Blog number 963.ಚಂಪಾಕಲಿ ಎಂಬ ಸಂಪ್ರದಾಯಿಕ ಬೆಂಗಾಲಿ ಸಿಹಿ ತಿಂಡಿ ಕೆಲ ಜಿಲ್ಲೆಗೆ ಸರಬರಾಜು ಮಾಡುವ ಶಿವಮೊಗ್ಗದ ಅಭಿಷೇಕ್ ಸ್ಪೀಟ್ ಸ್ಟಾಲ್ 36ನೇ ವಾರ್ಷಿಕೋತ್ಸವ ಆಚರಿಸುತ್ತಿದೆ.
#ಈಗಿನ_ಬಂಗಾಲ_ದೇಶದ_ತಂಗಲಿ_ಜಿಲ್ಲೆಯ_ಪೊರಬರಿ_ಇದರ_ಮೂಲ
#ಶಿವಮೊಗ್ಗದ_ಅಭಿಷೇಕ್_ಸ್ವೀಟ್_ಸ್ಟಾಲನ_ಸಿಗ್ನೇಚರ್_ಸ್ವೀಟ್_ಆಗಿದೆ.
#ಅಭಿಷೇಕ್_ಸ್ವೀಟ್_ಸ್ಟಾಲಗೆ_36_ವರ್ಷದ_ಹರೆಯ.
#ಶುಚಿ_ರುಚಿಯ_ಜೊತೆ_ಅತ್ಯುತ್ತಮ_ಪ್ಯಾಕಿಂಗ್_ಇವರದ್ದು.
#ನನ್ನ_ಮೆಚ್ಚಿನ_ಸಿಹಿ_ಚಂಪಾಕಲಿ.
ಮೊನ್ನೆ ನಮ್ಮ ಆಯುರ್ವೇದ ಶಿರೋದಾರ ಕ್ಲಿನಿಕ್ ಪ್ರಾರಂಬೋತ್ಸವಕ್ಕೆ ಉಪಹಾರದ ಜೊತೆ ಸಿಹಿ ತಿಂಡಿಯಾಗಿ ಶಿವಮೊಗ್ಗದ ಅಭಿಷೇಕ್ ಸ್ಪೀಟ್ ಸ್ಟಾಲ್ ನಿಂದ ಚಂಪಾಕಲಿ ತರಿಸಿದ್ದೆ ಮತ್ತು ಬಂದು ಶುಭ ಹಾರೈಸಿದವರಿಗೆ ಚಂಪಾಕಲಿಯ ಸಿಹಿ ಪೊಟ್ಟಣವೂ ನೀಡಿದೆ.
ನಮ್ಮ ಜಿಲ್ಲೆಯ ಪ್ರಸಿದ್ದ ಕವಿಗಳಾದ ಶ್ರೀಕಂಠಕುಡಿಗೆ ಮತ್ತು ಶಿವಮೊಗ್ಗದ ಪ್ರತಿಷ್ಠಿತ ಕರ್ನಾಟಕ ಸಂಘದ ಅಧ್ಯಕ್ಷರಾದ ಎ೦.ಎನ್.ಸುಂದರ್ ರಾಜರು ಇನ್ನೊಂದು ಚಂಪಾಕಲಿ ಕೇಳಿ ಸೇವಿಸಿದರೆಂದರೆ ಅಭಿಷೇಕ್ ಸ್ಪೀಟ್ ಸ್ಟಾಲ್ ಚಂಪಾಕಲಿಯ ರುಚಿ ಅರ್ಥವಾದೀತು.
ಚಂಪಾಕಲಿ ಸಂಪ್ರದಾಯಿಕ ಬೆಂಗಾಲಿ ಸಿಹಿ ಇದು ರಶೊಗುಲ್ಲಾ (ರಸಗುಲ್ಲಾ) ದ೦ತೆ ತಯಾರಿಸುವ ವಿಧಾನವಾದರೂ ಇದರ ಮಧ್ಯದಲ್ಲಿ ಮಾವಾ ಅಥವ ಕೋವಾ ಸ್ಟಪಿಂಗ್ ಮಾಡುತ್ತಾರೆ ಆದ್ದರಿಂದ ಇದರ ರುಚಿಯೇ ವಿಶಿಷ್ಟ ಮತ್ತು ಇದು ಲೈಟ್ ಪಿಂಕ್ ಅಥವ ಲೈಟ್ ಯೆಲ್ಲೋ ಅಥವ ಬಿಳಿ ಬಣ್ಣದಲ್ಲಿ ಜೊತೆಗೆ ಮೇಲ್ಭಾಗದಲ್ಲಿ ದಟ್ಟ ಕೆಂಪು ಬಣ್ಣದ ಚೆರ್ರಿ ಹಣ್ಣು ಕೂಡ ಈ ಸಿಹಿ ತಿಂಡಿ ಆಕಷ೯ವಾಗಿಸುತ್ತದೆ.
