ಶಿವಮೊಗ್ಗಾ ಜಿಲ್ಲಾ ಮಲೆನಾಡ ರಬ್ಬರ್ ಬೆಳೆಗಾರರೇ ಎಚ್ಚರ! ಹೆಚ್ಚು ರಬ್ಬರ್ ಬರಲು ಎಥಿನೋ ಎಂಬ ಮಾರಕ ರಾಸಾಯನಿಕ ರಬ್ಬರ್ ಪಸಲು ಗುತ್ತಿಗೆದಾರರು ಬಳಸುತ್ತಿದ್ದಾರೆ ಇದರಿಂದ 40 ವರ್ಷ ಪಸಲು ಬರುವ ಮರ 4 ವಷ೯ದಲ್ಲಿ ನಿನಾ೯ಮವಾಗಲಿದೆ.
ಕೇಂದ್ರ ಸಕಾ೯ರದ ರಬ್ಬರ್ ಬೋಡ್೯ ಮಲೆನಾಡು ಪ್ರದೇಶದಲ್ಲಿ ರಬ್ಬರ್ ಇಳುವರಿ ಹೆಚ್ಚು ಬರುತ್ತದೆ ಎಂದು ಸಾಗರ ತಾಲ್ಲುಕಿನ ಆನಂದಪುರ೦,ಇಡುವಳ್ಳಿ ಮತ್ತು ನಾಗವಳ್ಳಿಯಲ್ಲಿ ಮುಂಬಾಳಿನ ಗೋಕುಲ್ ಪಾರಂ ಪಾದರ್ ಜೋಸ್ ರಬ್ಬರ್ ಬೋಡ್೯ ಜೊತೆ ಬೆಳೆಸಿದ ಪ್ರಾತ್ಯಕ್ಷಿಕಾ ರಬ್ಬರ್ ತೋಟದ ಸಂಶೋದನೆಯಿಂದ ಪುರಸ್ಕರಿಸಿ ಈ ಪ್ರದೇಶದಲ್ಲಿ ರೈತರು ರಬ್ಬರ್ ಬೆಳೆಸಲು ಪ್ರೋತ್ಸಾಹಿಸಿ, ರಬ್ಬರ್ ಬೋಡ್೯ನ ಪ್ರಾದೇಶಿಕ ಕಛೇರಿ ಸಾಗರದಲ್ಲಿ ಪ್ರಾರ೦ಬಿಸಿತ್ತು.
ರೈತರಿಗೆ ಬೇಕಾದ ಮಾಹಿತಿ,ಸಹಾಯಧನಗಳನ್ನ ಕೊಡಿಸಲು ಸಹಾಯ ಪ್ರಾರ೦ಬಿಸಿದ್ದರಿಂದ ಮತ್ತು ಈ ಬೆಳೆಗೆ ನೀರಾವರಿ ಅವಶ್ಯವಿಲ್ಲ ಮಳೆ ನೀರಿನ ಆಶ್ರಯದಲ್ಲಿ ರಬ್ಬರ್ ಬೆಳೆ ಬರುವುದರಿಂದ ಮತ್ತು ರಬ್ಬರ್ ದಾರಣೆ ಹೆಚ್ಚು ಆ ಸಂದಭ೯ದಲ್ಲಿ ಇದ್ದಿದ್ದರಿಂದ ಮಲೆನಾಡಿನ ರೈತರು ಹೆಚ್ಚು ಹೆಚ್ಚು ತಮ್ಮ ಖುಷ್ಕಿ ಜಮೀನಿನಲ್ಲಿ ರಬ್ಬರ್ ಬೆಳೆಸಿದ್ದಾರೆ.
ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಟನ್ ರಬ್ಬರ್ ಗೆ ಬೇಡಿಕೆ ಇದೆ ಆದರೆ 7 ಲಕ್ಷ ಟನ್ ಮಾತ್ರ ರೈತರು ಬೆಳೆಯುತ್ತಾರೆ೦ಬ ಮಾಹಿತಿ ಇದ್ದರೂ ಕಳೆದ 10 ವರ್ಷದಿಂದ ರಬ್ಬರ್ ಖರೀದಿ ಬೆಲೆ 100 ರಿಂದ 150 ರ ಒಳಗೆ ಉಳಿದು ಬಿಟ್ಟಿದ್ದು ಮಾತ್ರ ಸೋಜಿಗ ಇದರಿ೦ದ ಮಲೆನಾಡಿನ ರಬ್ಬರ್ ಬೆಳೆಗಾರರು ರಬ್ಬರ್ ಬೆಳೆಯ ಮೇಲೆ ವಿಶ್ವಾಸ ಕಳೆದು ಕೊಂಡು ರಬ್ಬರ್ ಬೆಳೆ ತೆಗೆದು ಅಡಿಕೆ ತೋಟ ಮಾಡಲು ಪ್ರಾರಂಬಿಸಿದರು.
