Blog number 986. ಗಾಂಧೀಜಿ ಆತ್ಮಕಥೆ ಸತ್ಯಾನ್ವೇಷಣೆ ಬಾಲ್ಯದಲ್ಲಿ ಪ್ರಬಾವ ಬೀರಿತ್ತು ಅವರ ಸ್ವಯಂ ಮಾಡಿಕೊಳ್ಳುತ್ತಿದ್ದ ಕ್ಷೌರದ ಪ್ರಯೋಗ 2020 ರ ಕೊರಾನಾ ಲಾಕ್ ಡೌನ್ ನಿಂದ ನನಗೆ ಅಭ್ಯಾಸವಾಯಿತು ಇದು ಅಷ್ಟು ಸುಲಭವಲ್ಲ.
#ಆದರೆ_ಕೊರಾನ_ಲಾಕ್_ಡೌನ್_ನಂತರ_ಮುಂದುವರಿಯಲಿಲ್ಲ.
#ಮಾರ್ಚ್_2020ರ_ಕೃಷ್ಟ_ಮಾಡಿದ_ಕ್ಷೌರವೇ_ಕೊನೆಯಾಯಿತು
#ನಾನೆ_ನನ್ನ_ಕ್ಷೌರ_ಮಾಡುತ್ತಾ_ಎರೆಡೂವರೆ_ವರ್ಷಆಯಿತು
#ನಾವೇ_ನಮ್ಮ_ಕ್ಷೌರ_ಮಾಡುವ_ಪರಿಣಿತಿ_ಸುಲಭವಲ್ಲ
#ಕೇಶ_ವಿನ್ಯಾಸ_ಒಂದು_ಕಲೆ
#ನಾಲ್ಕು_ತಲೆಮಾರಿನ_ಕೃಷ್ಣನ_ಕುಟುಂಬದ_ಕ್ಷೌರಿಕ_ಸಂಬಂದದ_ನೆನಪು.
5 ನೇ ತರಗತಿಯಲ್ಲಿಯೇ ಗೊರೂರು ರಾಮಸ್ವಾಮಿ ಅಯ್ಯಂಗಾರರು ಅನುವಾದಿಸಿದ ಗಾಂಧೀಜಿ ಆತ್ಮಚರಿತ್ರೆಯಲ್ಲಿ ಹೆಚ್ಚು ನೆನಪು ಉಳಿದಿದ್ದು ಅವರೇ ಅವರ ಕ್ಷೌರ ಮಾಡಿಕೊಳ್ಳುವುದು ಮತ್ತು ತಂದೆಯ ಜೇಬಿನಿಂದ ಹಣ ಕದ್ದ ಘಟನೆ, ಇದಕ್ಕೆ ಕಾರಣ ಬಾಲ್ಯದಲ್ಲಿ ತಂದೆ ಜೇಬಿಗೆ ಕೈಹಾಕಿದ್ದು ತಪ್ಪು ಎಂಬ ಅರಿವು ಮೂಡಿಸಿತ್ತು ಗಾಂಧಿಜೀ ಸತ್ಯಾನ್ವೇಷಣೆ.
ನನಗೆ ನನ್ನ ಬಾಲ್ಯದ ಕೆಟ್ಟ ಅನುಭವ ಕ್ಷೌರಿಕ ರಾಮಣ್ಣ ತಲೆ ಕೂದಲು ತೆಗೆಯಲು ಬಳಸುತ್ತಿದ್ದ ಇಂಗ್ಲೇಂಡ್ ಮೇಡ್ ಕಟಿಂಗ್ ಮೆಷಿನ್ (ಕ್ಲಿಪ್ಪರ್). ನನ್ನ ರೋಲ್ ಮಾಡೆಲ್ ಸಿನಿಮಾ ಟಾಕೀಸಿನ ಗೇಟ್ ಕೀಪರ್ ಆಗಿದ್ದ ಡುಮಿ೦ಗಣ್ಣ ಗಟ್ಟಿಯಾಗಿ ನನ್ನ ತಲೆ ಹಿಡಿದುಕೊಳ್ಳುತ್ತಿದ್ದರು.
