Skip to main content

Posts

Showing posts from November, 2018

#ಸಾಗರ ತಾಲ್ಲೂಕಿನ ಏಕೈಕ ನಿಷ್ಟಾವಂತ ಕಾಂಗ್ರೇಸ್ ನೇತಾರ ಖಾನ್ ಸಾಹೇಬರೆಂದೇ ಜನ ಕರೆಯುವ ಮುತ್ಸದ್ದಿ ಆಹಮದಾಲಿ ಖಾನ್#

#ಸಾಗರ ತಾಲ್ಲೂಕಿನ ಕಾಂಗ್ರೇಸ್ ನೇತಾರರಾದ ಪ್ರೀತಿಯ ಖಾನ್ ಸಾಹೇಬರು#   ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರು ಲೋಕಸಭೆಗೆ ಕಾಂಗ್ರೇಸ್ ವಿರುದ್ಧ ಸ್ಪದಿ೯ಸಿದಾಗ ಹೇಳುತ್ತಿದ್ದರು ಯಾರಾದರೂ ಬದಲಾಗಿ ಬೇರೆ ಪಕ್ಷಕ್ಕೆ ಓಟು ನೀಡ ಬಹುದು ಆದರೆ ಆ ಸಾಗರದ ಖಾನ್ ಮತ್ತು ಪೈ (ಪುತ್ತೂರಾಯರ ಬಗ್ಗೆ) ಮಾತ್ರ ಕೈ ಬಿಟ್ಟು ಬರೊಲ್ಲ ಅಂತ.   ಅದಕ್ಕೆ ಕಾರಣವೂ ಇದೆ, ಗುಂಡೂರಾಯರ ಕಾಲದಲ್ಲಿ ಬಂಗಾರಪ್ಪರನ್ನ ಹಣಿಯಲು ಜನತಾ ಪಕ್ಷದಿಂದ ಕಾಗೋಡರನ್ನ ತಂದು ವಿದಾನ ಪರಿಷತ್ ಸದಸ್ಯರನ್ನಾಗಿಸಿ ಮಂತ್ರಿ ಮಾಡಿದ ಕಾಯ೯ದಲ್ಲಿ ಆಹಮದ್ ಆಲೀ ಖಾನ್ ಸಾಹೇಬರ  ಕೆಲಸ ದೊಡ್ಡದು.   ಸ್ವಾತಂತ್ರ್ಯ ನಂತರದ 1952 ರಿಂದ ಪ್ರಾರಂಭವಾದ ಚುನಾವಣೆಯಿಂದ ಈ ವರೆಗಿನ ಚುನಾವಣೆ ವರೆಗೆ ನೇರ ನೋಡಿದವರು, ರಾಜಕಾರಣ ಮಾಡಿದವರು ಇವರು, ಸಾಗರ ತಾಲ್ಲೂಕಿನ ಕಾಂಗ್ರೇಸ್ ಅಧ್ಯಕ್ಷರಾಗಿ ಪಕ್ಷ ಸಂಘಟಿಸಿದವರು, ಪುರಸಭಾ ಅಧ್ಯಕ್ಷರೂ ಆದವರು.   1989ರಲ್ಲಿ ಸಾಗರ ವಿಧಾನ ಸಭೆಗೆ ಕಾಗೋರರನ್ನ ಪುನಃ ಕರೆ ತಂದವರು ಆಗಲೇ ನಮ್ಮಂತವರನ್ನೆಲ್ಲ ಹಿಡಿದು ತಂದು ಕಾಂಗ್ರೇಸ್ಗೆ ಸೇರಿಸಿ ಕೊಂಡವರು, ಇವರ ಮಾಗ೯ದಶ೯ನದಿಂದಲೇ ನಾನು ಗ್ರಾ.ಪಂ., ಜಿ.ಪಂ ಗೂ ಹೋಗುವ೦ತಾಯಿತು, ಸಾಗರ ತಾಲ್ಲೂಕಿನಲ್ಲಿ ಇವರ ಗರಡಿಯಲ್ಲಿ ತಯಾರಾದ ನಾಯಕರು ನೂರಾರು.   ಈಗ 86 ರ ವಯೋಮಾನದ ಇವರು ನಿವೃತ್ತ ಜೀವನ ಮಾಡುತ್ತಿದ್ದಾರೆ, ಯೋಗ್ಯರಾದ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿ ಮಕ್ಕಳ ಒಂದಿಗೆ ಸಂತೃಪ್ತ ಜೀವನ ಅವರದ್ದು. ಇತ್ತೀಚಿಗೆ ಅ

