Blog number 970. ಆನಂದಪುರಂ ಇತಿಹಾಸ 81. ಮಹಾತ್ಮಾ ಗಾಂಧೀಜಿ 16 ಆಗಸ್ಟ್ 1927 ರಲ್ಲಿ ಆನಂದಪುರಂ ಮತ್ತು ಸಾಗರಕ್ಕೆ ಬೇಟಿ ನೀಡುತ್ತಾರೆ, ಗಾಂದೀಜಿಯವರ ಕಟ್ಟಾ ಅಭಿಮಾನಿ ಗಾಂಧೀ ಬಸಪ್ಪರ ಮತ್ತು ಆನಂದಪುರಂನ ಬದರಿನಾರಾಯಣರ ನಿಕಟ ಸಂಬಂದಗಳು, ಗಾಂಧೀ ಬಸಪ್ಪರ ಕುಟುಂಬ ಮುಂದುವರಿಸಿಕೊಂಡು ಬಂದ ಗಾಂದೀ ಜಯಂತಿ ಆಚರಣೆಗೆ ಈಗ 75 ನೇ ಅಮೃತ ಮಹೋತ್ಸವ.
#ಮಹಾತ್ಮಾ_ಗಾಂದೀಜಿ_ಆನಂದಪುರಂಗೆ_ಬಂದಿದ್ದು
#ಶಿವಮೊಗ್ಗದ_ನ್ಯಾಷನಲ್_ಲಾಡ್ಜನಲ್ಲಿ_ಒಂದು_ವಾರ_ತಂಗಿದ್ದ_ಗಾಂದೀಜಿ_ದಂಪತಿ
#ಗಾಂಧೀಜಿ_ತತ್ವ_ಆದರ್ಶಕ್ಕೆ_ಪ್ರಭಾವಿತರಾದ_ಶಿವಮೊಗ್ಗದ_ಗಾಂಧೀ_ಬಸಪ್ಪನವರು.
#ಆನಂದಪುರಂನ_ನಿಕಟ_ಸಂಪರ್ಕ_ಹೊಂದಿದ್ದ_ಗಾಂಧೀ_ಬಸಪ್ಪನವರು.
#ಸ್ವಾತಂತ್ರ್ಯ_ನಂತರ_ನಿರಂತರವಾಗಿ_ಅವರು_ಆಚರಿಸಿದ_ಗಾಂಧೀ_ಜಯಂತಿ.
#ತಮ್ಮ_ಸಾವಿನ_ನಂತರ_ತಿಥಿ_ಕಮ೯_ಮಾಡದಿದ್ದರೂ_ಗಾಂಧೀ_ಜಯಂತಿ_ತಪ್ಪಿಸಬಾರದೆ೦ಬ_ವಚನ_ಪಾಲಿಸುತ್ತಿರುವ_ಅವರ_ಕುಟುಂಬ.
#ಈ_ಬಾರಿಯ_ಗಾಂಧೀ_ಬಸಪ್ಪರ_ಕುಟುಂಬ_ಆಚರಿಸುತ್ತಿರುವುದು_75ನೇ_ಗಾಂಧೀ_ಜಯಂತಿ
#ದೇಶದಲ್ಲೇ_ಇದು_ಅಪರೂಪ_ಮತ್ತು_ಅಪೂರ್ವ
ಇವತ್ತು ಶಿವಮೊಗ್ಗದ ಪ್ರತಿಷ್ಟಿತ ಗಾಂಧೀ ಬಸಪ್ಪರ ಕುಟುಂಬದವರು ಆಚರಿಸುವ 75ನೇ ಗಾಂಧೀ ಜಯಂತಿಯ (ಮಹಾತ್ಮಾ ಗಾಂಧೀಜಿಯವರ 154 ನೇ ಜನ್ಮ ದಿನೋತ್ಸವ) ಆಹ್ವಾನ ಪತ್ರಿಕೆ ಕೊಡಲು ದಿವಂಗತ ಗಾಂಧೀ ಬಸಪ್ಪರ ಕಿರಿಯ ಪುತ್ರ ಗಾಂಧೀ ಸತೀಶ್ ಮತ್ತು ಅವರ ಅಳಿಯ ಡಾಕ್ಟರ್ ಶ್ರೀನಿವಾಸ್ ಬಂದಿದ್ದರು.
ಗಾಂದೀ ಬಸಪ್ಪನವರು (1913-1999) ಮಹಾತ್ಮಾ ಗಾಂಧೀಜಿಯವರ ತತ್ವ ಸಿದ್ದಾಂತದಿಂದ ಪ್ರೇರೇಪಿತರಾದ ಸ್ವಾತಂತ್ರ್ಯ ಹೋರಾಟಗಾರರು, ಸ್ವಾತಂತ್ರ್ಯ ಬಂದ ಸಂತೋಷದ ಮಧ್ಯದಲ್ಲೇ ಗಾಂಧೀ ಹತ್ಯೆಯ ದುಃಖದಲ್ಲಿ ಹೆಚ್ಚು ನೊಂದವರು ಶಿವಮೊಗ್ಗದ ಗಾಂಧೀ ಬಸಪ್ಪನವರು.
