Blog number 1879. ಶಿವಮೊಗ್ಗ ಜಿಲ್ಲೆಯಲ್ಲಿ ಸುರಕ್ಷಿತ ವಾಪಾಸು ಮಾರ್ಗ ಮುಚ್ಚಿರುವ ಕಾಡಾನೆಗಳು 68 ದಿನಗಳಿಂದ ಹತಾಶೆಯಿಂದ ನಿದ್ದೆ ಆಹಾರ ಇಲ್ಲದೆ ಸಂಚರಿಸುತ್ತಿದೆ ಇವುಗಳು ತಾಳ್ಮೆ ಕಳೆದುಕೊಂಡರೆ ಜನರ ಜೊತೆ ಸಂಘರ್ಷಕ್ಕೆ ಮುಂದಾಗುವುದು ಶತಃಸಿದ್ಧ ಅಷ್ಟರಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.
#ನಮ್ಮ_ಊರ_ಸುತ್ತಮುತ್ತ_ದಾರಿತಪ್ಪಿದ_ಕಾಡಾನೆಗಳು
#ನಿನ್ನೆ_ರಾತ್ರಿ_ಸಾಗರ_ಶಿಕಾರಿಪುರ_ಗಡಿ_ಅಂಬ್ಲಿಗೋಳ_ಡ್ಯಾಂ_ಹಿನ್ನೀರು_ಪ್ರದೇಶದಲ್ಲಿತ್ತು
#ಮುಂದಿನ_ದಿನದಲ್ಲಿ_ಅನಾಹುತ_ಸಂಭವಿಸುವ_ಮೊದಲು
#ಅರಣ್ಯ_ಇಲಾಖೆ_ಇವುಗಳ_ಸುಗಮ_ವಾಪಾಸಾತಿ_ಮಾರ್ಗ_ತೋರಿಸಬೇಕು
#ಕಾಡಾನೆ_ವಾಪಾಸು_ತನ್ನ_ಸ್ಥಳಕ್ಕೆ_ಹೋಗುವ_ಮಾರ್ಗದಲ್ಲಿ_ರೈತರು_ಅರಣ್ಯ_ಇಲಾಖೆಗೆ_ಸಹಕರಿಸ_ಬೇಕು
#ಅಕ್ಟೋಬರ್_16ರಿಂದ_ಅಂದರೆ_68_ದಿನಗಳಿಂದ_ದಿಕ್ಕು_ಕಾಣದೆ_ಆತಂತ್ರವಾಗಿದೆ.
#ರೈತರ_ಪಟಾಕಿ_ಸಾಕು_ನಾಯಿಗಳ_ಅಡೆತಡೆ_ಕಾಡಾನೆ_ಮಾರ್ಗ_ತಡೆ_ಆಗಿದೆ.
#ಶಿವಮೊಗ್ಗ_ಜಿಲ್ಲೆಯ_ಜಿಲ್ಲಾಧಿಕಾರಿಗಳು_ಈ_ಬಗ್ಗೆ_ಸೂಕ್ತ_ಕ್ರಮ_ಕೈಗೊಳ್ಳುವಂತೆ_ವಿನಂತಿಸುತ್ತೇನೆ.
16 ಅಕ್ಟೋಬರ್ 2023 ಅಂದರೆ ಇವತ್ತಿಗೆ 68 ದಿನದ ಹಿಂದೆ ಈ ಕಾಡಾನೆಗಳು ಸಾಗರ ತಾಲೂಕಿನ ಗಡಿ ಭಾಗದ ಹೊಸನಗರ ತಾಲೂಕಿನ ಅರಸಾಳು ಕೆಂಚನಾಲ ಭಾಗದಲ್ಲಿ ಮೊದಲ ಬಾರಿಗೆ ಕಾಣಿಸಿತ್ತು ಆಗ ಕೈರದಮನೆಯಲ್ಲಿ ಸಂಜೆ 6.47 ಕ್ಕೆ ಕಾಡಾನೆ ಮತ್ತು ಅದರ ಮರಿಯ ಪೋಟೋ ಸ್ಥಳಿಯರು ತೆಗೆದಿದ್ದರು ಅದರ ಲೇಖನ ಇಲ್ಲಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಓದಬಹುದು.
