ಕೊರಾನಾ ಲಾಕ್ ಡೌನ್ ಡೈರಿ 45.140 ಕೋಟಿ ಭಾರತೀಯರನ್ನ ಕೊರಾನ ಸೊಂಕಿನ ಪರೀಕ್ಷೆ ಮಾಡಲು ನಮ್ಮ ಹತ್ತಿರ ಲಭ್ಯವಿರುವ ಪರೀಕ್ಷಾ ಕಿಟ್ ಕೇವಲ 1.5 ಲಕ್ಷ ಮಾತ್ರ !? ಹಾಗಾಗಿ ನಮಗೆ ನಾವೇ 10 ದಿನ ಮನೇನಲ್ಲಿ ಪ್ರತ್ಯೇಕವಾಗಿ ಉಳಿದು ಸ್ವಯಂ ರೋಗ ನಿರೋದಕ ಶಕ್ತಿಯಿಂದ ಗುಣ ಆಗದಿದ್ದರೆ ಮಾತ್ರ ಕೋವಿಡ್ -19 ಹೆಲ್ಪ್ ಲೈನ್ ಗೆ ಕರೆ ಮಾಡಲು ವೈದ್ಯ ದೇವಿ ಶೆಟ್ಟಿ ಕರೆ ಮಾಡಿದ್ದಾರೆ ಎಂಬ ಸುಳ್ಳು ವಿಡಿಯೋ ಹೆಚ್ಚು ವೀಕ್ಷಣೆ ಆಗಿದೆ ಇದನ್ನ ಯಾರು ಮಾಡುತ್ತಾರೆ?
ಕೊರಾನಾ ಲಾಕ್ ಡೌನ್ ಡೈರಿ -2020
ಲೆಟರ್ ನಂಬರ್- 45.
ದಿನಾ೦ಕ: 8-ಜೂನ್-2020.
#ಎಲ್ಲರನ್ನೂ ಕೊರಾನಾ ಸೊ೦ಕಿನ ಪರೀಕ್ಷೆ ಮಾಡಲು ಸಾಧ್ಯವಿಲ್ಲ!?
#ನೀಮಗೆ ನೀವೇ ಪರೀಕ್ಷಿಸಿಕೊಳ್ಳಬಹುದು
ಭಾರತ ದೇಶವಾಸಿಗಳ ಸಂಖ್ಯೆ 140 ಕೋಟಿ ನಮ್ಮಲ್ಲಿ ಇವತ್ತಿಗೆ ಲಭ್ಯವಿರುವ ಕೊರಾನಾ ಪರೀಕ್ಷೆ ಕಿಟ್ ಗಳು ಒಂದೂವರೆ ಲಕ್ಷ ಮಾತ್ರ!?
ಹಾಗಾಗಿ ಭಾರತಿಯರೆಲ್ಲರನ್ನ ಪರೀಕ್ಷೆ ಮಾಡಲು ಸಾದ್ಯವಿಲ್ಲ!?
*ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ನಾವೇನು ಮಾಡಬೇಕು?*ಅನ್ನುವುದಕ್ಕೆ ಪ್ರಖ್ಯಾತ ವೈದ್ಯರಾದ ದೇವಿ ಶೆಟ್ಟರು ಸಲಹೆ ನೀಡಿದ್ದಾರ೦ತೆ*
*ಕೊರಾನಾ ಶೇಕಡಾ 85% ಜನರಿಗೆ ಪ್ರಾಣಂತಿಕ ಆಗುವುದಿಲ್ಲ ಹಾಗಾಗಿ ಜ್ವರ ನೆಗಡಿ ಬಂದಾಗ 10 ದಿನ ಮನೇನಲ್ಲೆ ನಾವು ಪ್ರತ್ಯೇಕವಾಗಿ ಇರಬೇಕು.
*ಮೊದಲ ಮತ್ತು ಎರಡನೆ ದಿನ*
ಸಣ್ಣ ಜ್ವರ, ತಲೆನೋವು, ಶೀತ ನೆಗಡಿ,ಗಂಟಲು ಕೆರೆತ ಕಾಣಿಸಬಹುದು.