ಅವರ ಜೀವನ ಸಂಪೂರ್ಣ ಗಾಂಧೀಜಿಯವರಿಗೆ ಅರ್ಪಿಸಿ ಕೊಂಡವರು 1948 ರಿಂದ ಅವರು ಆಚರಿಸಿಕೊಂಡು ಬಂದ ಗಾಂಧೀ ಜಯಂತಿಗೆ ಈಗ ಅಮೃತ ವರ್ಷಾಚಾರಣೆಯ 75 ನೇ ವರ್ಷ.
1999 ರಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸುವ ಮುನ್ನ ತಮ್ಮ ಇಡೀ ಕುಟುಂಬದವರಿಂದ ಇವರು ತೆಗೆದುಕೊಂಡ ಶಪಥ ಏನೆಂದರೆ ಅವರ ತಿಥಿ - ವರ್ಷಾ೦ತ ಬೇಕಾದರೆ ಆಚರಿಸದೆ ಬಿಡಿ ಆದರೆ ಅವರು ಗಾಂಧೀಜಿ ಹತ್ಯೆ ನಂತರದಿಂದ ತಪ್ಪದೇ ಆಚರಿಸಿಕೊಂಡು ಬಂದ #ಗಾಂದೀ_ಜಯಂತಿ ಮಾತ್ರ ನಿರಂತರ ನಡೆಸಬೇಕು ಎಂಬುದು.
ಶಾಸಕರು - ಸಂಸದರೂ - ವಿದ್ಯಾ ಮಂತ್ರಿಗಳಾಗಿದ್ದ ಆನಂದಪುರಂನ ಎ.ಆರ್ ಬದರಿನಾರಾಯಣ ಅಯ್ಯಂಗಾರರ ಒಡನಾಡಿಗಳಾಗಿದ್ದ ಗಾಂಧೀ ಬಸಪ್ಪನವರು ಆನಂದಪುರಂನ ನಿಕಟ ಸಂಪರ್ಕ ಹೊಂದಿದ್ದರು ತಮ್ಮ ಮೀನುಗಾರ ಬೆಸ್ತರ ಸಂಘಟನೆಗೆ ಆರ್ಥಿಕ ಸ್ವಾವಲಂಬನೆಗಾಗಿ ಆನಂದಪುರಂ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸುತ್ತಿದ್ದರು, ಮೀನುಗಾರ 36 ಉಪ ಪಂಗಡಗಳು ವಿವಿದ ಹೆಸರಿಂದ ಕರೆಯಬಾರದು ಮೀನುಗಾರರೆಲ್ಲ ಗಂಗಾ ಮಾತೆಯ ಮಕ್ಕಳು ಆದ್ದರಿಂದ ಗಂಗಾಮತಸ್ಥರೆಂದೆ ಜಾತಿ ಉಲ್ಲೇಖಿಸಬೇಕೆಂಬ ಅವರು 1970 ರಲ್ಲಿ ಅಭಿಯಾನ ಪ್ರಾರಂಭಿಸಿದ್ದರು.
ಗಾಂಧೀ ಬಸಪ್ಪ ಮತ್ತು ಶ್ರೀಮತಿ ಹಳದಮ್ಮ ದಂಪತಿಗಳಿಗೆ ಏಳು ಪುತ್ರರು ಮತ್ತು ನಾಲ್ಕು ಪುತ್ರಿಯರು
ಮೊದಲ ಪುತ್ರ ಡಾ.ಚನ್ನಪ್ಪ ಸರ್ಕಾರಿ ವೈದ್ಯರಾಗಿದ್ದರು, ದ್ವಿತಿಯ ಪುತ್ರ ಎಸ್.ಬಿ. ವಾಸುದೇವ ಆನಂದಪುರಂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು, ತೃತಿಯ ಪುತ್ರ ಕೃಷ್ಣಮೂರ್ತಿ ಗುತ್ತಿಗೆದಾರರಾಗಿ, ನಾಲ್ಕನೆ ಪುತ್ರ ಅಶೋಕ್ ಕುಮಾರ್ ಕಾಲೇಜು ಸೂಪರಿಂಡೆಂಟ್ ಆಗಿ, ಐದನೆ ಪುತ್ರ ರಮೇಶ್ ಗುತ್ತಿಗೆದಾರರಾಗಿ, ಆರನೆ ಪುತ್ರ ಸುರೇಶ್ ಜೆ ಎನ್ ಸಿ ಸಿ ಯಲ್ಲಿ, ಏಳನೆ ಪುತ್ರ ಸತೀಶ್ ಲ್ಯಾಂಡ್ ಡೆವಲಪರ್ ಆಗಿದ್ದಾರೆ.
