Blog number 994. ಖ್ಯಾತ ಸಾಹಿತಿ - ವಿಮರ್ಶಕ ಉದಯ ಕುಮಾರ್ ಹಬ್ಬು ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಓದಿ ವಿಮರ್ಶೆ ಮಾಡಿದ್ದಾರೆ ಇವರು ಕೆಳದಿ ಇತಿಹಾಸ ಸಂಶೋದಕರೂ ಹೌದು
ಕಾರವಾರ ಜಿಲ್ಲೆಯವರು ನಿವೃತ್ತ ಪ್ರಾಂಶುಪಾಲರು ಕೆಳದಿ ಇತಿಹಾಸ ಸಮಗ್ರ ಅಧ್ಯಾಯನ ಮಾಡಿದ್ದಾರೆ ಅವರು ನನ್ನ ಕಾದಂಬರಿ ಓದಿ ಅತ್ಯುತ್ತಮ ವಿಮಶೆ೯ ಮಾಡಿದ್ದಾರೆ.
Aravinda Chokkadi ಯವರು ಕೆ.ಅರುಣಪ್ರಸಾದ್ ಬರೆದಿರುವ ಈ ಕಾದಂಬರಿ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ " ಬೆಸ್ತರರಾಣಿ ಚಂಪಕಾ" ಕುರಿತು ಒಳ್ಳೆಯ ಮಾತುಗಳನ್ನು ಬರೆದಿದ್ದರು. ನಾನು ಶ್ರೀ ಕೆ. ಅರುಣಪ್ರಸಾದರಿಗೆ ಪುಸ್ತಕ ಕಳಿಸುವಂತೆ ಮೆಸ್ಯೇಜ್ ಹಾಕಿದೆ. ತಡ ಮಾಡದೆ ಕಳಿಸಿದ್ದಾರೆ. ಅವರಿಗೆ ನಾನು ಆಭಾರಿ.
ನಾನು ಕೆಳದಿಗೆ ಮತ್ತು ಇಕ್ಕೇರಿಗೆ ಹೋದಾಗ ಅಲ್ಲಿ ಪ್ರಾಚ್ಯ ಸಂಗ್ರಹಾಲಯಕ್ಕೆ ಹೋಗಿ. ಅದರ ಹತ್ತಿರ ಮನೆ ಮಾಡಿದ್ದ ಮಾನ್ಯ ಗುಂಡಾ ಜೋಯಿಸ್ ರಲ್ಲಿ ಹೋಗಿ ಮಾತಾಡಿಸಿ ಕೆಲವು ಪುಸ್ತಕಗಳನ್ನು ಖರೀದಿ ಮಾಡಿದ್ದೆ ಅವುಗಳಲ್ಲಿ The Glorious Keladi(History and Culture) ಪುಸ್ತಕದ ಜೊತೆಗೆ ಕನ್ನಡದಲ್ಲಿ ಅನುವಾದಗೊಂಡ ಡೆಲ್ಲಾ ವಲ್ಲೆಯ ಪುಸ್ತಕಗಳನ್ನು ಖರೀದಿಸಿದ್ದೆ.