# ಕಲಸೆ ಸ್ವಾಮಿಗಳೆಂದೇ ಖ್ಯಾತರಾಗಿದ್ದ ಶ್ರೀ ಕಲಸೆ ನರಸಿಂಹಾನಂದ ಸ್ವಾಮಿ #

ಶ್ರೀ ಸ್ವರ್ಣವಲ್ಲೀ ಮಠದಲ್ಲಿ ಪ್ರಜ್ವಲಿಸಿದ ಖೇಚರಿಯೋಗಿ –---------------------------------------------------- -------    ಮಠಮಂದಿರಗಳು ಧಾರ್ವಿುಕ ಕಾರ್ಯಕ್ರಮಗಳಿಗೆ ಮೀಸಲಾದ ಪುಣ್ಯಸ್ಥಳ. ಮನೆಗೊಂದು ಯಜಮಾನ, ಮಠಕ್ಕೊಂದು ಗುರುಗಳು ಇರುವುದು ಲೋಕರೂಢಿ. ಹೀಗೆ ಪ್ರತಿಯೊಂದಕ್ಕೂ ಒಬ್ಬ ನಾಯಕ ಬೇಕೇ ಬೇಕು. ಪ್ರತಿ ಮನುಜರಲ್ಲಿಯೂ ವಿಭಿನ್ನ ಪ್ರತಿಭೆಯಿದೆ. ಅಂಥವರು ಮಹಾನ್ ಸಾಧನೆ ಮಾಡಲು ಕಠಿಣ ಪರಿಶ್ರಮ, ಸುದೀರ್ಘ ಸಮಯ, ಸಹನೆ, ತಾಳ್ಮೆ, ಏಕಾಗ್ರತೆ, ಛಲ ಎಲ್ಲವೂ ಅತ್ಯಗತ್ಯ. ಅವನ್ನೆಲ್ಲ ಮೈಗೂಡಿಸಿಕೊಂಡರೇ ಅಪ್ರತಿಮ ಸಾಧನೆ ಮಾಡಲು ಸಾಧ್ಯ. ಈ ಮಾತಿಗೆ ಉತ್ತಮ ನಿದರ್ಶನ ಕಲಸಿಯ ಶ್ರೀ ನೃಸಿಂಹಾನಂದ ಸರಸ್ವತೀ ಸ್ವಾಮಿಗಳು. ಖೇಚರೀಯೋಗಿ ಎಂದೇ ಪ್ರಸಿದ್ಧವಾಗಿರುವ ಕಲಸಿಯ ಶ್ರೀಗಳು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯವರು. ಇವರು 1917ರ ಮಾರ್ಚ್ 20ರಂದು ಜನಿಸಿದರು. ಇವರಿಗೆ ಪೂರ್ವಾಶ್ರಮದ ಹೆಸರು ಚಿದಂಬರ. ಚಿದಂಬರರಿಗೆ ಬಾಲ್ಯದಲ್ಲಿಯೇ ಉಪನಯನ ನೆರವೇರಿತು. ತಾಯಿಯ ತವರುಮನೆಯಾದ ಕಲಸಿಯಲ್ಲಿ ಪ್ರಾಥಮಿಕ ಶಾಲೆ ಸೇರಿದ ಚಿದಂಬರ, ಭೀಮನಕೋಣೆಯಲ್ಲಿ ವೇದಾಭ್ಯಾಸ ಮಾಡತೊಡಗಿದರು. ಕೆಲವು ವರ್ಷಗಳಲ್ಲಿ ತಂದೆ ನಿಧನರಾದ ಕಾರಣ ತಾಯಿಯೇ ಕುಟುಂಬ ಜವಾಬ್ದಾರಿ ಹೊತ್ತುಕೊಂಡರು. ದಾಯಾದಿಕಲಹದಿಂದ ನೊಂದ ಚಿದಂಬರರಿಗೆ, ಎಲ್ಲವನ್ನೂ ಬಿಟ್ಟು ದೂರ ಹೋಗುವುದೇ ಮೇಲು ಎನಿಸಿತ್ತು. ಒಮ್ಮೆ ಮಿತ್ರರೊಂದಿಗೆ ಯಾಣದ ಭೈರವೇಶ್ವರ ದರ್ಶನಕ್ಕೆಂ

