ಶಿಕ್ಷಕ ವೃತ್ತಿಯಲ್ಲಿ ವಿಶಿಷ್ಟವಾಗಿ ಸೇವೆ ಸಲ್ಲಿಸುತ್ತಿರುವ ಯುವ ಶಿಕ್ಷಕ ಚೋರಡಿ ಸಮೀಪದ ತುಪ್ಪೂರಿನ ಆರ್.ಸಿ ಮಂಜುನಾಥ್ ತಮ್ಮ ಪ್ರೌಡ ಶಾಲಾ ಶಿಕ್ಷಣ ಆನಂದಪುರಂನಲ್ಲಿ ಪಡೆದವರು, 2000 ಇಸವಿಯ SSLC ಬ್ಯಾಚಿನ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡು 22 ವರ್ಷದ ನಂತರ ಅವರೆಲ್ಲ ಒಂದಾಗಿ ಸೇರಲಿದ್ದಾರೆ ಇದೇ 17ನೇ ತಾರೀಖು ಭಾನುವಾರ
#ಪತ್ರಕರ್ತ_ಬಿ_ಡಿ_ರವಿ_ತಂದು_ಕೊಟ್ಟಿದ್ದಾರೆ.
#ನಮ್ಮ_ಊರಿನ_ಪ್ರೌಡಶಾಲ_2000_ಬ್ಯಾಚಿನ_ಗುರುವಂದನೆ_ಸ್ನೇಹಸಮ್ಮಿಲನಕ್ಕೆ.
#ಮಾದರಿ_ಶಿಕ್ಷಕ_ಆರ್_ಸಿ_ಮಂಜುನಾಥರ_ವಿಶೇಷ_ಪ್ರಯತ್ನ.
ನಮ್ಮ ಊರು ಆನಂದಪುರಂನ ಸರ್ಕಾರಿ ಪ್ರೌಡ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿ ಶಿಕ್ಷಕ ವೃತ್ತಿಯಲ್ಲಿರುವ ಚೋರಡಿ ಸಮೀಪದ ತುಪ್ಪೂರಿನ R.C. ಮಂಜುನಾಥರು ಸಾಗರ ತಾಲ್ಲೂಕಿನ ತುಟ್ಟ ತುದಿಯಾದ ಕೊಲ್ಲೂರು ಸಮೀಪದ ಪಶ್ಚಿಮ ಘಟ್ಟದ ಅತಿ ಎತ್ತರದ ಅಂಬಾರಗುಡ್ಡದ ಮುರಳ್ಳಿಯ ಗುಡ್ಡಗಾಡು ವಾಸಿಗಳಾದ ಕುಣುಬಿ ಜನಾಂಗದ ಏಕ ಶಿಕ್ಷಕ ಶಾಲೆಯಲ್ಲಿ ಅತ್ಯುತ್ತಮವಾಗಿ ಶಿಕ್ಷಣ ನೀಡಿ ಅಲ್ಲಿನ ಮಕ್ಕಳು ವಿದ್ಯಾವಂತರಾಗಿ ಮುಂದಿನ ಶಿಕ್ಷಣಕ್ಕೆ ದಾರಿ ದೀಪ ಆಗಿದ್ದವರು.
ಮುರಳ್ಳಿಗೆ ಬಸ್ ಸೌಲಭ್ಯವಿಲ್ಲ, ವಿದ್ಯುತ್ ಇಲ್ಲದ ಆರು ತಿಂಗಳು ಮಳೆ, ಮೂರು ತಿಂಗಳು ವಿಪರೀತ ಚಳಿ, ಇಂಬುಳಗಳ ಕಾಟ ಅಲ್ಲಿ ಆದ್ದರಿಂದ ಅಲ್ಲಿನ ಶಾಲೆಗೆ ಶಿಕ್ಷಕರು ಹೋಗಲು ಒಪ್ಪುವುದಿಲ್ಲ.