ಈ ಕಾದಂಬರಿಯು ಚಂಪಕಾ ಎಂಬ ಬೆಸ್ತರ ಯುವತಿ ಕೆಳದಿಯ ಅರಸನಾದ ವೆಂಕಟಪ್ಪ ನಾಯಕನ ಕಣ್ಣಿಗೆ ಅವಳ ರಂಗೋಲಿ ಕಲೆಯ ಮೂಲಕ ಬೀಳುತ್ತಾಳೆ ಅವಳನ್ನು ವಿದ್ಯುಕ್ತವಾಗಿ ವೆಂಕಟಪ್ಪ ನಾಯಕ ವಿವಾಹವಾಗುತ್ತಾನೆ. ಈ ವಿವಾಹ ವೆಂಕಟಪ್ಪ ನಾಯಕನ ಪಟ್ಟದ ರಾಣಿಗೆ ಸರಿ ಕಾಣದೆ ವಿವಾಹದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾಳೆ. ಮತ್ತು ಅವಳನ್ನು ಮತ್ತು ಅವಳ ತಂದೆಯನ್ನು ಕೊಲ್ಲಲು ಇಲ್ಲವೇ ಗಡಿಪಾರು ಮಾಡುವ ಹುನ್ನಾರವನ್ನು ಪಟ್ಟದ ರಾಣಿ ಭದ್ರಮ್ಮಾಜಿ ಮಾಡಿದರೂ ಅದು ಯಶಸ್ವಿಯಾಗುವುದಿಲ್ಲ ಯಾಕೆಂದರೆ ರಾಜ ವೆಂಕಟಪ್ಪ ನಾಯಕನು ಮಗನನ್ನೂ ಮತ್ತು ಯುವರಾಜನ್ನಾಗಿ ನೇಮಿಸಲ್ಪಟ್ಟ ತಮ್ಮನ ಮಗನ ಅಕಾಲಿಕ ಮರಣಗಳಿಂದ ಧೃತಿಗೆಟ್ಟು ರಾಜ್ಯಾಡಳಿತದಲ್ಲಿ ನಿರಾಸಕ್ತಿ ಹೊಂದುತ್ತಾನೆ. ಆಗ ಮಂತ್ರಿಗಳು ಮತ್ತು ರಾಜ ಪುರೋಹಿತರು ರಾಜನನ್ನು ಸಮತೋಲನ ಸ್ಥಿತಿಗೆ ತಂದು, ಅವನು ರಾಜ್ಯಭಾರವನ್ನು ಹೊರಲು ಜೀವನಾಸಕ್ತಿಯನ್ನು ರಾಜನಲ್ಲಿ ಮೂಡಿಸಲು ಚಂಪಕಾಳನ್ನು ಒಂದು ದಾಳವನ್ನಾಗಿ ಉಪಯೋಗಿಸಿಕೊಂಡು ಅವಖ ವಿವಾಹವನ್ನು ರಾಜನೊಂದಿಗೆ ಮಾಡಿ ಮತ್ತೆ ರಾಜನು ರಾಜ್ಯಾಡಳಿತದಲ್ಲಿ ಆಸಕ್ತಿವಹಿಸುವಂತೆ ಮಾಡುತ್ತಾರೆ ನೀಲಮ್ಮ ಎಂಬ ಅಗಸ ಹೆಣ್ಣಿನ ಸಹಾಯದಿಂದ ಚಂಪಾಳನ್ನು ಅರಮನೆಗೆ ತರಲಾಗುತ್ತದೆ. ವಿವಾಹದ ಕುರಿತು ಚಂಪಾಳಿಗೆ ಗೊತ್ತೆ ಇರಲಿಲ್ಲ. ಮತ್ತು ಚಂಪಾಳ ತಂದೆ ಮಗಳನ್ನು ರಾಜನಿಗೆ ವಿವಾಹ ಮಾಡಿಕೊಡಲು ಇಷ್ಟವಿಲ್ಲದಿದ್ದರೂ ರಾಜ್ಯಾಡಳಿಕ್ಕಾಗಿ ಮಗಳನ್ನು ರಾಜನಿಗೆ ಧಾರೆ ಎರೆಯುತ್ತಾನೆ ಈ ವಿವಾಹದಿಂದ ನೊಂದ ಪಟ್ಟದ ರಾಣಿ ಅಸಹಕಾರ ಮತ್ತು ಅದರಿಂದ ಅವಳ ಅನಾರೋಗ್ಯ ರಾಜನಿಗೆ ಸಮಸ್ಯೆಯಾಗಿತ್ತದೆ. ರಾಣಿಯ ವಾದವೇನೆಂದರೆ ಮೀನು ಮಾಂಸ ಹೆಂಡ ಸೇವಿಸುವ. ಹೀನ ಜಾತಿಯ ಹೆಣ್ಣನ್ನು ವಿವಾಹ ವಾಗಿ ಕುಲವನ್ನು ಮಲಿನಗೊಳಿಸಿದೆ, ದೇಹವನ್ನು ಮಲಿನಗೊಳಿಸಿದೆ ಎಂದು ರಾಜನನ್ನು ಜರಿಯುತ್ತಾಳೆ. ಉಪವಾಸ ಮಾಡುತ್ತಾಳೆ ಊರಲ್ಲಿ ಚಂಪಕಳ ಬಗ್ಗೆ ಇಲ್ಲಸಲ್ಲದ ಮಿಥ್ತಾರೋಪಗಳು ಜನರ ಬಾಯಲ್ಲಿ ಹರಿದಾಡುತ್ತವೆ. ರಾಜನ ಕುರಿತಾಗಿ ಕೆಟ್ಟ ಮಾತುಗೞು ಕೇಳಿಬರುತ್ತವೆ. ಇದರಿಂದ ತುಂಬಾ ಮನನೊಂದ ಚಂಪಕಾ ವಜ್ರದ ಪುಡಿಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.ಕೆಳದಿ ಅರಸರು ವೀರಶೈವರು. ಆದರೆ ಚಂಪಾ ಮೀನು ಮಾಂಸ ನಿಜಕ್ಕೂ ಸೇವಿಸುತ್ತಿರಲಿಲ್ಲ. ಆದರೂ ಅವಳ ಮೇಲೆ ಆರೋಪ ಬರುತ್ತದೆ. ತನ್ನದಲ್ಲದ ತಪ್ಪಿಗಾಗಿ ಚಂಪಕಾ ರಾಜನು ತಲೆ ಎತ್ತಿ ನಡೆಯುವಂತೆ ಆಗಬೇಕೆಂದು ಆತ್ಮಾರ್ಪಣೆ ಮಾಡುತ್ತಾಳೆ. ಅವಳ ನೆನಪಿಗಾಗಿ ರಾಜನು ಒಂದು ಕೆರೆಯನ್ನು ಕಟ್ಡಿಸುತ್ತಾನೆ.