#ಅಪರೂಪದಲ್ಲಿ_ಅಪರೂಪದ_ಆ_ಘಟನೆ #25_ವರ್ಷದ_ಹಿಂದಿನ_ಬೂರೇ_ಹಬ್ಬದ_ನೆನಪು #ಅವತ್ತು_ತರಾತರಿಯಲ್ಲಿ_ಎಣ್ಣೆ_ಸ್ನಾನ_ಮಾಡಿ_ನಾನು_ನಮ್ಮಣ್ಣ #ಶಿವಮೊಗ್ಗದ_ನ್ಯಾಯಾಧೀಶರ_ಮನೆ_ತಲುಪಿದ್ದೆವು #ಡಿಸಿಸಿ_ಬ್ಯಾಂಕ್_ಅಧ್ಯಕ್ಷರಾದ_ಮಂಜುನಾಥ್_ಗೌಡರ_ತಮ್ಮ #ವಕೀಲ_ನಾಗೇಶನ್_ನಮ್ಮನ್ನು_ಕಾಯುತ್ತಿದ್ದರು. #Deepavali #burehabba #abyanjana #jogfalls #arrack #venders #bail #judge. ಇದು 25 ವರ್ಷದ ಹಿಂದಿನ ಘಟನೆ ಅವತ್ತು ರಾತ್ರಿ ಬೂರೇ ನೀರು ತುಂಬಿದ ದಿನ ಆಗ ಪೋನ್ ಲ್ಯಾಂಡ್ ಲೈನ್ ಮಾತ್ರ ಇತ್ತು.. ಅವತ್ತು ರಾತ್ರಿ ಸುಮಾರು ಹತ್ತರ ಸಮಯ ಅನೇಕ ಬಾರಿ ಫೋನ್ ರಿಂಗ್ ಆಗುವುದು ನಂತರ ಡಿಸ್ ಕನೆಕ್ಟ್ ಆಗುವುದು ಆಗುತ್ತಿತ್ತು, ಮಾತು ಕೇಳುತ್ತಿರಲಿಲ್ಲ. ನಂತರ ಸಂಪರ್ಕ ಸುಗಮವಾಗಿ ತಿಳಿದ ವಿಚಾರ ಸಾಗರದ ಸರಾಯಿ ಗುತ್ತಿಗೆದಾರರು ಜೋಗ್ ಫಾಲ್ಸ್ ಊರಿನ #ರಾಮಿ ಅಲಿಯಾಸ್ ರಾಮಚಂದ್ರ ಇವರನ್ನ ಬಂದಿಸಿದ್ದಾರೆ ಅಂತ ಸಾಗರದ ಆಗಿನ ಕೆಇಬಿ ವಿದ್ಯುತ್ ಇಲಾಖೆ ಯೂನಿಯನ್ ಪದಾಧಿಕಾರಿ #ಸೂರ್ಯಕುಮಾರ್ ಪೋನ್ ಮಾಡಿದ್ದರು. ಈ ವಿಚಾರ ರಾಮಿ ಅವರ ಸಹೋದರ ಜೋಗ್ ಫಾಲ್ಸ್ #ಸೀನಿ ಅಲಿಯಾಸ್ ಶ್ರೀನಿವಾಸ ಸೂರ್ಯ ಪ್ರಕಾಶ್ ಗೆ ತಿಳಿಸಿ ಅರುಣ್ ಪ್ರಸಾದ್ ಗೆ ಹೇಳಿ ಸಹಾಯ ಮಾಡಲು ಅಂತ ಫೋನ್ ಮಾಡಿದ್ದರಂತೆ. ಈ ಸಹೋದರರು ಜೋಗ್ ಫಾಲ್ಸ್ ನಲ್ಲಿ ಪ್ರಸಿದ್ದರೂ ಬಲಾಡ್ಯರು ಆಗಿದ್ದವ...