Blog number 991. ಮಲೆನಾಡ ಗಿಡ್ಡ ಎಂಬ ಪಶ್ಚಿಮ ಘಟ್ಟದ ದೇಸಿ ಆಕಳ ತಳಿ, ಇದರ ಹಾಲು ಮೊಸರು ತುಪ್ಪಕ್ಕೆ ಈಗ ಬಾರೀ ಬೇಡಿಕೆ ಮತ್ತು ದುಬಾರಿ ಏಕೆಂದರೆ ಅಳಿವಿನಂಚಿನಲ್ಲಿರುವ ಈ ತಳಿಯ ಸಂರಕ್ಷಣೆ ಆಗಬೇಕು
#ದೇಶಿತಳಿ_ಜಾನುವಾರು_ಸಂರಕ್ಷಣೆಗೆ_ಸರ್ಕಾರದ_ದೊಡ್ಡ_ದೊಡ್ಡ_ಘೋಷಣೆ
#ಆದರೆ_ಬ್ಯಾಂಕುಗಳು_ಸಾಲ_ನೀಡುವುದಿಲ್ಲ.
ಪಶ್ಚಿಮ ಘಟ್ಟದ ಶಿವಮೊಗ್ಗ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆಯ ಈ ವಿಶೇಷ ತಳಿಯ ಜಾನುವಾರಿಗೆ ಅವುಗಳ ಸಣ್ಣ ಆಕೃತಿಗಾಗಿ ಸ್ಥಳಿಯರು #ಮಲೆನಾಡು_ಗಿಡ್ಡ ಎಂದೇ ಕರೆಯುತ್ತಿದ್ದರಿಂದ ಇದೇ ಹೆಸರು ಈ ತಳಿಗೆ ಉಳಿಯಿತು ಮತ್ತು ನ್ಯಾಷನಲ್ ಬ್ಯೂರೋ ಆಫ್ ಎನಿಮಲ್ ಜೆನಿಟಿಕ್ ಸಿಸೋರ್ಸ್ಸ್ ಪಟ್ಟಿಯಲ್ಲಿ ಕೂಡ ಮಲೆನಾಡು ಗಿಡ್ಡ ತಳಿ ಎಂದೇ ನಮೂದಾಗಿದೆ.
ಮನುಷ್ಯ ದೇಹಕ್ಕೆ ಬೇಕಾದ ಲ್ಯಾಕ್ಟೋಪೆರಿಸ್ ಈ ತಳಿಯಲ್ಲಿ ಯಥೇಚ್ಚವಾಗಿರುವುದು, ಇದರ ಸಂಗೋಪನ ವೆಚ್ಚ ಅತ್ಯಂತ ಕಡಿಮೆ, ಹೆಚ್ಚು ವರ್ಷ ಬದುಕುವ ಹೆಚ್ಚು ಕರು ಹಾಕುವ ಈ ತಳಿಯ ಸಂರಕ್ಷಣೆಗೆ ಸಕಾ೯ರ ಸಂಘ ಸಂಸ್ಥೆಗಳು ಮತ್ತು ಮಠಾದೀಶರು ಹೆಚ್ಚು ಪ್ರಚಾರ ನೀಡುತ್ತಿದ್ದಾರೆ.
ಆದರೆ 2007ರಲ್ಲಿ ಜಾನುವಾರು ಗಣತಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 6 ಲಕ್ಷದಷ್ಟಿದ್ದ ಮಲೆನಾಡು ಗಿಡ್ದ,2012ರ ಜಾನುವಾರು ಸಮೀಕ್ಷೆಯಲ್ಲಿ 4.45 ಲಕ್ಷಕ್ಕೆ ಇಳಿದಿದೆ ಅಷ್ಟೇ ಅಲ್ಲ ಪ್ರತಿ ವರ್ಷ 50 ಸಾವಿರ ಕಡಿಮೆ ಆಗುತ್ತಿದೆ ಎಂಬ ಮಾಹಿತಿ ಇದೆ.
ಕರಾವಳಿಯ ಗೆಳೆಯರೋರ್ವರು ಮಲೆನಾಡು ಗಿಡ್ಡ ಜಾನುವಾರುಗಳಿಂದ ಗೋಉತ್ಪನ್ನಗಳನ್ನು ದೇಶದಾದ್ಯಂತ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ ಇದಕ್ಕಾಗಿ ಮಲೆನಾಡು ಗಿಡ್ಡ ಸಂಗೋಪನೆಗೆ ಆಸಕ್ತರು ಮುಂದೆ ಬರುತ್ತಿದ್ದಾರೆ, ಈ ತಳಿಯ ಮೂತ್ರ, ಸಗಣಿ ಕೂಡ ಸದ್ಬಳಕೆ ಮಾಡುತ್ತಾರೆ.
Comments
Post a Comment