Skip to main content

Posts

Showing posts with the label Farmers friendly Bhimanakone primary land development bank

ನನ್ನ ಕೃಷಿ ಜೀವನಕ್ಕೆ ಪ್ರಾರಂಬಿಕ ಆಥಿ೯ಕ ಸಹಾಯ ನೀಡಿದ ಬೀಮನ ಕೋಣೆ ಪಿ.ಎಲ್.ಡಿ. ಬ್ಯಾಂಕ್ ನನ್ನ ಮೆಚ್ಚಿನ ಬ್ಯಾ೦ಕ್

#ನನ್ನ_ಪ್ರೀತಿಯ_ಬೀಮನಕೊಣೆಯ_PLDB_ಬ್ಯಾಂಕ್. #ಉತ್ಸಾಹಿ_ಯುವ_ಅಧ್ಯಕ್ಷ_ವ_ಶಂ_ರಾಮಚಂದ್ರ_ಭಟ್ಟರು #ಅವರ_ಕನಸಿನ_ರಾಜ್ಯ_ಮಟ್ಟದ_ಕೃಷಿ_ಬ್ಯಾಂಕಿನ_ಕೃಷಿ_ಮೇಳ.   ಈಗ ಕೃಷಿಗಾಗಿ ಸಾಲ ನೀಡಲು ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳು ತಾಮುಂದು ಅಂತ ಮುಂದು ಬರುತ್ತಿದೆ, ಕೈಗಾರಿಕೆ ಸಾಲದ ರೀತಿ ಪ್ರಾಜೆಕ್ಟ್ ರಿಪೋಟ್೯ ಇಂಜಿನಿಯರಿಂದ ತಯಾರಿಸಿ ಜಮೀನು ದಾಖಲೆ ನೀಡಿದರೆ ಒಂದೇ ಸಾರಿಗೆ ಕೇಳಿದಷ್ಟು ಲಕ್ಷ ರೂಪಾಯಿ ರೈತರ ಅಕೌಂಟ್ ಗೆ ಬಂದು ಬೀಳುತ್ತದೆ.   ಆದರೆ 90ರ ದಶಕದಲ್ಲಿ ರೈತರಿಗೆ ಸಾಲ ನೀಡುತ್ತಿರಲಿಲ್ಲ ಈ ಬ್ಯಾಂಕ್ ಗಳು, ಆಗ ಸ್ಥಳಿಯ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಗಳೇ ರೈತರ ಕೈ ಹಿಡಿಯುತ್ತಿತ್ತು.   1993 ರಲ್ಲಿ ಮೊದಲಿಗೆ ನನ್ನ ಜಮೀನಿಗೆ ತಂತಿ ಬೇಲಿ, ಬಾವಿ, ಪಂಪ್ ಸೆಟ್ ಗೆ ಸಾಲ ಪಡೆದ ನಾನು, ಈಗ ರಬ್ಬರ್ ಬೆಳೆಗೆ ಸಾಲ ಪಡೆದು, ರಬ್ಬರ್ ಪಸಲು ಮಾರಿ ರಬ್ಬರ್ ಸಾಲದ ಕಂತು ಕಟ್ಟುವ ತನಕದ ನನ್ನ ಅನುಭವದ ಕಥೆ ಇದೆ.   ಸ್ನೇಹ ಮಯಿ ಸಿಬ್ಬಂದಿಗಳು ಇಲ್ಲಿದ್ದಾರೆ ರೈತರಿಗೆ ಅಜಿ೯ ತುಂಬಿಸುವುದರಿಂದ ಹಿಡಿದು ಅವರಿಗೆ ನೇರ ಹಣ ತಲುಪಿಸುವ ತನಕ ಜವಾಬ್ದಾರಿ ವಹಿಸುತ್ತಾರೆ.   2021 ರ ಅಥಿ೯ಕ ವರ್ಷದ ಅಂತಿಮ ಮಾಚ್೯ 31 ಆದ್ದರಿಂದ ಕಂತಿನ ಹಣ ಪಾವತಿಗೆ ಹೋದಾಗ ವಿಶಾಲವಾದ ಬ್ಯಾಂಕಿನ ಕಟ್ಟಡ ನೋಡಿದಾಗ ಇದೆಲ್ಲ ನೆನಪಾಯಿತು.    ನೂತನ ಅಧ್ಯಕ್ಷರಾದ ಉತ್ಸಾಹಿ ಯುವ ರಾಜಕಾರಣಿ ವ. ಶಂ.ರಾಮಚಂದ್ರ ಭಟ್...