Blog number 1891. ಟೈಪ್ 2 ಮದುಮೇಹ ಕಾಯಿಲೆ ಔಷಧಿ ಮಾತ್ರದಿಂದ ಗುಣಪಡಿಸಲಾಗದ್ದು ನಮ್ಮ ನಿತ್ಯ ಆಹಾರ ಮತ್ತು ಜೀವನ ಶೈಲಿ ಬದಲಿಸುವುದರ ಮೂಲಕ ಗುಣಪಡಿಸಲು ಸಾಧ್ಯವಿದೆ ಶಿವಮೊಗ್ಗದ ತಜ್ಞ ವೈದ್ಯ ಡಾಕ್ಟರ್ ಪ್ರೀತಂರ ಲೇಖನ ಈ ಓದಿ.
#ಡಯಾಬಿಟೀಸ್_ನಿಮಗಾಗಲಿ_ನಿಮ್ಮ_ಕುಟುಂಬದಲ್ಲಿ_ಯಾರಿಗಾದರು_ಇದ್ದಲ್ಲಿ
#ಈ_ಲೇಖನ_ತಪ್ಪದೇ_ಓದಿ.
#ಡಾಕ್ಟರ್_ಪ್ರೀತಮ್_ಬರೆದ_ಲೇಖನ.
#ಶಿವಮೊಗ್ಗದ_ಪ್ರಖ್ಯಾತ_ಡಯಾಬಿಟೀಸ್_ತಜ್ಞರು.
#ನಾನು_2008ರಿಂದ_ಇವರಲ್ಲಿ_ಚಿಕಿತ್ಸೆ_ಪಡೆಯುತ್ತಿದ್ದೇನೆ
#ನನ್ನ_ನೂರಾರು_ಗೆಳೆಯರು_ಇವರಿಂದ_ಹೊಸ_ಜೀವನ_ಪಡೆದಿದ್ದಾರೆ
#ಯಾವತ್ತೂ_ರಾಂಗ್_ಡಯಾಗ್ನೇಸ್_ಮಾಡದ_ದಿಲ್_ದಾರ್_ಡಾಕ್ಟರ್.
#ಇವರ_ಐಲೆಟ್ಸ್_ಆಸ್ಪತ್ರೆ_ಹೊಸ_ವರ್ಷದಿಂದ_ಜ್ಯೂವೆಲ್_ರಾಕ್_ರಸ್ತೆಯ_ಜಿಲ್ಲಾ_ಬಿಜೆಪಿ_ಕಛೇರಿ_ಎದುರಿಗೆ_ಸ್ಥಳಾಂತರಿಸಿದ್ದಾರೆ.
ಇಂತಹ ಕ್ರಿಯಾಶೀಲ ವೈದ್ಯರು ಅಪರೂಪದಲ್ಲಿ ಅಪರೂಪ, ಇವರ ಹವ್ಯಾಸ ಬೈಕ್ ರೈಡರ್, ಕಾರ್ ರೇಸ್, ಕ್ರಿಕೆಟ್, ಇವರು ಪ್ರಥಮ ದರ್ಜೆ ಕ್ರಿಕೆಟ್ ಹಂಪೈರ್ ಅರ್ಹತೆ ಪಡೆದಿದ್ದಾರೆ.
ಇವರನ್ನು 2008ರಲ್ಲಿ ನನಗೆ ಪರಿಚಯಿಸಿದವರು ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜು ಮಾಲಿಕರಾದ ಡಾಕ್ಟರ್ ನಾಗೇಂದ್ರ.
ಕಳೆದ 15 ವರ್ಷದಿಂದ ನನ್ನ ಮತ್ತು ನನ್ನ ಕುಟುಂಬದ ಎಲ್ಲರ ಮದುಮೇಹದ ನಿಯಂತ್ರಣ ಸಾಧವಾಗಿದ್ದು ಡಾಕ್ಟರ್ ಪ್ರೀತಮರಿಂದ ಇವರ ಇಡೀ ಕುಟುಂಬ ವೈದ್ಯ ಕುಟುಂಬ ಈ ಬಗ್ಗೆ ಈ ಹಿಂದೆ ನಾನು ಬರೆದ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಓದಬಹುದು.