*3 ನೇ ದಿನ*
ಮೂರನೇ ದಿನವೂ ಇದು ಮುಂದುವರಿಯ ಬಹುದು.
*4ನೇ ದಿನ*
ಸಣ್ಣ ತಲೆ ನೋವು.
*5 ನೇ ದಿನ*
ಗ್ಯಾಸ್ಟ್ರಿಕ್, ಬೇದಿ, ಜ್ವರ ಜಾಸ್ತಿ, ಗಂಟಲು ಕೆರೆತ, ಕೆಮ್ಮುಮತ್ತು ಸ್ನಾಯು ಸೆಳೆತದಂತಾಗಬಹುದು.
*6ನೇ ದಿನ ಮತ್ತು 7ನೇ ದಿನ*
ಹಸಿವು ಇಲ್ಲ, ಬೇದಿ ಮುಂದುವರಿಯ ಬಹುದು, ತಲೆನೋವು ಕಡಿಮೆ ಆಗುತ್ತದೆ.
*8ನೇ ದಿನ ಮತ್ತು 9ನೇ ದಿನ*
ಜ್ವರ ಕಡಿಮೆ, ಬೇದಿ ಇಲ್ಲ, ತಲೆನೋವು ಇಲ್ಲ ಮತ್ತು ಗಂಟಲು ಕೆರೆತ ಕೆಮ್ಮು ಕಡಿಮೆ ಆಗಬಹುದು.
*10 ನೇ ದಿನ*
#ನೀವೇ ನಿದ೯ರಿಸುವ ದಿನ
ನಿಮಗೆ ಮೊದಲ 9 ದಿನದ ಬಾದೆ ಕಡಿಮೆ ಅನ್ನಿಸಿದರೆ ನೀವು ಕೊರಾನಾ ವೈರಸ್ ಸೊಂಕಿಗೆ ಈಡಾಗಿ ಅದರಿಂದ ಹೊರಬಂದಿದ್ದೀರಿ, ನಿಮ್ಮ ದೇಹ ಅದನ್ನು ಪ್ರತಿರೋದಕ ಶಕ್ತಿ ಪಡೆದು ಗುಣ ಆಗಿದೆ ಯಾವುದೇ ಭಯ ಪಡದೇ ನಿತ್ಯ ಜೀವನ ಮಾಡಿ.
#ಗುಣ ಆಗದಿದ್ದರೆ
9 ದಿನದಲ್ಲಿ ಇದು ನಿಯ೦ತ್ರಣ ಆಗಿಲ್ಲ ನಿಮಗೆ ಸರಿ ಅನ್ನಿಸುತ್ತಿಲ್ಲ, ರೋಗ ಲಕ್ಷಣ ಜಾಸ್ತಿ ಆಗಿದೆ, ನ್ಯೂಮೇನಿಯ ಸಾಧ್ಯತೆ ಇದ್ದರೆ ತಕ್ಷಣ ಕೋವಿಡ್ -19 ಹೆಲ್ಪ್ ಲೈನ್ ಗೆ ಪೋನ್ ಮಾಡಿ ಮುಂದಿನ ಪರೀಕ್ಷೆ ಮಾಡಿಸಲು ಮುಂದಾಗಿ ಅಂದಿದ್ದಾರೆ.
ಇವತ್ತಿನ ಪರಿಸ್ಥಿತಿಯಲ್ಲಿ ಭಾರತೀಯರು ಕೋರಾನಾ ಸೊಂಕಿನಿಂದ ಗುಣ ಆಗದಿದ್ದರೆ ಮಾತ್ರ ಪರೀಕ್ಷೆ ಮಾಡಿಸಿಕೊಳ್ಳುವ ಈ ಸಲಹೆ ಅನಿವಾಯ೯ ಮತ್ತು ಕಡ್ಡಾಯ ಕೂಡ.
ಇದು ಡಾಕ್ಟರ್ ದೇವಿ ಶೆಟ್ಟಿ ಹೆಸರಲ್ಲಿ ಚಲಾವಣೆ ಆಗಿರುವ ಸುಳ್ಳು ಸುದ್ದಿ!
ಇದೂ ಕೊರಾನಾ ದಿನದ ಸುದ್ದಿ ಆಗಿತ್ತು.
Comments
Post a Comment