Blog number 834.ಅನಾಥ ಹೆಣ್ಣು ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮೂಲಕ ಸಂಘ ಸಂಸ್ಥೆಗಳು ಸಮಾಜ ಸೇವೆಗೆ ಮುಂದಾಗಬೇಕು.
#ಇವತ್ತು_ಲವಲವಿಕೆಯಲ್ಲಿ
#ಇವುಗಳ_ಆಪರೇಷನ್_ಸ್ವತಃ_ನೋಡಿದ್ದೆನಾದ್ದರಿಂದ_ಇವುಗಳ_ಚೇತರಿಕೆ_ಕುತೂಹಲ.
ಭಾನುವಾರ ನಾಲ್ಕು ನಾಯಿಗಳ ಸಂತಾನ ಹರಣ ಚಿಕಿತ್ಸೆ ಸಹೃದಯಿ ವೈದ್ಯರ ತಂಡ ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದರು ಇದರ ನೇತೃತ್ವವನ್ನು ಜಿಲ್ಲೆಯ ಹಿರಿಯ ಸಮಾಜವಾದಿ ಒಂದು ಕಾಲದಲ್ಲಿ ಮಲ್ನಾಡಳ್ಳಿಯ ಕಿರಿಯ ಸ್ವಾಮಿ ಸ್ಥಾನ ನಿರಾಕರಿಸಿದ ನಿಜ ಸನ್ಯಾಸಿಗಳಾದ ಪ್ರಕೃತಿ ಪಿ. ಪುಟ್ಟಯ್ಯನವರು ಮತ್ತು ಅವರ ಜೊತೆಯಾಗಿ ಬಂದವರು ಮಾಜಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು ಆದ ತೀ.ನಾ. ಶ್ರೀನಿವಾಸ್.
ಇವರೆಲ್ಲರ ಪ್ರಾಣಿ ದಯಾ ಹೃದಯದಿಂದ ಇದೆಲ್ಲ ಯಶಸ್ವಿ ಆಯಿತು,ಇವೆಲ್ಲವೂ ನಾಲ್ಕು ರಸ್ತೆ ಸೇರುವ ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿ ಹೆಣ್ಣು ನಾಯಿ ಅಂತ ಕಣ್ಣು ಬಿಡುವ ಮೊದಲೆ ಕಟುಕ ಮನಸ್ಸಿನವರು ಬಿಟ್ಟು ಹೋದವು.
ಈ ಅನಾಥವಾದ ನಾಯಿಗಳು ಅಪಘಾತದಿಂದ ಕಾಲು, ಸೊಂಟ ಮುರಿದುಕೊಂಡಾಗೆಲ್ಲ ಅವುಗಳ ಇಲಾಜಿಗೆ ನಮ್ಮಲ್ಲಿ ಸೇರಿಕೊಂಡವು.
ಇವುಗಳ ಆಪರೇಷನ್ ಸ್ವತಃ ನೋಡಿದ್ದರಿಂದ ಮನಸ್ಸು ಒಂದು ರೀತಿ ಆತಂಕಕ್ಕೆ ಒಳಗಾಗಿತ್ತು, ಅನೆಸ್ತಿಯಾದಿಂದ ಪ್ರಜ್ಞೆ ಬರಲು ಸಮಯ ತೆಗೆದುಕೊಂಡಿದ್ದು ನಂತರವೂ ನೋವು ನಿದ್ರಾವಸ್ಥೆಯಲ್ಲೇ ಇದ್ದವು.
ಮರುದಿನ ಆಂಟಿ ಬಯೋಟಿಕ್ ಮಾತ್ರೆ, ಸ್ವಲ್ಪ ಆಹಾರ ಸೇವಿಸಿದರೂ ಅವುಗಳ ಕಳಾಹೀನ ಮುಖ ಅವುಗಳ ಚೇತರಿಕೆಗೆ ಇನ್ನೆಷ್ಟು ದಿನ ಬೇಕೋ ಎಂಬ ಸಂದೇಹದಲ್ಲಿದ್ದೆ.
ವಿ.ಸೂ. : ನಿಮ್ಮಲ್ಲಿ ಹೆಣ್ಣು ನಾಯಿ ಇದ್ದರೆ, ಅಕ್ಕ ಪಕ್ಕದವರ ಹೆಣ್ಣು ನಾಯಿಗಳನ್ನು ಸೇರಿಸಿ ಈ ರೀತಿ ಸಂತಾನ ಹರಣ ಚಿಕಿತ್ಸೆ ಮಾಡಿಸಬಹುದು, ಸ್ಥಳಿಯ ಸಮಾಜ ಸೇವಾ ಮನೋಭಾವದ ಸಂಘ ಸಂಸ್ಥೆಗಳು ಮುಂದೆ ಬಂದರೆ ಅವರಿಗೆ ಸೂಕ್ತ ಮಾಹಿತಿ ನೀಡಲಾಗುವುದು.
Comments
Post a Comment