ಪುತ್ರಿಯರಲ್ಲಿ ಸೀತಮ್ಮ ಬೆಂಗಳೂರಿನಲ್ಲಿ ಪಿ.ಡಬ್ಲುಡಿ ಸೂಪರಿಂಡೆಂಟ್ ಪತಿಯೊಂದಿಗೆ ನೆಲೆಸಿದ್ದಾರೆ, ಇನ್ನೊಬ್ಬ ಪುತ್ರಿ ಸೌಬಾಗ್ಯ ಮೂಡಾದಲ್ಲಿ ಸೂಪರಿಡೆಂಟ್ ಆಗಿರುವ ಪತಿಯೊಂದಿಗೆ ನೆಲೆಸಿದ್ದಾರೆ, ಮೂರನೆ ಪುತ್ರಿ ನಿರ್ಮಲ ಡೆಪ್ಯುಟಿ ಡೈರೆಕ್ಟರ್ ಸಿರಿಕಲ್ಚರ್ ಪತಿಯೊಂದಿಗೆ ಮತ್ತು ಕಿರಿಯ ಪುತ್ರಿ ಸುಮಿತ್ರಾ ಸರ್ಕಾರಿ ವ್ಯೆದ್ಯರಾದ ಡಾ.ಶ್ರೀನಿವಾಸ್ ರ ಪತ್ನಿ, ಡಾ.ಶ್ರೀನಿವಾಸ್ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು.
ಶಿವಮೊಗ್ಗದ ಇವರ ಮನೆಗೆ ವಂದೇ ಮಾತರಂ ನಿಲಯ ಎಂಬ ಹೆಸರು ಇದೆ ಗಾಂದೀ ಬಸಪ್ಪರ ಇಡೀ ಕುಟುಂಬದವರ ಹೆಸರ ಮುಂದೆ ಗಾಂಧೀ ಅಂತಲೇ ಇದೆ ಈ ಮೂಲಕ ಶಿವಮೊಗ್ಗದ ಗಾಂಧೀ ಬಸಪ್ಪ ಕುಟು೦ಬ ತಮ್ಮ ತಂದೆಯ ಅಂತಿಮ ಆಸೆ ನಿರಂತರವಾಗಿ ನೆರವೇರಿಸಿಕೊಂಡು ಬರುತ್ತಿದ್ದಾರೆ ಪ್ರತಿ ವಷ೯ ಗಾಂಧೀ ಜಯಂತಿ ಇಡೀ ಕುಟುಂಬದ ಸದಸ್ಯರು ಸೇರಿ ಗಾಂಧೀ ಅಭಿಮಾನಿಗಳನ್ನು ಸೇರಿಸಿ ದೊಡ್ಡ ಹಬ್ಬದಂತೆ ಗಾಂದೀ ಜಯಂತಿ ಆಚರಿಸುತ್ತಾರೆ
ಬಹುಶಃ ಇದು ಇಡೀ ದೇಶದಲ್ಲೇ ಅಪರೂಪ ಅನ್ನಿಸುತ್ತದೆ.
ಶಿವಮೊಗ್ಗದ ಖ್ಯಾತ ವಕೀಲರಾದ ವೆಂಕಟ ಸುಬ್ಬ ಶಾಸ್ತ್ರೀ 1924ರ ಬೆಳಗಾವಿ ಅಧಿವೇಷನದಲ್ಲಿ ಗಾಂಧೀ ಅವರ ಪ್ರಭಾವದಿಂದ ಗಾಂಧೀಜಿಯವರನ್ನು ಶಿವಮೊಗ್ಗಕ್ಕೆ ಕರೆ ತರುವ ಸತತ ಪ್ರಯತ್ನ 1927 ರಲ್ಲಿ ಈಡೇರುತ್ತದೆ.
ಶಿವಮೊಗ್ಗದ ನ್ಯಾಷನಲ್ ಲಾಡ್ಜ್ (ಶಿವಮೊಗ್ಗದ ಕೇಂದ್ರ ಅ0ಚೆ ಇಲಾಖೆ ಎದರು ನಂತರ ಅದು ಬೃಂದಾವನ ಹೋಟೆಲ್ ಆಗಿತ್ತು) ನಲ್ಲಿ ಒಂದು ವಾರ ಗಾಂದೀಜಿ ಮತ್ತು ಕಸ್ತೂರ ಬಾ ದಂಪತಿಗಳು ತಂಗುತ್ತಾರೆ, ಈ ಅವಧಿಯಲ್ಲಿ ಆನಂದಪುರಂ, ಸಾಗರ (16- ಆಗಸ್ಟ್ - 1927), ನಗರ - ತೀರ್ಥಹಳ್ಳಿ - ಭದ್ರಾವತಿ ಪ್ರವಾಸ ಮಾಡುತ್ತಾರೆ.
