Skip to main content

Posts

Showing posts with the label our carry bags are biodegradable and compostable corn starch bags

Blog number 1876. ಪ್ಲಾಸ್ಟಿಕ್ ಕೈ ಚೀಲಕ್ಕೆ ಪರ್ಯಾಯವಾಗಿ ಮೆಕ್ಕೆ ಜೋಳದ ಗಂಜಿಯಿಂದ ತಯಾರಾಗುತ್ತಿರುವ ಮಣ್ಣಿನಲ್ಲಿ ಕರಗುವ ಪರಿಸರ ಸ್ನೇಹಿ ಕೈ ಚೀಲ ನಮ್ಮ ಮಲ್ಲಿಕಾ ವೆಜ್ ಬಳಸುತ್ತಿದೆ.

https://youtu.be/EBI7L_t7PRU?feature=shared #ಮೆಕ್ಕೆ_ಜೋಳದ_ಗಂಜಿಯಿಂದ_ಪ್ಲಾಸ್ಟಿಕ್_ಪಯಾ೯ಯ_ಕ್ಯಾರಿ_ಬ್ಯಾಗ್  #ಹೋಟೆಲ್_ಮಾಲಿಕರ_ಸಂಘಟನೆಗಳು_ಈ_ಕ್ಯಾರಿ_ಬ್ಯಾಗ್_ಗಳಿಗೆ_ಬೆಂಬಲಿಸಬೇಕು #ಇವತ್ತು_ನಮ್ಮ_ಮಲ್ಲಿಕಾ_ವೆಜ್_ಗೆ_ತಲುಪಿದೆ. #ಐ_ಆಮ್_ನಾಟ್_ಪ್ಲಾಸ್ಟಿಕ್ #ಬಯೋಡಿಗ್ರೇಡೇಬಲ್_ಕಾಂಪೋಸ್ಟೇಬಲ್ #ಮೇಡ್_ಪ್ರಮ್_ಕಾರ್ನ್_ಸ್ಟಾರ್ಚ್ #ಎನ್ನುವ_ವಾಕ್ಯದಲ್ಲಿ_ಉದ್ಯಮಿ_ಗಣೇಶ್_ಅಂಗಡಿ_ಹೊಸ_ಉದ್ಯಮ_ಪ್ರಾರಂಬಿಸಿದ್ದಾರೆ.   ಮೊನ್ನೆ ಸಂಜೆ ನನ್ನ ಆಫೀಸಿನ ಟೇಬಲ್ ಮೇಲೆ ಹಸಿರು ಬಣ್ಣದ 16 x 20 ಸೈಜಿನ ಕ್ಯಾರಿ ಬ್ಯಾಗ್ ಇತ್ತು ಅದರ ಮೇಲೆ ಫೋನ್ ನಂಬರ್  98800 44040 ಬರೆದಿತ್ತು.   ನಾನು ಯೋಚಿಸಿದ್ದು ಯಾರೋ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಮಾರಾಟಗಾರರು ಸ್ಯಾಂಪಲ್ ಇಟ್ಟಿದ್ದಾರೆ ಅಂತ ಭಾವಿಸಿ ಕೈಯ ಬೆರಳಿಂದ ಸ್ಪರ್ಶಿಸಿದರೆ ಪ್ಲಾಸ್ಟಿಕ್ ಅಲ್ಲ ಅನ್ನಿಸಿತು ಈ ಕ್ಯಾರಿ ಬ್ಯಾಗ್ ಮೇಲೆ ಐ ಆಮ್ ನಾಟ್ ಪ್ಲಾಸ್ಟಿಕ್ - ಬಯೋಡಿಗ್ರೇಡೇಬಲ್- ಕಾಂಪೋಸ್ಟೇಬಲ್ - ಮೇಡ್ ಪ್ರಮ್ ಕಾರ್ನ್ ಸ್ಟಾರ್ಚ್ ಅನ್ನುವ ವಾಕ್ಯಗಳು ಅಚ್ಚಾಗಿತ್ತು.    ಮೇಲಿನ ಸಂಖ್ಯೆಗೆ ಸಂದೇಶ ಕಳಿಸಿ ವಿವರ ಕೇಳಿದೆ ಸ್ವಲ್ಪ ಸಮಯದ ನಂತರ ಅವರಿಂದ ಫೋನ್ ಬಂತು ಅವರು ಗಣೇಶ್ ಅಂಗಡಿ ಅಂತ ಶಿವಮೊಗ್ಗ ಸಮೀಪದಲ್ಲಿನ ಗಾಜನೂರಿನಲ್ಲಿ ಅಡಿಕೆ ತೋಟ ಇದೆ, ಔಷಧಿಗಳ ಸಗಟು ವ್ಯಾಪಾರವಿದೆ, ಬೆಂಗಳೂರಲ್ಲಿ ಈ ಹೊಸ ಪರಿಸರ ಸ್ನೇಹಿ ಉದ್...