https://arunprasadhombuja.blogspot.com/2022/05/blog-number-864_17.html
ಇವರ ಡಯಾಬಿಟೀಸ್ ರಿವರ್ಸಲ್ ನಾನೂ ಅನುಸರಿಸುತ್ತಿದ್ದೇನೆ ಮತ್ತು ನನ್ನ ಕುಟುಂಬ ಮತ್ತು ಆಪ್ತ ವಲಯದ ಗೆಳೆಯರು ಕೂಡ, ನೀವು ಡಯಾಬಿಟೀಸ್ ನಿಂದ ಬಳಲುತ್ತಿದ್ದರೆ ಅಥವ ನಿಮ್ಮ ಕುಟುಂಬದಲ್ಲಿ ಯಾರಾದರೂ ಈ ಸಮಸ್ಯೆ ಎದುರಿಸುತ್ತಿದ್ದರೆ ಡಾಕ್ಟರ್ ಪ್ರೀತಮ್ ರನ್ನು ಬೇಟಿ ಮಾಡಿ ಅವರ ಸಲಹೆ ಪಡೆದು ನಿಶ್ಚಿಂತೆಯಿಂದ ಜೀವನ ಮಾಡುವಂತಾಗುತ್ತೀರಿ ಇದು ನನ್ನ ಸ್ವಂತ ಅನುಭವ.
ಅವರ ಹಿಂದಿನ ಐಲೆಟ್ ಆಸ್ಪತ್ರೆ ಶಿವಮೊಗ್ಗದ ರಾ.ಹೆ.ಯಲ್ಲಿ ಆಟೋ ಕಾಂಪ್ಲೆಕ್ಸ್ ಎದುರಿನ ದ್ವಾರಕಾ ಕಲ್ಯಾಣ ಮಂಟಪದ ಪಕ್ಕದಲ್ಲಿತ್ತು ಈಗ ಅದು ಶಿವಮೊಗ್ಗದ ದುರ್ಗಿಗುಡಿಯ ಜಿಲ್ಲಾ ಬಿಜೆಪಿ ಕಚೇರಿ ಎದುರಿನ ಆಕಾಶ್ ಇನ್ ಲಾಡ್ಜ್ ಪಕ್ಕದಲ್ಲಿ ಹೊಸ ವರ್ಷದಿಂದ ಕಾರ್ಯಾರಂಭ ಮಾಡಲಿದೆ.
#ಡಯಾಬಿಟೀಸ್_ರಿವರ್ಸಲ್_ಅಂದರೆ_ಏನು? ಅನ್ನುವವರಿಗೆ ಅರ್ಥವಾಗುವಂತೆ ಅವರು ಬರೆದ ಲೇಖನ ಈ ಕೆಳಗೆ ಪೋಸ್ಟ್ ಮಾಡಿದ್ದೇನೆ ಓದಿ ನೋಡಿ ಲೇಖನದ ಕೊನೆಯಲ್ಲಿ ಅವರ ಸಂಪರ್ಕ ಸಂಖ್ಯೆ ಇದೆ....
#ಡಯಾಬಿಟಿಸ್_ರಿವರ್ಸಲ್_ಸರಳ_ಮತ್ತು_ಸುಲಭ_ವಿಧಾನ
ಟೈಪ್ 2 ಡಯಾಬಿಟಿಸ್ ಅಥವಾ ಮಧುಮೇಹ ಒಮ್ಮೆ ಬಂದರೆ ಮತ್ತೆ ಹೋಗುವುದಿಲ್ಲ ಎಂಬ ಬಲವಾದ ನಂಬಿಕೆ ರೂಢಿಯಲ್ಲಿತ್ತು.. ಇದಕ್ಕೆ ಕಾರಣ ಏನು ಎಂಬುದು ಈಗ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.
ನಿಮ್ಮ ಬಳಿ ಇರುವ ಸೈಕಲ್ಲಿನ ಮುಂದಿನ ಗಾಲಿಯಲ್ಲಿ ಪಂಚರಾದರೆ ಹಿಂದಿನ ಗಾಲಿಯಲ್ಲಿ ನೀವು ಎಷ್ಟೇ ಗಾಳಿ ತುಂಬಿದರು ಸರಿ ಹೋಗುತ್ತದೆಯೇ ?
