Blog number 974, ಮಲೆನಾಡಿನ ಒಂಟಿ ಮನೆಗಳು ದರೋಡೆಕೋರರಿಗೆ ಸಾಫ್ಟ್ ಟಾಗೆ೯ಟ್ (ಸುಲಭ ಗುರಿ) ಆಗುತ್ತಿದೆ ಇದಕ್ಕೆ ಸರ್ಕಾರ ಏನು ಮಾಡಬಹುದು? ಸ್ವತಃ ನಾವೇನು ತಯಾರಿ ಮಾಡಿಕೊಳ್ಳಬಹುದು?...
ಸಕಾ೯ರ ಮಲೆನಾಡಿನ ಒ೦ಟಿ ಮನೆ ವಾಸಿಗಳ ಆತ್ಮ ರಕ್ಷಣೆಗೆ ಸುಲಭ ಮಾಗ೯ದಲ್ಲಿ ಬಂದೂಕು ಲೈಸೆನ್ಸ್ ನೀಡುವ ಬಗ್ಗೆ ಸೂಕ್ತ ತೀಮಾ೯ನ ತೆಗೆದುಕೊಳ್ಳಬಾರದೇಕೆ?
ಒಂದು ಕಾಲದಲ್ಲಿ ಮಲೆನಾಡಿನ ಒಂಟಿ ಮನೆಗಳು ಕಳ್ಳರು ದರೋಡೆಕೋರರಿಂದ ಸುರಕ್ಷಿತವಾಗಿತ್ತು ಇದಕ್ಕೆ ಬಹು ಕಾರಣ ಅವಿಭಕ್ತ ಕುಟುಂಬಗಳು ಮನೆ ತುಂಬಾ ಮಂದಿ ಮತ್ತು ಸಾಕು ಪ್ರಾಣಿಗಳು ಹಾಗು ಪಸಲು ರಕ್ಷಣೆಯ ಬಂದೂಕುಗಳೂ ಒಂದು ಕಾರಣ ಇರಬಹುದು.
ಆದರೆ ಈಗ ಮಲೆನಾಡು ಬದಲಾಗಿದೆ ವಿಭಕ್ತ ಕುಟು೦ಬಗಳಾಗಿದೆ, ಉದ್ಯೋಗಕ್ಕಾಗಿ ಮಕ್ಕಳು ಪೇಟೆ ಸೇರಿದ್ದಾರೆ ಹಳ್ಳಿ ಮನೆಗಳು ವೃದ್ಧಾಶ್ರಮ ಆಗಿದೆ, ನಾಯಿ ಸಾಕುವುದಿಲ್ಲ, ಪಸಲು ಆತ್ಮ ರಕ್ಷಣೆಗೆ ಬಂದೂಕು ಇಲ್ಲ.
ಇಂತವರ ಮಾಹಿತಿ ಹೆಕ್ಕಿ ಕಳ್ಳರಿಗೆ ಕೊಡುವ ಮಾಹಿತಿದಾರರು ಹಳ್ಳಿಗಳಲ್ಲಿದ್ದಾರೆ ಕಳ್ಳರಿಗೆ ದರೋಡೆಕೋರರಿಗೆ ಮಲೆನಾಡಿನ ಹಳ್ಳಿ ಮನೆಯ ಒಂಟಿ ಮನೆಗಳು ಸಾಫ್ಟ್ ಟಾಗೆ೯ಟ್ಗಳಾಗಿದೆ, ದೋಚಿದ ನಂತರ ಸುಲಭವಾಗಿ ಹೋಗಲು ರಸ್ತೆ ವಾಹನಗಳು ಇದೆ.
ಹೀಗಾಗಿ ಮಲೆನಾಡ ಒಂಟಿ ಮನೆಗಳ ವಾಸಿಗಳಿಗೆ ಸಕಾ೯ರ ವಿಶೇಷ ಬಂದೂಕು ಲೈಸೆನ್ಸ್ ನೀಡಲು ಸುಲಭ ಮತ್ತು ಶೀಫ್ರ ಪ್ರಕ್ರಿಯೆಗಳನ್ನ ವಿದಿಸಿ ಬಂದೂಕು ರಕ್ಷಣೆಗೆ ಇಟ್ಟುಕೊಳ್ಳಲು ಅನುವು ಮಾಡಬೇಕು.
ಒಂಟಿ ಮನೆಯ ಉದ್ಯೋಗಕ್ಕೆ ಪಟ್ಟಣ ಸೇರಿದ ಮಕ್ಕಳು ತಮ್ಮ ಪೋಷಕರ ಆತ್ಮ ರಕ್ಷಣೆಗಾಗಿ ಸಿ.ಸಿ ಕ್ಯಾಮೆರಾ, ಸೈರನ್ ಗಳನ್ನ ಅಳವಡಿಸಿ ತಮ್ಮ ಮೊಬೈಲ್ ಪೋನ್ ನಲ್ಲೇ ಮಾನಿಟರಿಂಗ್ ಮಾಡಬಹುದು.
ಒಳ್ಳೇ ತಳಿಯ ಎರಡಕ್ಕಿಂತ ಹೆಚ್ಚು ನಾಯಿ ಸಾಕುವ ಅಭ್ಯಾಸ ಕೂಡ ಮಾಡಬೇಕು.
ಕೊಲೆ ದರೋಡೆ ಮಾಡಿದ ನಂತರ ಅವರನ್ನ ಪೋಲಿಸರು ಹಿಡಿಯುತ್ತಾರೆ ಆದರೆ ಕೊಲೆ ದರೋಡೆ ಆಗದಂತೆ ಮುಂಜಾಗೃತೆ ನಮಗೆ ನಾವೇ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅತಿ ಅವಶ್ಯಕತೆ ಇದೆ ಮತ್ತು ಅನಿವಾಯ೯ ಕೂಡ.
Comments
Post a Comment