ಟ್ರೇಡ್ ಮಾರ್ಕ್ ಮತ್ತು ಕಾಪಿ ರೈಟ್ ಆಕ್ಟ್ ಪ್ರಕಾರ ನೊಂದಾವಣೆ ಆಗಿರುವ ಕನ್ನಡದ ಏಕೈಕ ಮತ್ತು 135 ನೇ ವರ್ಷಾಚಾರಣೆ ಆಚರಿಸುತ್ತಿರುವ ಒಂಟಿ ಕೊಪ್ಪಲ್ ಪಂಚಾಂಗ ಮಂದಿರದ ಮೈಸೂರು ಪಂಚಾಂಗ'
#ಹಿಂದೂ_ಪಂಚಾಂಗ_ಚಂದ್ರಮಾನ_ಆದರಿತ_5000_ವರ್ಷ_ಪುರಾತನವಾದದ್ದು.
#ಇಂಗ್ಲೀಷ್_ಕ್ಯಾಲೆಂಡರ್_ಸೂಯ೯ಮಾನ_ಆದರಿತ
#ಮೈಸೂರಿನ_ಒಂಟಿಕೊಪ್ಪಲ್_ಪಂಚಾಂಗ_ಮಂದಿರದ_ಮೈಸೂರು_ಪಂಚಾಂಗಕ್ಕೆ_135ನೇ_ಹುಟ್ಟುಹಬ್ಬ.
#ಪ್ರಥಮ_ಪಂಚಾಂಗ_ಮುದ್ರಣ_1887
#ಟ್ರೇಡ್_ಮಾರ್ಕ್_ಕಾಪಿರೈಟ್_ಆಕ್ಟ್_ಪ್ರಕಾರ_ನೊಂದಾವಣಿ_ಆಗಿರುವ_ಏಕೈಕ_ಕನ್ನಡ_ಪಂಚಾಂಗ
ಪ್ರತಿ ವರ್ಷ ನಾನು ಖರೀದಿಸುವುದು ಒಂಟಿಕೊಪ್ಪಲ್ ಪಂಚಾಂಗ ಹಾಗಂತ ನನಗೆ ಪಂಚಾಂಗದ ಪೂರ್ತಿ ಜ್ಞಾನ ಇಲ್ಲ ಈ ಪಂಚಾಂಗವೇ ಏಕೆ ಎಂದರೆ ಇದರ accuracy, ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ದೇವರ ರಥೋತ್ಸವ ದೇವಾಲಯದ ಪ್ರತಿಷ್ಟಾಪನೆ ಆಗಿದ್ದ ಕುಂದ ಚತುರ್ಥಿಯಂದೇ ನಡೆಯುವುದು ಅದು ಒಂಟಿ ಕೊಪ್ಪಲ್ ಪಂಚಾಂಗ ನಮ್ಮ ರಥೋತ್ಸವದ ಮಾಹಿತಿಯೂ ಮುದ್ರಿಸುತ್ತದೆ, ಈ ಸಂವತ್ಸರದಲ್ಲಿ ನಮ್ಮ ಶ್ರೀ ವರಸಿದ್ದಿ ವಿನಾಯಕ ದೇವರ ರಥೋತ್ಸವ 25 -ಜನವರಿ -2023ರ ಬುಧವಾರ ನಡೆಯಲಿದೆ.
ಸಂಕಷ್ಟಹರ ಚತುರ್ಥಿ, ಏಕಾದಶಿ, ಗ್ರಹಣಗಳು ಈ ಒಂಟಿ ಕೊಪ್ಪಲ್ ನಲ್ಲಿ ನೂರಕ್ಕೆ ನೂರು ಪರ್ಪೆಕ್ಟ್ ಆದ್ದರಿಂದ ಸರ್ಕಾರದ ಕ್ಯಾಲೆಂಡರ್ ಮುದ್ರಣದಲ್ಲಿ, ಪ್ರಖ್ಯಾತ ಪತ್ರಿಕೆಗಳ ಕ್ಯಾಲೆಂಡರ್ ಮತ್ತು ದೊಡ್ಡ ಸಂಸ್ಥೆಗಳು ಈ ಪಂಚಾಂಗವನ್ನೆ ಅವಲಂಬಿಸಿದೆ.
ಒಂಟಿ ಕೊಪ್ಪಲ್ ಪಂಚಾಂಗ ಈ ಸಂವತ್ಸರದ್ದು ಮುಖ ಪುಟ ಸೇರಿ 136 ಪುಟಗಳಿದೆ ಬೆಲೆ 130 ರೂಪಾಯಿ, ಇವರದ್ದೆ ದನ ಲಕ್ಷ್ಮಿ ಕ್ಯಾಲೆಂಡರ್ ಕೂಡ ಇದೆ.