ಟೈಪ್ ಟು ಡಯಾಬಿಟಿಸ್ ಕೂಡ ಅಷ್ಟೇ ಸರಳ. ಡಯಾಬಿಟಿಸ್ ನಲ್ಲಿ ಸಮಸ್ಯೆ ಇರುವುದು ಆಹಾರ ಪದ್ಧತಿಯಲ್ಲಿ, ಅದನ್ನು ಮಾತ್ರೆ ಅಥವಾ ಇನ್ಸುಲಿನ್ ತೆಗೆದುಕೊಂಡು ಸರಿಪಡಿಸಿಕೊಳ್ಳುತ್ತೇವೆ ಎಂಬುದು ಮೂರ್ಖತನ. ಸಮಸ್ಯೆ ಆಹಾರ ಪದ್ಧತಿಯಲ್ಲಿರುವಾಗ ಪರಿಹಾರ ಕೂಡ ಆಹಾರ ಪದ್ಧತಿಯಲ್ಲಿ ಇರಬೇಕು ಎಂಬುದು ಸರಳ ಸತ್ಯ.
ಮಾತ್ರೆಗಳು ಮತ್ತು ಇನ್ಸುಲಿನ್ ಕೇವಲ ತಾತ್ಕಾಲಿಕ ಪರಿಹಾರವಾಗಿದೆ.
2019ನೇ ಇಸ್ವಿಯಲ್ಲಿ ಬ್ರಿಟಿಷ್ ಜರ್ನಲ್ ಆಫ್ ಮೆಡಿಸನ್ ನಲ್ಲಿ ಪ್ರಕಟವಾದ ಒಂದು ಸಂಶೋಧನೆಯಲ್ಲಿ ಸಾಬೀತಾಗಿರುವುದು ಏನೆಂದರೆ ಎಲ್ಲಾ ರೀತಿಯ ಮಾತ್ರೆ ಮತ್ತು ಇನ್ಸುಲಿನ್ ತೆಗೆದುಕೊಂಡರೂ ಕೂಡ 80% ಜನರಿಗೆ ಡಯಾಬಿಟಿಸ್ ಕಂಟ್ರೋಲ್ ಬರುವುದಿಲ್ಲ ಮತ್ತು ಅದರಲ್ಲಿ 77% ಜನರು ಕಿಡ್ನಿ ಕಣ್ಣು ಹೃದಯಾಘಾತ ಲೈಂಗಿಕ ನಿರಾಸಕ್ತಿ ಅಂತಹ ಮಧುಮೇಹದ ದುಷ್ಪರಿಣಾಮಗಳಿಂದ ಬಳಲುತ್ತಿದ್ದಾರೆ.
ICMR (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್) ಮಾಡಿದ ಸಂಶೋಧನೆಯಲ್ಲಿ 18000 ಡಯಾಬಿಟಿಸ್ ಜನ ಸಂಖ್ಯೆಯಲ್ಲಿ ಕಂಡುಬಂದಿದ್ದೇನೆಂದರೆ ನಮ್ಮ
ತಟ್ಟೆಯಲ್ಲಿ ಸರಾಸರಿ 80%
ಕಾರ್ಬೋಹೈಡ್ರೇಟ್ ಗಳನ್ನು ತಿನ್ನುತ್ತೇವೆ. ಈ ಪ್ರಮಾಣವನ್ನು ಶೇಕಡ 50 ಪರ್ಸೆಂಟಿಗೆ ಇಳಿಸಿದರೆ ಡಯಾಬಿಟೀಸ್ ರಿವರ್ಸಲ್ ಆಗುತ್ತೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹಾಗಾದರೆ ಡಯಾಬಿಟಿಸ್ ರಿವರ್ಸಲ್ ಮಾಡಿಕೊಳ್ಳಲು ಸರಿಯಾದ ಆಹಾರ ಕ್ರಮ ಏನಿರಬೇಕು ಎಂಬುದನ್ನು ತಿಳಿದುಕೊಳ್ಳೋಣ.
