#ಇವರು_ಸುಡುಗಾಡು_ಸಿದ್ದರೆಂಬ_ಪಂಗಡಕ್ಕೆ_ಸೇರಿದವರು
#ಇವರ_ಮಾತೃ_ಭಾಷೆ_ತೆಲಗು.
ಆನಂದಪುರಂನ ಜೇಡಿಸರ ಮತ್ತು ಸಿದ್ದೇಶ್ವರ ಕಾಲೋನಿಯಲ್ಲಿ ನೆಲೆಸಿದ್ದಾರೆ, ಒಂದು ಕಾಲದಲ್ಲಿ ಅಲೆಮಾರಿ ಜೀವನ ನಡೆಸುತ್ತಾ ಇದ್ದವರು, ಜೋತಿಷ್ಯ ಹೇಳುವುದು ಇವರ ಉದ್ಯೋಗವಾಗಿತ್ತು, ಕುರುಕುರು ಮಾಮಾ ಅಂತನೇ ಈ ಜನಾಂಗದ ಪುರುಷರು ಪ್ರಸಿದ್ದರು.
ಗಿಳಿ ಶಾಸ್ತ್ರ ಕೂಡ ಇವರು ಹೇಳುವ ಜೋತಿಷ್ಯದ ಒಂದು ಭಾಗ, ಇವರು ಆ ಕಾಲದಲ್ಲಿ ತಮ್ಮ ಅಲೆಮಾರಿ ಜೀವನದ ಸಂಚಾರಕ್ಕಾಗಿ ಕುದುರೆ ಸಾಕುತ್ತಿದ್ದರು.
ಈಗ ವಂಶಪಾರಂಪರ್ಯದ ಈ ವೃತ್ತಿ ಬದಲಾಗುತ್ತಿದೆ, ಒಂದೇ ಕಡೆ ನೆಲೆಸುತ್ತಿದ್ದಾರೆ.
ನಿನ್ನೆ ಗಿಳಿ ಶಾಸ್ತ್ರದ ಕೊನೆಯ ತಂತಾದ ಈ ಮಹಿಳೆ ಬಂದಿದ್ದವಳು, ನನ್ನ ಭವಿಷ್ಯವನ್ನ ತಿಳಿಸುವಂತೆ ಪಂಜರದಲ್ಲಿನ ಗಿಳಿ ರಾಮನಿಗೆ ಬಾಗಿಲು ತೆಗೆದು ಹೇಳಿದಾಗ ಗಿಳಿ ರಾಮ ಒಂದು ಕವರನ್ನ ಕಚ್ಚಿ ಬದಿಗೆ ಇಟ್ಟು ಪಂಜರ ಸೇರಿದ ಮೇಲೆ ಗಿಳಿ ತೆಗೆದ ಪೊಟ್ಟಣ ಬಿಚ್ಚಿ ಅದರಲ್ಲಿನ ಚಿತ್ರ ತೋರಿಸುತ್ತಾ ತನ್ನ ವಾಕ್ಚಾತುಯ೯ದಿಂದ ಭವಿಷ್ಯ ಹೇಳಿ ಒತ್ತಾಯದಿಂದ 100 ರೂಪಾಯಿ ಸಂಭಾವನೆ ಪಡೆದು ಹೋದಳು.
ಈ ರೀತಿ ವಷ೯ದಲ್ಲಿ ನಾಕಾರು ಬಾರಿ ಬಂದು ಭವಿಷ್ಯ ಹೇಳುವ ಈಕೆಯ ಕುಟು೦ಬದಲ್ಲಿ ಬೇರಾರು ಈ ವೃತ್ತಿ ಮಾಡುವವರಿಲ್ಲ ಈಗ ಈ ಗಿಳಿ ಭವಿಷ್ಯ ಕೂಡ ಕೇಳುವವರಿಲ್ಲ ಎಲ್ಲಾ ಮಾಡನ್೯ರೈಸ್ ಆಗಿದೆ ಹಾಗಾಗಿ ಈಕೆ ಗಿಳಿ ಶಾಸ್ತ್ರದ ಕೊನೆಯ ತಂತು.
Comments
Post a Comment