#ಸಾಗರ ತಾಲ್ಲೂಕಿನ ಕಾಂಗ್ರೇಸ್ ನೇತಾರರಾದ ಪ್ರೀತಿಯ ಖಾನ್ ಸಾಹೇಬರು#
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರು ಲೋಕಸಭೆಗೆ ಕಾಂಗ್ರೇಸ್ ವಿರುದ್ಧ ಸ್ಪದಿ೯ಸಿದಾಗ ಹೇಳುತ್ತಿದ್ದರು ಯಾರಾದರೂ ಬದಲಾಗಿ ಬೇರೆ ಪಕ್ಷಕ್ಕೆ ಓಟು ನೀಡ ಬಹುದು ಆದರೆ ಆ ಸಾಗರದ ಖಾನ್ ಮತ್ತು ಪೈ (ಪುತ್ತೂರಾಯರ ಬಗ್ಗೆ) ಮಾತ್ರ ಕೈ ಬಿಟ್ಟು ಬರೊಲ್ಲ ಅಂತ.
ಅದಕ್ಕೆ ಕಾರಣವೂ ಇದೆ, ಗುಂಡೂರಾಯರ ಕಾಲದಲ್ಲಿ ಬಂಗಾರಪ್ಪರನ್ನ ಹಣಿಯಲು ಜನತಾ ಪಕ್ಷದಿಂದ ಕಾಗೋಡರನ್ನ ತಂದು ವಿದಾನ ಪರಿಷತ್ ಸದಸ್ಯರನ್ನಾಗಿಸಿ ಮಂತ್ರಿ ಮಾಡಿದ ಕಾಯ೯ದಲ್ಲಿ ಆಹಮದ್ ಆಲೀ ಖಾನ್ ಸಾಹೇಬರ ಕೆಲಸ ದೊಡ್ಡದು.
ಸ್ವಾತಂತ್ರ್ಯ ನಂತರದ 1952 ರಿಂದ ಪ್ರಾರಂಭವಾದ ಚುನಾವಣೆಯಿಂದ ಈ ವರೆಗಿನ ಚುನಾವಣೆ ವರೆಗೆ ನೇರ ನೋಡಿದವರು, ರಾಜಕಾರಣ ಮಾಡಿದವರು ಇವರು, ಸಾಗರ ತಾಲ್ಲೂಕಿನ ಕಾಂಗ್ರೇಸ್ ಅಧ್ಯಕ್ಷರಾಗಿ ಪಕ್ಷ ಸಂಘಟಿಸಿದವರು, ಪುರಸಭಾ ಅಧ್ಯಕ್ಷರೂ ಆದವರು.
1989ರಲ್ಲಿ ಸಾಗರ ವಿಧಾನ ಸಭೆಗೆ ಕಾಗೋರರನ್ನ ಪುನಃ ಕರೆ ತಂದವರು ಆಗಲೇ ನಮ್ಮಂತವರನ್ನೆಲ್ಲ ಹಿಡಿದು ತಂದು ಕಾಂಗ್ರೇಸ್ಗೆ ಸೇರಿಸಿ ಕೊಂಡವರು, ಇವರ ಮಾಗ೯ದಶ೯ನದಿಂದಲೇ ನಾನು ಗ್ರಾ.ಪಂ., ಜಿ.ಪಂ ಗೂ ಹೋಗುವ೦ತಾಯಿತು, ಸಾಗರ ತಾಲ್ಲೂಕಿನಲ್ಲಿ ಇವರ ಗರಡಿಯಲ್ಲಿ ತಯಾರಾದ ನಾಯಕರು ನೂರಾರು.
ಈಗ 86 ರ ವಯೋಮಾನದ ಇವರು ನಿವೃತ್ತ ಜೀವನ ಮಾಡುತ್ತಿದ್ದಾರೆ, ಯೋಗ್ಯರಾದ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿ ಮಕ್ಕಳ ಒಂದಿಗೆ ಸಂತೃಪ್ತ ಜೀವನ ಅವರದ್ದು.
ಇತ್ತೀಚಿಗೆ ಅನಾರೋಗ್ಯದಿಂದ ಮಣಿಪಾಲದಲ್ಲಿ 15 ದಿನ ಚಿಕಿತ್ಸೆ ಪಡೆದು ಬಂದಿದ್ದಾರೆಂದು ತಿಳಿದು ಮೊನ್ನೆ ಸಂಜೆ ಇವರನ್ನ ಬೇಟಿ ಮಾಡಲು ಸಾಗರಕ್ಕೆ ಹೋಗಿದ್ದೆ, ಈ ಇಳಿ ವಯಸ್ಸಿನಲ್ಲೂ ಬಂದವರ ಆತಿಥ್ಯ ಮರೆಯದೆ ನಮಗೆ ಬ್ಲಾಕ್ ಟೀ ಮತ್ತು ಬಿಸ್ಕತ್ ನೀಡಿದರು, ಅವತ್ತೆ ಬೆಳಿಗ್ಗೆ ಕಾಗೋಡು ತಿಮ್ಮಪ್ಪನವರು ಬಂದು ಹೋಗಿದ್ದರು.
ಇವರ ಸಣ್ಣ ಮಗ ಮೊಹಿಸಿನ್ ಖಾನ್ ಜೊತೆ ಇದ್ದಾರೆ, ಮೊಹಿಸಿನ್ ನನ್ನ ಕ್ಲಾಸ್ ಮೇಟ್ ಕೂಡ ಈಗ ಅವರು ಶುಂಠಿ ಮತ್ತು ಅಡಕೆ ವ್ಯಾಪಾರಿಗಳು, ದೊಡ್ಡ ಮಗ ಮನ್ಜೂರ್ ಖಾನ್ ನಗರಸಭಾ ಸದಸ್ಯರು, ಇನ್ನಿಬ್ಬರು ಮತೀನ್ ಖಾನ್ ಮತ್ತು ಮೆಹರ್ ಖಾನ್.
ಸಾಗರದ ಕಾಂಗ್ರೇಸ್ ಕಚೇರಿ ಗಾಂಧಿ ಮಂದಿರದಲ್ಲಿ ಮೊದಲ ಚುನಾವಣೆಯಿಂದ ಈವರೆಗೂ ಪಕ್ಷಾಂತರ ಮಾಡದ ಏಕೈಕ ವ್ಯಕ್ತಿ ಇವರೊಬ್ಬರೇ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment