Skip to main content

Blog number 1874. ಕಾಗೋಡು ರೈತ ಹೋರಾಟದ ರೂವಾರಿ ಹೆಚ್. ಗಣಪತಿಯಪ್ಪರ ಆತ್ಮಚರಿತ್ರೆ ಬರೆದವರು ಶಾಂತವೇರಿ ಗೋಪಾಲಗೌಡರ ಆತ್ಮ ಚರಿತ್ರೆ ಜೀವ೦ತ ಜ್ವಾಲೆ ಬರೆದ ಕೋಣಂದೂರು ವೆಂಕಪ್ಪಗೌಡರು ಈ ಪುಸ್ತಕದಿಂದ ಅನೇಕ ಪರಿಣಾಮಗಳಾಯಿತು.

#ಕಾಗೋಡು_ರೈತಹೋರಾಟದ_ರೂವಾರಿ

#ಹೆಚ್_ಗಣಪತಿಯಪ್ಪ_ಜೀವನ_ಚರಿತ್ರೆ

#ಬರೆದವರು_ಖ್ಯಾತ_ಲೇಖಕ_ಕೋಣಂದೂರು_ವೆಂಕಪ್ಪಗೌಡರು 

#ಗಣಪತಿಯಪ್ಪರ_ಆತ್ಮಚರಿತ್ರೆ_ಪ್ರಕಟವಾಗದಂತೆ_ತಡೆಯುವ_ಅನೇಕ_ವಿಪಲ_ಪ್ರಯತ್ನಗಳಾಗಿತ್ತು.

#ಸಾಗರ_ವಿಧಾನಸಭಾ_ಕ್ಷೇತ್ರದಲ್ಲಿ_1999ರಲ್ಲಿ_ಪಕ್ಷೇತರನಾಗಿ_ಸ್ವರ್ದಿಸಲು_ಗಣಪತಿಯಪ್ಪ_ಕಾರಣರು

#ಅವರ_ಸ್ವಾತಂತ್ರ್ಯಹೋರಾಟದ_ಪಿಂಚಣಿ_ನನ್ನ_ಚುನಾವಣಾ_ಠೇವಣಿ.

   ನಾನು ಗಣಪತಿಯಪ್ಪರನ್ನು ಮೊದಲು ನೋಡಿದ್ದು 1975ರಲ್ಲಿ ಅವರು ಆಗ ವಿದ್ಯಾರ್ಥಿಗಳಾಗಿದ್ದ ತೀ.ನಾ.ಶ್ರೀನಿವಾಸ್ ಮತ್ತು ಹಿರಿಯಣ್ಣರ ಜೊತೆ ನಮ್ಮ ತಂದೆ ಬೇಟಿ ಮಾಡಿ ಅವತ್ತು ಗಣಪತಿಯಪ್ಪರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ದಿನ ಪತ್ರಿಕೆ #ನ್ಯಾಯದ_ತಕ್ಕಡಿ ಚಂದಾದಾರನ್ನಾಗಿ ಮಾಡಲು ಬಂದಾಗ, ಅವತ್ತೇ ನಾನು ತೀನಾ ಶ್ರೀನಿವಾಸರನ್ನು ನೋಡಿದ್ದು ಅದೇ ಮೊದಲು, ಆಗ ನನ್ನ ವಯಸ್ಸು 10 ವರ್ಷ.
   ಅವರು ಪತ್ರಿಕೆಯ ವಾರ್ಷಿಕ ಚಂದಾ ಹಣ ಪಡೆದು  ಹೋದ ನಂತರ ನಮ್ಮ ತಂದೆ ಅವರ ಗೆಳೆಯರಿಗೆ ಗಣಪತಿಯಪ್ಪ ಸ್ವಾತಂತ್ರ್ಯ ಹೋರಾಟಗಾರರು, ಕಾಗೋಡು ಸತ್ಯಾಗ್ರಹದ ನೇತಾರರು ನಮ್ಮ ಮನೆ ಸಮೀಪದ ಕೆಂಜಿಗಾಪುರದ ತಿಮ್ಮಣ್ಣರ ತಮ್ಮ ಅಂತೆಲ್ಲ ಹೇಳುವುದು ಕೇಳಿಸಿಕೊಂಡಿದ್ದೆ
    1977ರ ನಂತರ ಸಾಗರದಲ್ಲಿ ಪ್ರೌಢ ಶಿಕ್ಷಣಕ್ಕೆ ಸೇರಿದಾಗ ಸಾಗರದ ಠಾಣೆಯಲ್ಲಿ ರಾಮನ ಲಾಕಪ್ ಡೆತ್ ಪ್ರಕರಣದಲ್ಲಿ ಸಾಗರದ ಆಸ್ಪತ್ರೆ ಎದರು ಲಾಠಿ ಛಾರ್ಜ್ ನಲ್ಲಿ, ರೈತ ಸಂಘದಿಂದ ಅವರು ಲೋಕಸಭೆಗೆ ಸ್ಪರ್ದಿಸಿದಾಗ, ಅನೇಕ ಜನಪರ ಹೋರಾಟಗಳ ಕರಪತ್ರ ಮುದ್ರಿಸಿ ಹಂಚುವಾಗ, ಸೈಕಲ್ ನಲ್ಲೇ ಗಾಂಧೀ ಟೋಪಿ, ಖಾದಿ ಜುಬ್ಬಾ, ವಾಷ್ ಕೋಟ್, ಕಚ್ಚೆ ಪಂಚೆ, ಚರ್ಮದ ಚಪ್ಪಲಿ, ಬಗಲು ಚೀಲ, ಕನ್ನಡಕದಾರಿ ಗಣಪತಿಯಪ್ಪರನ್ನು ಸಾಗರದ ಪೇಟೆಯಲ್ಲಿ ನೋಡುತ್ತಿದ್ದೆ.
  1995 ರಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾದ ನಂತರ ಗಣಪತಿಯಪ್ಪರ ಒಡನಾಟ ಜಾಸ್ತಿ ಆಯಿತು ಅವರ ಬಗ್ಗೆ ಅವರ ಹೋರಾಟದ ಬಗ್ಗೆ ಹೆಚ್ಚು ಓದಿ ತಿಳಿದೆ,ಅವರು ನೀಡುತ್ತಿದ್ದ ದಾಖಲೆಗಳು, ಪತ್ರಗಳು, ಆ ಕಾಲದ ಪತ್ರಿಕಾ ಪ್ರಕಟಣೆಗಳು ನೋಡಿ ಇಡೀ ಭಾರತ ದೇಶದ ಗಮನ ಸೆಳೆದ ಕಾಗೋಡು ಭೂಮಿ ಹೋರಾಟದ ನೇತಾರರಾದ ಗಣಪತಿಯಪ್ಪರ ಮಾಹಿತಿ ಮುಂದಿನ ತಲೆಮಾರಿಗೆ ತಿಳಿಸ ಬೇಕಾದ ಸಾಹಿತ್ಯದ ಕೊರತೆ ಮನಗಂಡಿದ್ದೆ.
   1999 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಜಾತಿ -ಹಣ - ಅಧಿಕಾರ ಎಂತದೂ ಇಲ್ಲದ ನನ್ನಂತಹ ಹೋರಾಟಗಾರನೊಬ್ಬನನ್ನು ಇವರದೇ ಜಾತಿಯ ಪ್ರಭಾವಿ ಮಂತ್ರಿ ಹಾಗೂ ಜಾತಿ - ಹಣ - ಅಧಿಕಾರ ಇರುವಂತವರ ವಿರುದ್ಧ ತಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಿಂಚಣಿ ಹಣ ಠೇವಣಿ ಪಾವತಿ ಮಾಡಿ ಸ್ಪರ್ದೆಗೆ ಇಳಿಸುತ್ತಾರೆಂದರೆ?... ಅಷ್ಟೇ ಅಲ್ಲ ಚುನಾವಣೆ ಪ್ರಾರಂಭದಿಂದ ಅಂತ್ಯದವರೆಗೆ ಪ್ರಚಾರದ ನೇತೃತ್ವ ವಹಿಸಿದ್ದಾರೆಂದರೆ !!...
