Skip to main content

BLOG ARTICLES 954. ಅತೀಂದ್ರೀಯ ಶಕ್ತಿ ಇದಿಯಾ? ನನ್ನ ಜೀವನದ ಹಲವು ಘಟನೆಗಳು ನನಗೆ ಅತೀಂದ್ರಿಯ ಶಕ್ತಿ ನಂಬುವಂತೆ ಮಾಡಿದೆ ಅಂತದರಲ್ಲಿ ಈ ಘಟನೆಯೂ ಕೂಡ ಒಂದು

#ಅತೀಂದ್ರಿಯ_ಶಕ್ತಿ_ಇದೀಯಾ?

#ಇಲ್ಲದಿದ್ದರೆ_ಈರೀತಿ_ಘಟನೆಗೆ_ಕಾರಣ ?

#ಇಂತಹ_ಅನೇಕ_ಘಟನೆ_ನನ್ನ_ಜೀವನದಲ್ಲಿ_ಅನುಭವ_ಆಗಿದೆ.

#ಹಾಗಂತ_ಆ_ವಿಸ್ಮಯ_ಶಕ್ತಿ_ನನ್ನ_ನಿಯಂತ್ರಣದಲ್ಲಿಲ್ಲ.

     ಮನುಷ್ಯನ ಮನಸ್ಸಿಗೆ ದೃಷ್ಟಿಗೆ ಎದುರಿನ ವಸ್ತು ಪುಡಿ ಮಾಡುವ ಶಕ್ತಿ ಇದಿಯಾ? ಕೆಲವರಿಗೆ ನಿಸರ್ಗದಲ್ಲಿ ಹಿಂದಿನ ಜನ್ಮದ ಕೆಲ ಸನ್ನಿವೇಶಗಳು ಪುನಃ ಕಾಣುವಂತದ್ದು ಇರುತ್ತದೆ ಅನ್ನುತ್ತಾರೆ, ಇದೆಲ್ಲ ಸತ್ಯವಾ? ಕಾಕತಾಳಿಯನಾ?
  ನನ್ನ ಅನೇಕ ಅನುಭವದಲ್ಲಿ ಇದೂ ಒಂದು ಘಟನೆ ಕೇಳಿ...
   1989 ರಲ್ಲಿ ಗಜಾನನ ಎಂಬ ನಮ್ಮ ಜಿಲ್ಲೆಯ ಪ್ರತಿಷ್ಠಿತ ಖಾಸಾಗಿ ಬಸ್ಸಿನಲ್ಲಿ ನಮ್ಮ ಊರು ಆನಂದಪುರಂನಿಂದ ಶಿವಮೊಗ್ಗಕ್ಕೆ ಆಗಿನ ಸಾಗರದ ಪತ್ರಕರ್ತ ತೀ.ನಾ. ಶ್ರೀನಿವಾಸ್ (ನಂತರ ಸಾಗರ ಪುರ ಸಭಾ ಅಧ್ಯಕ್ಷರಾಗಿದ್ದರು ಮತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದರು) ಡ್ರೈವರ್ ಹಿಂದಿನ ಸೀಟಿನಲ್ಲಿ ಕುಳಿತಿದ್ದೆವು.
  ಶಿವಮೊಗ್ಗ 30 km ಹಿಂದೆ ಇರುವಾಗ ನಾನು ಬಸ್ಸಿನ ಎಡ ಭಾಗದ ಗ್ಲಾಸ್ ದಿಟ್ಟಿಸುತ್ತಿದ್ದೆ....ಮನಸ್ಸಿನಲ್ಲಿ ಏನೋ ಒಂದು ರೀತಿ ಅನಿಸುತ್ತಿತ್ತು.
    ಆಗ ಗೆಳೆಯರು "ಏನು ಮೌನವಾಗಿ ಆಕಡೆ ನೋಡುತ್ತಿದ್ದಿಯಾ?" ಅಂದಾಗ ನಾನು ಒಂದು ರೀತಿ ಎಚ್ಚೆತ್ತು ನನಗೆ ಅನಿಸಿದ್ದು ಅವರು ಒತ್ತಾಯಿಸಿ ಕೇಳಿದಾಗ ಹೇಳಿದೆ ಆದೇನೆಂದರೆ "ಈ ಬಸ್ಸಿನ ಡೈವರ್ರ ಎಡ ಬಾಗದ ಗ್ಲಾಸ್ (ವಿಂಡ್ ಶೀಲ್ಡ್) ಒಡೆದು ಪುಡಿ ಪುಡಿ ಆದರೆ ಅಂತ ಅನ್ನಿಸುತ್ತಿತ್ತು" ಅಂದೆ.
     ತಕ್ಷಣ ಬಸ್ಸಿನ ಡ್ರೈವರ್ ತಿರುಗಿ ನನ್ನ ದುರುಗುಟ್ಟಿ ನೋಡಿದರು ಅವರಿಗೆ ಅದು ಕೋಪ ತರಿಸಿರಬೇಕು ಹಾಗೆ ಹೇಳಿದ ಕ್ಷಣ ಮಾತ್ರದಲ್ಲಿ ಬಸ್ಸಿನ ಎಡ ಭಾಗದ ವಿಂಡ್ ಶೀಲ್ಡ್ ಪುಡಿ ಪುಡಿಯಾಗಿ ಬಿದ್ದು ಹೋಯಿತು... ಬಸ್ಸಿನ ತುಂಬಾ ಗಾಜಿನ ಪುಡಿಗಳು!!.
   ಬಸ್ ಬದಿಗೆ ನಿಲ್ಲಿಸಿ ಡ್ರೈವರ್ ಮತ್ತು ನನ್ನ ಮಾತು ಕೇಳಿಸಿಕೊಂಡ ಸಹ ಪ್ರಯಾಣಿಕರು, ಜೊತೆಗಾರರು ಎಲ್ಲರೂ ನನ್ನನ್ನು ಭಯ ಬೀತರಾಗಿ ನೋಡಲು ಪ್ರಾರಂಬಿಸಿದರು.
    ಇಡೀ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆಲ್ಲ ಡ್ರೈವರಿಂದ ಈ ವಿಚಾರ ಎಲ್ಲರಿಗೂ ಗೊತ್ತಾಗಿ ಅವರೆಲ್ಲ ನನ್ನನ್ನು ಬೂತ ಎ೦ದು ಬಾವಿಸಿ ಭಯದಿಂದ ನೋಡುತ್ತಿದ್ದರು.
   ಇಂತಹ ಅನೇಕ ಘಟನೆಗಳು ಜೀವನದಲ್ಲಿ ಆಗಿದೆ ಇದು ಅತೀಂದ್ರಿಯ ಶಕ್ತಿಯ? ಕಾಕತಾಳಿಯವಾ? ಗೊತ್ತಿಲ್ಲ ಇಂತಹ ಘಟನೆಗಳನ್ನು ನೆನಪಾದಾಗೆಲ್ಲ ಬರೆಯಬೇಕು ಅನ್ನಿಸಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...