#ಉಮ್ಮತ್ತದ (ದತ್ತೂರ)ಗಿಡದ ವಿಶೇಷತೆಗಳು ಮತ್ತು ಅದರ ಮಲೆನಾಡಿಗರ ಅನುಭವ#

FB ಲೇಖನ ಕೃಪೆ: ಶ್ರೀ ರಾಘವೇಂದ್ರ ಶಮಾ೯ ತಲವಾಟ.     ನಿನ್ನ ಕಣ್ಣು ಸ್ವಲ್ಪ ಅರಿಶಿನ ಬಣ್ಣಕ್ಕೆ ಕಾಣಿಸ್ತಲಾ..! ಕಾಮಾಲೆಯಾ ಗೀಮಾಲಾಯೆ ಆಯಿಕ್ಕು ಮಾರಾಯಾ, ಔಷಧಿ ತಗ " ಅಂದರು ಮೂವತ್ವರ್ಷದ ಹಿಂದೆ ಒಬ್ಬರು.‌ಅವರು ಹೇಳಿದಮೇಲೆ ಸುಸ್ತು ಊಟ ಸೇರುವುದಿಲ್ಲ ಮುಂತಾದ ಸಮಸ್ಯೆ ಶುರುವಾಯಿತು. ನಿಜವಾಗಿಯೂ ಕಾಮಾಲೆಯೋ ಅಥವಾ ಅವರು ಹೇಳಿದ್ದಕ್ಕೆ ಹಾಗೆ ಆಯಿತೋ ಗೊತ್ತಿಲ್ಲ. ಯಾವುದಕ್ಕೂ ಇರಲಿ ಅಂತ ನಮ್ಮ ದೊಡ್ಡಪ್ಪ ಕಾಮಾಲೆಗೆ ಔಷಧಿ‌ಕೊಡುತ್ತಿದ್ದರು ಅವರ ಬಳಿ ಹೋದೆ.    ದೊಡ್ಡಪ್ಪನ ಮಗ ಮೋಹನಣ್ಣ "ಔಷಧಿ ಆನು ಬೇಕಾದ್ರೂ ಕೊಡ್ತಿ, ಆದರೆ ನಿನಗೆ ಕಾಮಾಲೆ‌ ಅಲ್ಲ, ಕಾಮಾಲೆ ಅಲ್ದಿದ್ರೂ ಈ ಔಷಧಿ ತಗಳ್ಳಕ್ಕು, ಆದರೆ ನಾಲ್ಕ್ ತಾಸು ಮಳ್ ಹಿಡಿತು, ಬಟ್ ಲಿವರ್ರಿಗೆ ಒಳ್ಳೆದು" ಅಂದ.‌ "ಮಳ್ ಹಿಡಿತು ಅಂದ್ರೆ ಎಂತಾಕ್ತು?". ಅಂತ ಕೇಳಿದೆ' " ಔಷಧಿ ತಗಂಡು ಸ್ವಲ್ಪ‌ಹೊತ್ತಿನ ನಂತರ ಕಂಬಳಿ ಹುಳ, ಬೆಕ್ಕು ಕಾಣ್ತು, ಗೋಟಾಗಾರಿನ ಮಧುರ ಹೋದ ತಿಂಗಳು ಔಷಧಿ ತಗಂಡವ " ನೋಡು ನೋಡು ಸಾಲು ಸಾಲು ಬೆಕ್ಕು ಅಂತ ಕೂಗ್ತಿದ್ದ" ಆದ್ರೆ ಅಲ್ನೋಡಿರೆ ಎಂತದೂ ಇರ್ಲೆ" ಹಂಗೆ ಭ್ರಮೆ ಹುಟ್ಟಿಸ್ತು, ಆವಾಗ ಪದೇ ಪದೇ ಮಜ್ಜಿಗೆ ಕುಡಿಯಕು, ಮಧ್ಯಾಹ್ನ ಫುಲ್  ಕಡಿಮೆ ಆಕ್ತು" ಎಂದು ಅನುಭವದ ಸುದೀರ್ಘ ಭಾಷಣ ಕೊಟ್ಟ. "ಅಯ್ಯೋ ಭ್ರಮೆ ಸೈಯಲ, ಮಾನಸಿಕವಾಗಿ ಆನು ಗಟ್ಟಿ, ಇದೆಲ್ಲ ಡೋಂಟ್ ಕೇರ್" ವಯಸ್ಸಿಗನುಗ

