Skip to main content

Blog number 977.ರೈತ ಹೋರಾಟದ ಮಹಾನ್ ನೇತಾರ 1999 ರಲ್ಲಿ ನನ್ನ ಮನೆಗೆ ಬೇಟಿ ಮಾಡಿದ್ದರು, ಬಲಭಾಗದಲ್ಲಿ ನನ್ನ ತಂದೆ ಎಸ್ ಕೃಷ್ಣಪ್ಪ, ಎಡ ಭಾಗದಲ್ಲಿ ನಾನು ಮತ್ತು ನನ್ನ ಪಕ್ಕದಲ್ಲಿ ಗೆಳೆಯ ಶೇಖ್ ಆಹಮದ್

ಇಂತಹ ಕ್ಷಣಗಳು ನನ್ನ ಜೀವಮಾನದ ಸಾದನೆ.
1999 ರಲ್ಲಿ ಪಕ್ಷೇತರನಾಗಿ ಸಾಗರ ವಿದಾನಸಭಾ ಚುನಾವಣೆಗೆ ಕಾಗೋಡು ಸತ್ಯಾಗ್ರಹದ ರೂವಾರಿ ಗಣಪತಿಯಪರ ನೇತೃತ್ವದಲ್ಲಿ ಸ್ಪದಿ೯ಸಿದ್ದೆ, ಎದುರಾಳಿ ಆಗ ಮಂತ್ರಿ ಆಗಿದ್ದ ಕಾಗೋಡು ವಿರುದ್ಧ ಶೇಕಡಾ 10 ರಷ್ಟು ಮತ ನೀಡಿದ್ದರು ಸಾಗರದ ಮತದಾರರು.
ಇದೇ ಸಂದಭ೯ದಲ್ಲಿ ನಮ್ಮ ಮನೆಗೆ ರೈತ ಸಂಘದ ಮುಖ೦ಡರಾದ ಶ್ರೀ ನಂಜುಂಡಸ್ವಾಮಿ ಬಂದಿದ್ದರು. ನಮ್ಮ ತಂದೆಗೆ ಅವರೆಂದರೆ ಅಪಾರ ಗೌರವ, ಅವರು ರೈತ ಸಂಘದ ಜೈಲ್ ಬರೋ ಕಾಯ೯ಕ್ರಮದಲ್ಲಿ ಜೈಲಿಗೆ ಹೋಗಿದ್ದರು.

Comments