BLOG ARTICLES 961. ನಿಜವಾದ ಬಡವರ ಗುರುತಿಸುವಲ್ಲಿ ಎಡವಿದ ಸರ್ಕಾರ, ಸೊಸೈಟಿ ಅಕ್ಕಿ ಮಾರಿ ಸೋನಾ ಮಸೂರಿ ಅಕ್ಕಿ ಖರೀದಿಸುವ ಮಂದಿ, ಸೊಸೈಟಿ ಅಕ್ಕಿ ತಿನ್ನುವುದಿಲ್ಲ ಎಂಬ ಹೆಗ್ಗಳಿಕೆಯ ಪಾಲ್ಸ್ ಪ್ರಿಸ್ಟೇಜ್, ಸರ್ಕಾರದಿಂದ ನೂರಾರು ಕೋಟಿ ಅನುದಾನ ಪಡೆಯುವ ಮಠಾದೀಶ ಅನ್ನ ಬಾಗ್ಯದಿಂದ ಸೋಮಾರಿ ವರ್ಗ ಸೃಷ್ಟಿ ಆಗುತ್ತದೆನ್ನುವ ಹೇಳಿಕೆ !
#ಅನ್ನಬಾಗ್ಯ_ಅಕ್ಕಿ_x_ಸೋನಾಮಸೂರಿ
#ರಾಜ್ಯದಲ್ಲಿ_130_ಲಕ್ಷ_ಕುಟುಂಬಗಳಲ್ಲಿ_100_ಲಕ್ಷ_ಬಿಪಿಎಲ್
#ಸೊಸೈಟಿ_ಅಕ್ಕಿ_ತಿನ್ನುವುದಿಲ್ಲ_ಎನ್ನುವುದು_ದೊಡ್ಡಸ್ಥಿಕೆ.
#ಪಾಲ್ಸ್_ಪ್ರಿಸ್ಟೇಜ್_ಸರ್ಕಾರಿ_ಶಾಲಾ_ಶಿಕ್ಷಕರು_ತಮ್ಮ_ಮಕ್ಕಳಿಗೆ_ಕಾನ್ವೆಂಟ್_ಹುಡುಕಿದಂತೆ.
ನುಚ್ಚಕ್ಕಿ - ನೆಲ್ಲಕ್ಕಿ - ಮುಗ್ಗುಲಕ್ಕಿಗಳಿಗೆಲ್ಲ ಒಂದು ಕಾಲದಲ್ಲಿ ಬೇದವಿರಲಿಲ್ಲ ಅದೆಲ್ಲದರ ಅನ್ನ ತಿಂದೇ ನಾವೆಲ್ಲ ದೊಡ್ಡವರಾಗಿದ್ದು ಮರೆತಿಲ್ಲ ,#ಅನ್ನ_ದೇವರ_ಮುಂದೆ_ಅನ್ಯ_ದೇವರಿಲ್ಲ ಎಂಬ ಸರ್ವಜ್ಞ ವಚನ ಜನ ಮನದಲ್ಲಿತ್ತು.
ಈಗ ಮೇಲಿನ ಅಕ್ಕಿ ಬಿಡಿ, ಸೊಸೈಟಿ ಅಕ್ಕಿ ಎಂಬ ಅನ್ವರ್ಥ ನಾಮದ ಅನ್ನ ಭಾಗ್ಯದ ಅಕ್ಕಿ ಅಂದರೆ ಮೂಗು ಮುರಿಯುವ ಕಾಲ ಇದಾಗಿದೆ.
ಅನ್ನಭಾಗ್ಯದಿಂದ ಸೋಮಾರಿಗಳು ಸೃಷ್ಟಿ ಆಗುತ್ತಾರೆ ಅಂತ ಒಬ್ಬ ಮಠದ ಸ್ವಾಮಿಯ ಹೇಳಿಕೆ ನೋಡಿದೆ ಆತ ಸರ್ಕಾರದಿಂದ ನೂರಾರು ಕೋಟಿ ರೂಪಾಯಿ ಪಡೆಯುವ ಹೈಟೆಕ್ ಬಿಪಿಎಲ್ ಕಾರ್ಡ್ ದಾರ 😀.