14 ಆಗಸ್ಟ್ 1927 ರಲ್ಲಿ ಶಿವಮೊಗ್ಗದ ಉದ್ಯಾನವನದಲ್ಲಿ ಸ್ವಾತಂತ್ರ್ಯದ ಮಹತ್ವ ತಿಳಿಸುವ ಗಾಂಧೀಜಿಯವರ ಸಾರ್ವಜನಿಕ ಸಭೆ ನಡೆಯುತ್ತದೆ ಇದರ ಸ್ಮರಣೆಗಾಗಿ ಈ ಉದ್ಯಾನವನಕ್ಕೆ #ಗಾಂಧೀ_ಪಾರ್ಕ್ ಎ೦ಬ ಹೆಸರು ಇಡಲಾಗುತ್ತದೆ.
ಗಾಂಧೀಜಿ ಶಿವಮೊಗ್ಗಕ್ಕೆ ಬಂದ ನೆನಪಿಗಾಗಿ ಪ್ರಮುಖ ವ್ಯಾಪಾರಿ ಕೇಂದ್ರಕ್ಕೆ #ಗಾಂಧೀ_ಬಜಾರ್ ಎಂದು ನಾಮಕರಣ ಮಾಡಲಾಗಿದೆ.
ಗಾಂಧೀಜಿ ತಂಗಿದ್ದ ನೆನಪಿಗಾಗಿ ನ್ಯಾಷನಲ್ ಲಾಡ್ಜ್ ಮಾಲಿಕರು ಲಾಡ್ಜ್ ಎದರು ಎರೆಡು ತೆಂಗಿನ ಸಸಿ ಗಾಂದೀಜಿ ಮತ್ತು ಕಸ್ತೂರ ಬಾ ರಿಂದ ನೆಡೆಸಿದ್ದರು.
ಗಾಂಧೀಜಿ ಶಿವಮೊಗ್ಗದಲ್ಲಿ ಗಾಂಧೀ ಪಾರ್ಕಿನಲ್ಲಿ 14 - ಆಗಸ್ಟ್ - 1927 ರ ಸಭೆ ನಡೆಸಿದ ಇಪ್ಪತ್ತು ವರ್ಷಕ್ಕೆ ಸರಿಯಾಗಿ ಅಂದರೆ 14- ಆಗಸ್ಟ್ - 1947 ರ ರಾತ್ರಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು.
ಶಿವಮೊಗ್ಗದ 100 ಅಡಿ ರಸ್ತೆಗೆ #ಗಾಂಧೀ_ಬಸಪ್ಪ_ರಸ್ತೆ, ತುಂಗಾ ಚಾನಲ್ ವೃತ್ತಕ್ಕೆ #ಗಾಂಧೀ_ಬಸಪ್ಪ_ವೃತ್ತ ಎಂದು ಸರ್ಕಾರ ನಾಮಕರಣ ಮಾಡಿದೆ ಇದಕ್ಕೆ ಶಾಸಕರು ಮಂತ್ರಿಗಳೂ ಆಗಿದ್ದ ಈಶ್ವರಪ್ಪನವರು ಬಹು ಮುಖ್ಯ ಕಾರಣರಾಗಿದ್ದಾರೆ.
ಗಾಂಧೀ ಜಯಂತಿ ಈ ಭಾರಿ ಗಾಂಧೀ ಬಸಪ್ಪರ ಕುಟುಂಬದಲ್ಲಿ ಆಚರಿಸುತ್ತಿರುವುದು ಸತತವಾಗಿ 1948 ರಿಂದ ನಿರಂತರವಾಗಿ ಇವತ್ತಿನವರೆಗೆ 75 ನೇ ವಷಾ೯ಚಾರಣೆ ಆಗಿ ದಿನಾಂಕ 2- ಅಕ್ಟೋಬರ್ -2022 ರಂದು ಭಾನುವಾರ ಬೆಳಿಗ್ಗೆ ಶಿವಮೊಗ್ಗದ ಕುವೆಂಪು ರಂಗಮಂದಿರದ ಸಸ್ಯಶೋಧನಾ ಮಂಟಪದಲ್ಲಿ ಬೆಳಿಗ್ಗೆ 10ಕ್ಕೆ ಗಾಂಧೀ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನ (ರಿ) ಹಮ್ಮಿಕೊಂಡಿದೆ
Comments
Post a Comment