   ಜಾತಿ-ಹಣ - ಅಧಿಕಾರ - ತೋಳ್ಬಲದ ವಿರುದ್ಧ ಇವು ಯಾವುದೂ ಇಲ್ಲದ ಜಾತ್ಯಾತೀತನ ಸ್ಪರ್ದೆ ಎಲ್ಲರಿಗೂ ಕುತೂಹಲ "ನೂರು ಓಟು ಬರುವುದಿಲ್ಲ" ಎಂಬ ಜಡ್ಜ್ಮೆಂಟ್ ಗಳು ಮತ್ತು ಚುನಾವಣಾ ನೇತೃತ್ವ ವಹಿಸಿದ್ದರಿಂದ ಹಿರಿಯರಾದ ಗಣಪತಿಯಪ್ಪರನ್ನು ಗೇಲಿ ಮಾಡುವುದೂ ಮಾಡುತ್ತಿದ್ದರು ಆದರೆ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಹಣ ಠೇವಣಿ ಮಾಡಿದ್ದು ಮೋಸ ಆಗಲಿಲ್ಲ, ಚಲಾವಣೆಯಾದ ಮತಗಳಲ್ಲಿ ಶೇಕಡಾ 10% ಮತಗಳು ಜಾತಿ ಇಲ್ಲದ, ಹಣ ಇಲ್ಲದ ಪಕ್ಷೇತರ ಅಭ್ಯರ್ಥಿಗೆ ಸಿಗಬೇಕೆಂದರೆ ಅದು ಸುಲಭವಲ್ಲ.
  ಅವಾಗಲೇ ನನ್ನ ಮನಸ್ಸಲ್ಲಿ ಮೂಡಿದ್ದು #ಕಾಗೋಡು_ರೈತ_ಹೋರಾಟದ_ರೂವಾರಿ ಹೆಚ್.ಗಣಪತಿಯಪ್ಪರ ಆತ್ಮ ಚರಿತ್ರೆ... ಇದಕ್ಕಾಗಿ ಅನೇಕ ಪುಟಗಳ ಅಧ್ಯಾಯಗಳನ್ನು ಟಿಪ್ಪಣಿ ಮಾಡಿಕೊಂಡು ಬರೆಯುತ್ತಾ ಬಂದೆ, ಮೊನ್ನೆ ಪೋಸ್ಟಲ್ಲಿ ಹಾಕಿದ್ದು ರೈಲಿನಲ್ಲಿ ಗಣಪತಿಯಪ್ಪರ ಜೊತೆ ಅವರ ಜೀವನದ ನೆನಪುಗಳ ದಾಖಲಿಸುವಾಗ ಗೆಳೆಯರೋರ್ವರು ತೆಗೆದ ಪೋಟೊ.
  ನಂತರ ಈ ಆತ್ಮ ಚರಿತ್ರೆ ಬರೆದು ಪ್ರಕಟಿಸುವ ಜವಾಬ್ದಾರಿ ನಮ್ಮ ಜಿಲ್ಲೆಯವರೇ ಆದ ಸಮಾಜವಾದಿ ಲೇಖಕರಾದ ಕೋಣಂದೂರು ವೆಂಕಪ್ಪ ಗೌಡರಿಗೆ ವಹಿಸಿದ್ದೆವು ಯಾಕೆಂದರೆ  ಕೋಣಂದೂರು ವೆಂಕಪ್ಪ ಗೌಡರು ಆತ್ಮಚರಿತ್ರೆಗಳನ್ನು ಬರೆಯುವುದರಲ್ಲಿ  ಎಕ್ಸಪರ್ಟ್, ಅವರು ಕೆಂಗಲ್ ಹನುಮಂತಯ್ಯ, ಹುಚ್ಚು ಮಾಸ್ತಿ ಗೌಡ, ಶಾಂತವೇರಿ ಗೋಪಾಲ ಗೌಡರ ಆತ್ಮಚರಿತ್ರೆ ಜೀವಂತ ಜ್ವಾಲೆ,ದೇವರಾಜ ಅರಸು, ಜೆ.ಹೆಚ್.ಪಟೇಲ್, ಭಾರತದ ಪ್ರಧಾನಿ ದೇವೇಗೌಡರ ಆತ್ಮಚರಿತ್ರೆ ಬರೆದವರು.