#ಶಿವಮೊಗ್ಗ ಜಿಲ್ಲೆಯ ರೈತ ಹೋರಾಟದ ಹೀರೋ ಕೊಡ್ಲು ವೆಂಕಟೇಶ್#

ರೈತ ಸಂಘದ ಚಳವಳಿಗಳಲ್ಲಿ ನಮ್ಮ ತಂದೆ ಜೈಲಿಗೆ ಹೋದವರು, ಆ ದಿನದಲ್ಲಿ ಕೊಡ್ಲು ವೆಂಕಟೇಶ್ರ ಹೋರಾಟ ನಿತ್ಯ ತೀಥ೯ಹಳ್ಳಿಯಿಂದ ನಮ್ಮ ಊರಿಗೆ ಬರುತ್ತಿದ್ದ ಛಲಗಾರ ಪತ್ರಿಕೆ(ನಮ್ಮ ಅಣ್ಣ ಗಣಪತಿಯವರ ಮಿತ್ರ ಆ ಪತ್ರಿಕೆಯ ಆನಂದಪುರಂ ನ ವರದಿಗಾರರು) ಯಿಂದ ಗೋತ್ತಾಗುತ್ತಿತ್ತು. ಸಕಾ೯ರಿ ಕಚೇರಿಯಲ್ಲಿ ಕೆಲಸದ ಸಮಯದಲ್ಲಿ  ಕ್ರಿಕೆಟ್ ಕಾಮೆಂಟರಿ ಕೇಳೋದು ಈಗ FB ಅಥವ ವಾಟ್ಸ್ ಪ್ ನೋಡೋ ಅಷ್ಟೆ ಚಟ ಆಗಿತ್ತು, ಇವರ ಹೋರಾಟದಿಂದ ಇಡೀ ರಾಜ್ಯದಲ್ಲೇ ಇದೊಂದು ಸಂಚಲನೆ ಆಯಿತು ಮತ್ತು ಕಚೇರಿಗೆ ಟ್ರಾನ್ಸಿಸ್ಟರ್ ತರೋದು ಕಡಿಮೆ ಆಯಿತು. ನಾನು ಇವರನ್ನ ಆ ದಿನದಲ್ಲಿ ಭೇಟಿ ಮಾಡಬೇಕ೦ತ ಮಾಡಿದ್ದೆ ಆದರೆ ಈ ವರೆಗೆ ಆಗಿಲ್ಲ ನಿಮ್ಮ ಲೇಖನ ಇದೆಲ್ಲ ನೆನಪಿಸಿತು. ಇವರು ನಮಗೆಲ್ಲ ಹೀರೋ ಆಗಿದ್ದವರು ಆ ದಿನದಲ್ಲಿ. ಮಲೆನಾಡ ಕ್ಯಾಸ್ಟ್ರೋ ತರಹದ ಕೋಡ್ಳು ವೆಂಕಟೇಶ್   (ಕೃಪೆ :ನೆಂಪೆ ದೇವರಾಜರ FB ಲೇಖನ)  ಯೂರೋಪಿನ ತತ್ವ ಜ್ಞಾನಿಗಳಂತೆ  ಕಾಣುವ ಕೋಡ್ಳು ವೆಂಕಟೇಶ್ ಒಂದು ಕಾಲದ ಭಯಂಕರ ಅಹಿಂಸಾತ್ಮಕ ಗೆರಿಲ್ಲಾ ವಾರಿಗ.ನೌಕರಶಾಹಿ ಗಢಗಢ ನಡುಗುವಂತಹ ಇವರ ಹೋರಾಟಗಳೋ ಇಂದಿಗೂ ಮೈ ಜುಮ್ಮೆನಿಸುತ್ತವೆ.ಅರಣ್ಯವೆಂಬುದು  ಜೀವನದ ನಡುವೆ ಹಾಸು ಹೊಕ್ಕಾಗಿರಬೇಕೆಂಬುದನ್ನು ತನ್ನ ಅನುಭವದ ಮೂಲಕವೇ ನವಿರಾಗಿ ವಿವರಿಸುವ ವೆಂಕಟೇಶ್ ರೈತ ಚಳುವಳಿ ಪ್ರವರ್ಧಮಾನ ಕಾಲ ಘಟ್ಟದಲ್ಲಿ ನಿರ್ಮಿಸಿದ ಹೋರಾಟಗಳು ಒಂದೆರಡಲ್ಲ.ಎಂತಹ ಕಷ್ಟದ ಸಂದರ್ಭದಲ್ಲೂ ತನ್ನ ಭೀಭತ್ಸ ಎದೆ ನಡುಗಿಸುವ ನ್ಯಾ

