#ನನ್ನ_ಕಾದಂಬರಿ_ಇಂಗ್ಲೀಷ್_ಬಾಷೆಯಲ್ಲಿ_ಮುದ್ರಣ_ಆಗುತ್ತಿದೆ #ಸುಂದರವಾಗಿ_ಅನುವಾದಿಸಿದವರು_ಎಂ_ಎನ್_ಸುಂದರ್_ರಾಜ್_ಪ್ರತಿಷ್ಟಿತ_ಶಿವಮೊಗ್ಗದ_ಕನಾ೯ಟಕ_ಸಂಘದ_ಅಧ್ಯಕ್ಷರು. #ನೂರಾ_ನಲವತ್ತು_ದೇಶದ_ಇಂಗ್ಲೀಷ್_ಬಾಷೆಯ_ಸಾಹಿತ್ಯಾಸಕ್ತರಿಗೆ_ಲಭ್ಯವಾಗಲಿದೆ. #ತಾಜ್_ಮಹಲಿಗಿಂತ_ಮೊದಲೇ_ನಿಮಾ೯ಣವಾಗಿರುವ_ಕೆಳದಿ_ರಾಜ_ವೆಂಕಟಪ್ಪನಾಯಕರು_ನಿರ್ಮಿಸಿರುವ_ನಮ್ಮ_ಊರಿನ_ಚಂಪಕಸರಸ್ಸು. #ರ೦ಗೋಲೆ_ಪ್ರವೀಣೆ_ಸುಂದರಿ_ಚಂಪಕ_ಮತ್ತು_ರಾಜ_ವೆಂಕಟಪ್ಪ_ನಾಯಕರ_ದುರಂತ_ಪ್ರೇಮ_ಕಥೆ #ಕಾಲ್ಪನಿಕ_ಕಾದಂಬರಿ_ಆಗಿ_ಕನ್ನಡದಲ್ಲಿ_ಪ್ರಕಟವಾಗಿ_ಅನಿರೀಕ್ಷಿತವಾಗಿ_ಪ್ರಸಿದ್ಧಿ_ಪಡೆದಿತ್ತು. ನನ್ನ ಊರಿನಲ್ಲಿರುವ ಸ್ಮಾರಕ ಅದರ ಬಗ್ಗೆ 400 ವರ್ಷಗಳಿಗೆ ಹರಿದು ಬಂದ ಜನಪದ ಕಥೆ ಲಾವಣಿಗಳು ಕೇಳಿದ್ದ ನಾನು 1992-93ರಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಕೇಂದ್ರ ಗ್ರಂಥಾಲಯದಲ್ಲಿ ತಡಕಾಡಿದಾಗ ದೊರೆತ ಮಾಹಿತಿಗಳ ಎಳೆಗಳು ಇಟಲಿ ಪ್ರವಾಸಿ ಡೆಲ್ಲೊ ವಲ್ಲೆ ಪತ್ರಗಳಲ್ಲಿ ಅವರು ಕೆಳದಿ ರಾಜ ವೆಂಕಟಪ್ಪ ನಾಯಕರ ಬೇಟೆಯಾದ ಮಾಹಿತಿ ಒಂದು ಐತಿಹಾಸಿಕ ದಾಖಲೆ. ಆ ಸಂದರ್ಭದಲ್ಲೇ ಪಟ್ಟದ ರಾಣಿ ಭದ್ರಮ್ಮಾಜಿ ಅನ್ನಾಹಾರ ತ್ಯಜಿಸಿ ಜೀವ ತ್ಯಾಗ ಮಾಡುತ್ತಾರೆ ಕಾರಣ ರಾಜ ವೆಂಕಟಪ್ಪ ನಾಯಕ ಮತ್ತು ಚಂಪಕಾರಾಣಿ ಅಂತರ್ಜಾತಿ ವಿವಾಹದಿಂದ ಮತ್ತು ಆನಂದಪುರಂ ಕೋಟೆಯಲ್ಲಿನ ಅರಮನೆಯಲ್ಲಿ ರಾಣಿ ಚಂಪಕಳ ವಾಸದಿಂದ. ಮುಂದೆ ತನ್ನದಲ್ಲದ ತಪ್ಪಿಗ...