ತೀ.ನಾ.ಶ್ರೀನಿವಾಸ್ ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದಾಗ ಅವರ ಪಕ್ಷ ಸಂಘಟನೆ ಸಭೆ ಸಮಾರಂಭ ಹೊರತು ಪಡಿಸಿದ (ಆಗ ಆಡಳಿತದಲ್ಲಿದ್ದದ್ದು ಅವರ ಪಕ್ಷ) ಸಕಾ೯ರಿ ಕಾಯ೯ಕ್ರಮದಲ್ಲಿ ವೇದಿಕೆಯಲ್ಲಿ ಭಾಗವಹಿಸದೆ ಒಳ್ಳೆಯ ನೀತಿ ಪಾಲಿಸಿದ್ದರು.
ಸಕಾ೯ರಿ ಕಾಯ೯ಕ್ರಮಕ್ಕೆ ಪ್ರೋಟೋಕಾಲ್ ಇದೆ ಯಾರ್ಯಾರು ವೇದಿಕೆಯಲ್ಲಿ ಅಧ್ಯಕ್ಷತೆವಹಿಸಬೇಕು, ಯಾರು ಉಪಸ್ಥಿತರಿರಬೇಕು ಅಂತ ಈ ಪ್ರೋಟೋಕಾಲ್ ನಲ್ಲಿ ಪಕ್ಷ ಸಂಘಟನೆಯ ಪಧಾದಿಕಾರಿಗಳಿಗೆ ಅವಕಾಶವೇ ಇಲ್ಲ.
ಆದರೆ ಇತ್ತೀಚಿಗಿನ ಶಿವಮೊಗ್ಗ ಜಿಲ್ಲೆಯ ಎಲ್ಲಾ ಸಕಾ೯ರಿ ಕಾಯ೯ಕ್ರಮದಲ್ಲಿ ವೇದಿಕೆಯಲ್ಲಿ ಬಿಜೆಪಿ ಪಕ್ಷದ ಪದಾಧಿಕಾರಿಗಳು ವೇದಿಕೆ ಹಂಚಿಕೊಂಡು ಉಪಸ್ಥಿತರಿರುವುದು ಮಾತ್ರ ಅಭಾಸವೇ ಸರಿ.
ಶಿಸ್ತಿನ ಪಕ್ಷವಾಗಿರುವ ಬಿಜೆಪಿ ಹಿಂದೆ ಕಾಂಗ್ರೇಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದ ತಿ.ನಾ. ಶ್ರೀನಿವಾಸರ ಶಿಸ್ತಿನ ನಡೆ ಬಗ್ಗೆ ತಿಳಿದು ಮುಂದಿನ ದಿನದಲ್ಲಿ ಸಕಾ೯ರಿ ಕಾಯ೯ಕ್ರಮ ಪಕ್ಷಾತೀತವಾಗಿ ನಡೆಯಲು ಅನುವು ಮಾಡಿಕೊಡಬಾರದೇಕೆ ?
Comments
Post a Comment