Blog number 1785. ಸಾಗರ ತಾಲೂಕಿನ ಕೃಷಿ ಇಲಾಖೆ ಹಗರಣ ಸ್ವತಃ ಪರಿಶೀಲಿಸಲು ಆಗಿನ ಕೃಷಿ ಮಂತ್ರಿ ಬೈರೇಗೌಡರೇ ಆನಂದಪುರಂಗೆ ಬಂದು ಸ್ಥಳದಲ್ಲೇ ಏಳು ಕೃಷಿ ಅಧಿಕಾರಿಗಳಿಗೆ ಜೈಲಿಗೆ ಕಳಿಸಿದ್ದರು.
#ಸಾಗರದ_ಕೃಷಿ_ಇಲಾಖೆ_ಭ್ರಷ್ಟಾಚಾರ_ಬಯಲಿಗೆಳೆದ_ನನ್ನ_ಹೋರಾಟ #ಇನ್ನೊಮ್ಮೆ_ಈ_ಬಗ್ಗೆ_ಬರೆಯಲು_ಒತ್ತಾಯಿಸಿದ_ಗೆಳೆಯರಿಗಾಗಿ_ಈ_ಪೋಸ್ಟ್ #ಭ್ರಷ್ಟಾಚಾರ_ವಿರೋದಿಸಿದರೆ_ಪರಿಣಾಮ_ಏನಾದೀತೆಂಬ_ಪಾಠ_ಕಲಿಸಿದ_ರಾಜಕಾರಣಿಗಳು . #ರಾಜಕೀಯದಲ್ಲಿ_ಉಳಿಯ_ಬೇಕಾದರೆ_ಹೋರಾಟಾ_ಹಾರಾಟ_ಮಾಡಲೇ_ಬಾರದು. #ಆಗಿನ_ಕೃಷಿ_ಸಚಿವ_ಬೈರೇಗೌಡರು_ಸ್ವತಃ_ಆನಂದಪುರಂಗೆ_ಬಂದು_ತನಿಖೆ_ಮಾಡಿದ್ದರು. #ಸ್ಥಳದಲ್ಲೇ_ಏಳು_ಜನ_ಕೃಷಿ_ಅಧಿಕಾರಿಗಳಿಗೆ_ಜೈಲಿಗೆ_ಕಳಿಸಿದ್ದ_ಈ_ಪ್ರಕರಣ #ಇಡೀ_ರಾಜ್ಯದ_ಪ್ರತ್ಯೇಕ_ಭೂಸಾರ_ಸಂರಕ್ಷಣೆ_ಇಲಾಖೆಯನ್ನೆ_ರದ್ದು_ಮಾಡಲು_ಕಾರಣವಾಗಿತ್ತು. #ಈ_ಕಾರಣದಿಂದಲೇ_ನನ್ನ_ರಾಜಕಾರಣ_ಮುಕ್ತಾಯವೂ_ಆಯಿತು. ಸಕಾ೯ರದ ಕೃಷಿ ಇಲಾಖೆಯ ಸಾವಿರಾರು ಕೋಟಿ ಹಣದ ಲೂಟಿ ಬಯಲಾದ ನನ್ನ ಹೋರಾಟ. ಹೊಸದಾಗಿ ಜಿಲ್ಲಾ ಪಂಚಾಯತ ಸದಸ್ಯನಾದ ಹುಮ್ಮಸ್ಸು, ಗ್ರಾಮ ಪಂಚಾಯತನಲ್ಲಿ ಉಪಾಧ್ಯಕ್ಷನಾಗಿದ್ದಾಗ ರಾಜ್ಯದ ಮೊದಲ ಬಗರ ಹುಕುಂ ಹಕ್ಕು ಪತ್ರ ವಿತರಣೆಗೆ ಕಾರಣ ಕತ೯ನಾಗಿ ಕಾಗೋಡು ತಿಮ್ಮಪ್ಪರಿಂದ ಸದಾ ಹೊಗಳಿಕೆಗಳಿಂದ ನನ್ನ ಕಾಲು ನೆಲದ ಮೇಲೆ ಇರಲಿಲ್ಲ. ಇದೇ ಸಂದಭ೯ದಲ್ಲಿ ಕಾಗೋಡು ಜೊತೆ ಹಳ್ಳಿ ಬೇಟೆಗಳಲ್ಲಿ ಎಲ್ಲಿ ಹೋದರೂ ಕೃಷಿ ಇಲಾಖೆ, ಭೂ ಸಾರ ಸಂರಕ್ಷಣಾ ಇಲಾಖೆಯ ಮೇಲೆ ರೈತರ ದೂರು ಆದರೆ ಸ್ಥಳಿಯ ಪಕ್ಷದ ಮುಖಂಡರು ಮಾತ್ರ ಕಾಗೋಡು ಹತ್ತಿರ ದೂರು ನೀಡಿದವರ ಮೇಲೆಯೇ ಆಪಾದನೆ ಮಾಡಿ ಇದು ಸುಳ್ಳು ಎನ್ನುತ್ತಿದ್ದರು. ...