Blog number 1847. ಶಿವಮೊಗ್ಗ ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗರ ತಾಲೂಕಿನ ಅಪಾಯಕಾರಿ ಬ್ಲಾಕ್ ಸ್ಟಾಟ್ ಗಳು ಗುರುತಿಸಿ ಹತ್ತು ವರ್ಷಗಳಾಯಿತು ಆದರೆ ಸರಿಪಡಿಸಲೇ ಇಲ್ಲ
16 March 2019ರ ಮನವಿ, ಅನುಸರಣಾ ವರದಿಯಲ್ಲಿ ಏನೂ ಆಗಿಲ್ಲ ಇದು ನಮ್ಮ ಅಭಿವೃದ್ದಿಯ ಗತಿ ಹಾಗಾದರೆ ಅಪಘಾತ ತಡೆಯುವ ಉಪಾಯ?'
# ಜಿಲ್ಲಾಧಿಕಾರಿಗಳೆ ಸಾಗರ ತಾಲ್ಲೂಕಿನ ಈ ಪ್ರಮುಖ ಬ್ಲಾಕ್ ಸ್ಪಾಟ್ ನಿಮ್ಮ ಗಮನಕ್ಕೆ#
ತಾವು ಇತ್ತೀಚಿಗೆ ಜಿಲ್ಲೆಯಲ್ಲಿ ಹೆಚ್ಚು ಅಪಘಾತ ಆಗುವ Block Spot ಗಳ ತಿಳಿಸಲು ಅಧಿಕಾರಿಗಳ ಸಭೆಯಲ್ಲಿ ಹೇಳಿದ್ದೀರಿ ಎಂದು ಪತ್ರಿಕೆಗಳಲ್ಲಿ ಓದಿದೆ.
ಸಾಗರ ತಾಲ್ಲೂಕಿನ ಈ block Spot ಗಳ ಬಗ್ಗೆ ತಾವು ಪರಿಶೀಲಿಸಿ ಕ್ರಮ ಕೈಗೊಳ್ಳಬಹುದಾಗಿದೆ.
1. ಶಿವಮೊಗ್ಗದಿಂದ ಸಾಗರ ಗಡಿ ಪ್ರವೇಶಿಸುವ ಗಿಳಾಲಗು೦ಡಿ ವೃತ್ತ ವೈಜ್ಞಾನಿಕವಾಗಿ ನಿಮಿ೯ಸಿಲ್ಲ, ರಾಷ್ಟ್ರಿಯ ಹೆದ್ದಾರಿಯಿಂದ ಗಿಳಾಲ ಗುಂಡಿ ಮಾಗ೯ವಾಗಿ ಕೆಂಚನಾಲ, ರಿಪ್ಪನ್ ಪೇಟೆ ಮಾಗ೯ಕ್ಕೆ ಸಾಗರದಿಂದ ಬರುವ ವಾಹನಗಳು ತಿರುಗಲು ಸರಿಯಾದ ವ್ಯವಸ್ಥೆ ಇಲ್ಲ ಅನೇಕ ಸಾವು ನೋವು ಆಗಿದೆ.
2.ಇಲ್ಲಿಂದ ಮುಂದೆ ಯಡೇಹಳ್ಳಿ ವೃತ್ತದಲ್ಲಿ ನಾಲ್ಕು ರಸ್ತೆ ಸೇರುತ್ತೆ, ಶಿವಮೊಗ್ಗದಿಂದ ಸಾಗರಕ್ಕೆ ಸಾಗುವ ರಾಷ್ಟ್ರಿಯ ಹೆದ್ದಾರಿಗೆ ರಿಪ್ಪನ್ ಪೇಟೆಯಿಂದ ಒಂದು ರಾಜ್ಯ ಹೆದ್ದಾರಿ, ಹೊಸನಗರ ಬಟ್ಟೆ ಮಲ್ಲಪ್ಪದಿ೦ದ ಒಂದು ಮುಖ್ಯ ರಸ್ತೆ (ಈಗ ಹಾವೇರಿ ಬೈಂದೂರು ರಾಷ್ಟ್ರಿಯ ಹೆದ್ದಾರಿ ಮೇಲ್ದಜೆ೯ಗೆ ಏರಿದೆ) ಸೇರುತ್ತದೆ ಯಾವುದೇ ಹಂಪ್ ಇರುವುದಿಲ್ಲ ನಿತ್ಯ ಅಪಘಾತ ನಡೆಯುತ್ತದೆ ಅನೇಕ ಸಾವು ನೋವು ಆಗಿದೆ.
3. ಇಲ್ಲಿ೦ದ ಮುಂದೆ ಸಾಗರ ಪ್ರಾರಂಭದಲ್ಲಿ ತ್ಯಾಗತಿ೯ ವೃತ್ತದಲ್ಲಿ ತ್ಯಾಗತಿ೯ ಯಿಂದ ಬಂದು ಸೇರುವ ರಸ್ತೆಗೆ ಶಿವಮೊಗ್ಗ ಸಾಗರದ ರಾಷ್ಟ್ರಿಯ ಹೆದ್ದಾರಿಯಲ್ಲಿ ಸಾಗುವ ವಾಹನಗಳು ಕಾಣುವುದಿಲ್ಲ ಇದರಿ೦ದ ಅನೇಕ ಅಪಘಾತ ಸಾವು ನೋವು ಸಂಬವಿಸುತ್ತಿದೆ.
4.ಸಾಗರ ದಾಟಿದ ನಂತರ ವರದಳ್ಳಿ ವೃತ್ತ.
5. ಕಾನಲೆ ವೃತ್ತ.
6.ತಾಳಗುಪ್ಪದ ಕಾಗ೯ಲ್ ಮತ್ತು ಜೋಗ ಜಲಪಾದದ ವೃತ್ತ.
ಇವುಗಳ ಬಗ್ಗೆ ವೈಜ್ಞಾನಿಕವಾದ ಕ್ರಮದಲ್ಲಿ ರಸ್ತೆ ನಿಯಮದಂತೆ ಸುರಕ್ಷಿತ ವಾಹನ ಸಂಚಾರಕ್ಕೆ ಅವಶ್ಯ ಇರುವ ಮುಂಜಾಗೃತ ಕ್ರಮ ಮತ್ತು ಕಾಮಗಾರಿ ಮಾಡಿಸಬೇಕಾಗಿ ವಿನಂತಿ.
ಕೆ.ಅರುಣ್ ಪ್ರಸಾದ್
ಮಾಜಿ ಜಿ.ಪಂ.ಸದಸ್ಯ
ಆನಂದಪುರಂ.
Comments
Post a Comment