Blog number 968. ಕೆ.ಎನ್.ಗಣೇಶಯ್ಯರ ಅಭಿಮಾನಿ ನಾನು ಅವರು ಬರೆದ ಗೇರುಸೊಪ್ಪೆಯ ಕಾಳು ಮೆಣಸಿನ ರಾಣಿ ಚಿನ್ನ ಬೈರಾದೇವಿಯ ಬಚ್ಚಿಟ್ಟ ನಿದಿ ಶೋದದ ವಸ್ತುವಿನ ಮೇಲೆ ಬರೆದ ಕಾದಂಬರಿಯಲ್ಲಿ ಕೆಳದಿ ಸಂಶೋದಕರಾದ ಗುಂಡಾಜೋಯಿಸ್ ಇಟಲಿ ಮಾಪಿಯಾಕ್ಕೆ ಮಾಹಿತಿ ನೀಡಿದ ದೇಶದ್ರೋಹಿ ಎಂದು ಬರೆದದ್ದು ಉದ್ದೇಶ ಪೂರ್ವಕವಾ? ಅವರ ಕುಟುಂಬದಲ್ಲಿ ಯಾರಾದರೂ ......!?
ಪುಸ್ತಕದಲ್ಲಿ ಖಳನಾಯಕನ ಹೆಸರು ಕೆಳದಿ ಗುಂಡಾಜೋಯಿಸ್ ಅಂತ ಬರೆದದ್ದು ಸರಿ ಅಲ್ಲ.
ಗಣೇಶಯ್ಯರ ಕಥೆಗಳೆಂದರೆ ಥ್ರಿಲ್ಲಿ೦ಗ್, ಸಸ್ಪೆನ್ಸ್,ಹಿಡಿದ ಪುಸ್ತಕ ಮುಗಿಯುವವರೆಗೆ ಕೈ ಬಿಡಲಾಗುವುದಿಲ್ಲ ನಾನು ಅವರ ಅಭಿಮಾನಿಯೇ.
ಇವರು 2017ರಲ್ಲಿ ಪ್ರಕಟಿಸಿರುವ #ಬಳ್ಳಿಕಾಳ_ಬೆಳ್ಳಿ ಕಾದಂಬರಿ ನಮ್ಮ ಜಿಲ್ಲೆಯ ಮತ್ತು ಉ.ಕ.ಜಿಲ್ಲೆಯನ್ನ ಕೇಂದ್ರವಾಗಿ ಆಡಳಿತ ನಡೆಸಿದ ಕಾಳು ಮೆಣಸಿನ ರಾಣಿ ಚೆನ್ನಾ ಬೈರಾದೇವಿಯ ನಿದಿ ಶೋದನೆಗೆ ಬರುವ ಇಟಲಿಯ ಮಾಫಿಯಾದ ಪ್ರಯತ್ನ ಭಾರತ ಸಕಾ೯ರ ವಿಫಲಗೊಳಿಸುವ ಕಥೆ.
ಇದರಲ್ಲಿ ಇಟಲಿ ಮಾಫಿಯಾಗೆ ಸಹಾಯ ಮಾಡುವ ಖಳನಾಯಕನ ಹೆಸರು #ಗುಂಡಾ_ಜೋಯಿಸ್ ಮತ್ತು "ಈತ ಕೆಳದಿಯ ಬಗ್ಗೆ ಕೆಲವು ಉತ್ಪ್ರೇಕ್ಷೆಯಿ೦ದ ತುಂಬಿದ ಲೇಖನಗಳನ್ನು ಬರೆದಿದ್ದನಾದ್ದರಿಂದ ಅವನನ್ನ ಮಾಫಿಯಾದವರು ತಮ್ಮ ವ್ಯಕ್ತಿ ಮಾಕೊ೯ಸ್ ಗೆ ಪರಿಚಯಿಸುತ್ತಾರೆ" (ಪುಟ ಸಂಖ್ಯೆ 239) ಎಂಬ ವಿಶ್ಲೇಷಣೆ ಇದರಲ್ಲಿದೆ ಅಂದರೆ ಈ ಪಾತ್ರ ಕೆಳದಿ ಗುಂಡಾ ಜೋಯಿಸರೇ ಎಂದು ಒಪ್ಪುವಂತ ವಿಶ್ಲೇಷಣೆ ಇದಾಗಿದೆ ?!
