Blog number 1892. ಕವನಗಳನ್ನು ಬರೆದು ಭದ್ರಾವತಿ ಆಕಾಶವಾಣಿಯಲ್ಲಿ ಅನೇಕ ಬಾರಿ ವಾಚನ ಮಾಡಿರುವ ಆನಂದಪುರಂ ಡೆಪ್ಯೂಟಿ ರೇಂಜ್ ಪಾರೆಸ್ಟ್ ಆಫೀಸರ್ ಭದ್ರೇಶ್ ಆನಂದಪುರಂ ಹೋಬಳಿಯಲ್ಲಿ ಸಂಚರಿಸುತ್ತಿದ್ದ ಕಾಡಾನೆ ಸ್ಥಳಾಂತರದ ತಂಡದಲ್ಲೂ ಕಾರ್ಯನಿರ್ವಹಿಸಿದ್ದರು.
#ಇವತ್ತು_ಬೆಳಿಗ್ಗೆ_ಡೆಪ್ಯುಟಿ_ರೇಂಜ್_ಪಾರೆಸ್ಟ್_ಆಫೀಸರ್_ಭದ್ರೇಶ್_ಬಂದಿದ್ದರು.
#ಇವರು_ಸಾಹಿತಿಗಳೂ_ಆಗಿದ್ದಾರೆ_ಆಕಾಶವಾಣಿಯಲ್ಲಿ_ಅನೇಕ_ಬಾರಿ_ಕವನ_ವಾಚನ_ಮಾಡಿದ್ದಾರೆ.
#ಇವರೆಲ್ಲ_ಕಳೆದ_ಹದಿನೈದು_ದಿನಗಳಿಂದ_ಆನಂದಪುರಂ_ಹೋಬಳಿಯ_ಸುತ್ತ_ಮುತ್ತ_ಇದ್ದ
#ಕಾಡಾನೆಗಳನ್ನು_ಶೆಟ್ಟಿಹಳ್ಳಿ_ಅಭಿಯಾರಣ್ಯಕ್ಕೆ_ಸ್ಥಳಾಂತರಿಸುವ_ಕೆಲಸದಲ್ಲಿದ್ದರು.
#ಕಾಡಾನೆಗಳು_ಸುಗಮವಾಗಿ_ದಿನಾಂಕ_28_ಡಿಸೆಂಬರ್_2023ರ_ಬೆಳಗಿನ_ಜಾವ
#ರಿಪ್ಪನಪೇಟೆ_ಅಯನೂರು_ರಾಜ್ಯಹೆದ್ದಾರಿ_9ನೇ_ಮೈಲಿಕಲ್ಲಿನಲ್ಲಿ_ದಾಟಿದ_ಶುಭ_ಸುದ್ದಿ_ತಿಳಿಸಿದರು.
#ಯಾರಿಗೂ_ಹಾನಿ_ಮಾಡದೆ_ಕಾಡಾನೆಗಳೂ_ಸುರಕ್ಷಿತವಾಗಿ_ಹಿಂದುರಿಗಿದೆ.
ನನ್ನ ತಾವರೇಹಳ್ಳಿಯ ರಬ್ಬರ್ ಪ್ಲಾಂಟೇಶನ್ ನ ರಬ್ಬರ್ ಮರಗಳನ್ನು ಕಠಾವು ಮಾಡಿದ್ದು ಉಪಗ್ರಹದ ಮೂಲಕ ಅರಣ್ಯ ಇಲಾಖೆ ಗ್ರಹಿಸಿದ್ದು ಈ ಬಗ್ಗೆ ಸೂಕ್ತ ಮಾಹಿತಿಗಾಗಿ ಈ ಪ್ರದೇಶದ ಡೆಪ್ಯೂಟಿ ರೇಂಜ್ ಪಾರೆಸ್ಟರ್ ಆಫೀಸರ್ ಭದ್ರೇಶ್ ಅವರಿಗೆ ಅರಣ್ಯಇಲಾಖೆ ಮಾಹಿತಿ ಕೇಳಿದ್ದರಿಂದ ನನ್ನ ಜಮೀನಿನ ಪಹಣಿ ಇತ್ಯಾದಿ ಮಾಹಿತಿ ಪಡೆಯಲು ಅವರು ಮತ್ತು ಅವರ ಸಿಬ್ಬಂದಿ ಬಂದಿದ್ದರು.
