Blog number 952. ತಾಜ್ ಮಹಲ್ ಪ್ರೇಮ ಸ್ಮಾರಕ್ಕಿಂತ ಪುರಾತನವಾದ ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾಳ ದುರ೦ತ ಪ್ರೇಮದ ಸ್ಮಾರಕ ಚಂಪಕ ಸರಸ್ಸು ಪುರಾತತ್ವ ಇಲಾಖೆಗೆ ಸೇರಿಸದ ಸರ್ಕಾರದ ನಿರಾಸಕ್ತಿ.
#ಈ_ಸ್ಮಾರಕ_ಸಂರಕ್ಷಣೆಗೆ_ಕೆಳದಿ_ಗುಂಡಾ_ಜೋಯಿಸರು_ಬರೆದ_ಅಂಚೆ_ಕಾಡು೯ಗಳು .
#ತಾಜ್_ಮಹಲಿಗಿಂತ_ಪುರಾತನ_ಪ್ರೇಮ_ಸೌದ
#ಇಲ್ಲಿಗೆ_ಮೂಲಭೂತ_ಸೌಲಭ್ಯ_ಸರ್ಕಾರ_ಒದಗಿಸಬೇಕು
#ಇಡೀ_ಸ್ಮಾರಕ_ಅರಣ್ಯ_ಭೂಮಿಯಲ್ಲಿದೆ.
#ಪುರಾತತ್ವ_ಇಲಾಖೆಗೆ_ಇನ್ನೂ_ಸೇರಿಸದ_ಅಚಾತುಯ೯
#ಇದನ್ನು_ಗಮನಿಸಿ_ಸರ್ಕಾರಕ್ಕೆ_ಒತ್ತಾಯಿಸಿದ_ಶಿವಮೊಗ್ಗದ_ಪ್ರತಿಷ್ಟಿತ_ಕರ್ನಾಟಕ_ಸಂಘ.
ಪ್ರಸಿದ್ದ ಅಮರ ಪ್ರೇಮ ಸೌಧ ತಾಜ್ ಮಹಲ್ ನಿರ್ಮಾಣವಾಗಿದ್ದು ಕ್ರಿ.ಶ.1653 ರಲ್ಲಿ ಇದಕ್ಕಿಂತ 28 ವರ್ಷದ ಮೊದಲೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂನ ಶಿಕಾರಿಪುರ ರಸ್ತೆಯಲ್ಲಿ ಹಾಲಿ ಸಂತೋಷ್ ಕೋಲ್ಡ್ ಸ್ಟೋರೇಜ್ ಹಿಂಬಾಗದಲ್ಲಿರುವ #ಚ೦ಪಕ_ಸರಸ್ಸು ನಿಮಾ೯ಣವಾಗಿದ್ದು 1625ರಲ್ಲಿ ಅಂದರೆ ಇದು ತಾಜ್ ಮಹಲ್ ಗಿಂತ ಪುರಾತನ ಪ್ರೇಮ ಸೌದವಾಗಿದೆ.
ಕೆಳದಿ ರಾಜ ವೆಂಕಟಪ್ಪ ನಾಯಕರು ತಮ್ಮ ಆನಂದಪುರಂ ಕೋಟೆಯ ಅರಮನೆಯಿಂದ ಕವಲೆದುರ್ಗದ ಕೋಟೆ ಮತ್ತು ಬಿದನೂರು ಕೋಟೆಗೆ ಮುಂಜಾನೆ ತಮ್ಮ ಸವಾರಿ ಹೋಗುವಾಗ ಆನಂದಪುರಂನ ಗುತ್ಯಮ್ಮ ದೇವಿಗೆ ನಮಿಸಿ ಎಡಕ್ಕೆ ತಿರುಗಿದರೆ ಅಲ್ಲಿ ಚಂದನ ಚೆಂದದ ರಂಗೋಲಿ ಮೂಲಕ ಸುಂದರಿ ಚಂಪಕ ಮತ್ತು ರಾಜರ ಪ್ರೇಮಾಂಕುರವಾಗಿ ರಾಜರು ಚಂಪಕಳನ್ನು ವಿವಾಹವಾಗಿ ಆನಂದಪುರಂ ಕೋಟೆಯ ಆರಮನೆಯಲ್ಲಿ ಇರಿಸಿದ್ದರಿಂದ ಪಟ್ಟದ ರಾಣಿ ಭದ್ರಮ್ಮಾಜಿ ಜಾತಿ ಕಾರಣದಿಂದ ಈ ವಿವಾಹ ವಿರೋದಿಸಿ ಅನ್ನ ಆಹಾರ ತ್ಯಜಿಸಿ ಮರಣ ಹೊಂದುತ್ತಾರೆ. ಇದರಿಂದ ಬೆಸ್ತರ ರಾಣಿ ಚಂಪಕಾಳಿಗೆ ಬರುವ ಅಪವಾದಗಳಿಂದ ನೊಂದ ಚಂಪಕ ಹಾಲಿನಲ್ಲಿ ವಜ್ರದ ಪುಡಿ ಬೆರೆಸಿ ಸೇವಿಸಿ ಜೀವ ತ್ಯಾಗ ಮಾಡುತ್ತಾಳೆ.
