Skip to main content

Posts

Showing posts with the label Our Living Great Personality Ahmed Ali Khan Saheb no more.

ಸಜ್ಜನ ಸಂಪನ್ನರಾದ ಸಾಗರದ ಆಹ್ಮದ್ ಆಲೀ ಖಾನ್ ಸಾಹೇಬರು 92 ವರ್ಷಗಳ ಸಂತೃಪ್ತ ಜೀವನ ನಡೆಸಿ ಇಹಲೋಕ ತ್ಯಜಿಸಿದ್ದಾರೆ (1930 ರಲ್ಲಿ ಹೊನ್ನಾಳಿಯಲ್ಲಿ ಜನಿಸಿದ್ದರು)

#ನಮ್ಮ_ಪ್ರೀತಿಯ_ಆಹ್ಮದ್_ಆಲೀ_ಖಾನ್_ಸಾಹೇಬರು #ಸಜ್ಜನ_ಸಂಪನ್ನ_ವ್ಯಕ್ತಿತ್ವದವರು. #ಪಠಾಣರಾದ_ಆಹ್ಮದ್_ಆಲೀ_ಖಾನ್_ಸಾಹೇಬರ_92_ವರ್ಷಗಳ_ಸಂತೃಪ್ತ_ಜೀವನ. https://youtu.be/aOQjyYyh23o    ಇವತ್ತು ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಲೇ ಸಾಗರದ ಮಾಜಿ ನಗರ ಸಭಾ ಸದಸ್ಯರಾದ ದಿನೇಶ್ ಖಾನ್ ಸಾಹೇಬರು ಅಲ್ಲಾರ ಪಾದ ಸೇರಿದರು ಎಂಬ ಸುದ್ದಿ ವಾಟ್ಸಪ್ ಮಾಡಿದ್ದರು.    ಖಾನ್ ಸಾಹೇಬರ ಆತ್ಮಕ್ಕೆ ದೇವರು ಸದ್ಗತಿ - ಸ್ವರ್ಗ ಪ್ರಾಪ್ತಿ ನೀಡಲಿ ಅಂತ ಪ್ರಾಥಿ೯ಸುತ್ತಾ ಅವರಿಗೆ ಶ್ರದ್ದಾಂಜಲಿ ಆಗಿ ಬೇರೆ ಬೇರೆ ಸಂದಭ೯ದಲ್ಲಿ ಖಾನ್ ಸಾಹೇಬರ ಬಗ್ಗೆ ಬರೆದ ಲೇಖನ ಪುನಃ ಖಾನ್ ಸಾಹೇಬರ ಅಭಿಮಾನಿಗಳಿಗೆ ಪ್ರಕಟಿಸಿದ್ದೇನೆ. #ಹಿರಿಯ_ಕಾಂಗ್ರೇಸ್ಸಿಗರು_ಅಳ್ನಾವರ_ಅಡಿಕೆ_ಕಂಪನಿ_ಅಧ್ಯಕ್ಷರಾಗಿದ್ದ_ತುಂಬೆಸುಬ್ರಾಯರ_ಒಡನಾಟದಲ್ಲಿ. ಸಾಗರದಿಂದ ಎಲ್ಲಿಗೆ ಹೋಗಲೂ ಆಗ ಟ್ಯಾಕ್ಸಿ ಮಹಬಲರಾವ್ ಕಾರಿನಲ್ಲೇ ಹೋಗುತ್ತಿದ್ದರು ಅಂತ ತುಂಬೆ ಸುಬ್ರಾಯರ ಕಿರಿಯ ಮತ್ತು ಆತ್ಮೀಯ ಗೆಳೆಯರಾಗಿದ್ದ ಅಹ್ಮದ್ ಅಲೀ ಖಾನ್ ಸಾಹೇಬರು ನೆನಪು ಮಾಡಿಕೊಳ್ಳುತ್ತಾರೆ.    1952 ರಲ್ಲಿ ಹೊನ್ನಾಳಿ ಮೂಲದ ಆಹ್ಮದ್ ಅಲೀ ಖಾನ್ ಸಾಹೇಬರು ಅವರ ಬಾವ ವಾಸಿಂ ಖಾನ್ ಸಾಹೇಬರು (ಅಕ್ಕನ ಗಂಡ)ಸಾಗರದಲ್ಲಿ ಕಂಟ್ರಾಕ್ಟ್ ಆಗಿದ್ದಾಗ ಅವರ ಮುಖಾಂತರ ಸಾಗರದಲ್ಲಿ ಗುತ್ತಿಗೆದಾರರಾಗಿ ಚಿಕ್ಕ ವಯಸಲ್ಲಿಯೇ (ಹುಟ್ಟಿದ್ದು 1930) ಹೆಸರುವಾಸಿ ಆಗಿರುತ್ತಾ...