Blog number 969. ಶಿವಮೊಗ್ಗ - ಭದ್ರಾವತಿ ಜಂಟಿ ಮಹಾನಗರ ಪಾಲಿಕೆಯ ಮೊದಲ ಮೇಯರ್ ಕರಾಟೆ ಬ್ಲಾಕ್ ಬೆಲ್ಟ್ ಮಲ್ಲಿಕಾರ್ಜುನ್ ರಾವ್.
ಶಿವಮೊಗ್ಗ ಭದ್ರಾವತಿ ಜಂಟಿ ನಗರ ಕಾಪೊ೯ರೇಶನ್ ನ ಮೊದಲ ಮೇಯರ್ ಮಲ್ಲಿಕಾಜು೯ನರಾವರನ್ನ ಜನ ಮರೆತಿದ್ದಾರೆ.ಬಂಗಾರಪ್ಪರ ನೀಲಿ ಕಣ್ಣಿನ ಹುಡುಗ, ಕರಾಟೆ ಬ್ಲಾಕ್ ಬೆಲ್ಟ ಪ್ರವೀಣ, ವಿದ್ಯಾಥಿ೯ ಮುಖಂಡ, ಶಿವಮೊಗ್ಗ ಯುವ ಕಾ೦ಗ್ರೇಸ್ ಅಧ್ಯಕ್ಷರಾಗಿದ್ದ ಇವರನ್ನ ಶಿವಮೊಗ್ಗ ಲೋಕಸಭೆಗೆ ಬಂಗಾರಪ್ಪನವರು ಟಿಕೇಟ್ ಕೊಟ್ಟಿದ್ದರೆ ಇವತ್ತು ಮಲ್ಲಿಕಾಜು೯ನರ ಭವಿಷ್ಯವೇ ಬೇರೆ ಇತ್ತು, ಕೊನೆ ಕ್ಷಣದಲ್ಲಿ ಆಗ ಮುಖ್ಯ ಮಂತ್ರಿ ಆಗಿದ್ದ ಬಂಗಾರಪ್ಪ ತಮ್ಮ ಷಡಕ್ಕ ಕೆ.ಜಿ.ಶಿವಪ್ಪನವರಿಗೆ ಅವಕಾಶ ಕೊಟ್ಟರು ಆಗ ಬಿಜೆಪಿಯಿಂದ ಯಡೂರಪ್ಪ ಸೋತರು.
ಮಲ್ಲಿಕಾಜು೯ನರಾವ್ ತಂದೆ ಶಿವಮೊಗ್ಗದ ಮುನಸಿಪಾಲಿಟಿಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿದ್ದರು, ಶಿವಮೊಗ್ಗದ ಹೊಸ ಮನೆ ಬಡಾವಣೆಯಲ್ಲಿ ಸಣ್ಣ ಮನೆ ಇತ್ತು.
ಅತ್ಯುತ್ತಮ ವಾಗ್ಮಿ ಸಂಘಟಕರಾಗಿದ್ದ ಮಲ್ಲಿಕಾಜು೯ನರಾವ್ ಅಕಾಲಿಕವಾಗಿ ಆಗಲಿದರು, ಅವರ ಸಹೋದರ ಆತ್ಮಹತ್ಯಮಾಡಿ ಕೊಂಡರು, ತಾಯಿ ವೃದ್ದಾಪ್ಯದಲ್ಲಿ ಮಕ್ಕಳ ಕಳೆದುಕೊಂಡು ನೊಂದು ಅಗಲಿದರು.
ಒಂದು ರೀತಿಯಲ್ಲಿ ಮಲ್ಲಿಕಾಜು೯ನ ರಾವ್ ಜೀವನ ದುರಂತವಾಯಿತು.
ಇವತ್ತು ಶಿವಮೊಗ್ಗದಲ್ಲಿನ ರಾಜಕಾರಣದಲ್ಲಿರುವ ಅನೇಕ ನಾಯಕರು ಇವರ ಗರಡಿಯಲ್ಲಿಯೇ ಬೆಳೆದವರು.
ಇವತ್ತಿನ ವರಗೆ ಇವರನ್ನ ಎಲ್ಲರೂ ಮರೆತಿದ್ದರೂ ಒಬ್ಬ ರೋಜ ಷಣ್ಣಮುಗಂ ಮಲ್ಲಿಕಾಜು೯ನರಾವ್ ರನ್ನ ನೆನಪಿಸಿದ್ದಾರೆ,
Comments
Post a Comment