ನಿಮ್ಮ ಪ್ರತಿ ಊಟಕ್ಕೂ ಮುನ್ನ ತಟ್ಟೆಯಲ್ಲಿ ಎಲ್ಲ ರೀತಿಯ ತರಕಾರಿ ಕಾಳು ಬೆಳೆ ಸೊಪ್ಪು ಬೆಣ್ಣೆ ತುಪ್ಪ ಮತ್ತು ನಾನ್ ವೆಜಿಟೇರಿಯನ್ ಆಹಾರ ತೆಗೆದುಕೊಳ್ಳುವವರು ಮೊಟ್ಟೆ ಚಿಕನ್ ಫಿಶ್ ಮಟನ್ ಮುಂತಾದವುಗಳನ್ನು ಮೊದಲು ತಿನ್ನಬೇಕು, ಅಲ್ಲಿಗೆ ನಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ, ತದನಂತರ ಅಲ್ಪ ಪ್ರಮಾಣದಲ್ಲಿ ಅಕ್ಕಿ ರಾಗಿ ಗೋದಿ ಜೋಳ ಯಾವುದಾದರೂ ತಿನ್ನಬಹುದಾಗಿದೆ,
ದುರದೃಷ್ಟವಶಾತ್ ಇಂದಿಗೂ ಕೂಡ ಡಯಾಬಿಟಿಸ್ ಇರುವವರು ಅನ್ನ ಕಡಿಮೆ ಮಾಡಬೇಕು ಮುದ್ದೆ ಮತ್ತು ಚಪಾತಿ ರೊಟ್ಟಿ ತಿಂದರೆ ಶುಗರ್ ಕಮ್ಮಿಯಾಗುತ್ತದೆ ಎಂದು ಭಾವಿಸಿದ್ದಾರೆ. ಆದರೆ ವೈಜ್ಞಾನಿಕವಾಗಿ ಇವೆಲ್ಲವೂ ಕಾರ್ಬೋಹೈಡ್ರೇಟ್ಸ್ ಆಗಿರುವುದರಿಂದ ರಕ್ತದ ಸಕ್ಕರೆ ಪ್ರಮಾಣದಲ್ಲಿ ಏನು ವ್ಯತ್ಯಾಸ ಕಾಣುವುದಿಲ್ಲ.
ಹಾಸನ ಮಂಡ್ಯ ಮೈಸೂರು ಕಡೆಗಳಲ್ಲಿ ಮುಂಚಿನಿಂದಲೂ ಯಥೇಚ್ಛವಾಗಿ ರಾಗಿಯನ್ನು ಬಳಸುತ್ತಾರೆ ಹಾಗಂತ ಅಲ್ಲಿ ಡಯಾಬಿಟಿಸ್ ಬಂದ ಜನರು ಇಲ್ಲವೇ? ಹುಬ್ಬಳ್ಳಿ ಧಾರವಾಡ ಬಿಜಾಪುರ ಕಡೆ ಹೋದರೆ ಎಲ್ಲರೂ ಜೋಳದ ರೊಟ್ಟಿ ತಿನ್ನುತ್ತಾರೆ ಹಾಗಾದ್ರೆ ಅಲ್ಲಿ ಡಯಾಬಿಟಿಸ್ ಪೇಷಂಟ್ ಇಲ್ಲವೇ ?
ಅಮೇರಿಕನ್ ವೈದ್ಯರಾದ ಡಾಕ್ಟರ್ ಮ್ಯಾಕ್ಸ್ವೆಲ್ ಅವರ 21/90 ಸಿದ್ಧಾಂತದ ಪ್ರಕಾರ #ಯಾವುದೇ_ಕೆಲಸವನ್ನು_ನಾವು_21_ದಿವಸ_ಮಾಡಿದರೆ_ಅದು_ನಮಗೆ_ಹ್ಯಾಬಿಟ್_ಆಗುತ್ತದೆ. #ಅದೇ_ಕೆಲಸವನ್ನು_ಮೂರು_ತಿಂಗಳು_ನಾವು_ಪಾಲಿಸಿದರೆ_ಅದು_ಜೀವನಶೈಲಿಯಾಗುತ್ತದೆ,
ಕೇವಲ 90 ದಿನಗಳಲ್ಲಿ ನೀವು ನಿಮ್ಮ ಡಯಾಬಿಟಿಸ್ ಅನ್ನು ಸಂಪೂರ್ಣ ಅಥವಾ ಭಾಗಶಹ ರಿವರ್ಸಲ್ ಮಾಡಿಕೊಳ್ಳಬಹುದು. ಕೇವಲ ನಿಮ್ಮ ಆಹಾರದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡು.
ಡಯಾಬಿಟಿಸ್ ರಿವರ್ಸಲ್ ಚಿಕಿತ್ಸೆಗಾಗಿ ಸಂಪರ್ಕಿಸಿ
#drama Preetham
7899838546
9449138546(WhatsApp)
ದುರ್ಗಿಗುಡಿ 1ಸ್ಟ್ parallel road. Shimoga
Comments
Post a Comment