ಇದು ಸಾಗರ ತಾಲ್ಲೂಕಿನ ವಯೋವೃದ್ದ ಸಂಶೋದಕರಾದ ಕೆಳದಿ ಗುಂಡಾಜೋಯಿಸರನ್ನೆ ಇವರು ವಿಲನ್ ಮಾಡಿದ್ದಾರಾ? ಎಂಬ ಅನುಮಾನ ಈ ಪುಸ್ತಕ ಓದಿದವರಿಗೆ ಅನ್ನಿಸದೇ ಇರಲಾರದು.
ಇದು ಕೆಳದಿ ಗುಂಡಾ ಜೋಯಿಸರ ಅಭಿಮಾನಿಗಳಾದ ನಮಗೇ ನೋವುಂಟು ಮಾಡುತ್ತಿದೆ.
ಈ ಬಗ್ಗೆ ಲೇಖಕರ ಸ್ಪಷ್ಟನೆ ಮತ್ತು ಕೆಳದಿ ಗುಂಡಾ ಜೋಯಿಸರ ಕುಟುಂಬದ ಅಭಿಪ್ರಾಯ ತಿಳಿದು ಬಂದಿಲ್ಲ.
ಈ ಮದ್ಯದಲ್ಲಿ ಸತ್ಯ ಶೋದ ಮಿತ್ರ ಮಂಡಳಿ ಎಂಬ ಜಾಗೃತ ಹವ್ಯಕ ಸಮಾಜದ ಗ್ರೂಪಿನಲ್ಲಿ ಹರಿದಾಡುತ್ತಿರುವ ಸುದ್ದಿ ಒಂದಿದೆ ಅದರಲ್ಲಿ ಇತಿಹಾಸ ತಿರುಚುವ ನಕಲಿ ತಾಮ್ರ ಪತ್ರ ಮಾಡಿ ಸಿಕ್ಕಿಬಿದ್ದ ವಿವರ ಹಾಕಿದ್ದಾರೆ ಮತ್ತು ಇದು ಕೆಳದಿ ಸಂಶೋದಕರ ಕುಟುಂಬದ ಕಡೆ ಬೆಟ್ಟು ಮಾಡಿದ್ದು ಕೆಲ ಸಂಶಯಕ್ಕೆ ಕಾರಣವಾಗಿದೆ ಗುಂಡಾಜೋಯಿಸರ ಕುಟುಂಬದ ಯಾರೋ ಒಬ್ಬರು ಇಂತಹ ಹೇರಾ ಪೇರಿಯಲ್ಲಿ ತೊಡಗಿರುವುದರಿಂದಲೇ ಗಣೇಶಯ್ಯನವರು ಗುಂಡಾಜೋಯಿಸರ ಹೆಸರು ಬಳಸಿದರು ಎಂಬ ವಾದಕ್ಕೆ ಪುಷ್ಟಿ ಮತ್ತು ಸಾಕ್ಷಿಯಾಗಿ ನಕಲಿ ತಾಮ್ರಪತ್ರದ ಉಲ್ಲೇಖವಿದೆ ಆ ಬಗ್ಗೆ ಕೆಳಗಿನ ಲಿಂಕ್ ನಲ್ಲಿ ನೋಡಬಹುದು, ಇದಾವುದಕ್ಕೂ ಇವತ್ತಿನವರೆಗೆ ಆರೋಪಿತರು ಹೇಳಿಕೆ ನೀಡದೆ ಮೌನವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ರಾಮಚಂದ್ರಪುರ ಮಠ V/S ಶೃಂಗೇರಿ ಮಠ ತಾಮ್ರಪತ್ರ
https://arunprasadhombuja.blogspot.com/2018/03/vs.html
Comments
Post a Comment