https://arunprasadhombuja.blogspot.com/2023/10/blog-number-1792.html
ನಂತರ ಚೊರಡಿ - ಕುಂಸಿ - ಅಯನೂರು ಮುಂತಾದ ಭಾಗದಲ್ಲಿ ಸಂಚರಿಸುತ್ತಿತ್ತು ಮೊನ್ನೆ ನಮ್ಮ ಆನಂದಪುರಂದ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಪತ್ರೆ ಹೊಂಡ, ಕೆರೆಹಿತ್ತಲು ಭಾಗದಲ್ಲಿ ರಾತ್ರಿ 9 ರಿಂದ ಮಧ್ಯ ರಾತ್ರಿ 2 ರ ತನಕ ಈ ಕಾಡಾನೆಗಳು ಸಂಚರಿಸಿದೆ ಇದರ ಬಗ್ಗೆ ನನ್ನ FB ಲೇಖನಕ್ಕೆ
https://arunprasadhombuja.blogspot.com/2023/12/blog-number-1873-19-2023.html
#ಸತ್ಯನಾರಾಯಣ_ಶಿವಮೊಗ್ಗ (ಚಿಲುಮೆ ಜಡ್ಡು ರಾಮನಗದ್ದೆಯವರು) ತುಂಬಾ ಮಹತ್ವದ ವಿಷಯ ತಿಳಿಸಿದ್ದರು ಅದು ಇಲ್ಲಿ ದಾಖಲಿಸಿದ್ದೇನೆ,ಇವರು ಹೊಸ ದಿಗಂತ ಪತ್ರಿಕೆಯ ವರದಿಗಾರರು, ಭದ್ರ. ಅಭಯಾರಣ್ಯದ ಹಾಯ್ ಹೊಳೆ ಡ್ಯಾಂ ಸಮೀಪದವರು, ಕಾಡಾನೆಗಳ ಮದ್ಯ ಜೀವನ ಮಾಡುವವರು......
ಹೌದು ಸರ್ ನಮ್ಮೂರಲ್ಲಿ (ಚಿಲುಮೆಜಡ್ಡು-ಗಾಮನಗದ್ದೆ) ನಾಲ್ಕು ಬಂದಿದ್ದವು. ಅದರಲ್ಲಿ ಒಂದು ಮರಿ ಇದೆ. ಅವುಗಳಲ್ಲಿ ಒಂದು ಈ ಭಾಗದಲ್ಲಿದೆ. ಮೂರು ನಿಮ್ಮ ಕಡೆ ಹೋಗಿವೆ. ಅವು ದಿಕ್ಕು ತಪ್ಪಿದಂತಾಗಿವೆ. ಹೋದ ಕಡೆಯಲ್ಲೆಲ್ಲಾ ಪಟಾಕಿ, ಜಕಾತಿ ಶಬ್ದ ಹೀಗಾಗಿ ಪುನಃ ವಾಪಸ್ ಬರಲು ಗಡಿಬಿಡಿ ಆದಂತಿದೆ.