#BEWARE OF FAKE AYURVEDIC MEDICINE IN THE NAME OF VAIDYA NARAYANA MURTHY NARASIPURA#

information Beware of counterfeit        drugs 1. Vaidya prepares the medicine for 27 days on the basis of sickness, sex, age, etc. of the patient. 2. Do not buy medicine by external unauthorized people or by courier. 3. Counterfeit drugs can harm innocent people or even kill them. 4. The validity of medicines made by Vaidya is up to 27 days, after which the drug expires.                सूचना नकली दवाओं से सावधान रहें 1. वैद्यजी  मरीज़ के  बीमारी, लिंग, आयु इत्यादि के आधार पर 27 दिनों के लिए औषधि तैयार करते हैं। 2. बाहरी अनधिकृत लोगों से या कुरियर द्वारा दवा न खरीदें। 3. नकली दवा सीधे-सादे लोगों को नुकसान पहुंचा सकती है या जानलेवा भी हो सकती है। 4. वैद्यजी द्वारा बनाई गयी औषधियों की  वैधता 27 दिन तक है जिसके बाद दवा की समयसीमा समाप्त हो जाती है।          ప్రకటన: నకిలీ మందులతో జాగ్రత్త 1. రోగి వయసు, లింగం, వ్యాధి తీరు ఆధారంగా వైద్యాజీ 27రోజులకు మందును రూపొందించారు 2. అనధికార వ్యక్తుల నుంచి, బయటి వ్యక్తుల ద్వారా కొరియర్ల ద్వారా మందులు కొనకండి 3. నకిలీ మందులు ప్రాణాలు

#ಇತಿಹಾಸದ ಪುಟದಲ್ಲಿ ಆನಂದಪುರಂನಲ್ಲಿ ಟಿಪ್ಪು ಸುಲ್ತಾನ್#

#ಟಿಪ್ಪೂವಿನ ಬಗ್ಗೆ ನಮ್ಮ ಊರಿನ ಚರಿತ್ರೆ ನೋಡಿ#     ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದ ಕೋಟೆಯನ್ನ ಬ್ರಿಟಿಷರು ಟಿಪ್ಪು ವಿನ ಹಯಾತ್ ಖಾನ್ ರಿಂದ ವಶಪಡಿಸಿಕೊಂಡು ಅವರ ಧ್ವಜ ಹಾರಿಸುತ್ತಾರೆ ನಂತರ ಸುಂದರವಾದ 300ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಕೋಟೆಯ ಕಂದಕಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ( ಕಾರಣ ಬ್ರಿಟಿಷ್ ಸೈನಿಕರ ಅನಾಚಾರ ) ಈ ವಿಚಾರ ತಡವಾಗಿ ಟಿಪ್ಪೂವಿಗೆ ಗೊತ್ತಾಗುತ್ತದೆ ತಕ್ಷಣ ಶ್ರೀರಂಗಪಟ್ಟಣದಿಂದ ಸೈನ್ಯದ ತುಕಡಿ ಕಳಿಸಿ ಬ್ರಿಟಿಷ್ ಸೈನಿಕರನ್ನ ಹೆಡೆಮುರಿ ಕಟ್ಟಿ ಶ್ರೀರಂಗಪಟ್ಟಣದ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆಯಿಂದ ಅವರನ್ನೆಲ್ಲ ಕೊಲ್ಲುತ್ತಾನೆ (ಇದು ಗೆಜೆಟೆಯರ್ ನಲ್ಲಿ ದಾಖಲಾದ ವಿಷಯ) .      ಇದೇ ಟಿಪ್ಪು ಆನಂದಪುರದ ಮಾಗ೯ವಾಗಿ ಬಿದನೂರು ಕೋಟೆಗೆ ಸಂಚಾರ ಹೋಗುವಾಗ ಆನಂದಪುರದ ಮಸೀದಿಗೆ ಪ್ರಾಥ೯ನೆ ಸಲ್ಲಿಸುತ್ತಾರೆ ಅಂತ ಹಿಂದಿನ ದಿನ ಸುದ್ದಿಯಾದಾಗ ಆನಂದಪುರದ ಅಗ್ರಹಾರದ ಪುರೋಹಿತರು ಹೆದರುತ್ತಾರೆ, ರಾತ್ರೋರಾತ್ರಿ ಶ್ರೀ ರಾಮ ದೇವರನ್ನ ಶ್ರೀರಂಗನಾಥ ಎಂದು ಮರು ನಾಮಕರಣ ಮಾಡಿ ಮರುದಿನ ಮಸೀದಿಗೆ ಬರುವ ಟಿಪ್ಪುವಿಗೆ ಸ್ವಾಗತ ಮಾಡಿ ತಮ್ಮ ದೇವಾಲಯಕ್ಕೆ ಆಹ್ವಾನಿಸುತ್ತಾರೆ, ಟಿಪ್ಪು ಯಾವ ದೇವರು ಅಂತ ಕೇಳಿದಾಗ ಶ್ರೀರಂಗನಾಥ ಅಂದಾಗ ಅಚ್ಚಾ ಚಲೋ ಅಂತ ಹೇಳಿ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ , ಪುರೋಹಿತರಿಗೆ ಮತ್ತು ಇಡೀ ಅಗ್ರಹಾರಕ್ಕೆ ದೇಣಿಗೆ ನೀಡಿದ ಚರಿತ್ರೆ ಇದೆ.      ಒಂದು ಊರಿನಲ್ಲಿ ನಡೆದ

