ಅನೇಕರು ಇವತ್ತಿನ ತಂದೆಯ ದಿನದಲ್ಲಿ ಅನೇಕ ಸ್ವಯ೦ ಅನುಭವದ ಲೇಖನ ಬರೆದಿದ್ದಾರೆ ಅದರಲ್ಲಿ ಪ್ರಜಾವಾಣಿ ಪತ್ರಿಕೆಯ ದಾವಣಗೆರೆ ಬ್ಯೂರೋ ಪ್ರಸರಣ ವಿಭಾಗದ ವ್ಯವಸ್ಥಾಪಕರಾದ ಹರವೆ ಸಂಗಣ್ಣ ಪ್ರಕಾಶ್ ಅನುಭವ ಇವತ್ತಿನ ಯುವ ಜನಾಂಗಕ್ಕೆ ಮಾದರಿ ಮತ್ತು ಪ್ರೇರಣೆ ನೀಡುವಂತಾದ್ದು.
ಇವರು ಚಾಮರಾಜ ನಗರ ಜಿಲ್ಲೆಯವರು, ತಮ್ಮ ತಂದೆಯ ಪ್ರೋತ್ಸಾಹ ಪತ್ರಿಕೆ ಹಂಚುವ ಮೂಲಕ ತೋರಿಸಿ ಕೊಟ್ಟಿದ್ದು ಅವರಿಗೆ ಇವತ್ತು ನಾಡಿನ ಪ್ರಖ್ಯಾತ ಪತ್ರಿಕೆಯಲ್ಲಿ ಪ್ರತಿಷ್ಟಿತ ಹುದ್ದೆಯಲ್ಲಿರುವ೦ತೆ ಮಾಡಿದ್ದನ್ನ ಪಾದರ್ಸ್ ಡೇನಲ್ಲಿ ನೆನಪು ಮಾಡಿ ಬರೆದಿದ್ದಾರೆ.
ಮನಸ್ಸಿದ್ದರೆ ಮಾಗ೯ ಉ೦ಟು, ವೃತ್ತಿಯಲ್ಲಿ ಮೇಲು ಕೇಳು ಇಲ್ಲ ಎನ್ನುವ ಸಂದೇಶ ಇವತ್ತಿನ ಎಲ್ಲಾ ಯುವ ಜನಾ೦ಗಕ್ಕೆ ಸ್ಪೂತಿ೯ ಉಂಟು ಮಾಡುತ್ತದೆ ಓದಿ.
ಅಂದು ನನ್ನ ಡಿಗ್ರಿ ಓದಿದ ನಂತರ ಹಳ್ಳಿಯಲ್ಲಿ ಏನು ಮಾಡಲಾಗದೆ ಮೈಸೂರಿಗೆ ಇಡೀ ನಮ್ಮ ಕುಟುಂಬ ಬಂದೆವು. ಅಣ್ಣ ಅಲ್ಲೆ ಇದ್ದ ಕಾರಣ ಒಂದು ಚಿಕ್ಕ ಮನೆಯಲ್ಲಿ ನಾನು,ಅವ್ವ, ಅಪ್ಪ ಅಣ್ಣನ ಸಂಸಾರ ಚಿಕ್ಕ ಜಾಗದಲ್ಲೇ ಇದ್ದೆವು. ನನ್ನ ಕೆಲಸ ಕೆಲಸ ಹುಡುಕುವುದು ಊಟ ಮಾಡುವುದು.ಕೆಲ ದಿನಗಳವರೆಗೆ ಇಷ್ಟೇ ಆಗಿತ್ತು ನನ್ನ ದಿನಚರಿ. ಸುಮಾರು ದಿನಗಳ ನಂತರ ಅಪ್ಪ ನನ್ನನ್ನು ಕರೆದು ನೋಡು ಮಗ, ನಾವೀಗ ಇರುವುದು ನಿನ್ನ ಅಣ್ಣನ ಮನೆಯಲ್ಲಿ ಇರುವುದು, ಯಾರೇ ಆಗಿರಲಿ ಎಷ್ಟು ದಿನ ಅಂತ ಸುಮ್ಮನೆ ಕುಳಿತು ಊಟ ಮಾಡುವುದು..ಬೇಡ ಇದು ಸರಿಯಲ್ಲ, ಕೆಲಸ ಸಿಕ್ಕಿಲ್ಲ ಅಂತಾ ಸುಮ್ಮನೆ ಕುಳಿತುಕೊಂಡಿರುವುದು ಸರಿಯಲ್ಲ. ಏನಾದರೂ ಮಾಡು ನಾನು ಕೂಡ ನಿನಗೆ ಬೆಂಬಲ ಕೊಡುತ್ತಿನಿ ಅಂತ ಹೇಳಿದರು. ನನ್ನ ಬಳಿ ಒಂದು ರೂಪಾಯಿ ಇಲ್ಲ, ಏನು ಮಾಡಲು ಸಾಧ್ಯ ಅಪ್ಪ ಅಂದೆ? ಅದಕ್ಕೆ ಅಪ್ಪ ನಾಳೆ ಬೆಳಗ್ಗೆ ಬೇಗ ಏಳು ಹೇಳುತಿನಿ ಅಂದಾಗ, ಸ್ವಲ್ಪ ಮನಸ್ಸು ಹಗುರವಾಯಿತು.