ಹಾಗೇ ರಬ್ಬರ್ ಉಳಿಸಿ ಕೊಂಡವರು ಟ್ಯಾಪರ್ ಗಳು ಸ್ಥಳಿಯವಾಗಿ ಸಿಗದಿದ್ದರಿಂದ, ಸ್ವತಃ ರಬ್ಬರ್ ತೆಗೆದು ಯಂತ್ರದಲ್ಲಿ ಶೀಟ್ ಮಾಡಿ ಒಣಗಿಸಿ ಪುನಃ ಡ್ರೈಯರ್ ನಲ್ಲಿ ಹದ ಮಾಡಿ ಮಾರಾಟ ಮಾಡುವ ಕೆಲಸ ತುಸು ಶ್ರಮದಾಯಕ ಮತ್ತು ಸೂಯೋ೯ದಯಕ್ಕಿ೦ತ ಮೊದಲೆ ಚಳಿ ಮತ್ತು ಮಳೆಯಲ್ಲಿ ರಬ್ಬರ್ ಮರದಲ್ಲಿ ಟ್ಯಾಪ್ ಮಾಡಲು ಎದ್ದು ಹೋಗಲು ಇಷ್ಟ ಇಲ್ಲದ್ದರಿಂದ ತಮ್ಮ ರಬ್ಬರ್ ತೋಟಗಳನ್ನ ಪಸಲು ಗುತ್ತಿಗೆಗೆ ನೀಡಲು ಪಾರಂಬಿಸಿದರು.
ತಮ್ಮ ರಬ್ಬರ್ ಮರ ಒ0ದಕ್ಕೆ 1.50 ಪೈಸೆ ಕೂಲಿ ಪಡೆದು ಬೆಳ್ಳಂಬೆಳಗೆ ಟ್ಯಾಪ್ ಮಾಡಿ ಹಾಲು ತಂದು ಶೀಟ್ ಮಾಡಿ ಒಣಗಿಸಿ ಕೊಡುತ್ತಿದ್ದ ಟ್ಯಾಪರ್ ಗಳೂ ಈಗ ಇದಕ್ಕಿಂತ ಲಾಭವಾದ ರಬ್ಬರ್ ಪಸಲು ಗುತ್ತಿಗೆ ಪಡೆದು ರಬ್ಬರ್ ಬೆಳೆಗಾರನಿಗೇ 1.50 ಪೈಸೆ ಪ್ರತಿ ಟ್ಯಾಪ್ ಗೆ ನೀಡಿ ರಬ್ಬರ್ ಹಾಲು ತೆಗೆದು ಕೊಂಡು ಹೋಗುತ್ತಿದ್ದಾನೆ, ಪ್ರತಿ ತಿಂಗಳಿಗೆ 15 ದಿನ ಟ್ಯಾಪ್ ಮಾಡುತ್ತಾರೆಂದರೆ ಪ್ರತಿ ರಬ್ಬರ್ ಮರದಿಂದ ತಿಂಗಳಿಗೆ 22.50 ಪೈಸೆ ಕನಿಷ್ಟ ಆದಾಯಕ್ಕೆ ರಬ್ಬರ್ ಬೆಳೆಗಾರ ತೃಪ್ತಿ ಪಡುತ್ತಾನೆ.
ಇದು ಹೊರಗಿನಿಂದ ನೋಡಲು ಸುಲಭ ಅಂತ ಕಾಣುತ್ತದೆ ಆದರೆ ಇದರ ಆಳದಲ್ಲಿ ಬೇರೆ ಲೆಕ್ಕಾಚಾರವೇ ಇದೆ, ಟ್ಯಾಪರ್ ಪ್ರತಿ ಮರಕ್ಕೆ ಪಡೆಯುತ್ತಿದ್ದ ಕೂಲಿ ರಬ್ಬರ್ ಬೆಳೆಗಾರನಿಗೆ ನೀಡಿ ಅವನು ಹೇಗೆ ಲಾಭಗಳಿಸುತ್ತಾನೆ? ಎಂಬುದನ್ನ ಮಲೆನಾಡ ರೈತರು ಚಿಂತಿಸುತ್ತಿಲ್ಲ.