ಚಂಪಾಕಲಿ ಮೂಲ ಈಗಿನ ಬಾಂಗ್ಲಾದೇಶದ ತಂಗಲಿ ಜಿಲ್ಲೆಯ ಪೊರಬರಿಯ ಮತಿಲಾಲ್ ಗೋರೆ ತನ್ನ ಅಜ್ಜ ಉತ್ತರ ಪ್ರದೇಶದ ಮೂಲದ ಬಲಿಯಾ ಜಿಲ್ಲೆಯ ಮೂಲದ ರಾಜ ರಾಮ ಗೋರೆಯ ಸಿಹಿ ತಿಂಡಿ ತಯಾರಿಯ ಅನುಭವ ಬಳಸಿ 19 ನೇ ಶತಮಾನದ ಮಧ್ಯದಲ್ಲಿ ತಯಾರಿಸಿದ ಮಾಹಿತಿ ಇದೆ.
ನಾವೆಲ್ಲ ಪ್ರೌಡ ಶಾಲೆ ವ್ಯಾಸಂಗಕ್ಕೆ 1988 ರಲ್ಲಿ ಆನಂದಪುರಂನಿಂದ ಸಾಗರಕ್ಕೆ ರೈಲಿನಲ್ಲಿ ಹೋಗುವಾಗ ಸಾಗರದ ಮಾರಿಗುಡಿ ಎದುರು ಕಾಮತ್ ರಿಪ್ರೆಶ್ಮೆ೦ಟ್ ಎಂಬ ಬೇಕರಿ ಪ್ರಸಿದ್ಧಿ ಆಗಿತ್ತು ಅಲ್ಲಿ ಈ ಚಂಪಾಕಲಿ ತುಂಬಾ ಪ್ರಸಿದ್ದಿ ಆಗಿತ್ತು ನಂತರ ಗೊತ್ತಾಗಿದ್ದು ಚಂಪಾಕಲಿ ಶಿವಮೊಗ್ಗ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಗೆ, ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಗೆ ಶಿವಮೊಗ್ಗದ ಅಭಿಶೇಕ್ ಸ್ವೀಟ್ ಸ್ಟಾಲ್ ನಿಂದಲೇ ಹೋಗುವುದೆಂದು.
ಶಿವಮೊಗ್ಗದ ಅಭಿಶೇಕ್ ಸ್ವೀಟ್ ಸ್ಟಾಲ್ ಶಿವಮೊಗ್ಗ ಬಸ್ ಸ್ಟಾಂಡ್ ಸಮಿಪದಲ್ಲಿ ಪ್ರಾರಂಭವಾಗಿ 36ನೇ ವಾರ್ಷಿಕೋತ್ಸವ ಆಚರಿಸುತ್ತಿದೆ, ಉಡುಪಿ ಜಿಲ್ಲೆಯ ಕೊಟ್ಯಾನ್ ಸಹೋದರರ ಸತತ ಶ್ರಮವಿದೆ ಈ ಉಧ್ಯಮದಲ್ಲಿ ಅವರ ಪರಿಶ್ರಮವೂ ಅಗಾದ ತಮ್ಮ ಅಣ್ಣನ ಮಾರ್ಗದರ್ಶನದಲ್ಲಿ ಗಣೇಶ್ ಕೋಟ್ಯಾನ್ ಈ ಉದ್ಯಮವನ್ನು ಉತ್ತುಂಗಕ್ಕೆ ಒಯ್ದಿದ್ದಾರೆ.
36ನೇ ವಾಷಿ೯ಕೋತ್ಸವ ಆಚರಿಸುತ್ತಿರುವ ಶಿವಮೊಗ್ಗದ ಅಭಿಶೇಕ್ ಸ್ಪೀಟ್ ಸ್ಟಾಲ್ ಗೆ ಶುಭಾಷಯಗಳು.
Comments
Post a Comment