Blog number 1876. ಪ್ಲಾಸ್ಟಿಕ್ ಕೈ ಚೀಲಕ್ಕೆ ಪರ್ಯಾಯವಾಗಿ ಮೆಕ್ಕೆ ಜೋಳದ ಗಂಜಿಯಿಂದ ತಯಾರಾಗುತ್ತಿರುವ ಮಣ್ಣಿನಲ್ಲಿ ಕರಗುವ ಪರಿಸರ ಸ್ನೇಹಿ ಕೈ ಚೀಲ ನಮ್ಮ ಮಲ್ಲಿಕಾ ವೆಜ್ ಬಳಸುತ್ತಿದೆ.
https://youtu.be/EBI7L_t7PRU?feature=shared
#ಮೆಕ್ಕೆ_ಜೋಳದ_ಗಂಜಿಯಿಂದ_ಪ್ಲಾಸ್ಟಿಕ್_ಪಯಾ೯ಯ_ಕ್ಯಾರಿ_ಬ್ಯಾಗ್
#ಹೋಟೆಲ್_ಮಾಲಿಕರ_ಸಂಘಟನೆಗಳು_ಈ_ಕ್ಯಾರಿ_ಬ್ಯಾಗ್_ಗಳಿಗೆ_ಬೆಂಬಲಿಸಬೇಕು
#ಇವತ್ತು_ನಮ್ಮ_ಮಲ್ಲಿಕಾ_ವೆಜ್_ಗೆ_ತಲುಪಿದೆ.
#ಐ_ಆಮ್_ನಾಟ್_ಪ್ಲಾಸ್ಟಿಕ್
#ಬಯೋಡಿಗ್ರೇಡೇಬಲ್_ಕಾಂಪೋಸ್ಟೇಬಲ್
#ಮೇಡ್_ಪ್ರಮ್_ಕಾರ್ನ್_ಸ್ಟಾರ್ಚ್
#ಎನ್ನುವ_ವಾಕ್ಯದಲ್ಲಿ_ಉದ್ಯಮಿ_ಗಣೇಶ್_ಅಂಗಡಿ_ಹೊಸ_ಉದ್ಯಮ_ಪ್ರಾರಂಬಿಸಿದ್ದಾರೆ.
ಮೊನ್ನೆ ಸಂಜೆ ನನ್ನ ಆಫೀಸಿನ ಟೇಬಲ್ ಮೇಲೆ ಹಸಿರು ಬಣ್ಣದ 16 x 20 ಸೈಜಿನ ಕ್ಯಾರಿ ಬ್ಯಾಗ್ ಇತ್ತು ಅದರ ಮೇಲೆ ಫೋನ್ ನಂಬರ್ 98800 44040 ಬರೆದಿತ್ತು.
ನಾನು ಯೋಚಿಸಿದ್ದು ಯಾರೋ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಮಾರಾಟಗಾರರು ಸ್ಯಾಂಪಲ್ ಇಟ್ಟಿದ್ದಾರೆ ಅಂತ ಭಾವಿಸಿ ಕೈಯ ಬೆರಳಿಂದ ಸ್ಪರ್ಶಿಸಿದರೆ ಪ್ಲಾಸ್ಟಿಕ್ ಅಲ್ಲ ಅನ್ನಿಸಿತು ಈ ಕ್ಯಾರಿ ಬ್ಯಾಗ್ ಮೇಲೆ ಐ ಆಮ್ ನಾಟ್ ಪ್ಲಾಸ್ಟಿಕ್ - ಬಯೋಡಿಗ್ರೇಡೇಬಲ್- ಕಾಂಪೋಸ್ಟೇಬಲ್ - ಮೇಡ್ ಪ್ರಮ್ ಕಾರ್ನ್ ಸ್ಟಾರ್ಚ್ ಅನ್ನುವ ವಾಕ್ಯಗಳು ಅಚ್ಚಾಗಿತ್ತು.