ನಂತರ ವರ್ಗ ಆದಲ್ಲೆಲ್ಲ ಅಲ್ಲಿನ ಶಾಲೆ ನಂದ ಗೋಕುಲವಾಗಿಸಿ ಅಲ್ಲಿನ ವಿದ್ಯಾರ್ಥಿ ವೃಂದ ಮತ್ತು ಪೋಷಕರ ಪ್ರೀತಿ ಪಾತ್ರವಾಗುವ R C ಮಂಜುನಾಥ ಯಾವುದೇ ರಾಷ್ಟ್ರ ಪ್ರಶಸ್ತಿಗಿಂತ ದೊಡ್ಡ ಅರ್ಹತೆಯ ಯುವ ಶಿಕ್ಷಕರು.
ಇವರು ತಾವು ವಿದ್ಯಾಬ್ಯಾಸ ಮಾಡಿದ ಆನಂದಪುರಂನಲ್ಲಿ 2000 ಇಸವಿಯಲ್ಲಿ SSLC ಓದಿದ ಇವರ ಸಹ ವಿದ್ಯಾರ್ಥಿಗಳನ್ನು ಸೇರಿಸಿ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ (ದಿನಾಂಕ 17- ಏಪ್ರಿಲ್ - 2022 ರ ಭಾನುವಾರ) ಅವತ್ತು ಇವರ ಮಧ್ಯಾಹ್ನದ ಊಟಕ್ಕೆ ಪ್ರಗತಿ ಪರ ಕೃಷಿಕರಾದ #ನಾಗೇಂದ್ರ_ಸಾಗರ್ ರಿಂದ ಅನಾನಸ್ ಹೋಳಿಗೆ ಖರೀದಿಸಿದ್ದೇನೆ ಮತ್ತು ಮಾವಿನ ಹಣ್ಣಿನ ರಸಾಯನಕ್ಕೆ ಪತ್ರಕರ್ತ ಗೆಳೆಯ ಬಿ.ಡಿ. ರವಿ ಅಂಕೋಲೆಗೆ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ಪ್ರಶಸ್ತಿಗೆ ಆಯ್ಕೆ ಆಗಿರುವ ಅಂಕೋಲೆಯ ವಿಷ್ಣು ನಾಯಕರನ್ನು ಆಹ್ವಾನಿಸಲು ಸಾಗರ ತಾಲ್ಲೂಕಿನ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿ.ಟಿ. ಸ್ವಾಮಿ ಮತ್ತು ಗಣಪತಿಯಪ್ಪ ಟ್ರಸ್ಟ್ ಅಧ್ಯಕ್ಷರಾದ ಉಮೇಶ್ ಹಿರೆನೆಲ್ಲೂರ್ ಜೊತೆ ಅಂಕೋಲೆಗೆ ಹೋದವರಿಂದ ಅಲ್ಲಿನ ಗುಡ್ಡಗಾಡು ವಾಸಿ ಹಾಲಕ್ಕಿ ಗೌಡರ ಸಮಾಜದ ಮಹಿಳೆಯರಿಂದ ಮಾವಿನ ಹಣ್ಣು ಖರೀದಿಸಿ ತರಿಸಿದ್ದೇನೆ.
2000 ಇಸವಿಯಲ್ಲಿ ಆನಂದಪುರಂನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸ್ನೇಹ ಮಿಲನ ಸುಮಾರು 22 ವರ್ಷದ ನಂತರ ಆನಂದಪುರಂನಲ್ಲಿ ನಡೆಯುತ್ತಿದ್ದು ಅವತ್ತು 22 ವರ್ಷದ ನಂತರದ ಜೀವನವನ್ನು ಅವರೆಲ್ಲ ತಿರುಗಿ ನೋಡಿ ವಿಮರ್ಷಿಸಿಕೊಳ್ಳುವ, ಪರಸ್ಪರ ಅವತ್ತಿನ ದಿನಗಳ ನೆನಪಿಸಿಕೊಳ್ಳುವ ಈ ಸ್ನೇಹ ಮಿಲನ ಸುಮುದುರ ಆಗಲಿ, R. C. ಮಂಜುನಾಥ್ ಮತ್ತು ಅವರ ಜೊತೆ ಇಂತಹ ಕಾರ್ಯಕ್ರಮಕ್ಕೆ ಕೈ ಜೋಡಿಸಿದ ಅವರ ಗೆಳೆಯರೆಲ್ಲರಿಗೂ ಶುಭ ಹಾರೈಸುತ್ತೇನೆ.
Comments
Post a Comment