ಬೆಳಗ್ಗೆ ನಾಲ್ಕಕ್ಕೆ ಎದ್ದು ಪೇಪರ್ ವಿತರಿಸುವ ಕೇಂದ್ರ ಕ್ಕೆ ಹೋಗಿ ದಿನಪತ್ರಿಕೆಗಳನ್ನು ತೆಗೆದುಕೊಂಡು ನಾನು ಅಪ್ಪ ಆಸ್ಪತ್ರೆಗಳಿಗೆ ಹೋಗಿ ದಿನಪತ್ರಿಕೆಗಳನ್ನು ಮಾರಾಟ ಮಾಡಲು ಪ್ರಾರಂಭ ಮಾಡಿದೆವು. ಏಳೆಂಟು ದಿನಗಳ ನಂತರ ಅಪ್ಪ ನನಗೆ ಹೇಳಿದ ಮಾತು ಇನ್ನೂ ನನ್ನ ಮನಸ್ಸಿನಲ್ಲಿ ಹಾಗೆ ಇದೆ, ಕೆಲಸ ವಿಲ್ಲ ಅಂತ ಸುಮ್ಮನೆ ಕುಳಿತುಕೊಳ್ಳುವುದು, ಆ ಕೆಲಸ ಬೇಕು ಈ ಕೆಲಸ ಬೇಕು ಅನ್ನೊದು ನಮ್ಮ ಮುರ್ಖತನ, ಕೆಲಸವನ್ನು ಹುಡುಕಬಾರದು ನಮ್ಮ ಯೋಗ್ಯತೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬೇಕು ಜೊತೆಗೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಅಲ್ಲೆ ಬೆಳೆಯಬೇಕು ಅಂತ. ಅಂದು ನನ್ನ ಅಪ್ಪ ಹೇಳಿದ ಮಾತು ನನ್ನ ಜೀವನದ ದಿಕ್ಕನ್ನೆ ಬದಲಾಯಿಸಿತು.
ಹುಡುಕಬಾರದು ಯೋಗ್ಯತೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಇದೇ ರಂಗದಲ್ಲಿ ಬದುಕು ಕಟ್ಟಿ ಕೊಂಡಿದ್ದು ಅಪ್ಪನ ಈ ಮಾತುಗಳಿಂದ.
ನಂತರ ಸುಮಾರು ವರ್ಷಗಳ ನಂತರ ಅಪ್ಪ ಅವ್ವ ವಾಪಸು ನಮ್ಮೂರಿಗೆ ಹೋದರು. ಇಲ್ಲಿ ನಮ್ಮ ಜೊತೆಗೆ ಇರಿ ಅಂದರು ಇರಲಿಲ್ಲ. ಯಾಕೆಂದರೆ ಅಪ್ಪನಿಗೆ ಸ್ವಾಭಿಮಾನದ ಜೀವನ ಇಷ್ಟ...
ಆದರ್ಶ ಜೀವನ ನನ್ನ ಮುಂದಿದೆ
#ಹರವೆಸಂಗಣ್ಣಪ್ರಕಾಶ್*.
Comments
Post a Comment