ಮುನ್ನುಡಿಯಲ್ಲಿ ಹೀಗೆ ಬರೆಯಲಾಗಿದೆ:" ಆವತ್ತಿನ ಸಾಮಾಜಿಕ ವ್ಯವಸ್ಥೆಯಲ್ಲಿ ಕೀಳುಜಾತಿಯೆಂದು ಗುರುತಿಸಲ್ಪಡುತ್ತಿದ್ದ ಕುಟುಂಬದಿಂದ ಬಂದವಳಾದ ಚಂಪಕಾ, ವೇಶ್ಯೆಯ ಪಟ್ಟ ಕಟ್ಟಿಕೊಂಡು ಆವತ್ತಿಗೂ, ಈವತ್ತಿಗೂ ಅವಮಾನಕ್ಕೀಡಾಗಿದ್ದಾಳೆ.ಇತಿಹಾಸದ ಪುಟಗಳಲ್ಲಿ ಶ್ರಮಿಕ ವರ್ಗ ಮತ್ತು ಕೆಳಜಾತಿಯ ಜನ ಹೀಗೆ ಅಕಾರಣವಾಗಿ ಅವಮಾನಕ್ಕೀಡಾಗುವುದನ್ನು ಕಂಡು ಕೆ. ಅರುಣಪ್ರಸಾದರು ಇತಿಹಾಸದ ಆಧಾರದ ಮೇಲೆ ಸುಂದರ ಕಲ್ಪನೆಯ ಬಳ್ಳಿಯನ್ನು ಬೆಳೆಸಿದ್ದಾರೆ. ಇದು ಕಾದಂಬರಿಕಾರನ ಸಾಮಾಜಿಕ ಕಳಕಳಿಗೆ ಸಾಕ್ಷಿ. ಈ ಕಾದಂಬರಿಯಲ್ಲಿ ರಾಮ ಕ್ಷತ್ರಿಯರು, ಬೋವಿ ಜನಾಂಗ, ಗಂಜಿ ಎಂಬ ಅಡ್ಡಹೆಸರನ್ನು ಹೊಂದಿರುವ ಸಮಾಜದ ಮತ್ತು ನಾಥ ಪರಂಪರೆಯ ಜೋಗಿಗಳ ಕುರಿತಾಗಿಯೂ ಮಾಹಿತಿಗಳನ್ನು ಕಾದಂಬರಿಕಾರರು ಕೊಡುತ್ತಾರೆ ಅವಳನ್ನು ಅರಮನೆಗೆ ಕರೆತಂದು ರಾಜ ನೊಡನೆ ವಿವಾಹವಾಗಲು ಸಹಕರಿಸಿದ ನೀಲಮ್ಮ ಎಂಬ ಅಗಸಳ ಬಾಯಿಂದ ಕೆಳದಿಯ ರಾಜರು ಮತ್ತು ವಂಶಜರ ಕುರಿತಾಗಿ ಹೇಳಿಸಿ ಇತಿಹಾಸವನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಓದಲು ಆಕರ್ಷಕ ಶೈಲಿ. ಇದು ಇತಿಹಾಸ ಆಧಾರಿತ ಒಂದು ಕಾಲ್ಪನಿಕ ಕಾದಂಬರಿ. ಇತಿಹಾಸದಲ್ಲಿ ಚಂಪಕಳ ಹೆಸರಿಲ್ಲ. ಆದರೆ ಪೀಯಟ್ರೊ ಡೆಲ್ಲಾ ವಲ್ಲಿಯು ತನ್ನ ಪ್ರವಾಸ ಕಥನದಲ್ಲಿ ಹೀಗೆ ಬರೆಯುತ್ತಾನೆ:." They say that twelve or thirteen since, when she was about five and thirty years old, it came to her ears that Venkatappa Naicka, her husband, having becoming fond of a Moorish woman,kept her secretly in a Fort not far from the court, where he frequently solaced himself with her for two or three days together; whereupon Badra Amma,first complaining him not only of the wrong which he did thereby to her,but also more of that which he did to himself, defiling himself with a strange woman of impure race and of a Nation which drank wine and ate flesh and all sorts of uncleanliness, told him that if he had a mind for other women of their own clean racewithot contaminating himself with this Moor, and