ಅವರಿಗೆ ಈ ಬಗ್ಗೆ ವಿನಂತಿಸಿದಾಗ ಮೊದಲಿಗೆ ಅವರು ಒಪ್ಪಲಿಲ್ಲ , ನನ್ನ ಎಲ್ಲಾ ಟಿಪ್ಪಣಿ ಅವರಿಗೆ ನೀಡಿದ್ದು ಓದಿದ ಮೇಲೆ ಅವರನ್ನು ಕಾಗೋಡಿಗೆ ಕರೆದೊಯ್ದಿದ್ದೆ. ಗೆಳೆಯ ನಾಗೇಂದ್ರ ಸಾಗರರ ಜೀಪಿನಲ್ಲಿ ಅಲ್ಲಿಗೆ ಹೋದಾಗ ಸ್ಥಳಿಯರು ವೆಂಕಪ್ಪ ಗೌಡರ ಮೇಲೆ ಹೊಡೆದಾಡಲು ಮುಂದಾಗಿದ್ದರು, ನಂತರ ಅವರು ಕೇಳಿದ ದಾಖಲೆಗಳು ಒದಗಿಸಿದೆ ನಂತರ ಗಣಪತಿಯಪ್ಪರ ಜೊತೆ ಅನೇಕ ದಿನಗಳು ಚರ್ಚಿಸಿದರು ಆಗ ಕೋಣಂದೂರು ವೆಂಕಪ್ಪ ಗೌಡರ ವಾಸ್ತವ್ಯ ನನ್ನ ಮನೆಯೇ ಆಗಿತ್ತು.
  ಪುಸ್ತಕ ಮುದ್ರಣಕ್ಕೆ ಗುತ್ತಿಗೆದಾರರಾದ ಉಪ್ಪಾರ ಕಂಪನಿಯ ಜಿ.ಶಂಕರ್ ರಿಂದ ಹದಿನೈದು ಸಾವಿರ ಮತ್ತು ನಮ್ಮ ಊರಿನ ಮುರುಘಾ ಮಠದ ಸ್ವಾಮೀಜಿಗಳಿಂದ ಹತ್ತು ಸಾವಿರ ಹಣ ದೇಣಿಗೆ ಸಂಗ್ರಹ ಮಾಡಿ ಕೊಟ್ಟಿದ್ದೆ.
   ಗಣಪತಿಯಪ್ಪರ ಆತ್ಮಚರಿತ್ರೆ ಪ್ರಕಟವಾದರೆ.... ಅವರನ್ನು ಐತಿಹಾಸಿಕ ಕಾಗೋಡು ಸತ್ಯಾಗ್ರಹದ ಚರಿತ್ರೆಯಲ್ಲಿ ಶಾಶ್ವತವಾಗಿ ಅಳಿಸಿ ಹಾಕಲು ಯಶಸ್ವೀ ಆದ ಕಾಣದ ಕೈಗಳಿಗೆ ಈ ಗಣಪತಿಯಪ್ಪನವರು ಪುನಃ ಲೈಮ್ ಲೈಟ್ ಗೆ ಬಂದರೆ... ತಮ್ಮ ಇನ್ನೊಂದು ಮುಖ ಅನಾವರಣ ಆದರೆ ... ಎಂಬ ಭಯದಿಂದ ಅನೇಕ ರೀತಿಯ ತೊಂದರೆಗಳು ನೀಡಿದರು.
