ಭಾಗ - 13 ಆನಂದಪುರಂ ಗೆ ನಡೆದಾಡುವ ಸಂತ, ಭೂದಾನ ಚಳವಳಿ ನೇತಾರ ಆಚಾಯ೯ ವಿನೋಬಾ ಭಾವೆ ಬೇಟಿ ಮತ್ತು ಭೂದಾನ ಪಡೆದ ವಿವರಗಳು.
#ಬಾಗ_13 #ಎಣ್ಣೆಕೊಪ್ಪದ_ಮಲ್ಲಿಕಾರ್ಜುನ_ಗೌಡರು_ಬದರಿನಾರಾಯಣ್_ಅಯ್ಯಂಗಾರರಿಂದ #ನಡೆದಾಡುವ_ಸಂತ_ವಿನೋಬಬಾವೆ_ಆನಂದಪುರಂಗೆ_ನಡೆದು_ಬರುತ್ತಾರೆ #ಭೂದಾನ_ಮಾಡುವ_ಅಯ್ಯಂಗಾರ್_ಕುಟುಂಬದ_ಜೊತೆ_ಕೈಜೋಡಿಸಿದ_ಸ್ಥಳಿಯ_ಮಹನೀಯರು. #ಹೊಸಕೊಪ್ಪದ_ಕೌತಿನಾಗಪ್ಪ_ಮತ್ತವರ_ತಂದೆಯ_ಶ್ರಮ. #ಇರುವಕ್ಕಿ_ಕುಂಬಾರ_ಚೌಡಶೆಟ್ಟರಿಂದ_5_ಎಕರೆ_ನೀರಾವರಿ_ಜಮೀನು_ದಾನ. ನಡೆದಾಡುವ ಸಂತರೆಂದೆ ಕರೆಯುವ ಆಚಾಯ೯ ವಿನೋಬಾ ಭಾವೆ ಆನಂದಪುರಂಗೆ ಬಂದಿದ್ದರು, ಭೂದಾನ ಚಳವಳಿಯಲ್ಲಿ ಆನಂದಪುರಂ ನ ಭೂ ಮಾಲಿಕರು ಭಾಗಿಯಾಗಿದ್ದರು ಅಂದರೆ ನಂಬಲಾಗದ ಸಂಗತಿ ಆದರೆ ಭೂದಾನ ಚಳವಳಿಯಲ್ಲಿ ಬದರಿನಾರಾಯಣ ಅಯ್ಯಂಗಾರ್ ಕುಟುಂಬ ಭಾಗಿ ಆಗುತ್ತದೆ. ಇದಕ್ಕೆ ಮುಖ್ಯಕಾರಣ ಶಿವಮೊಗ್ಗ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ಸೊರಬ ತಾಲ್ಲೂಕಿನ ಎಣ್ಣೆ ಕೊಪ್ಪದ ಮಲ್ಲಿಕಾರ್ಜುನ ಗೌಡರು , ಅವರಿಗೂ ಸ್ವಾತಂತ್ರ್ಯ ಹೋರಾಟಗಾರ ಕಾಂಗ್ರೇಸ್ ಮುಖಂಡ ಬದರಿನಾರಾಯಣ ಅಯ್ಯಂಗಾರರಿಗೂ ಇದ್ದ ಗಳಸ್ಯ ಕಂಠಸ್ಯ ಗೆಳೆತನ, ದೇಶಪ್ರೇಮ ಮತ್ತು ಮಹಾತ್ಮಾ ಗಾಂಧಿಯವರ ಪ್ರೇರಣೆ. ಎಣ್ಣೆಕೊಪ್ಪದ ಮಲ್ಲಿಕಾರ್ಜುನ ಗೌಡರ ಆ ಕಾಲದ ಓಡಾಟದ ವಾಹನ ಒಂಟೆತ್ತಿನ ಗಾಡಿ ಆಗಿತ್ತು. ಗಾಂಧೀಜಿ ಜೊತೆ ಸಬರಮತಿ ಆಶ್ರಮವಾಸಿ ಆಗಿದ್ದ ಬಾವೆ ಅವರು ಗಾಂದೀಜಿ ಅವರ ಸವೋ೯ದಯ ಮತ್ತು ಗ್ರಾಮ ಸ್ವರಾಜ್ಯದಿಂದ ಪ್ರೇರೇಪಿತರಾಗಿ ಸ್ವಯಂ ಭೂ ಸುದಾರಣ ಚಳವಳಿ ಆದ...