Skip to main content

Blog number 973.ಬರಹಗಾರ - ಪ್ರವಾಸಿ - ಎಲ್ಲಾ ವಿಚಾರದಲ್ಲೂ ಆಸಕ್ತಿಯಿಂದ ಗಮನಿಸಿ ಪ್ರತಿಕ್ರಿಯಿಸುವ ಅರೆ ಬಾಸೆಯ ಮಾತೃ ಬಾಷೆಯ ಸುಳ್ಯದ ತೇಜ್ ಕುಮಾರ್ ನನ್ನ ಕಾದಂಬರಿ ಓದಿ ಪ್ರತಿಯಿಸಿದ್ದಾರೆ, ಇವರ ಪೂವ೯ಜರು ಅಮರ ಸುಳ್ಯ ಹೋರಾಟದಲ್ಲಿ ಭಾಗವಹಿಸಿದವರು

#ತೇಜ್_ಕುಮಾರ್_ಕೆ_ಆರ್_ಸುಳ್ಯ
 ಕೃಷಿಕರು, ಬರಹಗಾರರು ಮತ್ತು ಅರಬಾಸೆ, ಕನ್ನಡ, ಇಂಗ್ಲೀಷ್, ತುಳು ಮತ್ತು ಮಲೆಯಾಳ ಬಾಷೆ ಅರಿತವರು, ಇವರು ಮುಖತಃ ಬೇಟಿ ಆಗಿಲ್ಲ ಆದರೆ ಪೇಸ್ ಪುಸ್ತಕ ಗೆಳೆಯರನ್ನಾಗಿಸಿ ನನ್ನ ಕಾದಂಬರಿ ಇವರು ಓದಿ ವಿಮಷೆ೯ ಮಾಡುವಂತೆ ಮಾಡಿದೆ, ಇವರ ಮನೆ ಸುಂದರ ಪರಿಸರದಲ್ಲಿ ಕಲಾತ್ಮಕವಾಗಿ ನಿಮ೯ಣಗೊಂಡಿರುವುದರ ಚಿತ್ರ ಲಗತ್ತಿಸಿದ್ದೇನೆ ನೋಡಿ, ಒಮ್ಮೆ ನೋಡಲೇ ಬೇಕು ಅನ್ನಿಸುತ್ತದೆ.
  ತಮ್ಮ ಇತರೆ ಕಾಯ೯ಗಳ ನಡುವೆ ಓದಿ ವಿಮಷಿ೯ಸಿದ ತೇಜ್ ಕುಮಾರರಿಗೆ ಕೃತಜ್ಞತೆಗಳೊಂದಿಗೆ ಅವರ ವಿಮರ್ಷೆ ನಿಮಗಾಗಿ
 
  #ನನ್ನ_ಮುಖ_ಪುಸ್ತಕದ_ಗೆಳೆಯ_ಅರುಣ್_ಪ್ರಸಾದ್ ರವರು ಅವರ ಮೊದಲ ಪುಸ್ತಕ "ಬೆಸ್ತರ ರಾಣಿ ಚಂಪಕಾ" ಕಳುಹಿಸಿದ್ದರು. ಓದಿ ಮುಗಿಸಿದೆ. ಒಂದು ಒಳ್ಳೆಯ ಪುಸ್ತಕ. ನಮ್ಮ ರಾಜಪರಂಪರೆಗಳಲ್ಲಿ,ಜಾನಪದ ಕತೆಗಳಲ್ಲಿ ಹೆಚ್ಚಾಗಿ ಹೆಣ್ಣು ಶೋಷಿತಳಾಗಿಯೇ ಉಳಿಯುತ್ತಾಳೆ.ಮನಸ್ಸು ಭಾರವಾಗುತ್ತದೆ. ಅಂತಹ ಕತೆಯೊಂದನ್ನ ಲೇಖಕರು ನಮಗಿತ್ತಿದ್ದಾರೆ. ಕರುನಾಡ ಇತಿಹಾಸದಲ್ಲಿ ಕೆಳದಿ ಒಂದು ವಿಶಿಷ್ಟ ರಾಜ್ಯ. ವಿಜಯನಗರದ ಸಾಮಂತರಾಗಿದ್ದು ವಿಜಯನಗರದ ಫತನದ ನಂತರ ಸ್ವತಂತ್ರ ರಾಜರಾಗಿ ಅಷ್ಟ ದಿಕ್ಕುಗಳ ಶತ್ರುಗಳನ್ನು ಮೆಟ್ಟಿ ನಿಂತು ಆಳಿದ ಕೀರ್ತಿ ಅವರದ್ದು.