ನೂತನ ತಂತ್ರಜ್ಞಾನದಲ್ಲಿ ದೊಡ್ಡ ಅರಳಿ ಮರ ಬಿದ್ದರೆ, ಬಿದಿರು ಮಟ್ಟಿ ಬೆಂಕಿಗೆ ಆಹುತಿ ಆದರೂ ಅರಣ್ಯ ಇಲಾಖೆಗೆ ತಕ್ಷಣ ತಿಳಿಯುವಂತ ಸ್ಯಾಟಲೈಟ್ ವ್ಯವಸ್ಥೆ ಇರುವುದು ತಿಳಿದು ಖುಷಿ ಆಯಿತು.
ಇವರೆಲ್ಲರೂ ಕಳೆದ 15 ದಿನದಿಂದ ಅಂಬ್ಲಿಗೊಳ ಜಲಾಶಯದ ಹಿನ್ನೀರು ಪ್ರದೇಶದಿಂದ ಎರೆಡು ದೊಡ್ಡ ಗಂಡಾನೆ ಮತ್ತು ಒಂದು ಮರಿ ಗಂಡಾನೆಗಳನ್ನು ಸ್ಥಳಾಂತರಿಸಲು ತುಂಬಾ ಶ್ರಮ ಪಟ್ಟಿದವರು.
ಅವರ ಜೊತೆ ಮಾತಾಡಿದಾಗ .....
ಕಾಡಾನೆಗಳು ಸಂಚರಿಸುವ ಮಾರ್ಗ ಅದರ ನಂತರದ ಮೂರು ತಲೆಮಾರುಗಳಲ್ಲಿ ದಾಖಲಾಗುವಂತ ಜೀನ್ಸ್ ಆನೆಗಳದ್ದಂತೆ.
ಅಂಬ್ಲಿಗೊಳ ಸಮೀಪದ ಎರೆಕೊಪ್ಪದಲ್ಲಿ ಆನೆ ಬಯಲು ಎಂಬ ಪ್ರದೇಶ ಇದೆ ಅಲ್ಲಿ ನೂರು ವರ್ಷದ ಹಿಂದೆ ಕಾಡಾನೆ ಬರುತ್ತಿದ್ದುದು ಆ ಪ್ರದೇಶದವರ ಅಜ್ಜ0ದಿರು ಹೇಳುತ್ತಿದ್ದರೆಂದು ಸ್ಥಳಿಯರು ನೆನಪಿಸಿಕೊಂಡರಂತೆ.
ಸ್ಥಳಿಯರು, ರೈತರು ಈ ಕಾಡಾನೆಗಳನ್ನು ಸ್ಥಳಾಂತರಿಸಲು ಅರಣ್ಯ ಇಲಾಖಾ ಸಿಬ್ಬಂದಿಗೆ ತುಂಬಾ ಸಹಕಾರ ನೀಡಿದರಂತೆ.
ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಪತ್ರೆ ಹೊಂಡ ಭಾಗಕ್ಕೆ ದಾಟಿದ ಆನೆ ಪುನಃ ಮೂರು ಬಾರಿ ವಾಪಾಸು ಬಂದಿತಂತೆ ನಂತರ ಕೊಲ್ಲಿ ಬಚ್ಚಲು ಡ್ಯಾಂ ಹಿನ್ನೀರಿನ ಪ್ರದೇಶದದಿಂದ ಪುನಃ ಅಂಬ್ಲಿಗೋಳ ಅರಣ್ಯ ಪ್ರದೇಶಕ್ಕೆ ದಾಟದಂತೆ ಅರಣ್ಯ ಇಲಾಖೆ ತಮಟೆ ಪಟಾಕಿ ಇತ್ಯಾದಿ ಶಬ್ದದಿಂದ ತಡೆದಿದ್ದರಂತೆ.
ನಂತರ ಈ ಮೂರು ಕಾಡಾನೆಗಳು ರಿಪ್ಪನ್ ಪೇಟೆ ಅಯನೂರು ರಾಜ್ಯ ಹೆದ್ದಾರಿಯ 9 ಮೈಲಿಗಲ್ಲುವಿನಲ್ಲಿ 28- ಡಿಸೆಂಬರ್- 2023 ರ ಬೆಳಗಿನ ಜಾವ 4ಕ್ಕೆ ರಸ್ತೆ ದಾಟಿ ಮೂಗುಡ್ತಿ ಅರಣ್ಯ ಪ್ರದೇಶಕ್ಕೆ ತಲುಪಿ ಅಲ್ಲಿಂದ ಶೆಟ್ಟಿಹಳ್ಳ ಅಭಿಯಾರಣ್ಯ ತಲುಪಿದೆ ಎಂಬ ಶುಭ ಸುದ್ದಿ ತಿಳಿಸಿದರು.
ಇವರೆಲ್ಲ ನನ್ನ ಸಾಮಾಜಿಕ ಜಾಲ ತಾಣ ವೀಕ್ಷಿಸುವರೆಂದು ತಿಳಿಸಿದರು ಆದ್ದರಿಂದ ಒಂದು ಸೃಷ್ಟಿಕರಣ ಏನೆಂದರೆ ನಾನು ಬರೆದ ಲೇಖನದ ತಾಯಿ ಮತ್ತು ಮರಿ ಆನೆಗಳ ಒಂದು ಕಾಡಾನೆ ತಂಡ ದಸರಾ ಸಮಯದಲ್ಲಿ ಈ ಭಾಗದಲ್ಲಿ ಸಂಚರಿಸಿ ವಾಪಾಸು ಹೋಗಿತ್ತಂತೆ.
ನಂತರ ಆರು ಕಾಡಾನೆಗಳ ಹೊಸ ಗುಂಪು ಈ ಭಾಗಕ್ಕೆ ಬಂದಿದ್ದರಲ್ಲಿ ಮೂರು ಕಾಡಾನೆ ವಾಪಾಸು ಹೋಗಿತ್ತಂತೆ, ಈ ಭಾಗದಲ್ಲಿ ದಾರಿ ತಪ್ಪಿ ಸಂಚರಿಸುತ್ತಿದ್ದ ಎರೆಡು ದೊಡ್ಡ ಕಾಡಾನೆ ಜೊತೆ ಇದ್ದ ಗಂಡು ಮರಿಯಾನೆ ಅಡಲ್ಟ್ ಆಗಿದ್ದು ಈ ಭಾಗಕ್ಕೆ ಮೊದಲಿಗೆ ಬಂದಿದ್ದ ತಾಯಿ ಕಾಡಾನೆಯ ಮರಿ ಇದಲ್ಲ ಎಂದು ಅವರು ಉಪಯುಕ್ತ ಮಾಹಿತಿ ತಿಳಿಸಿದರು.
ಭದ್ರೇಶ್ ಸಾಹಿತಿಗಳೂ ಹೌದು, ಭದ್ರಾವತಿ ಆಲ್ ಇಂಡಿಯಾ ರೇಡಿಯೋದಲ್ಲಿ ಅನೇಕ ಬಾರಿ ಇವರು ಕವನ ವಾಚನ ಮಾಡಿದ್ದಾರೆ, ಇವರ ಕವನ ಸಂಕಲನ ಬಿಡುಗಡೆ ಮಾಡಿ ಅಂತ ಅವರಿಗೆ ಒತ್ತಾಯಿಸಿ ನನ್ನ ಪುಸ್ತಕಗಳನ್ನು ಇವರಿಗೆ ನೀಡಿ ಬೀಳ್ಕೊಟ್ಟೆ.
Comments
Post a Comment