ಗಾಂಧೀಜಿ ಆತ್ಮಕಥೆಯಿಂದ ಪ್ರೇರಪಿತನಾಗಿ ಗುಟ್ಟಾಗಿ ತಂದೆಯವರ ಸರ್ಜರಿ ಕತ್ತರಿಯಲ್ಲಿ ಕನ್ನಡಿ ನೋಡುತ್ತಾ ತಲೆ ಕ್ಷೌರ ಮಾಡಿಕೊಂಡಿದ್ದೆ ಪರಿಣಾಮ ಇಡೀ ತಲೆ ಇಲಿ ಕೊದಲು ಕತ್ತರಿಸಿ ತಿಂದಂತೆ ಆಗಿತ್ತು ಅದನ್ನು ಸರಿ ಮಾಡಲು ಪುನಃ ಆನಂದಪುರಂನ ಆ ಕಾಲದ ಮಾಡರ್ನ್ ಸೆಲೂನ್ ರಾಮಣ್ಣ ತನ್ನ ಕ್ಲಿಪ್ಪರ್ ಜೋರಾಗಿಯೆ ಬಳಸಿದ್ದು ಕಣ್ಣೀರು ತರಸಿತ್ತು.
2020 ಮಾರ್ಚ್ ನಲ್ಲಿ ಬಂದ ಕೊರಾನಾ ನಂತರ ಲಾಕ್ ಡೌನ್ ಅನಿವಾಯ೯ವಾಗಿ ನಮ್ಮ ಕ್ಷೌರ ನಾವೇ ಮಾಡಿಕೊಂಡು ಪರಿಣಿತಿ ಪಡೆಯುವಂತಾಯಿತು ಇದರಿಂದ ಸಮಯ ಉಳಿಯಿತಾದರೂ ಕ್ಷೌರಿಕ ಕುಟುಂಬಗಳ ಸಂಬಂದ ಕಳೆದು ಹೋಯಿತು, ಕ್ಷೌರದ ಸಮಯದಲ್ಲಿ ಊರಿನ ಅನೇಕ ಘಟನೆಗಳ ಬಾತ್ಮಿದಾರರಾಗಿ ನೀಡುತ್ತಿದ್ದ ಸುದ್ದಿಯ ಸರಕು ಸವಿಯದಂತಾಯಿತು.
ನಮ್ಮ ತಲೆ ಕೊದಲೂ ನಿವಾರಿಸುವ ಕೆಲಸ ಅಷ್ಟು ಸುಲಭವಲ್ಲ ಅದರ ಪರಿಣಿತಿಗೆ ತುಂಬಾ ಶ್ರಮ ಬೇಕು ಈಗ ಇದಕ್ಕೆ ಅನೇಕ ಸುಲಭ ಉಪಕರಣ ಇದೆ ಆದರೆ ಗಾಂಧೀಜಿ ಕಾಲದಲ್ಲಿ ಅದೆಲ್ಲ ಇಲ್ಲದರ ಕಾಲದಲ್ಲಿ ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪ್ರವಾಸ -ಭಾಷಣ - ಬರವಣಿಗೆಗಳ ಮಧ್ಯೆ ಇದನ್ನು ಕರತಲಾಮಲಕ ಮಾಡಿಕೊಂಡಿದ್ದು ಸುಲಭವಲ್ಲ ಈ ಮೂಲಕ ತಾನು ಪರಾವಲಂಭಿ ಅಲ್ಲ ಎಂಬ ಸಂದೇಶ ನೀಡಿದ್ದು ಇತಿಹಾಸ.
ಮೊನ್ನೆ ಕೃಷ್ಣ ಆಫೀಸಿಗೆ ಬಂದಿದ್ದ ಮಕ್ಕಳ ವಿದ್ಯಾಬ್ಯಾಸ ಅವರ ಮೆರಿಟ್ ತಿಳಿಸಿದ ಜೊತೆಗೆ ಸಂತೋಷದ ವಿಷಯ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾನೆ.
- ಒಂದು ಕಾಲದಲ್ಲಿ ಈ ವೃತ್ತಿಯವರಲ್ಲಿ ಬಲು ಕಷ್ಟದ ಜೀವನ, ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೂ ಹೋಗಿ ಎಲ್ಲರ ಕಟಿಂಗ್ ಮಾಡಿ ಸುಗ್ಗಿ ಕಾಲದಲ್ಲಿ ಅವರು ನೀಡುವ ಭತ್ತ, ರಾಗಿ ಕಾಳು ಕಡಿ ಪಡೆಯುವ ವತ೯ನೆ ಹೆಸರಿನ ಪದ್ದತಿ ಇತ್ತು ಅದು ಕೃಷ್ಣನ ಆಜ್ಜನ ಕಾಲಕ್ಕೆ ಮುಗಿಯಿತಾ ಬಂದಿತ್ತು, ನಂತರ ಇವರ ತಂದೆ ಮುನಿಯಣ್ಣ ಅದ೯ ವತ೯ನೆ ಅದ೯ ಸೆಲೂನಿನಲ್ಲಿ ದುಡಿಮೆ ಮಾಡಿದರು.