ಇವು ಭದ್ರಾದಿಂದ ಬಂದ ಆನೆಗಳು ಕಳೆದ ಎರಡೂವರೆ ತಿಂಗಳಿಂದ ಮಲೇಶಂಕರ, ಂಮಜರಿಕೊಪ್ಪ, ಕೂಡಿ, ಯರೆಬೀಸು, ಸಂಪಿಗೆಹಳ್ಳ, ಸೀಗೆಹಳ್ಳಡ್ಯಾಂ, ಚಿಲುಮೆಜಡ್ಡು, ಗಾಮನಗದ್ದೆ, ಹೊರಬೈಲು, ಮತ್ತಿಕೊಪ್ಪ ಮೊದಲಾದ ಕಡೆಗಳಲ್ಲಿ ಸುತ್ತಾಡಿ ಅಲ್ಲಲ್ಲಿ ಬೆಳೆ ಹಾನಿ ಮಾಡಿ ಅಡ್ಡೇರಿ, ಕೂರಂಬಳ್ಳಿ, ಸೂಡೂರು, ರೇಚಿಕೊಪ್ಪ ಮೂಲಕ ಬಸವಪುರ, ಕೆಂಚನಾಳ ಮೂಲಕ ತೆರಳಿವೆ. ಗುಂಪಿನಿಂದ ಒಂದು ಸಲಗ ಅಗ್ಚಿದ್ದು, ಅದು ಕೂಡಿ, ಯರೆಬೀಸು, ಮಲೇಶಂಕರ ಭಾಗದಲ್ಲಿ ಸುತ್ತಾಡುತ್ತಿದೆ. ನಿಮ್ಮ ಬದಿಗೆ ಬಂದಿರುವ ಆನೆಗಳು ಪುನಃ ಸೀಗೆಹಳ್ಳ ಡ್ಯಾಂ ಮೂಲಕವೇ ಶೆಟ್ಟಿಹಳ್ಳಿ ಕಾಡು ಸೇರಿ ಭದ್ರಾ ಕಡೆ ಹೋಗಬೇಕಿವೆ ಸರ್.
ಶಂಕರ, ಸಿರಿಗೆರೆ, ಆಯನೂರು ಅರಸಾಳು, ಚೋರಡಿ, ಆನಂದಪುರ RFO ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ. ಸಿಬ್ಬಂದಿಗಳಿಗೂ ಗೊಂದಲವಾಗುತ್ತಿದೆ. ಪಾಪ ಆನೆ ಕಾಯಲೆಂದೇ ಹಂಗಾಮಿ ವಾಚರ್ ನೇಮಕ ಮಾಡಿಕೊಂಡಿದ್ದಾರೆ. ಅವರ ಕೈಯಲ್ಲಿ ೫ ಪಟಾಕಿ ಕೊಟ್ಟು ಕಳಿಸ್ತಾರೆ. ಆನೆ ಜಮೀನಿಗೆ ಬಂದಾಗ ಪಟಾಕಿ ಹಚ್ಚೋದಿರಲಿ ಇವರು ಕೈಕಾಲು ನಡುಗಿ ಪಾಟಾಕಿ ಬತ್ತಿ ಒಂದು ಕಡೆಯಾದರೆ ಬೆಂಕಿ ಕೊಳ್ಳಿ ಇನ್ನೊಂದು ಕಡೆ ನಡುಗುತ್ತೆ. ಅದನ್ನು ನೋಡಿ ಗ್ರಾಮಸ್ಥರು ಒಂದು ತರ ಮನರಂಜನೆ ತೆಗೆದುಕೊಂಡು ಆಡಿಕೊಳ್ಳುತ್ತಾರೆ. ಹೊಟ್ಟೆ ಪಾಡಿಗೆ ಬಂದ ವಾಚರ್ ಕಥೆ ಮಾಗಿ ಚಳಿಯಲ್ಲಿ ಮುಗಿದೆ ಹೋಗುತ್ತೆ. ಆನೆ ಕಂಡಾಗಲಂತೂ ಅವರ ಪಡೊಪಾಟಲು ಹೇಳತೀರದು. ಖಾಯಂ ಸಿಬ್ಬಂದಿ ಮನೆಯಲ್ಲಿ ಮಲಗಿರ್ತಾರೆ. ಇಂಥ ಕಡೆ ಆನೆ ಬಂದಿವೆ ಎಂದು ಫೋನ್ ಮಾಡಿ ಹೇಳಬೇಕು... ಇದು ಸತ್ಯನಾರಾಯಣ ಶಿವಮೊಗ್ಗ ಇವರ ಪ್ರತಿಕ್ರಿಯೆ ಇದು ಕಾಡಾನೆ ಸಂಚರಿಸುವ ನಮ್ಮ ಭಾಗದ ಜನರಿಗೆ ಮತ್ತು ಅರಣ್ಯ ಇಲಾಖೆಗೆ ಉತ್ತಮ ಮಾಹಿತಿ ಆಗಿದೆ.