#ನಾಗೇಂದ್ರ ಸಾಗರ್ ಸಾವಯವ ಕೃಷಿ ವಿಜ್ಞಾನಿ ಗೆಳೆಯ #

ಇವತ್ತು ಗೆಳೆಯ ನಾಗೇಂದ್ರ ಸಾಗರ್ ತಂದು ಕೊಟ್ಟ ಸಾವಯವ ಆಕ್ಕಿ ಅನ್ನ ಮಾಡಿ ಊಟ ಮಾಡಿದಾಗ ಆದ ಪರಮಾನಂದ ವಣಿ೯ಸಲು ಸಾಧ್ಯವಿಲ್ಲ.   ಇವರು ಈ ಭಾಗದ ಕೃಷಿ ವಿಜ್ಞಾನಿ, ಜೇನು ಸಾಗಾಣಿಕೆ ತರಬೇತುದಾರರು, ಎರೆಹುಳದ ಗೊಬ್ಬರ ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಉದ್ದಿಮೆದಾರರು, ಡೈರಿ ಮಾಲಿಕರು, ಪಶು ಆಹಾರ ತಯಾರಕರು, ಹನಿ ನೀರಾವಾರಿ, ನಸ೯ರಿ, ಅಪರೂಪದ ಹೂವು, ಹಣ್ಣಿನ ತಳಿ ಸಂರಕ್ಷರು.   ಇವರ ಹತ್ತಿರ ಸಾವಯವ ಅಕ್ಕಿ, ಎರೆಹುಳ ಗೊಬ್ಬರ, ಸೂಜಿ ಮೆಣಸು, ಮಲೆನಾಡು ಗಿಡ್ಡದ ಪರಿಶುದ್ಧ ತುಪ್ಪಾ, ತುಡುವೆ ಜೇನುತುಪ್ಪಾ, ಕೆಂಪು ಜೋಳಗದ ಅಕ್ಕಿ, ಮಲೆನಾಡಿನ ಅಪರೂಪದ ಮಾವಿನ ಮಿಡಿ ಉಪ್ಪಿನ ಕಾಯಿ ಹೀಗೆ ಮಾರುಕಟ್ಟೆಯಲ್ಲಿ ಸಿಗದ ವಸ್ತುಗಳಿಗೆ ನಾನು ಅವರನ್ನ ಪೀಡಿಸುತ್ತೇನೆ, ಎಲ್ಲಿಂದಲೋ ಸಂಗ್ರಹಿಸಿ ಕೊಡುತ್ತಾರೆ. ಆದರೆ ಇವರ ಹಿನ್ನೆಲೆ ಕೇಳಿ ಒಂದು ಕಾಲದ ಖ್ಯಾತ ಪತ್ರಕತ೯ರಾದ ವಿ.ಎನ್.ಸುಬ್ಬರಾವ್ರರ ಶಿಷ್ಯ, ಇವತ್ತಿನ ಪಬ್ಲಿಕ್ ಟಿವಿ ರಂಗನಾಥ, ಸುದ್ದಿ ಟಿವಿ ಸ೦ಪಾದಕರು, ರವಿ ಬೆಳೆಗೆರೆ, ನಟ ಪ್ರಕಾಶ್ ರೈ ರ ಗೆಳೆಯರಾದವರು, ಬೆಂಗಳೂರು ಬೇಡ ಅನ್ನಿಸಿ ಹಳ್ಳಿಗೆ ಬಂದವರು ಆನಂದಪುರದ ಸಮೀಪದಲ್ಲಿ ಅವರ ಪಿತ್ರಾಜಿ೯ತ ಜಮೀನಿನಲ್ಲಿ ರಬ್ಬರ್ ಬೇಸಾಯ ಪ್ರಾರಂಬಿಸಿ ಸಾಗರದ ಮಾರಿಕಾಂಬ ದೇವಾಲಯದ ಹಿಂಬಾಗದಲ್ಲಿ ಸಾಗರ್ ಅಗ್ರಿ ಕೋ ಎಂಬ ರೈತರ ಅವಶ್ಯಕತೆಯ ನೀರಿನ ಪಂಪ್, ಡ್ರಿಪ್ ನೀರಾವರಿ ಇತ್ಯಾದಿ ಸಲಕರಣೆ ಮಾರಾಟ ಮಳಿಗೆ ಸಾಗರದಲ್ಲಿ ಮೊಟ್ಟ ಮೊದಲಿಗೆ ಪ್ರಾರ೦ಬಿಸಿದರು.

