Skip to main content

Posts

Showing posts with the label This is special jaggery

Blog number 2136. ದೇಸಿ ತಳಿ ಕಬ್ಬಿನಿಂದ ತಯಾರಾಗುವ ಮಲೆನಾಡಿನ ನೀರು ಬೆಲ್ಲ / ಜೋನಿ ಬೆಲ್ಲಕ್ಕೆ ಬೇಡಿಕೆ ಹೆಚ್ಚಾಗಿದೆ ಆದರೆ ಉತ್ಪಾದನೆ ಕಡಿಮೆ, ಒಂದು ಕಿಲೋ ಈ ಬೆಲ್ಲಕ್ಕೆ ಸಕ್ಕರೆಯ ಮೂರು ಪಟ್ಟು ಬೆಲೆ ಗೊತ್ತಾ!....

#ಪಶ್ಚಿಮಘಟ್ಟದ_ಮಲೆನಾಡಿಗೆ_ಅದರಲ್ಲೂ_ಶಿವಮೊಗ_ಜಿಲ್ಲೆಗೆ_ಮತ್ತು #ಪಕ್ಕದ_ಉತ್ತರಕನ್ನಡ_ಚಿಕ್ಕಮಗಳೂರು_ಉಡುಪಿ_ಜಿಲ್ಲೆಯ_ಕೆಲ_ಪ್ರದೇಶಕ್ಕೆ_ಮಾತ್ರ #ಸೀಮಿತವಾದ_ಆಲೇಮನೆ_ನೀರು_ಬೆಲ್ಲ, #ಈ_ಬೆಲ್ಲಕ್ಕೆ_ಬೇಡಿಕೆ_ಜಾಸ್ತಿ_ಉತ್ಪಾದನೆ_ಕಡಿಮೆ_ಆದ್ದರಿಂದ_ಇದರ_ಬೆಲೆ_ಕಿಲೋಗೆ_100 #ಅಚ್ಚುಬೆಲ್ಲಕ್ಕೆ_ಕಿಲೋಗೆ_35_ಸಕ್ಕರೆ_ಕಿಲೋಗೆ_40_ರೂಪಾಯಿ. #ಸಕ್ಕರೆ_ಕಾರ್ಖಾನೆಯ_ಗೋದಾಮಿನಿಂದ_ಹಾಳಾದ_ಕಡಿಮೆ_ಬೆಲೆಯ_ಸಕ್ಕರೆ_ತಂದು_ಬೆಲ್ಲ_ಮಾಡುವ #ಪಾರ0ಪಾರಿಕ_ದೇಸಿ_ತಳಿಯ_ಕಬ್ಬು_ಬಿಟ್ಟು_ಸಕ್ಕರೆ_ಕಬ್ಬಿನಿಂದ_ಬೆಲ್ಲ #ತಯಾರಿಸುವ_ಅಡ್ಡ_ಕಸಬು_ಪ್ರಾರಂಭವಾಗಿದೆ. https://youtube.com/shorts/i8wdM0pa5yM?feature=shared    ನೀರು ಬೆಲ್ಲ - ಜೋನಿ ಬೆಲ್ಲ ಪಶ್ಚಿಮ ಘಟ್ಟದ ಮಲೆನಾಡಿನ ಸೀಮಿತ ಪ್ರದೇಶವಾದ ಶಿವಮೊಗ್ಗ - ಉತ್ತರ ಕನ್ನಡ - ಚಿಕ್ಕಮಗಳೂರು ಜಿಲ್ಲೆಗಳ ಕೆಲವು ತಾಲ್ಲೂಕುಗಳಲ್ಲಿ ಮಾತ್ರ ಪಾರಂಪರಿಕ ದೇಸಿ ತಳಿಯ ಕಬ್ಬುಗಳಿಂದ ತಯಾರಿಸುತ್ತಾರೆ ಇದರ ರುಚಿ ಬಲ್ಲವರಿಗೆ ಈ ಬೆಲ್ಲ ಬೇಕೇ ಬೇಕು.  ಅಲೇ ಮನೆ ಎಂಬ ಬೆಲ್ಲ ತಯಾರಿಯ ಕೆಲಸ ಸುಗ್ಗಿ ನಂತರದಲ್ಲಿ ಇಡೀ ಹಳ್ಳಿಗೆ ಸಂಭ್ರಮವಾಗಿರುತ್ತಿತ್ತು ಆದರೆ ಈಗಿನ ಕಾಲದ ವೇಗದಲ್ಲಿ ಯಾಂತ್ರಿಕ ಯುಗದಲ್ಲಿ ಇದು ಅನೇಕ ಮಾರ್ಪಾಡು ಆಗಿದೆ.   ಈ ಬೆಲ್ಲವನ್ನ ಮಣ್ಣಿನ ಕೊಡದಲ್ಲಿ ತುಂಬಿ ಅದಕ್ಕೆ ತೆಂಗಿನ ಗರಟೆ ಮುಚ್ಚಿ ಬಟ್ಟೆ ಸುತ್ತಿ ಅದನ್ನ ಹುತ್ತದ ಮಣ್ಣಿನಿಂದ ಸೀಲು ಮಾಡುವ ಪದ್ಧತಿ...