ಈಗ ಬೆಳಿಗ್ಗೆ ನನ್ನ ಕಿರಿಯ ಪತ್ರಕರ್ತ ಗೆಳೆಯ ನಮ್ಮ ಆನಂದಪುರಂ ಸಮೀಪದ ಅಂಬ್ಲಿಗೋಳ ಜಲಾಶಯದ ಹಿನ್ನೀರು ಪ್ರದೇಶದ ಬೈರಾಪುರದಲ್ಲಿ ರಾತ್ರಿ ಕಾಡಾನೆ ಪ್ರತ್ಯಕ್ಷ ಆದ ಮಾಹಿತಿ ತಿಳಿಸಿದ್ದಾರೆ.
ಅಂಬ್ಲಿಗೋಳ ಜಲಾಶಯ ದಾಟಿದರೆ ಕುಡಿಗೆರೆ -ಬೆಳಂದೂರು- ತ್ಯಾಗರ್ತಿ ಕಡೆಗೆ ಅಥವ ನೇರವಾಗಿ ಪೂರ್ವಾಬಿಮುಖವಾಗಿ ಹೋದರೆ ಶಿಕಾರಿಪುರ ತಾಲ್ಲೂಕಿಗೆ ಅಥವ ಪಶ್ಚಿಮಾಭಿಮುಖವಾಗಿ ಬಂದರೆ ಆನಂದಪುರಂ ಕಡೆ ಬರಬಹುದು.
ಅಡಿಕೆ ಕೊಯಲು - ಜೋಳ ಬತ್ತದ ಸುಗ್ಗಿ ಕಾಲ-ಶುಂಠಿ ಕೀಳವ ಸಮಯವಾದ್ದರಿಂದ ರೈತರು ತಮ್ಮ ಪಸಲು ರಕ್ಷಣೆಗೆ ತಮ್ಮ ಕೃಷಿ ಭೂಮಿಯಲ್ಲೇ ರಾತ್ರಿ ಕಳೆಯುತ್ತಾರೆ ಆದರೆ ಕಾಡಾನೆ ಸಂಚಾರ ಎಲ್ಲರಿಗೂ ಭಯ ಉಂಟು ಮಾಡಿದೆ, ತಮ್ಮ ಆದಾಯದ ಅಡಿಕೆ ತೋಟಕ್ಕೆ ನುಗ್ಗಿದರೆ ಎಂಬ ಚಿಂತೆ ಬೇರೆ ಇದಕ್ಕಾಗಿ ಬಾರಿ ಶಬ್ದ ಮಾಡುವ ದೊಡ್ಡ ದೊಡ್ಡ ಆನೆ ಗರ್ನಾಲುಗಳನ್ನು ಖರೀದಿಸಿ ಇಟ್ಟಿದ್ದಾರೆ ರಾತ್ರಿ ಸಾಕು ನಾಯಿಗಳು ಆನೆ ಆಗಮನ ಗುರುತಿಸಿ ಬೊಗಳಲು ಶುರು ಮಾಡಿದಾಗ ಅನೇ ಗರ್ನಾಲು ಸಿಡಿಸುತ್ತಾರೆ ಬಾರೀ ಶಬ್ದದಿಂದ ಕಾಡಾನೆ ವಾಪಾಸಾಗುತ್ತದೆ.
ಆದರೆ ಇದು ಈ ದಾರಿ ತಪ್ಪಿದ ಕಾಡಾನೆ ಗುಂಪಿನಿಂದ ಪರಿಹಾರವಲ್ಲ, ಭಯದಿಂದ ದಾರಿ ತಪ್ಪಿ ಕಳೆದ 68 ದಿನಗಳಿಂದ ನಿದ್ದೆ ಆಹಾರ ತೊರೆದು ಅತಂತ್ರವಾಗಿರುವ ಈ ಕಾಡಾನೆಗಳನ್ನು ಭದ್ರಾ ಅಭಿಯಾರಣ್ಯಕ್ಕೆ ಸಾಗಿ ಹೋಗಲು ಸುರಕ್ಷಿತ ಮಾರ್ಗ ಕಲ್ಪಿಸಿಕೊಡ ಬೇಕಾಗಿದೆ ಈ ಮಾರ್ಗ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣಾ ಇಲಾಖೆಗೆ ಗೊತ್ತಿದೆ.
