಿಯರು ಇವರಲ್ಲಿಗೆ ಕರೆತಂದು ಚಿಕಿತ್ಸೆ ಮಾಡಿಸಿದರು *ಒ0ದು ವರ್ಷದಲ್ಲಿ ಆಪರೇಷನ್ ಮಾಡದೆ ಮೆದುಳಿನ ಗಡ್ಡೆ ಸಂಪೂರ್ಣ ಕರಗಿದ ವಿಸ್ಮಯ ನಾನು ನನ್ನ ಕಣ್ಣಾರೆ ನೋಡಿದ್ದೇನೆ ಇದರ ಸಂಪೂರ್ಣ ವೈದ್ಯಕೀಯ ವರದಿ ನನ್ನ ಹತ್ತಿರ ಇದೆ ಇದು ಅನೇಕರು ಸಂಶೋದನೆಗೆ ಕುತೂಹಲಕ್ಕೆ ನನ್ನಿ೦ದ ಪಡೆಯುತ್ತಾರೆ.*
ಬಾರತೀಯ ಆಯುವೇ೯ದ ಔಷದ ಶಾಸ್ತ್ರ ವನ್ನ ಬಾರತೀಯರೆ ನಂಬದಂತಾ ಪರಿಸ್ಥಿತಿ ನಿಮಾ೯ಣ ಆಗಿರುವ ಸಂದಭ೯ದಲ್ಲಿ ವೈದ್ಯನಾರಾಯಣ ಮೂತಿ೯ಯವರ ಚಿಕಿತ್ಸೆ ಅನೇಕರಿಗೆ ಸವಾಲಾಗಿದ್ದು ಸುಳ್ಳಲ್ಲ.
*ಅವರ ನಂತರ ಅವರ ಏಕೈಕ ಪುತ್ರ ರಾಘವೇ೦ದ್ರ ಈ ಚಿಕೆತ್ಸೆ ಮುಂದುವರಿಸುವ ಎಲ್ಲಾ ತರಬೇತಿ ಈಗಾಗಲೇ ತಂದೆಯಿಂದ ಪಡೆದಿದ್ದಾರೆ.*
ಶಿವಮೊಗ್ಗ ಜಿಲ್ಲೆಯ ನರಸೀಪುರಕ್ಕೆ ಸುಮಾರು 450 ವರ್ಷದ ಹಿಂದೆ ಬಂದು ನೆಲೆಸಿದ ಕುಟುಂಬದ ನಾರಾಯಣ ಮೂತಿ೯ಯಿ೦ದ ನರಸೀಪುರ ವಿಶ್ವ ವಿಖ್ಯಾತವಾಗಿದೆ, ಇಡೀ ಆನಂದಪುರದ ಅಥಿ೯ಕ ಅಭಿವೃದ್ದಿಯಲ್ಲಿ ಹೆಚ್ಚಿನ ಪಾಲು ಇವರ ಚಿಕಿತ್ಸೆ ಕಾರಣ ಆಗಿತ್ತು.
*ವೈದ್ಯನಾರಾಯಣ ಮೂತಿ೯ ನರಸೀಪುರ ಇವರ ನಿಸ್ವಾಥ೯ ಸೇವೆ ಒಂದು ವಿಶ್ವ ದಾಖಲೆ ಮತ್ತು ಮರೆತು ಹೋಗುತ್ತಿದ್ದ ಆಯುವೇ೯ದದ ಪುನಶ್ಚೇತನದ ಪ್ರಾರಂಭ ಕೂಡ.*
ಇವತ್ತು ದೂರದ ಕಲ್ಬುಗಿ೯ಯ ಪತ್ರಕತ೯ ಸ್ನೇಹಿತರು ಹೇಳುತ್ತಿದ್ದರು "ಬಡವರು ಮಧ್ಯಮ ವಗ೯ದ ಕುಟು೦ಬದಲ್ಲಿ ಕ್ಯಾನ್ಸರ್ ಬಂದರೆ ಇವತ್ತಿನ ಕಾಪೊ೯ರೇಟ್ ವೈದ್ಯಕೀಯ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುವುದು ಅಸಾಧ್ಯ ಆದರೆ ಬಡವರ ಆಪತ್ಬಾಂದವ ವೈದ್ಯ ನಾರಾಯಣ ಮೂತಿ೯ ಚಿಕಿತ್ಸೆ ಉತ್ತರ ಕನಾ೯ಟಕದ ನಮಗೆ ಒಂದು ಆಶಾ ಕಿರಣ ಆಗಿತ್ತು" ಅಂತ ಇದು ನಾರಾಯಣ ಮೂತಿ೯ಯವರನ್ನ ಹತ್ತಿರದಿಂದ ಬಲ್ಲವರಿಗೆ ಮತ್ತು ಅವರಿಂದ ಚಿಕಿತ್ಸೆ ಪಡೆದವರಿಗೆ ಮಾತ್ರ ತಿಳಿದಿದೆ.
80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಅವರಿಗೆ ಲಕ್ಷಾಂತರ ಜನರ ಹಾರೈಸುತ್ತಿದ್ದಾರೆ ಸದ್ಗತಿಗಾಗಿ.
*ಲೇ: ಕೆ. ಆರುಣ್ ಪ್ರಸಾದ್*
ಮಾಜಿ ಜಿ.ಪಂ.ಸದಸ್ಯ
ಆನಂದಪುರಂ - 9449253788.
e-mail arunprasadsagarar@gmail.com
Comments
Post a Comment