NO-49 ಕೊರಾನಾ ಲಾಕ್ ಡೌನ್ ಡೈರಿ,ನಿಯ೦ತ್ರಣಕ್ಕೆ ಬರದ ರೋಗ ಪ್ರಸರಣ, ಕೈ ಚೆಲ್ಲಿದ ಸಕಾ೯ರ, ಎಲ್ಲಾ ಮುಂಜಾಗೃತೆ ಗಾಳಿಗೆ ತೂರಿದ ಮಹಾಜನತೆ.
ಕೊರಾನಾ ಲಾಕ್ ಡೌನ್ ಡೈರಿ -2020
ಲೆಟರ್ ನಂಬರ್- 49.
ದಿನಾ೦ಕ: 30-ಜೂನ್ -2020.
ಪ್ರಾರ೦ಭದಲ್ಲಿ ಭಾರತ ದೇಶವಾಸಿಗಳಿಗೆ ಇದ್ದ ಕೊರಾನಾ ವೈರಸ್ ಆತಂಕ 100 ದಿನದಲ್ಲಿ ಇಲ್ಲವಾಗಿದೆ.
ಮಾಸ್ಕ್ ಇಲ್ಲ, ಸ್ಯಾನಿಟೈಸರ್ ಬೇಡ, ಸಾವ೯ಜನಿಕ ಅಂತರವೂ ಇಲ್ಲ ಇದರ ಜೊತೆ ಸಕಾ೯ರಗಳು ಲಾಕ್ ಡೌನ್ ಹಂತ ಹಂತವಾಗಿ ತೆರವು ಮಾಡುತ್ತಾ ಬಂದದ್ದೂ ಸೇರಿ ಭಾರತದಲ್ಲಿ ಕೊರಾನಾ ವಿಪರೀತವಾಗಿ ಹರಡಿದೆ.
ಪ್ರಾರಂಭದಲ್ಲಿ 108 ದಿನ ಬೇಕಾಗಿತ್ತು 1 ಲಕ್ಷ ಜನರಿಗೆ ಹರಡಲು ಈಗ ಕೇವಲ 7 ದಿನಕ್ಕೆ ಲಕ್ಷ ದಾಟುತ್ತಿದೆ ಮುಂದಿನ ದಿನದಲ್ಲಿ 3 - 4 ದಿನಕ್ಕೆ ಲಕ್ಷ ಜನರಿಗೆ ತಲುಪುವ ಸಾಧ್ಯತೆ ಇದೆ.
ಈಗಾಗಲೇ ಭಾರತ ಕೊರಾನಾ ನಾಗಾಲೋಟದಲ್ಲಿ ವಿಶ್ವದಲ್ಲಿ 4ನೇ ಸ್ಥಾನ ಪಡೆದಿದೆ.
ನೂರಾರು ಆದೇಶ ಸಕಾ೯ರ ಮಾಡುವುದು ಬದಲಿಸುವುದು ಮಾಡುತ್ತಲೇ ಇದೆ ಆದರೆ ಸಾವ೯ಜನಿಕರಲ್ಲಿ ಈ ಕಾಯಿಲೆ ಬಗ್ಗೆ ಜನ ಜಾಗೃತಿ ಮೂಡಿಸಲು ವಿಫಲವಾಗಿದೆ.
ಸಾವ೯ಜನಿಕವಾಗಿ ಅಂತರ ಗಿಂತರ ಪಾಲಿಸಲಿಲ್ಲ, ಗುಟ್ಕಾ ಕಂಡ ಕಂಡಲ್ಲಿ ಉಗಿದರೆ ದಂಡ ಎಂಬ ಕಾನೂನು ಮೀರಿ ಉಗಿಯುವವರೂ ಹೆಚ್ಚಾದರು.
ಇದೆಲ್ಲ ಒಂದು ತರ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವವರಿಗೆ ದಂಡ ಎಂಬಂತೆ.
ಈಗ ಕೊರಾನಾ ವಿಜೃಂಬಿಸುತ್ತಿದೆ, ಸಕಾ೯ರದ ಹತ್ತಿರ ಚಿಕಿತ್ಸೆ ವ್ಯವಸ್ಥೆ ಸಾಧ್ಯವಾಗುತ್ತಿಲ್ಲ, ನಮ್ಮಲ್ಲಿನ ವ್ಯವಸ್ಥೆಗೆ ಸವಾಲು ಹಾಕುವಂತೆ ರೋಗ ಹರಡುತ್ತಿದೆ.
ಅದ೯ ವಷ೯ ಆದರೂ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ, ಸಮುದಾಯಕ್ಕೆ ಈಗಾಗಲೇ ಹರಡಿರುವ ಇದು ಮರಣ ಮೃದಂಗ ಬಾರಿಸುತ್ತಿದೆ.
ನಿಯಂತ್ರಣಕ್ಕೆ ಸಹಕಾರಿ ಆಗಬೇಕಾದ ಸಕಾ೯ರದ ನೀತಿ ನಿಯಮಗಳು ಸರಿಯಾಗಿ ಅನೂಷ್ಟಾನವಾಗದಿರುವುದು ದುರಂತ.
Comments
Post a Comment