ರಾಣಿ ಚಂಪಕಾಳ ಸ್ಮರಣಾರ್ಥ ಈ ಸ್ಮಾರಕ ನಿರ್ಮಿಸಿ ಈ ಪ್ರದೇಶಕ್ಕೆ ಆನಂದಪುರ ಎಂದು ನಾಮಕರಣ ಮಾಡುತ್ತಾರೆ ಸುಮಾರು ಹತ್ತನೇ ಶತಮಾನದಿಂದ ಈ ಪ್ರದೇಶದಲ್ಲಿದ್ದ ಉತ್ತರ ಪ್ರದೇಶದ ಗೋರಕ್ ಪುರದ ಗೋರಕ್ಷನಾಥರ ಅಖಾಡದ ಮಹಂತರ ಮಠಕ್ಕೆ ಈ ಸ್ಮಾರಕದ ಉಸ್ತುವಾರಿ ನೀಡಿ ಅವರಿಗೆ ಸುಂಕದ ವಿನಾಯಿತಿ ಕೂಡ ನೀಡುತ್ತಾರೆ (ಈ ಪ್ರದೇಶದಲ್ಲಿ ಸಾವಿರ ಗೋದಾನದ ಶಿಲಾ ಶಾಸನವೂ ಸಿಕ್ಕಿದೆ).
ಇದಕ್ಕೆ ಪೂರಕವಾದ ಅನೇಕ ದಾಖಲೆಗಳಿದೆ ಆದರೆ ಕೆಳದಿ ರಾಜರ ಅಂತರ್ಜಾತಿ ವಿವಾಹ ಕಾರಣದಿಂದ ದೀರ್ಘ ಕಾಲ ಅಂದರೆ 43 ವರ್ಷ ರಾಜ್ಯವಾಳಿದ ದೂರ ದೂರದವರೆಗೆ ತನ್ನ ಶೌರ್ಯದಿಂದ ರಾಜ್ಯ ವಿಸ್ತಾರ ಮಾಡಿದ, ತನ್ನ ಅಜ್ಜ ಸದಾಶಿವ ನಾಯಕರ ಸ್ಮರಣಾರ್ಥ ಈಗಿನ ಸಾಗರ ಪಟ್ಟಣ ಕಟ್ಟಿದ ರಾಜ ವೆಂಕಟಪ್ಪ ನಾಯಕರ ಹೆಸರನ್ನೆ ಮರೆ ಮಾಚಿದ ರಾಜ ಪರಿವಾರ,ಅದರ ಹೊಗಳು ಭಟರು ಮತ್ತು ರಾಜರ ಕೃಪ ಕಟಾಕ್ಷದ ಇತಿಹಾಸ ಬರಹಗಾರರಿಂದ ನಿಜ ಇತಿಹಾಸ ಮಸುಕಾಗಿಸಿದ್ದಾರೆ.
ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾಳ ದುರಂತ ಪ್ರೇಮ ಕಥೆಯ ಈ 400 ವರ್ಷದ ಸ್ಮಾರಕ ಇನ್ನೂ ಪುರಾತತ್ವ ಇಲಾಖೆಗೆ ಸೇರದೆ ಅರಣ್ಯ ಇಲಾಖೆಯ ಭೂಮಿಯಾಗೇ ಉಳಿದಿದ್ದು ನಮ್ಮ ಸರ್ಕಾರಗಳ ಐತಿಹಾಸಿಕ ಸ್ಮಾರಕಗಳ ಬಗ್ಗೆ ಇರುವ ನಿರಾಸಕ್ತಿ ತೋರಿಸುತ್ತದೆ.
ಈ ಬಗ್ಗೆ ಇದೇ ಮೊದಲ ಭಾರಿಗೆ ಶಿವಮೊಗ್ಗದ ಪ್ರತಿಷ್ಟಿತ ಕರ್ನಾಟಕ ಸಂಘ ಈ ಸ್ಮಾರಕ ಪುರಾತತ್ವ ಇಲಾಖೆಗೆ ಸೇರಿಸಲು ಒತ್ತಾಯಿಸಿದೆ.
ಇತಿಹಾಸದ ಬಗ್ಗೆ ಕಾಳಜಿ ಇರುವ ಬೆಂಗಳೂರಿನ ಸಂಸ್ಥೆಯೊಂದು ಕೇಂದ್ರ ಪುರಾತತ್ವ ಇಲಾಖೆಗೆ ಕೇಂದ್ರದ ಪ್ರಭಾವಿ ಮಂತ್ರಿಗಳಿಂದ ಪ್ರಯತ್ನಿಸುತ್ತಿರುವ ಸುದ್ದಿ ಇದೆ, ಇನ್ನೊಂದು ಸಂಸ್ಥೆ ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ಈ ಬಗ್ಗೆ ರಿಟ್ ಹಾಕುವ ಸುದ್ದಿಯೂ ಇದೆ.
2025ರಲ್ಲಿ 400 ನೇ ವರ್ಷಾಚರಣೆಯ ಒಳಗೆ ಈ ಸ್ಮಾರಕ ಅರಣ್ಯ ಇಲಾಖೆಯ ಭೂಮಿಯಿಂದ ಪುರಾತತ್ವ ಇಲಾಖೆಗೆ ಸೇರುವ ಸಾಧ್ಯತೆ ಇದೆ ಇದರಿಂದ ಈ ಪುರಾತನ ಸ್ಮಾರಕ ಮುಂದಿನ ತಲೆಮಾರಿಗೆ ಉಳಿಯಲು ಸಹಾಯಕ.
Comments
Post a Comment