#ರಾತ್ರಿ_ರಾಣಿ_ಹೂವು #ಇದು_ಬಳ್ಳಿಯಲ್ಲಿ_ಅರಳುವ_ಹೂವು #ನಮ್ಮ_ಮನೆಯಲ್ಲಿ_ಮಧ್ಯರಾತ್ರಿ_ಅರಳಿತ್ತು. #ರಾತ್ರಿರಾಣಿ_ಬ್ರಹ್ಮಕಮಲ_ಬೇರೆ_ಬೇರೆ #flowers #flowerlovers #nightqueen #brahmakamala #midnightmemories ನಾನು ಈ ರಾತ್ರಿ ರಾಣಿ ಹೂವನ್ನು ಬ್ರಹ್ಮ ಕಮಲ ಎಂದೇ ಭಾವಿಸಿದ್ದೆ, ಕಳೆದ ವರ್ಷ ರಾತ್ರಿ ರಾಣಿ ನಮ್ಮ ಮನೆಯಲ್ಲಿ ಅರಳಿದಾಗ ಬ್ರಹ್ಮ ಕಮಲ ಅರಳಿದೆ ಎಂದು ಪೋಟೋ ಪೋಸ್ಟ್ ಮಾಡಿದ್ದೆ ಆದರೆ ಇದು ರಾತ್ರಿ ರಾಣಿ ಅಂತ ಪ್ರತಿಕ್ರಿಯೆಗಳನ್ನು ಗೆಳೆಯರು ಬರೆದಾಗಲೇ ಗೊತ್ತಾಗಿದ್ದು ಇದು ಬೇರೆ ಬೇರೆ ಅಂತ. ಹಿಮಾಲಯ ಶ್ರೇಣಿಯಲ್ಲಿರುವ ಇದೇ ಹೂವಿನ ಹೋಲಿಕೆ ಇರುವ #ಬ್ರಹ್ಮಕಮಲ ಹೂವು ಗಿಡದಲ್ಲಿ ಅರಳುವ ಹೂವು. ಈ ಪ್ರಭೇದ ಬಿನ್ನತೆ ಗೊತ್ತಿಲ್ಲದೆ ರಾತ್ರಿ ರಾಣಿ ಹೂವಿಗೆ ಬ್ರಹ್ಮಕಮಲ ಎಂತಲೂ ಕರೆಯುತ್ತಾರೆ. ರಾತ್ರಿ ರಾಣಿ ಹೂವು ಮತ್ತು ಬ್ರಹ್ಮಕಮಲ ಹೂವಿನ ಬಟಾನಿಕಲ್ ನೇಮ್ ಬೇರೆ ಬೇರೆ ಇದೆ. #ರಾತ್ರಿಯ_ರಾಣಿ ಹೂವು ವೈಜ್ಞಾನಿಕವಾಗಿ #ಸೆಲೆನಿಸೆರಿಯಸ್_ಗ್ರಾಂಡಿಫ್ಲೋರಸ್ ಎಂದು ಕರೆಯಲ್ಪಡುವ ರಾತ್ರಿಯಲ್ಲಿ ಅರಳುವ ಒಂದು ಹೂವು. ಈ ಸುಂದರವಾದ ಕಳ್ಳಿ ಜಾತಿಯ ಮೂಲ ಉಷ್ಣವಲಯದ ಅಮೆರಿಕ ಮತ್ತು ಇದು ಅಪರೂಪದ ಮತ್ತು ವಿಲಕ್ಷಣ ಹೂವಾಗಿದೆ. ರಾತ್ರಿ ರಾಣಿಯ ದೊಡ್ಡ...