ಈ ರೀತಿ ರಬ್ಬರ್ ತೋಟ ವಹಿಸಿಕೊಂಡವರು ನೋಡಲು ರಬ್ಬರ್ ಹಾಲಿನಂತೆ ಕಾಣುವ ಎಥಿನೋ ಎಂಬ ರಾಸಾಯನಿಕವನ್ನ ರಬ್ಬರ್ ಟ್ಯಾಪ್ ಮಾಡುವ ಜಾಗಕ್ಕೆ ಲೇಪಿಸುತ್ತಾರೆ ಇದರಿ೦ದ ರಬ್ಬರ್ ಯಥೇಚ್ಚಾ ಹರಿದು ಬರುತ್ತದೆ ಮತ್ತು ಇದರಿಂದ 40 ವರ್ಷ ಆದಾಯ ನೀಡಬೇಕಾದ ರಬ್ಬರ್ ಮರ 4 ವಷ೯ದಲ್ಲಿ ತನ್ನ ಪಸಲು ನಿಲ್ಲಿಸುತ್ತದೆ.
ಇದು ನಿಷಿದ್ದವಾದ ರಾಸಾಯನಿಕ ಮತ್ತು ಇದನ್ನು 30 ರಿಂದ 40 ವರ್ಷದ ಹಳೆ ರಬ್ಬರ್ ಮರಕ್ಕೆ ಬಳಸಿ ರಬ್ಬರ್ ತೆಗೆಯಲು ರಬ್ಬರ್ ಬೋಡ್೯ ಶಿಪಾರಸ್ಸು ಮಾಡುತ್ತದೆ ಆದರೆ ಇದನ್ನು ಪ್ರಾರಂಭದ ಹೊಸ ರಬ್ಬರ್ ತೋಟದಲ್ಲಿ ಬಳಸಿ ಪಸಲು ಗುತ್ತಿಗೆದಾರ ಲಾಭ ಮಾಡಿಕೊಂಡು ಹತ್ತಾರು ವರ್ಷ ಕೃಷಿ ಮಾಡಿದ ರಬ್ಬರ್ ತೋಟ ಕೇವಲ ನಾಲ್ಕೆ ವರ್ಷಕ್ಕೆ ಕಳೆದುಕೊಳ್ಳುವ ಅಪಾಯಕಾರಿ ಮಾಗ೯ದಲ್ಲಿ ನಡೆದಿದ್ದಾನೆ.
ಇದನ್ನು ರಬ್ಬರ್ ಬೆಳೆಗಾರರಿಗೆ ತಿಳುವಳಿಕೆ ನೀಡಬೇಕಾದ ರಬ್ಬರ್ ಬೋಡ್೯ ಪ್ರಾದೇಶಿಕ ಕಛೇರಿ ಆಗಲಿ, ಸ್ಥಳಿಯ ಕೃಷಿ ತೋಟಗಾರಿಕಾ ಇಲಾಖೆ ಆಗಲಿ ರೈತರನ್ನ ಎಚ್ಚರಿಸುತ್ತಿಲ್ಲ!?
ರಬ್ಬರ್ ಬೆಳೆಗಾರರ ಸಂಘ ಈ ಬಗ್ಗೆ ಏನು ನಿದಾ೯ರ ಮಾಡಲಿದೆ ಗೊತ್ತಾಗಿಲ್ಲ.
ಸ್ವಲ್ಪ ದಿನ ರೈತರು ತಾಳ್ಮೆಯಿ೦ದ ಇದ್ದರೆ ರಬ್ಬರ್ ದಾರಣೆ ಹೆಚ್ಚಾಗಬಹುದು ಆದರೆ ತಾಳ್ಮೆ ಕಳೆದುಕೊಂಡ ರಬ್ಬರ್ ಬೆಳೆಗಾರ ಈ ರೀತಿ ತನ್ನ ಬೆಳೆ ಹಾಳು ಮಾಡಿಕೊಳ್ಳುವ ಕ್ರಮವಾದ ರಬ್ಬರ್ ಪಸಲು ಗುತ್ತಿಗೆ ನೀಡಬಾರದು.
ಇದನ್ನು ಮಲೆನಾಡು ರಬ್ಬರ್ ಬೆಳೆಗಾರರಿಗೆ ಮನವರಿಕೆ ಮಾಡುವುದು ಹೇಗೆ?
Comments
Post a Comment