Blog number 1870. ಭಾಗ - 3 ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ಅವರಿಗೆ ಜನಪದ ಅಕಾಡೆಮಿ ಅಧ್ಯಕ್ಷರಾದಾಗ ಎದುರಾದ ಅಗೌರವ .
#ಪದ್ಮಶ್ರೀ_ಪುರಸ್ಕೃತ_ಮಂಜಮ್ಮಜೋಗತಿ.
#ಸಂದರ್ಶನ_ಭಾಗ_3.
https://youtu.be/8TqEhasYreo?feature=shared
#ರಾಜ್ಯ_ಜನಪದ_ಅಕಾಡೆಮಿ_ಸದಸ್ಯರಾದಾಗ_ಮೊದಲ_ಸುದ್ದಿ_ರಾಮುಕಡ್ಲಾಂಪುರ_ನೀಡಿದ್ದು
#ರಾಜ್ಯ_ಜನಪದ_ಅಕಾಡೆಮಿ_ಅಧ್ಯಕ್ಷರಾದಾಗ_ರಾಜಿನಾಮೆ_ನೀಡಿದ_ಮೈಸೂರಿನ_ಸದಸ್ಯ
#ಪತ್ರಿಕಾಗೋಷ್ಟಿ_ಮಾಡಿ_ತೃತಿಯ_ಲಿಂಗಿ_ಅಧ್ಯಕ್ಷೆ_ಕೆಳಗೆ_ಕೆಲಸ_ಮಾಡುವುದಿಲ್ಲ_ಎಂದಿದ್ದು
#ಇವರಿಗೆ_ನಿರಾಸೆ_ದುಃಖ_ತಂದಿತ್ತು.
#ದೇಶದಲ್ಲೇ_ಮೊದಲ_ಬಾರಿಗೆ_ಅಕಾಡೆಮಿ_ಅಧ್ಯಕ್ಷರಾಗಿ_ತೃತಿಯ_ಲಿಂಗಿ_ಒಬ್ಬರನ್ನು
#ಆಯ್ಕೆ_ಮಾಡಿದ_ಕೀರ್ತಿ_ಯಡ್ಯೂರಪ್ಪನವರಿಗೆ_ಸಲ್ಲುತ್ತದೆ.
ತೃತಿಯ ಲಿಂಗಿಗಳಾಗಿ ಅವರು ಎದುರಿಸುತ್ತಾ ಬಂದಿರುವ ಅವಮಾನಗಳು ನೂರೆಂಟು ಅಂತಹ ಒಂದು ನೋವಿನ ಘಟನೆ ಇವರು ಕರ್ನಾಟಕ ರಾಜ್ಯ ಜನಪದ ಅಕಾಡೆಮಿ ಅಧ್ಯಕ್ಷರಾದಾಗ ಅನುಭವಿಸಿದ್ದು.
ಜನಪದ ಅಕಾಡೆಮಿಯ ಸದಸ್ಯರಾಗಿದ್ದ ಮೈಸೂರಿನ ವ್ಯಕ್ತಿ ತೃತಿಯ ಲಿಂಗಿ ಅಧ್ಯಕ್ಷರ ಕೆಳಗೆ ಕೆಲಸ ಮಾಡುವುದಿಲ್ಲವೆಂದು ರಾಜಿನಾಮೆ ನೀಡಿ ಪತ್ರಿಕಾಗೋಷ್ಟಿ ಮಾಡಿದ್ದು.
ನನ್ನ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ಬಗ್ಗೆ ಇವರು ವಿಡಿಯೋ ವಿಮರ್ಷೆ ಮಾಡಿದ ದಿನವೇ ಇವರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ ಆದ ಸುದ್ದಿ ಬಂದಿತ್ತು .
ಮಂಜಮ್ಮ ಜೋಗತಿ ಅವರಿಗೆ ಈಗ ಆರವತ್ತಾರನೆ ವಯಸ್ಸು, ಈ ವಯಸ್ಸಿನಲ್ಲೂ ಜೀವನೋತ್ಸಾಹ ಕೊಂಚ ಮಾತ್ರವೂ ಕುಂದಿಲ್ಲ, ಯಾವಾಗಲೂ ನಗು ನಗುತ್ತಾ ಪಟ ಪಟ ಎಂದು ಮಾತಾಡುವ ಅವರ ಹೃದಯದಲ್ಲಿ ನಮ್ಮ ನಾಗರೀಕ ಸಮಾಜದಲ್ಲಿ ಅನುಭವಿಸಿದ ನೋವು ಅವಮಾನಗಳು ಮಡುಗಟ್ಟಿದೆ.
Comments
Post a Comment