   ಪುಸ್ತಕ ಬಿಡುಗಡೆಗೆ ಗಣಪತಿಯಪ್ಪರ ಜಾತಿಯವರೇ ಗೈರಾದರು ಆದರೆ ಶಿವಮೊಗ್ಗ ಜಿಲ್ಲೆಯ ಆಗಿನ ಎಲ್ಲಾ ಪತ್ರಕರ್ತರು ಗಣಪತಿಯಪ್ಪರಿಗೆ ಸಿಗಬೇಕಾದ ಗೌರವ ಸಿಗುವಂತೆ ಮಾಡಿದರು,ಗಣಪತಿಯಪ್ಪರ ಜೀವನ ಚರಿತ್ರೆ ಹೊಸ ಚರಿತ್ರೆಯನ್ನೇ ಸೃಷ್ಟಿಸಿತು, ಆತ್ಮಚರಿತ್ರೆ ಹೊರ ಬರದಂತೆ ತಡೆದವರೇ ಕದ್ದು ಮುಚ್ಚಿ ಗಣಪತಿಯಪ್ಪರ ಆತ್ಮಚರಿತ್ರೆ ಓದಿದರು.
   ಗಣಪತಿಯಪ್ಪನವರು ಹೇಳಿ ಬರೆಸಿದ ಆತ್ಮ ಚರಿತ್ರೆ ಅದರಲ್ಲಿ ಅವರು ಹೇಳಿದ ಸತ್ಯ ಘಟನೆಗಳು ಸಂಬಂದ ಪಟ್ಟವರಿಗೆ ಕಹಿಯಾದ ಕಾಕೋ೯ಟಕ ವಿಷವೇ ಆಗಿದೆ ಅರಗಿಸಿಕೊಳ್ಳಲು ಕಷ್ಟವೇ.
  1950 ರ ದಶಕದಲ್ಲಿ ಗಣಪತಿಯಪ್ಪರ ಗೇಣಿ ರೈತರ ಸಂಘಟನೆಯ #ಉಳುವವನೆ_ಹೊಲದೊಡೆಯ ಎಂಬ ಘೋಷಣೆಯಲ್ಲಿ ಪ್ರಾರಂಭವಾದ #ಕಾಗೋಡು_ರೈತ_ಹೋರಾಟ ಇದರಲ್ಲಿ ಭಾಗವಹಿಸಿ ಬಂದನಕ್ಕೊಳಗಾದ ರಾಮಮನೋಹರ ಲೋಹಿಯಾ, ಜೈಲಲ್ಲಿದ್ದ ಗಣಪತಿಯಪ್ಪರನ್ನು ನೋಡಲು ಬಂದ ಜಯಪ್ರಕಾಶ್ ನಾರಾಯಣ್, ಜಾರ್ಜ್, ಮದುಲಿಮೆ ಇವರನ್ನೆಲ್ಲ ಕರೆತರಲು ಮತ್ತು ಕಾಗೋಡು ರೈತ ಹೋರಾಟಕ್ಕೆ ಹೊಸ ದಿಕ್ಕು ತೋರಿದ ಶಾಂತವೇರಿ ಗೋಪಾಲಗೌಡರು, ಸಾಗರ ಪ್ರಾಂತ್ಯ ರೈತ ಸಂಘದ ಸಂಘಟನೆಗೆ ನೆರವಾದ ಕಡಿದಾಳು ಮಂಜಪ್ಪನವರು ಇವರೆಲ್ಲರ ಒಡನಾಡಿ ಕಾಗೋಡು ರೈತ  ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪ ಬದುಕಿದ್ದಾರೆ ಎಂಬುದೇ ದೊಡ್ಡ ಸುದ್ದಿ ಆಯಿತು ಈ ಆತ್ಮಚರಿತ್ರೆ ಬಿಡುಗಡೆಯಿಂದ.
