Skip to main content

Posts

Showing posts with the label Old students of 2000 SSLC batch of Anandapuram gathering on 17th April 2022.

ಶಿಕ್ಷಕ ವೃತ್ತಿಯಲ್ಲಿ ವಿಶಿಷ್ಟವಾಗಿ ಸೇವೆ ಸಲ್ಲಿಸುತ್ತಿರುವ ಯುವ ಶಿಕ್ಷಕ ಚೋರಡಿ ಸಮೀಪದ ತುಪ್ಪೂರಿನ ಆರ್.ಸಿ ಮಂಜುನಾಥ್ ತಮ್ಮ ಪ್ರೌಡ ಶಾಲಾ ಶಿಕ್ಷಣ ಆನಂದಪುರಂನಲ್ಲಿ ಪಡೆದವರು, 2000 ಇಸವಿಯ SSLC ಬ್ಯಾಚಿನ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡು 22 ವರ್ಷದ ನಂತರ ಅವರೆಲ್ಲ ಒಂದಾಗಿ ಸೇರಲಿದ್ದಾರೆ ಇದೇ 17ನೇ ತಾರೀಖು ಭಾನುವಾರ

#ಈ_ವಷ೯ದ_ಮೊದಲ_ಮಾವಿನಹಣ್ಣು_ಅಂಕೋಲದಿಂದ. #ಪತ್ರಕರ್ತ_ಬಿ_ಡಿ_ರವಿ_ತಂದು_ಕೊಟ್ಟಿದ್ದಾರೆ. #ನಮ್ಮ_ಊರಿನ_ಪ್ರೌಡಶಾಲ_2000_ಬ್ಯಾಚಿನ_ಗುರುವಂದನೆ_ಸ್ನೇಹಸಮ್ಮಿಲನಕ್ಕೆ. #ಮಾದರಿ_ಶಿಕ್ಷಕ_ಆರ್_ಸಿ_ಮಂಜುನಾಥರ_ವಿಶೇಷ_ಪ್ರಯತ್ನ.       ನಮ್ಮ ಊರು ಆನಂದಪುರಂನ ಸರ್ಕಾರಿ ಪ್ರೌಡ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿ ಶಿಕ್ಷಕ ವೃತ್ತಿಯಲ್ಲಿರುವ ಚೋರಡಿ ಸಮೀಪದ ತುಪ್ಪೂರಿನ R.C. ಮಂಜುನಾಥರು ಸಾಗರ ತಾಲ್ಲೂಕಿನ ತುಟ್ಟ ತುದಿಯಾದ ಕೊಲ್ಲೂರು ಸಮೀಪದ ಪಶ್ಚಿಮ ಘಟ್ಟದ ಅತಿ ಎತ್ತರದ ಅಂಬಾರಗುಡ್ಡದ ಮುರಳ್ಳಿಯ ಗುಡ್ಡಗಾಡು ವಾಸಿಗಳಾದ ಕುಣುಬಿ ಜನಾಂಗದ ಏಕ ಶಿಕ್ಷಕ ಶಾಲೆಯಲ್ಲಿ ಅತ್ಯುತ್ತಮವಾಗಿ ಶಿಕ್ಷಣ ನೀಡಿ ಅಲ್ಲಿನ ಮಕ್ಕಳು ವಿದ್ಯಾವಂತರಾಗಿ ಮುಂದಿನ ಶಿಕ್ಷಣಕ್ಕೆ ದಾರಿ ದೀಪ ಆಗಿದ್ದವರು.    ಮುರಳ್ಳಿಗೆ ಬಸ್ ಸೌಲಭ್ಯವಿಲ್ಲ, ವಿದ್ಯುತ್ ಇಲ್ಲದ ಆರು ತಿಂಗಳು ಮಳೆ, ಮೂರು ತಿಂಗಳು ವಿಪರೀತ ಚಳಿ, ಇಂಬುಳಗಳ ಕಾಟ ಅಲ್ಲಿ ಆದ್ದರಿಂದ ಅಲ್ಲಿನ ಶಾಲೆಗೆ ಶಿಕ್ಷಕರು ಹೋಗಲು ಒಪ್ಪುವುದಿಲ್ಲ.   ನಂತರ ವರ್ಗ ಆದಲ್ಲೆಲ್ಲ ಅಲ್ಲಿನ ಶಾಲೆ ನಂದ ಗೋಕುಲವಾಗಿಸಿ ಅಲ್ಲಿನ ವಿದ್ಯಾರ್ಥಿ ವೃಂದ ಮತ್ತು ಪೋಷಕರ ಪ್ರೀತಿ ಪಾತ್ರವಾಗುವ R C ಮಂಜುನಾಥ ಯಾವುದೇ ರಾಷ್ಟ್ರ ಪ್ರಶಸ್ತಿಗಿಂತ ದೊಡ್ಡ ಅರ್ಹತೆಯ ಯುವ ಶಿಕ್ಷಕರು.    ಇವರು ತಾವು ವಿದ್ಯಾಬ್ಯಾಸ ಮಾಡಿದ ಆನಂದಪುರಂನಲ್ಲಿ 2000 ಇಸವಿಯಲ್ಲಿ SSLC ಓದಿದ ಇವ...