she would have suffered it with patience; but, since he had first defiled himself with her she for the future would have no more to do with him; and thereupon she took an oath that she would be as his daughter and he should be to her as her father; after which she shew'd no further resentment, but lived with him as formerly keeping him company in the palace, tending upon him in his sickness and doing other things with the same as at first,helping and advising him in matters of government, wherein she had always great authority with him; and in short, excepting the matrimonial act, perfectly fulfilling all other offices of a good wife, Venjatapoa Naiecka, who had much affection for her notwithstanding the wrong he did her with his Moor, endeavoured by all means possible to divert her from her purpose and to persuade her to live a matrimonial life still with him ,offering many times to compound for that oath by the alms of 20,000 pagodas, but all in vain, and she preserved constant in this resolution till death which, being undoubtedly an act of much constancy and virtue was the cause that Venkatappa Naiecka loved her always so much the more."
ಈ ಪಿಯತ್ರೊ ಡೆಲ್ಲಾ ವಲ್ಲೆಯ ಪ್ರವಾಸ ಕಥನದಲ್ಲಿ ವೆಂಕಟಪ್ಪ ನಾಯಕ ಮೆಚ್ಚಿ ಮದುವೆಯಾದ ಹೆಣ್ಣಿನ ಸ್ಥಿತಿಗತಿಯ ಬಗ್ಗೆ ಏನೂ ಹೇಳಿಲ್ಲ. ನಿರ್ಲಕ್ಷಿತ ಪಾತ್ರಕ್ಕೆ ಕೆ ಅರುಣಪ್ರಸಾದರು ನ್ಯಾಯವನ್ನು ಒದಗಿಸಿದ್ದಾರೆ ಚಂಪಕ ಎಂಬ ಬೆಸ್ತರ ಹುಡುಗಿಯ ಕಥೆ ಬಹುಶಃ ಲಾವಣಿ ಹಾಡುಗಳಲ್ಲಿ ಇರಬಹುದೇನೋ. ಇತಿಹಾಸದ ಪುಟಗಳಲ್ಲಿ ಚಂಪಕಳ ಹೆಸರಿನ ಬದಲು ಮೂರಿಶ್ ಹೆಣ್ಣು ಎಂದು ಮಾತ್ರ ದಾಖಲಾಗಿದೆ. ಬೆಸ್ತರ. ಹೆಣ್ಣು ಎನ್ನುವ ಸಂಪ್ರದಾಯ ಜಾನಪದೀಯ ಇರಬೇಕು ಎಂದೆನಿಸುತ್ತದೆ. ಕೆ. ಅರುಣಪ್ರಸಾದರಿಗೆ ಇಂತಹ ಒಳ್ಳೆಯ ಐತುಹಾಸಿಕ ಕಾದಂಬರಿಯನ್ನು ಓದುವ ಅವಕಾಶ ಕೊಟ್ಟದ್ದಕ್ಕಾಗಿ ಧನ್ಯವಾದ.
Comments
Post a Comment