#ಕನಾ೯ಟಕರಾಜ್ಯ ಮಟ್ಟದ ಮೂರನೆ ಆದಿವಾಸಿಗಳ ಸಮ್ಮೇಳನ ಹೊಸನಗರದಲ್ಲಿ# ಮೊನ್ನೆ ನನ್ನ ಕ್ಲಾಸ್ ಮೇಟ್ ಪುರಪ್ಪೆಮನೆ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಮತ್ತು ಬಟ್ಟೆಮಲ್ಲಪ್ಪದಲ್ಲಿ ಸಾಹಸದಿಂದ ವ್ಯಾಸ ವಿದ್ಯಾಲಯ ಶಾಲೆ ನಡೆಸುತ್ತಿರುವ ಗ್ರಾಮ ಪಂಚಾಯತ್ ಸದಸ್ಯ ಮಂಜುನಾಥ ಸತ್ಯನಾರಾಯಣ್ ಬ್ಯಾಣದ್ ಕನಾ೯ಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕರಾದ ಬೆಂಗಳೂರಿನ SY ಗುರುಶಾ೦ತ್ ಜೊತೆ ಬಂದು ಕರಪತ್ರ ನೀಡಿದರು. ಈ ಸಮ್ಮೇಳನದ ಗೌರವಾಧ್ಯಕ್ಷರು ಚರಕ ಪ್ರಸನ್ನ,ಅಧ್ಯಕ್ಷರು ಕುಣುಬಿ ಸಮಾಜದ ಸಾಗರದ ವಕೀಲರಾದ ಕೊಂಗನಾಸಳ್ಳಿ ಮಂಜಪ್ಪ, ಇವರು ನನ್ನ ಶಿಷ್ಯ ಇವರ ನೇತೃತ್ವದಲ್ಲಿ 1995 ರಲ್ಲಿ ಆನಂದಪುರದಲ್ಲಿ ಮತ್ತು 1996ರಲ್ಲಿ ಭಟ್ಕಳ ಸಮೀಪದ ಕೊಗಾರಿನ ದೇವಗಾರು ಎಂಬ ಹಳ್ಳಿಯಲ್ಲಿ ಜಾನು ಎನ್ನುವವರ ಜಾಗದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ಕುಣುಬಿ ಜನಾ೦ಗದ ಎರೆಡು ಸಮಾವೇಶ ಮಾಡಿದ್ದು, ನಾನು ಭಾಗವಹಿಸಿದ್ದು ನೆನಪಾಯಿತು. ಪಕ್ಕದ ಗೋವಾ ರಾಜ್ಯದಲ್ಲಿ ಇವರ ಜಾತಿ ST ನಮ್ಮ ರಾಜ್ಯದಲ್ಲಿ BCM - B, ಮೀಸಲಾತಿಗಾಗಿ ಅವರ ಹೋರಾಟ ನಡೆದೇ ಇದೆ. ಶಿವಮೊಗ್ಗ ಜಿಲ್ಲೆಯ ಕುಣುಬಿ, ಹಸಲರು, ಗೌಳಿ, ಸಿಳ್ಳೆಕ್ಯಾತರರನ್ನ ಆದಿವಾಸಿ ಸಮಾವೇಶದಲ್ಲಿ ಸೇರಿಸಿಕೊಂಡಿರುವುದು ಸ್ವಾಗತಾಹ೯ ಇವರಿಗೆ ಬೆಂಬಲಿಸಿ ಇವರ ಸಮ್ಮೇಳನ ಯಶಸ್ವಿಗೆ ಪ್ರಕಾಶ್ ಮತ್ತು ಮಂಜುನಾಥ ಸತ್ಯನಾರಾಯಣ್ ಬ್ಯಾಣದ್ ಬೆಂಬಲಿಸುತ್ತಿರುವು...