ರಾಜ್ಯದಲ್ಲಿರುವ 1.3 ಕೋಟಿ ಕುಟುಂಬಗಳಲ್ಲಿ ಒಂದು ಕೋಟಿಗೂ ಹೆಚ್ಚಿನ ಕುಟುಂಬ ಬಿಪಿಎಲ್ ಕಾರ್ಡ್ ಹೊಂದಿವೆ ಅಂದರೆ ಕರ್ನಾಟಕ ರಾಜ್ಯದ ಶೇಕಡ 83% ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ ಅಂತ ಅರ್ಥ.ಆದರೆ ಇದರಲ್ಲಿ ಸತ್ಯಾಂಶ ಎಷ್ಟು?
ದಿನಕ್ಕೆ 150 ರೂಪಾಯಿಗಿಂತ ಕಡಿಮೆ ಆದಾಯದವರು ಬಡತನ ರೇಖೆಗಿಂತ ಕೆಳಗಿನವರೆಂಬ ಮಾನದಂಡದಲ್ಲಿ ಭಾರತದಲ್ಲಿ ಶೇಕಡಾ 12.4% ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸಂಖ್ಯೆ !!.
ಇದರ ಮಧ್ಯ ಬಡವರಿಗೆ ಅಕ್ಕಿ ನೀಡಿದ್ದು ನಮ್ಮ ಪಕ್ಷ ಅಂತೆಲ್ಲ ರಾಜಕೀಯ ಪಕ್ಷಗಳ ಮೇಲಾಟಗಳಿದ್ದರೂ ವಾಸ್ತವವಾಗಿ ಅನ್ನ ಬಾಗ್ಯ ಯೋಜನೆ 15-6-2013ರಲ್ಲಿ ಜಾರಿಗೆ ತಂದಿದ್ದು ಸಿದ್ದರಾಮಯ್ಯನವರು,3 ಕ್ಕಿಂತ ಹೆಚ್ಚಿನ ಸದಸ್ಯರಿರುವ ಬಿಪಿಎಲ್ ಕುಟುಂಬಕ್ಕೆ ಮಾಸಿಕ 30 kg ಅಕ್ಕಿ ವಿತರಣೆ ಅದು ಕೆಜೆಗೆ ಒಂದು ರೂಪಾಯಿಯಂತೆ, ಅದಕ್ಕೂ ಮೊದಲು 4 kg ಅಕ್ಕಿ ಮತ್ತು 1ಕೆಜಿ ಗೋದಿ ವಿತರಣೆ ಆಗುತ್ತಿತ್ತು.
ನಮ್ಮ ಕೆಲಸದ ಹೆಣ್ಣು ಮಕ್ಕಳು ಪ್ರತಿ ತಿಂಗಳು ಅವರಿಗೆ ಸಿಗುವ ರೇಷನ್ ಅಕ್ಕಿ ಮಾರಾಟ ಮಾಡಿ ಸೋನಾ ಮಸೂರಿ ಸ್ಟೀಮ್ ಅಕ್ಕಿ ಒಯ್ಯುತ್ತಾರೆಂಬ ಸುದ್ದಿ ಮೊನ್ನೆ ಕೇಳಿ ಬೇಸರ ಆಯಿತು, ಅದೂ ಕೇಜಿಗೆ 10 ರೂ ನಂತೆ ಮಾರಾಟ ಮಾಡಿ 40 ರೂ ನ ಸೋನಾ ಮಸ್ಸೂರಿ ಖರೀದಿಸುತ್ತಾರಂತೆ !?. ಸಕಾ೯ರ 30 ರೂ ನಂತೆ ಅಕ್ಕಿ ಖರೀದಿಸಿ ಅದನ್ನು ಈ ಯೋಜನೆಗೆ ಹೆಚ್ಚು ಕಡಿಮೆ ಉಚಿತವಾಗಿ ಸಹಾಯಧನದಿಂದ ನೀಡುವ ಈ ಯೋಜನೆ ದಾರಿ ತಪ್ಪಿತಾ? ಅಥವ ಅಕ್ಕಿ ಗುಣಮಟ್ಟ ಇಲ್ಲವಾ? ಎಂಬ ಪ್ರಶ್ನೆ ಮೂಡುತ್ತದೆ ಆದರೆ ಅದಾವುದು ಅಲ್ಲ, ಎಲ್ಲರಿಗೂ ಈಗ ಅಂತಸ್ಥಿನ ಘನತೆ ಎಂಬ ಭ್ರಮೆಯಲ್ಲಿದ್ದಾರೆ.
