ಹೊಸನಗರದ ಮಾಜಿ ಶಾಸಕ ಸ್ವಾಮಿ ರಾವ್ ರಿಂದ ಸಾಗರ ರೈಲು ನಿಲ್ದಾಣಕ್ಕೆ ಡಾ.ರಾಮ ಮನೋಹರ ಲೋಹಿಯಾ ಹೆಸರು ನಾಮಕರಣಕ್ಕೆ ಅರ್ಜಿ ನೀಡಿ ಎರೆಡು ವರ್ಷ ಆಯಿತು.
#ಬಿಜೆಪಿ ಪಕ್ಷದ ಪ್ರಮುಖರಾದ ಹೊಸನಗರದ ಮಾಜಿ ಶಾಸಕರಾದ ಸ್ವಾಮಿ ರಾವ್ ರ ಮನವಿ ಸಂಸದರು ಪುರಸ್ಕರಿಸುತ್ತಾರಾ? ಬಿಜೆಪಿ ಗೆಲುವಿಗೆ ಶ್ರಮಿಸಿದ ಸ್ವಾಮಿ ರಾಯನ್ನ ಕಡೆಗಾಣಿಸಲಾಗಿದೆಯ?# ಈವರೆಗೆ ಸಾಗರದ ರೈಲು ನಿಲ್ದಾಣಕ್ಕೆ ಡಾ.ರಾಮಮನೋಹರ ಲೋಹಿಯಾ ಎಂದು ಪುನರ್ ನಾಮಕರಣಕ್ಕೆ ಹಲವರು ಒತ್ತಾಯಿಸುತ್ತಿದ್ದರು ನಿನ್ನೆ (8- ಜನವರಿ -2020) ಶಿವಮೊಗ್ಗ ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡ ಹೊಸನಗರದ ಮಾಜಿ ಶಾಸಕರಾದ ಸ್ವಾಮಿ ರಾಯರು ಸಂಸದ ರಾಘವೇ೦ದ್ರರಿಗೆ ಲಿಖಿತ ಮನವಿ ನೀಡಿ ಆಶ್ಚಯ೯ ಉoಟು ಮಾಡಿದ್ದಾರೆ. ಕಾಗೋಡು ರೈತ ಹೋರಾಟ ಬೆಂಬಲಿಸಿ ಬಂದ ಖ್ಯಾತ ಸಮಾಜವಾದಿ ನಾಯಕ ಅವತ್ತಿನ ಸಂಸತ್ ನಲ್ಲಿ ಪ್ರದಾನಿ ನೆಹರೂರನ್ನು ಸೈದ್ದಾ೦ತಿಕವಾಗಿ ವಿರೋದಿಸುತ್ತಿದ್ದ ಡಾ.ರಾಮಮನೋಹರ ಲೋಹಿಯರನ್ನ ಸಾಗರದಲ್ಲಿನ ರೈಲು ನಿಲ್ದಾಣದಲ್ಲಿ ಬಂದಿಸಿದ್ದು ಜಾಗತಿಕ ಮಟ್ಟದ ಸುದ್ದಿ ಆಗಿತ್ತು ಅದರ ಪರಿಣಾಮವೇ ಮೊದಲ ಸಾವ೯ಜನಿಕ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದು ಬಂದವರು ಸಮಾಜವಾದಿ ಪಕ್ಷದ ಶಾಂತವೇರಿ ಗೋಪಾಲಗೌಡರು ಮುಂದೆ ಅವರ ಶಿಷ್ಯರಾದ ಸ್ವಾಮಿ ರಾವ್, ಕಾಗೋಡು, ಬಂಗಾರಪ್ಪ, ಪಟೇಲರು ರಾಜಕಾರಣದಲ್ಲಿ ಯಶಸ್ವಿಯಾಗಿದ್ದು ಇತಿಹಾಸ ಹಾಗಾಗಿ ಸಾಗರ ಜOಬಗಾರು ಎಂಬ ಸಾಗರ ರೈಲು ನಿಲ್ದಾಣದ ಹಳೆ ಹೆಸರು ಬದಲಿಸಿ ರಾಮ ಮನೋಹರ್ ಲೋಹಿಯ ರೈಲು ನಿಲ್ದಾಣ ಎಂದು ಮರುನಾಮಕರಣಕ್ಕೆ ಒತ್ತಾಯ. ಆಗಿನ ಉಪ ಪ್ರದಾನಿ ಅಡ್ವಾನಿ, ರಕ್...