#ಬೆಹೆರೆನ್ ನಲ್ಲಿ ಯಶಸ್ವಿ ಉದ್ದಿಮೆದಾರನಾಗಿರುವ ಸಾಗರದ ಯುವಕ#

#ಬೆಹೆರೆನ್ ನಲ್ಲಿ JANAM TV ವಿಭಾಗ ಪ್ರಾರಂಬಿಸಿರುವ ಸಾಗರದ ಯುವ ಉದ್ಯಮಿ ಸಿಸೆಲ್ ಸೋಮನ್#    ಸಾಗರದ ದಿII ಸೋಮನ್ ನಿವೃತ್ತ ಸೈನಿಕರು, ಗುತ್ತಿಗೆದಾರರು, ರಬ್ಬರ್ ಪ್ಲಾOಟರ್, ಸಮಾಜ ಸೇವಕರಾಗಿದ್ದವರು ಅವರ ದೊಡ್ಡ ಮಗ ಸಿಸೆಲ್ ಸೋಮನ್ ಬೆಹೆರೆನ್ ನಲ್ಲಿ ಉದ್ದಿಮೆದಾರರಾಗಿದ್ದಾರೆ, ಕಟ್ಟಡ ನಿಮಾ೯ಣ ಸಂಸ್ಥೆ, ರೆಸ್ಟೋರOಟ್ ಗಳ ಮಾಲಿಕರಾಗಿ ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ.   ಭಾರತದಿಂದ ಬೆಹೆರೆನ್ ಗೆ ಹೋಗುವ ಭಾರತ ಸಕಾ೯ರದ ಎಲ್ಲಾ ಪ್ರಮುಖರಿಗೆ ಇವರು ಪರಿಚಿತರು, ಬೆಹರನ್ ನಲ್ಲಿ ದೊಡ್ಡ ಸಂಪಕ೯ ಹೊಂದಿರುವ ಇವರ ಉದ್ದಿಮೆಯ ಗರಿಗೆ ಈಗ ಹೊಸದಾಗಿ JANAM TV ಬೆಹೆರನ್ ವಿಭಾಗ ಸೇರಿದೆ.   ನಮ್ಮ ಜಿಲ್ಲೆಯ ಈ ಸಾಹಸಿ ಯುವ ಉದ್ದಿಮೆದಾರ ಸಿಸಿಲ್ ಸೋಮನ್ ಗೆ ಇನ್ನು ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. Indian Business Man Bags ‘Youth Business Ikon Award’ Chief of Janam television Bahrain Sisel Panayil Soman acknowledged for his service in empowering youths. Tuesday November 27th 2018 Sharon Joseph Rules and regulations set in place give entrepreneurs a great space to grow and thrive in Bahrain, Indian businessman Sisel Panayil Soman said to Albilad.  The young entrepreneur was awarded the ‘Youth Business Ikon Award  2