ಅವರಲ್ಲಿ ಪಡುಗಡಲೊಡೆಯನೆಂಬ ಬಿರುದಾಂಕಿತ ರಾಜಾ ವೆಂಕಟಪ್ಪನಾಯಕ ಕಲಾವಂತಿಕೆಯ ಬೆಸ್ತರ ಹುಡುಗಿ ಚಂಪಕಾಳಿಗೆ ಮರುಳಾಗುತ್ತಾನೆ ಮದುವೆಯಾಗುತ್ತಾನೆ. ಕೀಳುಜಾತಿಯ ಹೆಣ್ಣೆಂಬ ನೆಲೆಯಲ್ಲಿ ಆಡುಗರ ಬಾಯಿಗೆ ಈಡಾದ ಚಂಪಕಾ ಇಲ್ಲಸಲ್ಲದ ಅಪವಾದಗಳಿಗೆ ಈಡಾಗಿ ಅರಸನ ಧೀಮಂತಿಕೆಗೆ ತಾನು ಅಡ್ಡಿಯಾದೆನೋ ಎಂದುಕೊಂಡು ಪ್ರಾಣತ್ಯಾಗ ಮಾಡುತ್ತಾಳೆ. ಇದು ಸಾರಾಂಶ. ಲೇಖಕರು ಅರಸನೊಬ್ಬನ ಜೀವನದ ಜನರರಿಯದ ಪಾತ್ರವನ್ನು ಹೇಳುತ್ತಾರಲ್ಲದೆ ಪ್ರೇಮಕತೆಯನ್ನು ವೈಭವೀಕರಿಸಲಿಲ್ಲ.ಪ್ರೇಮ ಕತೆಯೊಂದರ ದುರಂತದಲ್ಲಿ ಚಂಪಕಾಳಿಗಾಗಿ ಮನ ಕರಗುವಂತೆ ಮಾಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಇದೊಂದು ಇತಿಹಾಸದ ಭಾಗ.ಚೌಡಪ್ಪ,ಭದ್ರಪ್ಪ ನಾಯಕ ಸಹೋದರರು ಕಟ್ಟಿದ ಸಾಮ್ರಾಜ್ಯ. ಸನ್ಯಾಸಿ ವೇಷದಲ್ಲಿ ದೆಹಲಿಯಲ್ಲಿ ಕತ್ತಿಯೊಂದರ ಕೆಳಗೆ ತಲೆಬಗ್ಗಿಸಿ ನಡೆಯದೇ ಹೋರಾಟದಲ್ಲಿ ತನ್ನ ಸುರಿಗೆ ನಾಗರಮರಿಯಿಂದ ಆಗಾಂಖಾನನ ತಲೆತರಿದ ದೊಡ್ಡ ಸಂಕಣ್ಣ ನಾಯಕ,ಅವನ ಮಗ ರಾಜಾವೆಂಕಟಪ್ಪ ನಾಯಕ, ಕಂದಾಯ ನಿಖರತೆಯ ಶಿಸ್ತನ್ನು ತಂದ ಶಿವಪ್ಪ ನಾಯಕ,ತನ್ನಾಳ್ವಿಕೆಯ ಬಸರೂರಿಗೇ ಧಾಳಿಯಿಟ್ಟಿದ್ದ ಶಿವಾಜಿಯ ಮಗ ರಾಜಾರಾಮ ಪ್ರಾಣಭಯದಿಂದ ತನ್ನಲ್ಲಿ ಅಭಯ ಬಿಕ್ಷೆ ಬೇಡಿದಾಗ ಜಿಂಜಿಯಲ್ಲಿ ಆಶ್ರಯ ನೀಡಿ ಮೊಗಲರನ್ನೇ ಎದುರಿಸಿ ಹಿಮ್ಮೆಟ್ಟಿಸಿದ ದಿಟ್ಟೆ ಕೆಳದಿಯ  ಚೆನ್ನಮ್ಮರಾಣಿ, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೊದಲೇ ನಡೆದ ನಗರ ಬಂಡಾಯ,ಕೆನರಾ ಬಂಡಾಯಗಳು ಸಹಿತ ಇದೇ ವಂಶದ ಕವಲು/ನಿಷ್ಟರ ಪರಂಪರಾ ಇತಿಹಾಸವಿರಬೇಕಾದರೆ ಬೆಸ್ತರ ನೀಲಮ್ಮನ ಮುಖಾಂತರ ರಾಜಮನೆತನದ ಇತಿಹಾಸವನ್ನು ಕೇವಲ ಒಂದೆರಡು ಪುಟಗಳಲ್ಲಿ ಹೇಳಿಸಿದ್ದು ಯಾಕೋ ಕಡಿಮೆಯೆನಿಸಿತು.  ಬಹಳಷ್ಟು ಸಾಮಗ್ರಿಗಳ ಶೇಖರಣೆಯಿಂದ ಇಂತಹ ಪುಸ್ತಕವೊಂದನ್ನು ಹೊರತಂದ ಅರುಣರ ಇತಿಹಾಸ ವೀಕ್ಷಣಾ ದೃಷ್ಟಿ ಸಂತೋಷ ತರುತ್ತದೆ. ಇದರಲ್ಲಿ ಬರುವ ನನ್ನೂರ ಕಾಂತಮಂಗಲ,ಬೆಳ್ಳಾರೆ,ಬಂದ್ಯಡ್ಕ ಮುಂತಾದ ಊರುಗಳ ಉಲ್ಲೇಖ ಕಂಡಾಗ ಅವರ ಪರಿಶ್ರಮದ ವ್ಯಾಪ್ತಿಯ ಅರಿವಾಯಿತು. ಒಟ್ಟಿನಲ್ಲಿ ಒಂದು ಒಳ್ಳೆಯ ಕೃತಿ ಮುಂದಿಟ್ಟಿದ್ದೀರ.ಮೊದಲ ಕೃಷಿಯಾದರೂ ಮನದೊಳಗೆ ತಲುಪಿದ್ದೀರಿ. ಕೆಲವಂತೂ ಕುತೂಹಲವೆನಿಸಿತು. ತಾವರೆಕೆರೆಯ ನೀರು ಇಬ್ಬದಿಗೆ ಸಾಗಿ ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿ ಸೇರುವುದು, ಅರಮನೆಯಲ್ಲಿ ನಿಂತು ನಕ್ಷತ್ರಗಳ ರಾಶಿಯಲ್ಲಿ ತಂದೆಯನ್ನರಸುವ ಚಂಪಕಾ,ಕೆಳದಿಯ ಸಂಪತ್ತು ಕುಂಬಳೆಯಲ್ಲಿರುವ ನಿಗೂಢತೆ ಎಲ್ಲವೂ ಅಪೂರ್ವವೆನಿಸಿತು. ಇಷ್ಟೆಲ್ಲಾ ಬರೆಯುವ ಬಂಡವಾಳವಿದ್ದೂ ಯಾಕೋ ಸಾಕಿಷ್ಟೆಂದು ವಿಸ್ತರಿಸದೆ ಮುಗಿಸಿದಿರೆನಿಸಿತು. All the Best ಅರುಣ್.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...