    ನಂತರ ಕಾಗೋಡು ಚಳವಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಕಾಗೋಡಿನಲ್ಲಿ ಲೋಹಿಯ ಭಾಷಣ ಮಾಡಿದ ಅರಳಿ ಮರದ ಕಟ್ಟೆಯಿಂದ ತೀರ್ಥಹಳ್ಳಿಯ ಕಡಿದಾಳರ ಸಮಾದಿಗೆ ಕಾಗೋಡು ಸುವರ್ಣ ಜ್ಯೋತಿ ಒಯ್ಯುವ ಕಾರ್ಯಕ್ರಮ ನಡೆಯದಂತೆ ಬೆದರಿಸುವ ಕೆಲಸ ನಡೆಯಿತು, ಆಗ ಕೋಣಂದೂರು ವೆಂಕಪ್ಪ ಗೌಡರ ಶಿಷ್ಯ ಶಿವಮೊಗ್ಗ ಜಿಲ್ಲೆಯ ಪ್ರಜಾವಾಣಿ ಮುಖ್ಯ ವರದಿಗಾರ ಇ.ಸತ್ಯನಾರಾಯಣ್ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಹೇಳಿ ಕಾಗೋಡಿಗೆ ರಿಸರ್ವ್ ವ್ಯಾನ್ ಕಳಿಸಿ ರಕ್ಷಣೆ ನೀಡಿದ್ದರು.
  ಗೇಣಿ ರೈತರ ಸಂಘಟಿಸಿ ಎಲ್ಲಿ ಸತ್ಯಾಗ್ರಹ ಗಣಪತಿಯಪ್ಪನವರು ಪ್ರಾರಂಬಿಸಿ ಜೈಲು ಸೇರಿದ್ದರೋ ಆ ಕಾಗೋಡು ಎಂಬ ಊರಲ್ಲಿ 50 ವರ್ಷದ ನಂತರ ಗಣಪತಿಯಪ್ಪನವರನ್ನೇ ತಡೆಯುವ ಅವಮಾನ ಮಾಡುವ ಪ್ರಯತ್ನ ಮತ್ತು ರಿಸರ್ವ ಪೋಲಿಸರ ರಕ್ಷಣೆಯಲ್ಲಿ ಸುವರ್ಣ ಕಾಗೋಡು ಹೋರಾಟದ ಜ್ಯೋತಿ ಬೆಳಗಬೇಕಾದದ್ದು ವಿಪರ್ಯಾಸವೇ ಆಯಿತು.
  ಅವತ್ತು ಜ್ಯೋತಿ ಆನಂದಪುರಂನ ಕೆಂಜಿಗಾಪುರದ ವೀರಭದ್ರ ದೇವಸ್ಥಾನದಲ್ಲಿ ತಂಗಿತು ಗಣಪತಿಯಪ್ಪ, ಕೋಣಂದೂರು ವೆಂಕಪ್ಪ ಗೌಡರು ಮತ್ತು ಪ್ರಮುಖರ ವಾಸ್ತವ್ಯ ಮತ್ತು ಅತಿಥ್ಯ ನಮ್ಮ ಮನೆಯಲ್ಲಿ ಮಾಡುವ ಭಾಗ್ಯ ನನಗೆ ದೊರಕಿತ್ತು.
   ಮರುದಿನ ತೀರ್ಥಹಳ್ಳಿಯ ವಿಚಾರವಂತ ಸಹೃದಯಿಗಳು ಮಧ್ಯರಾತ್ರಿ ಕಡಿದಾಳಿನ ಮಂಜಪ್ಪ ಗೌಡರ (ಮಾಜಿ ಮುಖ್ಯಮಂತ್ರಿ) ಸಮಾದಿ ಎದರು ಸಭೆ ನಡೆಸಿದರು ಅಲ್ಲಿ ಕಡಿದಾಳು ಶಾಮಣ್ಣ ಕುವೆಂಪು ಗೀತೆ ಹಾಡಿದರು ಇವೆಲ್ಲ ಮರೆಯಲಾರದ ನೆನಪುಗಳು..