ತಿಥಿ - ನಕ್ಷತ್ರ - ರಾಶಿ - ಯೋಗ ಮತ್ತು ಕರಣ ಎಂಬ ಪಂಚ ಅಂಗಗಳ ನಿಖರ ಮಾಹಿತಿಯೇ ಪಂಚಾಂಗ ಈ ಪಂಚ ಅಂಗಗಳು ಸರಿಯಾಗಿರುವ ದಿನ ವೇಳೆಯಲ್ಲಿ ಶುಭ ಕಾರ್ಯ ನಡೆದರೆ ಮಾತ್ರ ಫಲ ಪ್ರಾಪ್ತಿ ಎಂಬುದು ನಂಬಿಕೆ.
60 ವಷ೯ಕೊಮ್ಮೆ ವೃತ್ತ ಪೂರ್ಣ ಆಗುವ 60 ಸಂವತ್ಸರಕ್ಕೂ ಬಿನ್ನ ಹೆಸರುಗಳಿದೆ, 354 ದಿನಕ್ಕೆ ಒಂದು ವರ್ಷ, 28 ದಿನದ 12 ತಿಂಗಳುಗಳ ಚಂದ್ರಮಾನ ಈ ಪಂಚಾಂಗ.
ಇಂಗ್ಲೀಷ್ ಕ್ಯಾಲೆಂಡರ್ 365 ದಿನದ 30ರಿಂದ 31 ದಿನದ 12 ತಿಂಗಳ ಸೂರ್ಯಮಾನದ ಕ್ಯಾಲೆಂಡರ್ ಆದರೆ ಮುಸ್ಲಿಂರಲ್ಲಿ 355 ದಿನದ ವರ್ಷದ ಕ್ಯಾಲೆಂಡರ್ ಇದೆ.
ಹಿಂದೂ ಪಂಚಾಂಗಕ್ಕೆ 5000 ವರ್ಷದ ಇತಿಹಾಸ ಇದೆ ಅನ್ನುತ್ತಾರೆ, ಪಂಚಾಂಗ ಅಂದರೆ ಆಕಾಶದ ಕನ್ನಡಿ ಎಂದು ಇದನ್ನು ನಾಸಾ ವಿಜ್ಞಾನಿಗಳು ಗ್ರಹಣಗಳ ಬಗ್ಗೆ ಸಂಶೋದನೆ ಮಾಡಿದ ಬಗ್ಗೆ ಮತ್ತು ಇದರ ಆದಾರಿತ ಮುಂದಿನ 100 ವರ್ಷದ ಪ್ರತಿ ಊರಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ನಿಖರ ಮಾಹಿತಿ ಹಿಂದೂ ಪಂಚಾಂಗ ಕರ್ತರಿಗೆ ಮಾಹಿತಿಗಾಗಿ ಪ್ರಕಟಿಸಿದ್ದಾರೆ ಅದರಿಂದ ಭಾರತೀಯ ಪುರೋಹಿತರಿಗೆ ನಿಖರ ನಿಖರ ತಿಥಿ ನಕ್ಷತ್ರ ರಾಶಿ ಯೋಗ ಕರಣಗಳ ಗುಣಾಕರ ಸುಲಭ ಮತ್ತು ನಿಖರವಾಗಿ ಪಡೆಯುತ್ತಿದ್ದಾರೆ.
ಮುಂದಿನ 100 ವಷ೯ದ ಮಾಹಿತಿ ನೀಡುವ ವಿಶ್ವವಿಜಯ ಪಂಚಾಂಗವೂ ಇದೆ.
ಭಾರತ ಸರ್ಕಾರ 1957 ರಲ್ಲಿ ನ್ಯಾಷನಲ್ ಪಂಚಾಂಗ ಪ್ರಕಟಿಸಿದ ಮಾಹಿತಿ ಇದೆ.
ಎಲ್ಲಾ ಊರಿನ ಬುಕ್ ಸ್ಟಾಲ್ ನಲ್ಲಿ ಈ ಪಂಚಾಂಗ ಮಾರಟಕ್ಕೆ ಇಟ್ಟಿರುತ್ತಾರೆ.
https://www.onlinemangalorestore.com/index.php?route=product/product&product_id=717
ಈ ಮೇಲಿನ ಲಿಂಕ್ ನಲ್ಲಿ ಆನ್ ಲೈನ್ ನಿಂದ ಈ ಪಂಚಾಂಗ ಖರೀದಿಸಬಹುದು.
Comments
Post a Comment