Blog number 1880. 70 ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿನ ಕುಂಸಿ -ಅಯನೂರು - ಹಾರನಳ್ಳಿ ಭಾಗದಲ್ಲಿ ಅಕ್ಷರಶಃ ಜನ ಭಯದಿಂದ ಬದುಕುವಂತೆ ಮಾಡಿದ್ದ ದರೋಡೆಕೋರ .
#ವೀರಪ್ಪನ್_ಕನಾ೯ಟಕ_ತಮಿಳುನಾಡಿಗೆ_ತಲೆನೋವಾದಂತೆ.
#70ರ_ದಶಕದಲ್ಲಿ_ಶಿಕಾರಿಪುರ_ಕುಂಸಿ_ಅಯನೂರು_ಬಾಗದಲ್ಲಿ_ಬುಡೆನ್_ಸಾಬ್
#ಜನರಿಗೆ_ಪೋಲಿಸರಿಗೆ_ದೊಡ್ಡ_ಸಮಸ್ಯೆ_ಆಗಿದ್ದ.
#ಕೊನೆತನಕ_ಬಡತನದ_ಜೀವನ_ಮಾಡಿದ_ಬುಡನ್_ಸಾಬ್
#ಬುಡನ್_ಸಾಬ್_ಹೆಸರಲ್ಲಿ_ಬೇರೆ_ಕಳ್ಳರು_ದರೋಡೆ_ಮಾಡುತ್ತಿದ್ದರಂತೆ.
ಹಾರನಳ್ಳಿಯ ಬುಡನ್ ಸಾಬ್ ಕುಂಸಿ ಅಯನೂರು ಮತ್ತು ಶಿಕಾರಿಪುರದ ಜನ ಸಾಮಾನ್ಯರನ್ನ ಸುಮಾರು 10 ವಷ೯ ಕಾಲ ಬೀತಿಯಿ೦ದ ಇರುವಂತೆ ಮಾಡಿದ್ದ, ಆತ ಕಳ್ಳತನ ಮಾಡುತ್ತೇನೆ ಅಂದ ಮನೆ ಕಳ್ಳತನ ಮಾಡಿಯೇ ಸಿದ್ದ ಎಂಬ ಪ್ರತೀತಿ.
ಹಗಲಿನಲ್ಲಿ ಬುಡನ್ ಸಾಬ್ ಈ ಕಾಡಿನಲ್ಲಿ ಕ೦ಡಿದ್ದ ಎಂದರೆ ವಾರಗಟ್ಟಲೆ ಆ ಕಾಡಿಗೆ ಕಟ್ಟಿಗೆ ತರಲು ಹೋಗುವ ದೈಯ೯ ಯಾರೂ ಮಾಡುತ್ತಿರಲಿಲ್ಲ.
ಕಟ್ಟುಮಸ್ತು ದೇಹದ ಬುಡನ್ ಸಾಬ್ ಕಳ್ಳ ಬುಡನ್ ಅಂತಲೇ ಕುಖ್ಯಾತಿ ಪಡೆದಿದ್ದ,ಏನೇ ಮಾಡಿದರು ಪೋಲಿಸರಿಗೆ ಅವನನ್ನ ಬಂದಿಸಲಾಗದಿದ್ದದ್ದು ಮತ್ತು ಅವನ ತಡೆ ರಹಿತ ಕಳ್ಳತನ ದರೋಡೆಗಳಿOದ ಶಿಕಾರಿಪುರ, ಕುಂಸಿ ಮತ್ತು ಅಯನೂರಿನ ಸುತ್ತ ಮುತ್ತ ನೂರಾರು ಹಳ್ಳಿಗಳು ಭಯದಿಂದ ಜೀವನ ಸಾಗಿಸುತ್ತಿದ್ದ೦ತು ಸತ್ಯ.
ನಂತರ ಪೋಲಿಸರು ಈತನನ್ನ ಬಂದಿಸಿ ಜೈಲಿಗೆ ಕಳಿಸಿದ ನಂತರ ಇದು ನಿಂತಿತು, ಬುಡನ್ ಸಾಬ್ ನಂತರ ಮನ ಪರಿವತ೯ನೆಗೊಂಡು ರೈತರ ಜಮೀನಿನಲ್ಲಿ ನಾಟಿ -ಕೊಯ್ಲು - ಗುತ್ತಿಗೆ ಕೆಲಸ ಮಾಡುತ್ತಿದ್ದರು, ಅವರ ನಂತರ ಇವರ ಕುಖ್ಯಾತಿಗೆ ನೊಂದಿದ ಕುಟುಂಬ ಬೇರೆ ಕಡೆ ವಲಸೆ ಹೋದರು ಅಂತ ಸುದ್ದಿ ಇತ್ತು.
ಮೊನ್ನೆ ಹಾರನಳ್ಳಿಯ ಗೆಳೆಯರು ಬಂದಿದ್ದರು ಅವರ ಹತ್ತಿರ ಬುಡನ್ ಸಾಬ್ ರ ಬಗ್ಗೆ ವಿಚಾರಿಸಿದಾಗ ಅವರು ಹೇಳಿದ್ದು ಪೋಲಿಸರು ಇವರ ಉಪಟಳ ಖಾಯಂ ತಡೆಯಲು ಕಾಲಿನ ನರ ಒಂದನ್ನ ಜಖಂ ಮಾಡಿದ್ದರಿಂದ ಬುಡನ್ ಸಾಬ್ ತನ್ನ ದರೋಡೆ ಕಳ್ಳತನ ಅನಿವಾಯ೯ವಾಗಿ ಬಿಡಬೇಕಾಯಿತು.
ಆತನ ಕುಖ್ಯಾತಿ ದರೋಡೆ ಪ್ರಮಾಣಕ್ಕೂ ಅವನ ಜೀವನ ಕ್ರಮಕ್ಕೂ ಅಜಗಜಾoತರ ಇತ್ತು,ಕೊನೆ ತನಕ ಬಡತನ ಇತ್ತು, ಆಸ್ತಿ ಇರಲಿಲ್ಲ, ಆಗೆಲ್ಲ ಕೃಷಿ ಗುತ್ತಿಗೆ ಮಾಡಿಸಲು ಬರುತ್ತಿದ್ದ ಬುಡನ್ ಸಾಬ್ ಗೆ ಅಷ್ಟೆಲ್ಲ ದರೋಡೆ ಮಾಡಿದ್ದು ಏನು ಮಾಡಿದಿಯಾ? ಅಂದರೆ "ನನ್ನ ಹೆಸರಲ್ಲಿ ಬೇರೆ ಕಳ್ಳರ ಗುಂಪು ದರೋಡೆ ಕಳ್ಳತನ ಮಾಡಿ ಹಣ ಬಂಗಾರ ಮಾಡಿಕೊಂಡು ನನ್ನನ್ನ ಬಲಿಪಶು ಮಾಡಿದರು" ಅಂತಿದ್ದನಂತೆ.
ಏನೇ ಇರಲಿ 70 ರ ದಶಕದಲ್ಲಿ ಈ ಭಾಗದಲ್ಲಿ ಜನರ ನೆಮ್ಮದಿ ಕೆಡಿಸಿದ್ದ ಕಳ್ಳ ಬುಡನ್ ಕುಖ್ಯಾತಿ ಅಂತಿOತದ್ದಲ್ಲ.
Comments
Post a Comment