ನಾನು ಈ ಅಕ್ಕಿ ಅವರಿಂದ ತರಿಸಿ ನೋಡಿದೆ ಅಕ್ಕಿ ಸ್ವಚ್ಚವಾಗಿತ್ತು, ಅನ್ನ ಮಾಡಿ ಊಟ ಮಾಡಿದೆ ನಂಬರ್ ಒನ್ - ಸ್ವಲ್ಪ ಗಾತ್ರ ದೊಡ್ಡದು ಅಷ್ಟೆ.
ಯಾಕೆ ಸೊಸೈಟಿ ಅಕ್ಕಿ ನೀವು ಬಳಸುವುದಿಲ್ಲ . ಕೇಳಿದರೆ "ನಾವು ಸೊಸೈಟಿ ಅಕ್ಕಿ ಇಡ್ಲಿ ದೋಸೆಗೆ ಮಾತ್ರ", "ಹೊಟ್ಟೆ ನೋವು ಬರುತ್ತೆ", "ನನ್ನ ಮಗ ತಿನ್ನುವುದಿಲ್ಲ" ಹೀಗೆ ನೂರಾರು ಕಾರಣಗಳು.
ಇದು ಪಾಲ್ಸ್ ಪ್ರಿಸ್ಟೇಜ್ ನ ಒಂದು ರೂಪವೇ ಆಗಿದೆ, ಸರ್ಕಾರಿ ಶಾಲಾ ಶಿಕ್ಷಕರುಗಳು ಅವರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸದೆ ಕಾನ್ವೆಂಟ್ ಹುಡುಕಿದಂತೆ.
ನಿಜವಾಗಿ ಹಸಿದ ಹಸಿವಿನ ಹೊಟ್ಟೆಯ ಬಡತನ ರೇಖೆಯ ಕೆಳಗಿನ ಕುಟುಂಬಕ್ಕೆ ಈ ಯೋಜನೆ ವರದಾನ ಆದರೆ ನಿಜವಾದ ಬಿಪಿಎಲ್ ದಾರನ ಗುರುತಿಸುವಲ್ಲಿ ಸರ್ಕಾರಗಳು ಎಡವಿದೆ.
ಈಗಿನ ಸರ್ಕಾರ ಕಾರ್ ಇದ್ದರೂ ಬಿಪಿಎಲ್ ಕಾರ್ಡ್ ದಾರನಿಗೆ ಅನ್ನಭಾಗ್ಯ ನೀಡುತ್ತೇನೆ ಅನ್ನುತ್ತಿರುವುದು ನೋಡಿದರೆ ಇಡೀ ರಾಜ್ಯ ಬಿಪಿಎಲ್ ಅಂದರೆ ಬಡತನ ರೇಖೆಗಿಂತ ಕೆಳಗಿರುವರೆಂದೆ ಬಾವಿಸಬೇಕು ಆದರೆ ಇದು ಅತ್ಯುತ್ತಮವಾದ ಯೋಜನೆ ಹಳ್ಳ ಹಿಡಿದಿದೆ ಎಂಬುದು ಸಾಬೀತಾಗಿದೆ.
Comments
Post a Comment