ಆಗೆಲ್ಲ ವೃತ್ತಿಯ ಬಗ್ಗೆ ಕೀಳರಿಮೆ ಬೆಳೆಸಿಕೊಂಡ ಇವರ ಕುಟುಂಬದಲ್ಲಿ ಅನೇಕರು ಬೇರೆ ವೃತ್ತಿ, ಸಕಾ೯ರಿ ಕೆಲಸಕ್ಕೆ ಸೇರಿದರು, ಬೇರೆ ರಾಜ್ಯದವರು ಬಂದು ಇಲ್ಲೆಲ್ಲ ಭರಪೂರ ದಂದೆ ಮಾಡಲು ಶುರು ಮಾಡಿದ್ದು, ಬ್ಯೂಟಿ ಪಾಲ೯ರ್ ಕಾನ್ಸೆಪ್ಟ್ ಗಳು ಪುನಃ ವಂಶಪಾರಿಖ ವೃತ್ತಿಯನ್ನ ಮುಂದುವರೆಸಲು ಇವರಿಗೆಲ್ಲ ಪ್ರೋತ್ಸಾಹ ನೀಡಿರಬಹುದು.
ಇವರ ಮಗ ಕಾಲೇಜು ಓದುತ್ತಾ ಬಿಡುವಿನಲ್ಲಿ ಸೆಲೂನ್ ಕೆಲಸ ಮಾಡುತ್ತಾನೆ.
ಇವರ ಅಜ್ಜ ದಿವಂಗತ ನಾರಾಯಣಪ್ಪ, ಇವರ ತಂದೆ ದಿ.ಮುನಿಯಣ್ಣ ಈಗ ಮಗ ಕೃಷ್ಣ ಆಗಾಗ ಕೃಷ್ಣ ಇಲ್ಲದಾಗ ಇವರ ಮಗ ನನ್ನ ಕೇಶ ಶೃ೦ಗಾರ ಮಾಡುತ್ತಾನೆ ಹಾಗಾಗಿ ಅವರ ನಾಲ್ಕು ತಲೆಮಾರಿನವರ ಹತ್ತಿರ ನಾನು ವ್ಯವಹರಿಸಿದ್ದೇನೆ.
ಕೃಷ್ಣನ ತಾಯಿಯ ತಂದೆ ನೆಲ್ಲಪ್ಪನವರು ದೂರದ ಕೋಲಾರದ ಆಂದ್ರ ಪ್ರದೇಶದ ಬಾಡ೯ರ್ ನಿಂದ ಬಂದು ನೆಲೆಸಿದವರು, ಬಹಳ ಸಾಹಸಿ ಮತ್ತು ದಯಾಮಯಿ ಅಂತೆ, ಹಾಗೆಯ ಅನ್ಯಾಯದ ವಿರುದ್ದ ಅವರದ್ದೇ ಆದ ಮಾಗ೯ದಲ್ಲಿ ಹೋರಾಟಗಾರರು, ಆನಂದಪುರಂ ಪೇಟೆಯಲ್ಲಿ ಎರಡು ಅಂತಸ್ತಿ ಅತಿ ದೊಡ್ಡ ಕಟ್ಟಡ ಇವರದ್ದೇ ಆಗಿತ್ತು, ಕೃಷಿ ಜಮೀನು ಹೊಂದಿದ್ದರು, ಆಗಿನ ಭೂ ಮಾಲಿಕರು ಮತ್ತು ಸಂಸದರಾಗಿದ್ದ ಬದರಿನಾರಾಯಣ ಅಯ್ಯOಗಾರರ ಕುಟುಂಬದವರು ನೆಲ್ಲಪ್ಪರನ್ನ ಕಂಡರೆ ಭಯ ಪಡುತ್ತಿದ್ದರಂತೆ.
ಈ ನೆಲ್ಲಪ್ಪ ಇಲ್ಲದಿದ್ದರೆ ಅವತ್ತು ಆ ದೊಡ್ಡ ಸಹಾಯ ಮಾಡದಿದ್ದರೆ ನಮ್ಮ ತಂದೆ ಇರುತ್ತಿರಲಿಲ್ಲ, ನಾವು ಹುಟ್ಟುತ್ತಿರಲಿಲ್ಲ ಅವರು ಜೀವದಾನ ಪಡೆದ ಕಥೆ ಕೂಡ ಇದೆ.
Comments
Post a Comment