  ಬೆಂಗಳೂರಲ್ಲಿ ಆಗಿನ ಅರಣ್ಯ ಮಂತ್ರಿ ಕೆ.ಹೆಚ್.ರಂಗನಾಥ ಆರ್ಥಿಕ ತಜ್ಞ ವೆಂಕಟಗಿರಿ ಗೌಡರು,ಪ್ರೋಪೆಸರ್ ನಂಜುಂಡಸ್ವಾಮಿ, ಕೋಣಂದೂರು ವೆಂಕಪ್ಪ ಗೌಡರ ಉಪಸ್ಥಿತಿಯಲ್ಲಿ ನೇತಾರ ಗಣಪತಿಯಪ್ಪರನ್ನು ಸನ್ಮಾನಿಸಿ ಕಾಗೋಡು ರೈತ ಹೋರಾಟದ ವಿಚಾರ ಸಂಕಿರಣ ನಡೆಸಿದೆವು ಅವತ್ತು ಕಾರ್ಯಕ್ರಮದ ನಿರೂಪಣೆ ನನ್ನದೆ.
   ನಂತರ ಮಂತ್ರಿ ಕೆ.ಹೆಚ್.ರಂಗನಾಥರ ಒತ್ತಾಯದಿಂದ ಮುಖ್ಯಮಂತ್ರಿ ಎಸ್. ಎ೦.ಕೃಷ್ಣ ಸಾಗರದಲ್ಲಿ ಅವರ ಸರ್ಕಾರದ ವತಿಯಿಂದ ಐತಿಹಾಸಿಕ ಕಾಗೋಡು ರೈತ ಹೋರಾಟದ ಸುವರ್ಣ ಮಹೋತ್ಸವ ಆಚರಿಸುವಂತಾಯಿತು.
  ನಂತರ ಗಣಪತಿಯಪ್ಪರಿಗೆ ದೇವರಾಜ ಅರಸು ಪ್ರಶಸ್ತಿ ಬಂದಿತಾದರೂ ಅದನ್ನು ಸಂಭ್ರಮಿಸಲು ಯಾರೂ ಮುಂದೆ ಬರಲಿಲ್ಲ.
   ನಾನು ಗಣಪತಿಯಪ್ಪರನ್ನು ಗುರು ಎಂದು ಸ್ವೀಕರಿಸಿ ಅವರು ಎದುರಾದಾಗ ಅವರ ಕಾಲಿಗೆರಗಿ ಅಶ್ರೀವಾದ ಪಡೆಯುತ್ತಿದ್ದೆ, ದೆಹಲಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮೊಮ್ಮಗಳು ಗಣಪತಿಯಪ್ಪರ ಪಾದ ಮುಟ್ಟಿ ನಮಸ್ಕರಿಸಿದ ಚಿತ್ರ ನನ್ನ ಕಣ್ಣಿನ ಎದುರೇ ಇದೆ.
    ಅವತ್ತು ಸಂಜೆ ಬೆಂಗಳೂರಿಗೆ ಹೊರಟು ನಿಂತಾಗ ಗಣಪತಿಯಪ್ಪರು ಇಹ ಲೋಕ ತ್ಯಜಿಸಿದರೆಂದು ಸುದ್ದಿ ತಿಳಿಸಿದ ಮಹೇಶ್ ಎಲಿಗಾರ್ (ಯಡೇಹಳ್ಳಿಯಲ್ಲಿ ಕಾಗೋಡು ರೈತ ಹೋರಾಟದ ನೇತಾರ ಹೆಚ್.ಗಣಪತಿಯಪ್ಪ ರಂಗಮಂದಿರ ನಿರ್ಮಿಸಿದ ಶಾಲಾ ಮುಖ್ಯೋಪಾಧ್ಯಾಯರು) ಜೊತೆ ಗಣಪತಿಯಪ್ಪರ ಸಾಗರ ಸಮೀಪದ ವಡನಾಳ ತಲುಪಿ ಇಹಲೋಕ ತ್ಯಜಿಸಿದ ಮಹಾನ್ ಹೋರಾಟಗಾರರ ಪಾದಕ್ಕೆ ನಮಸ್ಕರಿಸಿದ್ದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