ಈ ಮಾರ್ಗ ಗುರುತಿಸಿ ಈ ಪ್ರದೇಶದಲ್ಲಿರುವ ನಿವಾಸಿಗಳಿಗೆ ಪಟಾಕಿ ಇತ್ಯಾದಿ ಸಿಡಿಸಿ ಕಾಡಾನೆಗೆ ಭಯ ಪಡಿಸದೆ ಅವುಗಳು ಸುರಕ್ಷಿತವಾಗಿ ಹಿಂದಿರುಗಿ ಭದ್ರಾ ಅಭಯಾರಣ್ಯ ತಲುಪಲು ಸಹಾಯ ಮಾಡುವಂತೆ ಮಾಹಿತಿ ನೀಡ ಬೇಕು.
ಈ ರೀತಿ ಕಾಡಾನೆಗಳ ಸುರಕ್ಷಿತ ಹಿಂದಿರುಗಲು ರೈತರು ಸಹಕರಿಸ ಬೇಕು ಇಲ್ಲದಿದ್ದರೆ ಇವುಗಳು ತಮ್ಮ ಸಹನೆ ಕಳೆದುಕೊಂಡರೆ ಯಾವ ಪಟಾಕಿ ಶಬ್ದಕ್ಕೂ ಹೆದರದೆ ಜನರ ಜೊತೆ ಸಂಘರ್ಷಕ್ಕೆ ಮುಂದಾದರೆ ದೊಡ್ಡ ಅನಾಹುತಗಳಾಗುವ ಸಂಭವ ಇದೆ.
ಸರ್ಕಾರ ಅರಣ್ಯ ಇಲಾಖೆ ಸರಿಯಾದ ತೀರ್ಮಾನ ಮಾಡದಿದ್ದರೆ ಇನ್ನೂ ವಿಳಂಬ ಮಾಡಿದರೆ ಕಾಡಾನೆಗಳ ಜೀವಕ್ಕೂ ಆಪತ್ತು ಮತ್ತು ಜನರ ಜೀವಕ್ಕೂ ಅಪಾಯ.
ಕಳೆದ 68 ದಿನಗಳಿಂದ ಸರ್ಕಾರದ ಪರವಾಗಿ ಯಾವುದೇ ಅಧಿಕಾರಿಗಳಾಗಲಿ,ಅರಣ್ಯ ಇಲಾಖೆಯಾಗಲಿ ಅಥವ ವನ್ಯ ಜೀವಿಗಳ ಸಂರಕ್ಷಣಾ ಅಧಿಕಾರಿಗಳಾಗಲಿ ಯಾವುದೇ ಬಹಿರಂಗ ಹೇಳಿಕೆ ನೀಡದಿರುವುದು ವಿಷಾದನೀಯ.
ಕಾಡಾನೆಗಳು ಸಂಚರಿಸುತ್ತಿರುವ ಸ್ಥಳಗಳ ಬಗ್ಗೆ ಅವರಿಗೆ ಬಂದ ಮಾಹಿತಿ ಸಾಮಾಜಿಕ ಜಾಲ ತಾಣಗಳಲ್ಲಿ ಪತ್ರಿಕೆಗಳಲ್ಲಿ ಹಂಚಿ ಕೊಳ್ಳುವುದರಿಂದ ಮತ್ತು ಮುಂದೆ ಕಾಡಾನೆ ವಾಪಾಸಿಗೆ ಸೂಕ್ತ ಮಾಗ೯ ಕಲ್ಲಿಸುವ ಬಗ್ಗೆ ಸ್ಥಳಿಯ ಜನರ ಜೊತೆ ಗ್ರಾಮ ಪಂಚಾಯಿತಿಗಳಲ್ಲಿ ಚಚಿ೯ಸುವ ಮೂಲಕ ಪರಿಹಾರ ಕಂಡುಹಿಡಿಯ ಬೇಕು.
ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ.
Comments
Post a Comment