Skip to main content

Posts

Showing posts with the label From corona lock down improved my hair cutting experience

Blog number 986. ಗಾಂಧೀಜಿ ಆತ್ಮಕಥೆ ಸತ್ಯಾನ್ವೇಷಣೆ ಬಾಲ್ಯದಲ್ಲಿ ಪ್ರಬಾವ ಬೀರಿತ್ತು ಅವರ ಸ್ವಯಂ ಮಾಡಿಕೊಳ್ಳುತ್ತಿದ್ದ ಕ್ಷೌರದ ಪ್ರಯೋಗ 2020 ರ ಕೊರಾನಾ ಲಾಕ್ ಡೌನ್ ನಿಂದ ನನಗೆ ಅಭ್ಯಾಸವಾಯಿತು ಇದು ಅಷ್ಟು ಸುಲಭವಲ್ಲ.

ಸಲೂನ್_ಕೃಷ್ಣ_ನನ್ನ_ಖಾಯಂ_ಹೇರ್_ಡ್ರೆಸರ್  #ಆದರೆ_ಕೊರಾನ_ಲಾಕ್_ಡೌನ್_ನಂತರ_ಮುಂದುವರಿಯಲಿಲ್ಲ. #ಮಾರ್ಚ್_2020ರ_ಕೃಷ್ಟ_ಮಾಡಿದ_ಕ್ಷೌರವೇ_ಕೊನೆಯಾಯಿತು #ನಾನೆ_ನನ್ನ_ಕ್ಷೌರ_ಮಾಡುತ್ತಾ_ಎರೆಡೂವರೆ_ವರ್ಷಆಯಿತು #ನಾವೇ_ನಮ್ಮ_ಕ್ಷೌರ_ಮಾಡುವ_ಪರಿಣಿತಿ_ಸುಲಭವಲ್ಲ #ಕೇಶ_ವಿನ್ಯಾಸ_ಒಂದು_ಕಲೆ #ನಾಲ್ಕು_ತಲೆಮಾರಿನ_ಕೃಷ್ಣನ_ಕುಟುಂಬದ_ಕ್ಷೌರಿಕ_ಸಂಬಂದದ_ನೆನಪು.     5 ನೇ ತರಗತಿಯಲ್ಲಿಯೇ ಗೊರೂರು ರಾಮಸ್ವಾಮಿ ಅಯ್ಯಂಗಾರರು ಅನುವಾದಿಸಿದ ಗಾಂಧೀಜಿ ಆತ್ಮಚರಿತ್ರೆಯಲ್ಲಿ ಹೆಚ್ಚು ನೆನಪು ಉಳಿದಿದ್ದು ಅವರೇ ಅವರ ಕ್ಷೌರ ಮಾಡಿಕೊಳ್ಳುವುದು ಮತ್ತು ತಂದೆಯ ಜೇಬಿನಿಂದ ಹಣ ಕದ್ದ ಘಟನೆ, ಇದಕ್ಕೆ ಕಾರಣ ಬಾಲ್ಯದಲ್ಲಿ ತಂದೆ ಜೇಬಿಗೆ ಕೈಹಾಕಿದ್ದು ತಪ್ಪು ಎಂಬ ಅರಿವು ಮೂಡಿಸಿತ್ತು ಗಾಂಧಿಜೀ ಸತ್ಯಾನ್ವೇಷಣೆ.   ನನಗೆ ನನ್ನ ಬಾಲ್ಯದ ಕೆಟ್ಟ ಅನುಭವ ಕ್ಷೌರಿಕ ರಾಮಣ್ಣ ತಲೆ ಕೂದಲು ತೆಗೆಯಲು ಬಳಸುತ್ತಿದ್ದ ಇಂಗ್ಲೇಂಡ್ ಮೇಡ್ ಕಟಿಂಗ್ ಮೆಷಿನ್ (ಕ್ಲಿಪ್ಪರ್). ನನ್ನ ರೋಲ್ ಮಾಡೆಲ್ ಸಿನಿಮಾ ಟಾಕೀಸಿನ ಗೇಟ್ ಕೀಪರ್ ಆಗಿದ್ದ ಡುಮಿ೦ಗಣ್ಣ ಗಟ್ಟಿಯಾಗಿ ನನ್ನ ತಲೆ ಹಿಡಿದುಕೊಳ್ಳುತ್ತಿದ್ದರು.   ಗಾಂಧೀಜಿ ಆತ್ಮಕಥೆಯಿಂದ ಪ್ರೇರಪಿತನಾಗಿ ಗುಟ್ಟಾಗಿ ತಂದೆಯವರ ಸರ್ಜರಿ ಕತ್ತರಿಯಲ್ಲಿ ಕನ್ನಡಿ ನೋಡುತ್ತಾ ತಲೆ ಕ್ಷೌರ ಮಾಡಿಕೊಂಡಿದ್ದೆ ಪರಿಣಾಮ ಇಡೀ ತಲೆ ಇಲಿ ಕೊದಲು ಕತ್ತರಿಸಿ ತಿಂದಂತೆ ಆಗಿತ್ತು ಅದನ್ನು ಸರಿ ಮಾಡಲು ...