ಮೇಲಿನ ಸಂಖ್ಯೆಗೆ ಸಂದೇಶ ಕಳಿಸಿ ವಿವರ ಕೇಳಿದೆ ಸ್ವಲ್ಪ ಸಮಯದ ನಂತರ ಅವರಿಂದ ಫೋನ್ ಬಂತು ಅವರು ಗಣೇಶ್ ಅಂಗಡಿ ಅಂತ ಶಿವಮೊಗ್ಗ ಸಮೀಪದಲ್ಲಿನ ಗಾಜನೂರಿನಲ್ಲಿ ಅಡಿಕೆ ತೋಟ ಇದೆ, ಔಷಧಿಗಳ ಸಗಟು ವ್ಯಾಪಾರವಿದೆ, ಬೆಂಗಳೂರಲ್ಲಿ ಈ ಹೊಸ ಪರಿಸರ ಸ್ನೇಹಿ ಉದ್ಯಮ ಪ್ರಾರಂಬಿಸಿದ್ದಾರೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ಸಾಗರದ ವರದಳಿಯ ಶ್ರೀಧರಾಶ್ರಮಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿ ವಾಪಾಸಾಗುವಾಗ ನಮ್ಮ #ಮಲ್ಲಿಕಾ_ವೆಜ್ ನಲ್ಲಿ ಉಪಹಾರ ಸೇವಿಸಲು ನಿಲ್ಲಿಸಿದ್ದಾರೆ (ಈ ಮಾರ್ಗದಲ್ಲಿ ಯಾವಾಗಲು ನಮ್ಮ ಮಲ್ಲಿಕಾ ವೆಜ್ ಕಾಫಿ ಅವರಿಗೆ ಇಷ್ಟವಂತೆ) ನನ್ನ ಆಫೀಸಿನಲ್ಲಿ ಈ ಪರಿಸರ ಸ್ನೇಹಿ ಕ್ಯಾರಿ ಬ್ಯಾಗ್ ಸ್ಯಾಂಪಲ್ ಇಟ್ಟು ಹೋಗಿದ್ದಾರೆ.
ಅವರಿಗೆ ನಾನು ಸಂಪರ್ಕ ಮಾಡಿದ್ದು ಖುಷಿ ತಂದಿದೆ ಅಂದರು ನನಗೂ ಅವರ ಉತ್ಪನ್ನ ತುಂಬಾ ಖುಷಿ ತಂದಿದೆ ಪ್ಲಾಸ್ಟಿಕ್ ಬದಲಿ ಮಣ್ಣಿನಲ್ಲಿ ಕರಗುವ ಕ್ಯಾರಿ ಬ್ಯಾಗ್ ಬೇಕಾಗಿದೆ ಅದರಲ್ಲೂ ಯಥೇಚ್ಛವಾಗಿ ಬೆಳೆಯುವ ಮೆಕ್ಕೆ ಜೋಳದಿಂದ ಈ ಕ್ಯಾರಿ ಬ್ಯಾಗ್ ತಯಾರಾಗುತ್ತಿದೆ ಎಂದರೆ ರೈತರ ಮೆಕ್ಕೆಜೋಳಕ್ಕೆ ಇದು ಮೌಲ್ಯವರ್ಧನೆ ಮಾಡಿದಂತೆ.
20 ವರ್ಷದ ಹಿಂದೆ ಡಿಸ್ಕವರಿ ಚಾನಲ್ ಇಂತಹ ಹೊಸ ಅವಿಷ್ಕಾರದ ಸಂಶೋದನೆಯ ಸೂಚನೆಯ ತಿಳಿಸಿತ್ತು ಅದು ನನಸಾಗಿದೆ.
ಒಂದು ಕೇಜಿಗೆ ರೂ 230 ರಂತೆ ಕ್ಯಾರಿ ಬ್ಯಾಗ್ ಮಾರಾಟ ಮಾಡುತ್ತಿದ್ದಾರೆ ನಾನು 13X16 ( ಒಂದು ಕೇಜಿಯಲ್ಲಿ 102 ಕ್ಯಾರಿ ಬ್ಯಾಗ್ ಬರುತ್ತದೆ ಒಂದು ಕ್ಯಾರಿ ಬ್ಯಾಗ್ ಬೆಲೆ ರೂ 2.30) ಮತ್ತು 16 x 20 (53 ಕ್ಯಾರಿ ಬ್ಯಾಗ್ ಒಂದಕ್ಕೆ ರೂ 4.60) ತಲಾ 5 ಕೇಜಿ ಖರೀದಿಸಿದ್ದೇನೆ.
ಈ ಮೂಲಕ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸಬಾರದೆಂಬ ತೀರ್ಮಾನಕ್ಕೆ ಬಂದಿದ್ದೇನೆ ಆಸಕ್ತರು ಉದ್ಯಮಿ ಗಣೇಶ್ ಅಂಗಡಿ ಅವರ ಸೆಲ್ ನಂಬರ್ 98800 44040 ಮೂಲಕ ಸಂಪರ್ಕಿಸಬಹುದು.
Comments
Post a Comment